ಬಂಟ್ವಾಳ: ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟ ಕ್ಷೇತ್ರದಲ್ಲಿ ಬಂಟ್ವಾಳ ತಾಲೂಕಿನಾದ್ಯಂತ ಮನೆಮಾತಾಗಿರುವ ಪ್ರತಿಷ್ಠಿತ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಯಶಸ್ವಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.ಈ ಸುಸಂದರ್ಭದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಮಾರಾಟ ಮಳಿಗೆಯನ್ನು ವಿಸ್ತೃತ ಗೊಳಿಸಿದ್ಸು ಇದರ ಶುಭಾರಂಭ ಬಂಟ್ವಾಳ ಬೈಪಾಸ್ ನ ಅಜೆಕಲದಲ್ಲಿರುವ ಸ್ಮೃತಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ನೂತನ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ ಆರಂಭದಲ್ಲಿ ಸಣ್ಣ ಉದ್ಯಮವನ್ನು ಆರಂಭಿಸಿ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಗಳಿಸುವ ಮೂಲಕ ಪೊಳಲಿ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕರು ಸಾಧನೆಯನ್ನು ಮಾಡಿದ್ದಾರೆ. ನಿರಂತರ ಪ್ರಯತ್ನದಿಂದ ಒಬ್ಬ ವ್ಯಕ್ತಿ ಏನು ಬೇಕಾದರೂ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಕಿರಣ್ ಹಾಗೂ ಲಿಖಿತ ದಂಪತಿಗಳೇ ಸಾಕ್ಷಿ. ಅವರ ಉದ್ಯಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಕಟ್ಟಡ ಮಾಲಕ ಸತೀಶ್ ಸಪಲ್ಯ ದಂಪತಿ, ಸಂಸ್ಥೆಯ ಪ್ರವರ್ತಕರ ಮಾತಾ ಪಿತರಾದ ಕೃಷ್ಣಪ್ಪ, ಲೀಲಾ, ಅಜ್ಜಿ ಅಪ್ಪಿ ಹಾಗೂ ಸಂಸ್ಥೆಯ ಮಾಲಕರಾದ ಕಿರಣ್, ಲಿಖಿತ ಉಪಸ್ಥಿತರಿದ್ದರು.
ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ನಲ್ಲಿ ಟಿ.ವಿ. ರೆಫ್ರಿಜರೆಟರ್, ವಾಷಿಂಗ್ ಮೆಷಿನ್ ಮೊದಲಾದ ವಿವಿಧ ಬ್ರಾಂಡೆಡ್ ಕಂಪೆನಿಗಳ ಎಲೆಕ್ಟ್ರಾನಿಕ್ ವಸ್ತುಗಳು, ಕಪಾಟು, ಸೋಫಾಸೆಟ್, ಡೈನಿಂಗ್ ಡೇಬಲ್, ಟಿಪಾಯಿ ಮೊದಲಾದ ಮನೆಯ ಅಂದ ಹೆಚ್ಚಿಸುವ ಗುಣಮಟ್ಟದ ಫರ್ನಿಚರ್ ಗಳು, ಟಿಲ್ಟಿಂಗ್ ಗ್ರೈಂಡರ್, ಮಿಕ್ಸರ್ ಗ್ರೈಂಡರ್, ಕುಕ್ಕರ್ ಮೊದಲಾದ ಗ್ರಹಪಯೋಗಿ ವಸ್ತುಗಳು ಒಂದೇ ಸೂರಿನಡಿ ಲಭ್ಯವಿದೆ. ಗ್ರಾಹಕರ ಅನುಕೂಲಕ್ಕಾಗಿ ಗಿಪ್ಟ್ ಸ್ಕೀಂನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಹಕರು ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಗೆ ಭೇಟಿ ನೀಡಿ ಈ ಎಲ್ಲಾ ಸದಾವಕಾಶವನ್ನು ತಮ್ಮದಾಗಿಸಿಕೊಳ್ಳುವಂತೆ ಸಂಸ್ಥೆಯ ಮಾಲಕ ಕಿರಣ್ ಕುಮಾರ್ ತಿಳಿಸಿದ್ದಾರೆ.