ಬಂಟ್ವಾಳ: ಜಿಲ್ಲೆಯ ಕಾರಣಿಕದ ದೈವ ಕ್ಷೇತ್ರ ಸಜೀಪಮೂಡ ಗ್ರಾಮದ ಶ್ರೀ ಪಣೋಲಿಬೈಲು ಕಲ್ಲುರ್ಟಿ- ಕಲ್ಕುಡ ದೈವಸ್ಥಾನದಲ್ಲಿ ವರ್ಷವಧಿ ಕೋಲದ ಪ್ರಯುಕ್ತ ಶನಿವಾರ ಸ್ವಸ್ತಿ ಪುಣ್ಯಾಹ, ಪಂಚಗವ್ಯ, ದ್ವಾದಶ ನಾಳಿಕೇರ ಗಣಹೋಮ, ಸಾನಿಧ್ಯ ಕಲಶಾಭಿಷೇಕ, ಪರ್ವ ಸೇವೆ, ನಾಗ ದೇವರಿಗೆ ಫಲಪಂಚಾಮೃತ ಅಭಿಷೇಕ, ಶ್ರೀ ಆಶ್ಲೇಷ ಬಲಿಪೂಜೆ, ವಟು ಆರಾಧನೆ ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಪೌರೋಹಿತ್ಯ ವಹಿಸಿದ್ದರು. ದೈವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳ್ಯ, ಪ್ರಥಮ ಅರ್ಚಕ ವಾಸುದೇವ ಮೂಲ್ಯ, ಎರಡನೇ ಅರ್ಚಕ ನಾರಾಯಣ ಮೂಲ್ಯ, ಮೂರನೇ ಅರ್ಚಕ ಮೋನಪ್ಪ ಮೂಲ್ಯ, ನಗ್ರಿ ಗುತ್ತು ಜಯ ಶೆಟ್ಟಿ, ನೀಲ್ಯ ಚಂದ್ರಶೇಖರ ಶೆಟ್ಟಿ, ರಮೇಶ್ ಕುಲಾಲ್ ಹಾಗೂ ಸಿಬ್ಬಂದಿಗಳು ವರ್ಗದವರು ಉಪಸ್ಥಿತರಿದ್ದರು. ಸಾವಿರಾರು ಮಂದಿ ಭಕ್ತರು ಕ್ಷೇತ್ರ ದರ್ಶನ ಮಾಡಿ ಅನ್ನಪ್ರಸಾದ ಸ್ವೀಕರಿಸಿದರು.
Advertisement