Author: admin
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಇದರ ಆಶ್ರಯದಲ್ಲಿ ಈ ಸಾಲಿನ ಇಂಟರಾಕ್ಟ್ ಕ್ಲಬ್ ನ ಪದಾಧಿಕಾರಿಗಳಿಗೆ ಪದಗ್ರಹಣ ಸಮಾರಂಭ ಸಜೀಪಮೂಡ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.ರೋಟರಿ ಕ್ಲಬ್ ಬಂಟ್ವಾಳದ ಅಧ್ಯಕ್ಷ ಬೇಬಿ ಕುಂದರ್ ಪದಗ್ರಹಣ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಹಾಗೂ ಸೇವಾಗುಣವನ್ನು ಮೂಡಿಸಲು ಇಂಟರಾಕ್ಟ್ ಕ್ಲಬ್ ಸಹಕಾರಿಯಾಗಿದೆ ಎಂದರು. ಶಾಲೆಯ ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್, ಉಪಪ್ರಾಂಶುಪಾಲೆ ಜ್ಯೋತಿ ಕುಮಾರಿ, ಇಂಟರಾಕ್ಟ್ ಸಂಯೋಜಕ ಬಾಲಕೃಷ್ಣ ಶೆಟ್ಟಿ ವೇದಿಕೆಯಲ್ಲಿದ್ದರು. ನೂತನ ಅಧ್ಯಕ್ಷೆ ಕೃತಿಕಾ ಅಧಿಕಾರ ಸ್ವೀಕರಿಸಿ ಮಾತನಾಡಿದರು. ನಿರ್ಗಮಿತ ಅಧ್ಯಕ್ಷೆ ಅಶುರಾ ಅನಿಸಿಕೆ ವ್ಯಕ್ತಪಡಿಸಿದರು.ಕೃತಿಕಾ ಸ್ವಾಗತಿಸಿ, ಅಶುರಾ ವಂದಿಸಿದರು, ಇಮ್ನಾಝ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ಬಂಟ್ವಾಳ: ತುಳುನಾಡಿನ ಶೈಲಿಯ ತಿಂಡಿ ತಿನಿಸುಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ಬಂಟ್ವಾಳ ತಾಲೂಕಿನ ಕೈಕಂಬದ ಪೊಳಲಿ ದ್ವಾರದ ಬಳಿಯಿರುವ ಸಾಯಿಲೀಲಾ ಶುದ್ದ ಸಸ್ಯಹಾರಿ ಹೋಟೇಲ್ ನಲ್ಲಿ ಶ್ರೀ ಲಕ್ಷ್ಮೀ ಪೂಜೆ ವಿಜ್ರಂಭಣೆಯಿಂದ ನಡೆಯಿತು. ಸಂಜೆ ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಶ್ರೀ ಲಕ್ಷ್ಮೀ ಪೂಜೆ ನೆರೆವೇರಿದ್ದು ಹೊಟೇಲ್ ಮಾಲಕ ಸದಾನಂದ ಬಂಗೇರ, ಅವರ ಕುಟುಂಬ ವರ್ಗ, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಬಳಿಕ ಖ್ಯಾತ ಗಾಯಕ ಕೆ.ಜೆ. ಏಸುದಾಸ್ ಅವರ ಶಿಷ್ಯ ವೆಂಕಟಕೃಷ್ಣ ಬಳಗದಿಂದ ನಡೆದ ಭಕ್ತಿಗಾನ ವೈಭವ ನೆರೆದ ಪ್ರೇಕ್ಷಕರ ಮನ ಸೂರೆಗೊಳಿಸಿತು. ಸದಾನಂದ ಬಂಗೇರ ಅವರ ಮಾಲಕತ್ವದ ಹೊಟೇಲ್ ಸಾಯಿಲೀಲಾ ತುಳು ಚಿತ್ರನಟ ಭೋಜರಾಜ್ ವಾಮಂಜೂರು ಅವರಿಂದ ಉದ್ಘಾಟನೆಗೊಂಡು ಯಶಸ್ವಿ ಏಳು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಳುನಾಡು ಶೈಲಿಯ ಮನೆ ತಿಂಡಿಗಳು ಇಲ್ಲಿನ ವಿಶೇಷತೆಯಾಗಿದ್ದು ಊರ ಪರವೂರ ಗ್ರಾಹಕರು ವಿಶೇಷ ತಿಂಡಿ, ತಿನಿಸು ಖಾದ್ಯಗಳನ್ನು ಸವಿಯಲು ಇಲ್ಲಿಗೆ ಆಗಮಿಸುತ್ತಾರೆ. ಪತ್ರೋಡೆ, ಬಸಳೆ ಪುಂಡಿ, ಎಣ್ಣೆ ರಹಿತ…
ಬಂಟ್ವಾಳ: ತಾಲೂಕಿನ ನೇರಂಬೋಳುವಿನ ರಕ್ತೇಶ್ವರಿ ಯುವಕ ಸಂಘ ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. ಕಳೆದ 25 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ ಹಾಗೂ ಸಂಘಟನಾತ್ಕಕ ಚಟುವಟಿಕೆಗಳನ್ನು ನಡೆಸಿಕೊಂಡು ಗ್ರಾಮೀಣ ಭಾಗದಲ್ಲಿ ಜನರನ್ನು ಸಂಘಟಿಸಿಕೊಂಡು ಬರುತ್ತಿದೆ.
ಬಂಟ್ವಾಳ: ಕಲ್ಲಡ್ಕ ಮ್ಯೂಸಿಯಂನ ಸ್ಥಾಪಕ ಮಹಮ್ಮದ್ ಯಾಸೀರ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.ಮಹಮ್ಮದ್ ಯಾಸೀರ್ ಕಲ್ಲಡ್ಕದ ಬೀಡಿ ಉದ್ಯಮಿ. ಇವರ ಹಳೇ ವಸ್ತುಗಳು ಹಾಗೂ ವಿವಿಧ ದೇಶಗಳ ಕರೆನ್ಸಿ ಸಂಗ್ರಹ ಇಂದು ಕಲ್ಲಡ್ಕ ಮ್ಯೂಸಿಯಂ ಆಗಿ ಬದಲಾಗಿದೆ. ರಾಜರ ಕಾಲದಿಂದ ಆರಂಭಗೊಂಡು ಹಿರಿಯರು ಬಳಸಿದ ಅಪರೂಪದ ವಸ್ತುಗಳ ಅಪೂರ್ವ ಸಂಗ್ರಹ ಇವರ ಮ್ಯೂಸಿಯಂ ನಲ್ಲಿದೆ.ಮನೆಯೇ ಇವರ ವಸ್ತು ಸಂಗ್ರಹಾಲಯ.2003ರಲ್ಲಿ ಶಾಲಾ ವಿದ್ಯಾರ್ಥಿಯಾಗಿದ್ದಾಗ ನಾಣ್ಯ ಸಂಗ್ರಹಿಸುವ ಹವ್ಯಾಸ ಹೊಂದಿದ್ದರು. ಇಂದು ಅವರ ಮ್ಯೂಸಿಯಂ ನಲ್ಲಿ ಪುರಾತನ ವಸ್ತುಗಳು, ಅಪರೂಪದ ಕರೆನ್ಸಿಗಳು, ಫ್ಯಾನ್ಸಿ ನೋಟುಗಳು, ಹಳೆಯ ಪತ್ರಿಕೆಗಳು ಸೇರಿದಂತೆ ಅಪರೂಪದ ವಸ್ತುಗಳನ್ನು ನೋಡಬಹುದಾಗಿದೆ. ಮ್ಯೂಸಿಯಂಗೆ ಭೇಟಿ ನೀಡುವ ಪ್ರತಿಯೊಬ್ಬ ವೀಕ್ಷಕನಿಗೂ ಅವರ ಸಂಗ್ರಹದಲ್ಲಿರುವ ಪ್ರತಿಯೊಂದು ವಸ್ತುವಿನ ನಿಖರವಾದ ಮಾಹಿತಿ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ. ಮಹಾಯುದ್ಧದ ಸಂದರ್ಭ ಬಳಕೆಯಲ್ಲಿದ್ದ ವಸ್ತುಗಳು ಸೇರಿದಂತೆ ದೇಶ ವಿದೇಶದ ಮಹಾನ್ ನಾಯಕರ ನೆನಪು ಮೂಡಿಸುವಂತ ಅಪರೂಪದ ವಸ್ತುಗಳು ಇಲ್ಲಿವೆ.
ಬಂಟ್ವಾಳ : ತಾಲೂಕಿನ ತುಂಬೆಯ ರಂಗ ಕಲಾವಿದ ಕಲಾ ಪೋಷಕ ಸಾಮಾಜಿಕ ಧಾರ್ಮಿಕ ಮುಂದಾಳು ಸದಾಶಿವ ಡಿ ತುಂಬೆ ಈ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಇಂಚರ ಕಲಾವಿದರು ತುಂಬೆ ಎಂಬ ನಾಟಕ ತಂಡವನ್ನು ಕಟ್ಟಿಆ ಮೂಲಕ ನಾಟಕವನ್ನು ಪ್ರದರ್ಶಿಸಿ, ಕಲಾವಿದರನ್ನು ಬೆಳೆಸುವ ಹಾಗೂ ಕಲಾ ತಂಡಗಳನ್ನು ಪೋಷಿಸುವ ಕಾರ್ಯ ಮಾಡುತಿದ್ದರು, ಅಲ್ಲದೆ ಅನೇಕ ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು, ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವಿಸಿತ್ತು. ಕಲಾ ಕ್ಷೇತ್ರದ ಇವರ ಸೇವೆ ಗುರುತಿಸಿ ಈ ಸಲದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಂಟ್ವಾಳ: ಉದ್ಯಮಿ, ಸಹಕಾರಿ ಧುರೀಣ ಸಜೀಪಮೂಡ ಗ್ರಾಮದ ಕುಚ್ಚಿಗುಡ್ಡೆ ಕೆ. ಸಂಜೀವ ಪೂಜಾರಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಕಡಿಮೆ ಅವಧಿಯಲ್ಲಿ ಅತ್ಯಧಿಕ ಶಾಖೆಗಳನ್ನು ತೆರೆದು ಬಡಕುಟುಂಬದ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.ಸಜೀಪಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷರಾಗಿ ಸಜೀಪಮೂಡದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರವನ್ನು ನಿರ್ಮಿಸಿದ ಹೆಗ್ಗಳಿಕೆ ಇವರದ್ದು. ಉದ್ಯಮಿಯಾಗಿ, ತಾಲೂಕು ಪಂಚಾಯತಿ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ.
ಬಂಟ್ವಾಳ :ಕಳೆದ 20 ವರ್ಷಗಳಿಂದ ಕಲಾಕೃತಿಗಳ ತಯಾರಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಕಲಾವಿದ ಮನೋಜ್ ಕನಪಾಡಿ ಇವರಿಗೆ 2024ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.ಇವರು ಬಾಲ್ಯದಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು ಇದಕ್ಕೆ ಪೂರಕವಾಗಿ ಮಂಗಳೂರಿನ ಮಹಾಲಸ ಕಾಲೇಜಿನಲ್ಲಿ ಡಿಪ್ಲೊಮೋ ಪದವಿ ಬಳಿಕ ಕಲಾಕೃತಿ ರಚನೆಯಲ್ಲಿ ವೃತ್ತಿ ಆರಂಭಿಸಿದ ಅವರು ಮಣ್ಣಿನ ಮೂರ್ತಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಕ್ರಮೇಣ ಜನರಿಗೆ ಆಕರ್ಷಣೆಯಾಗುವ ಮತ್ತು ಹೆಚ್ಚು ಬಾಳಿಕೆ ಬರುವ ಫೈಬರ್ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿ ಬ್ರಹ್ಮರಕೊಟ್ಲುವಿನಲ್ಲಿ ಕುಕ್ಕೆಶ್ರೀ ಕಲಾಕೇಂದ್ರದಲ್ಲಿ ಜನರ ಬೇಡಿಕೆ ಅನುಗುಣವಾದ ಫೈಬರ್ ಮೂರ್ತಿ ಸಿದ್ದಪಡಿಸಿ ಮಾರಾಟ ಮಾಡುವ ಮೂಲಕ ಪ್ರವೃತ್ತಿಯನ್ನು ವೃತ್ತಿಯಾಗಿಸಿದರು. ಇವರ ಕುಕ್ಕೆಶ್ರೀ ಕಲಾ ಕೇಂದ್ರದಲ್ಲಿ ವಿವಿಧ ರೀತಿಯ ಹತ್ತು ಹಲವು ಕಲಾಕೃತಿಗಳನ್ನು ಕಾಣಬಹುದು. ಇವರ ಕಲಾಕೃತಿ ರಚನೆಯ ಸಾಧನೆಗಾಗಿ ಹತ್ತು ಹಲವು ಪ್ರಶಸ್ತಿಗಳು ಲಭಿಸಿದ್ದಲ್ಲದೆ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಆಕರ್ಷಕ, ವಿಶಿಷ್ಟ,ವಿನೂತನ ಶೈಲಿಯ ಕಲಾಕೃತಿ ತಯಾರಿಯಲ್ಲಿ ಪರಿಣತಿ ಪಡೆದ ಇವರು ಈಗಾಗಲೇ ಛತ್ರಪತಿ ಶಿವಾಜಿ, ಈಶ್ವರ, ಕತ್ತೆತ್ತಿ ನೋಡುವ…
ಬಂಟ್ವಾಳ: ಸಿದ್ಧ ವಿಧಾನಶಾಸ್ತ್ರ (ಮೆಥಡಲೋಜಿ) ಇಲ್ಲದೆ ರಾಜಮಣಿ ರಾಮಕುಂಜ ಅವರು ಸಂಶೋಧನಾ ಕೃತಿ ಬರೆದಿರುವುದು ಈ ಪುಸ್ತಕದ ಹೆಚ್ಚುಗಾರಿಕೆ. ಪುಸ್ತಕದ ಬಾಹ್ಯ ವ್ಯಕಿತ್ವದಷ್ಟೇ ಸುಂದರವಾಗಿ ಅಂತರಂಗವೂ ಮೂಡಿಬಂದಿದೆ. ಅವರಲ್ಲಿ ಇತಿಹಾಸ ಪ್ರಜ್ಞೆ ಇದೆ, ಅವರೊಬ್ಬ ಇತಿಹಾಸಕಾರ ಎಂದು ಎಂದು ಮೂಡಬಿದಿರೆ ಧವಳ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು.ಸರಿದಂತರ ಪ್ರಕಾಶನ ಮೊಡಂಕಾಪು, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಇದರ ಜಂಟಿ ಆಶ್ರಯದಲ್ಲಿ ಬಿ.ಸಿ.ರೋಡಿನ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಡೆದ ನಿವೃತ್ತ ಪ್ರಾಧ್ಯಾಪಕ ರಾಜಮಣಿ ರಾಮಕುಂಜ ಅವರ ಸಂಶೋಧನಾ ಗ್ರಂಥ ಬಂಟ್ವಾಳದ ಸಾಂಸ್ಕೃತಿಕ ಪರಿಸರ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು. ಇಂದು ಪುಸ್ತಕ ಅನಾವರಣ ಗೊಂಡಿದೆ, ಅದರ ಹಿಂದೆ ಶ್ರಮಿಸಿದವರಿಗೆ ಬಿಡುಗಡೆಯಾಗಿದೆ. ಕುಂದುಕೊರತೆಗಳು ಇಲ್ಲದ ರೀತಿಯಲ್ಲಿ ಅದ್ಭುತವಾದ ಪುಸ್ತಕ ರಚನೆಯಾಗಿದ್ದು ಸ್ವಂತ ಪ್ರಕಾಶನದ ಮೂಲಕ ಪುಸ್ತಕ ಹೊರತರುವ ಸಾಹಸವನ್ನು ರಾಜಮಣಿ ಮಾಡಿದ್ದಾರೆ. 14 ವರ್ಷದ ಶ್ರಮದ ಫಲವಾಗಿ ಈ ಪುಸ್ತಕ ಉತ್ತಮವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.…
ಬಂಟ್ವಾಳ: ಮಕ್ಕಳ ಸಾಹಿತ್ಯ ಸಮ್ಮೇಳನ 2023, ಮಕ್ಕಳ ಕಲಾಲೋಕ ಬಂಟ್ವಾಳ ಹಾಗೂ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಡೇಶಿವಾಲಯ ಇದರ ಜಂಟಿ ಆಶ್ರಯದಲ್ಲಿ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನ 2023 ರ ಸ್ಮರಣ ಸಂಚಿಕೆ ” ಲಹರಿ” ಬಿಡುಗಡೆ ಕಾರ್ಯಕ್ರಮ ಕಡೇಶಿವಾಲಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಜೆ ನಡೆಯಿತು.ಎಸ್.ವಿ.ಎಸ್ ಟೆಂಪಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಕೃತಿ ಬಿಡುಗಡೆಗೊಳಿಸಿದರು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಉದಾತ್ತವಾದ ಲೇಖನಗಳು ಈ ಸ್ಮರಣ ಸಂಚಿಕೆಯಲ್ಲಿದೆ, ಕೇವಲ ಲೇಖನಗಳಿಗೆ ಸೀಮಿತವಾಗದೆ ಈ ಊರಿಗೆ ಉಪಯೋಗವಾಗುವ ಸ್ಮರಣ ಸಂಚಿಕೆ ರಚನೆಯಾಗಿದೆ ಎಂದು ತಿಳಿಸಿದರು. ಸ್ಮರಣ ಸಂಚಿಕೆಯ ಗೌರವ ಸಂಪಾದಕ, ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಂ ಪೂಜಾರಿ ಮಾತನಾಡಿ ನಾವು ಮಾಡುವ ಕೆಲಸಗಳು ದಾಖಲೆಯಾಗಬೇಕು. ಮುಂದಿನ ತಲೆಮಾರಿಗೆ ಅವುಗಳನ್ನು ತಿಳಿಸಬೇಕಾದರೆ ಇಂತಹ ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದರು. ಮಕ್ಕಳು ಬೆಳೆಯುತ್ತ ಹೋದಂತೆಯೇ ಅವರ ಯೋಚನಾ…
ಬಂಟ್ವಾಳ: ಶ್ರೀ ವಿಜಯಲಕ್ಷ್ಮೀ ಯುವಕ ಸಂಘ ನರಿಕೊಂಬು ಇದರ ೩೦ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ನಾರಿಕೊಂಭೇಶ್ವರ ದೇವಸ್ಥಾನದಲ್ಲಿ ಸಂಘದ ಹಿರಿಯ ಸದಸ್ಯ ಪ್ರೇಮನಾಥ ಶೆಟ್ಟಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಜಗದೀಶ್, ಅಧ್ಯಕ್ಷ ಹರೀಶ್ ಕುಲಾಲ್, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಗಾಣಿಗ, ಕೋಶಾಧಿಕಾರಿ ಕೃಷ್ಣಪ್ಪ ಗಾಣಿಗ, ಜತೆ ಕಾರ್ಯದರ್ಶಿ ಸುರೇಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಗಿರೀಶ್ ಪೂಜಾರಿ ಹಾಗೂ ಸಂಘದ ಹಿರಿಯ ಸದಸ್ಯರಾದ ಶ್ರೀಶ ರಾಯಸ, , ಬಾಲಕೃಷ್ಣ, ಪ್ರಸಾದ್ ಬೋರುಗುಡ್ಡೆ, ಚಂದ್ರ ಕುಲಾಲ್, ಕೂಸಪ್ಪ ಅಂತರ, ಕೊರಗಪ್ಪ, ವಸಂತ ಅಂತರ, ರಾಜೇಶ್ ಕೆದ್ದೇಲು ಉಪಸ್ಥಿತರಿದ್ದರು.








