Author: admin

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :166 ಕನೆಹಲಗೆ: 06 ಜೊತೆಅಡ್ಡಹಲಗೆ: 06 ಜೊತೆಹಗ್ಗ ಹಿರಿಯ: 15 ಜೊತೆನೇಗಿಲು ಹಿರಿಯ: 34 ಜೊತೆಹಗ್ಗ ಕಿರಿಯ: 27 ಜೊತೆನೇಗಿಲು ಕಿರಿಯ: 78 ಜೊತೆಒಟ್ಟು ಕೋಣಗಳ ಸಂಖ್ಯೆ: 166 ಜೊತೆ ಕನೆಹಲಗೆ:ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿಹಲಗೆ ಮುಟ್ಟಿದವರು: ಶಿರೂರು ಮುದ್ದುಮನೆ ಭರತ್ ನಾಯ್ಕ್ ದ್ವಿತೀಯ: ವಾಮಂಜೂರು ತಿರುವೈಲು ಗುತ್ತು ಅಭಿಷೇಕ್ ನವೀನ್ಚಂದ್ರ ಆಳ್ವಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ•••••••••••••••••••••••••••••••••••••••••••ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್(12.10)ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ ದ್ವಿತೀಯ: ಆಲದ ಪದವು ಮೇಗಿನ ಮನೆ ಅಜ್ಜಾಡಿ ಬಾಬು ರಾಜೇಂದ್ರ ಶೆಟ್ಟಿ “ಬಿ”(13.87)ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್••••••••••••••••••••••••••••••••••••••••••••••ಹಗ್ಗ ಹಿರಿಯ: ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ” (12.03)ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (12.21)ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ••••••••••••••••••••••••‌‌‌‌‌••••••••••••••••••••••ಹಗ್ಗ ಕಿರಿಯ: ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ…

Read More

ಬಂಟ್ವಾಳ: ಜಿಲ್ಲೆಯ ಕಾರಣಿಕದ ದೈವ ಕ್ಷೇತ್ರ ಸಜೀಪಮೂಡ ಗ್ರಾಮದ ಶ್ರೀ ಪಣೋಲಿಬೈಲು ಕಲ್ಲುರ್ಟಿ- ಕಲ್ಕುಡ ದೈವಸ್ಥಾನದಲ್ಲಿ ವರ್ಷವಧಿ ಕೋಲದ ಪ್ರಯುಕ್ತ ಶನಿವಾರ ಸ್ವಸ್ತಿ ಪುಣ್ಯಾಹ, ಪಂಚಗವ್ಯ, ದ್ವಾದಶ ನಾಳಿಕೇರ ಗಣಹೋಮ, ಸಾನಿಧ್ಯ ಕಲಶಾಭಿಷೇಕ, ಪರ್ವ ಸೇವೆ, ನಾಗ ದೇವರಿಗೆ ಫಲಪಂಚಾಮೃತ ಅಭಿಷೇಕ, ಶ್ರೀ ಆಶ್ಲೇಷ ಬಲಿಪೂಜೆ, ವಟು ಆರಾಧನೆ ಕಲ್ಪೋಕ್ತ ಪೂಜೆ, ಪ್ರಸನ್ನ ಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಪೌರೋಹಿತ್ಯ ವಹಿಸಿದ್ದರು. ದೈವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳ್ಯ, ಪ್ರಥಮ ಅರ್ಚಕ ವಾಸುದೇವ ಮೂಲ್ಯ, ಎರಡನೇ ಅರ್ಚಕ ನಾರಾಯಣ ಮೂಲ್ಯ, ಮೂರನೇ ಅರ್ಚಕ ಮೋನಪ್ಪ ಮೂಲ್ಯ, ನಗ್ರಿ ಗುತ್ತು ಜಯ ಶೆಟ್ಟಿ, ನೀಲ್ಯ ಚಂದ್ರಶೇಖರ ಶೆಟ್ಟಿ, ರಮೇಶ್ ಕುಲಾಲ್ ಹಾಗೂ ಸಿಬ್ಬಂದಿಗಳು ವರ್ಗದವರು ಉಪಸ್ಥಿತರಿದ್ದರು. ಸಾವಿರಾರು ಮಂದಿ ಭಕ್ತರು ಕ್ಷೇತ್ರ ದರ್ಶನ ಮಾಡಿ ಅನ್ನಪ್ರಸಾದ ಸ್ವೀಕರಿಸಿದರು.

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂರೋಟರಿ ಕ್ಲಬ್ ಫರಂಗಿಪೇಟೆ ಇದರ ಆಶ್ರಯದಲ್ಲಿ‌129ನೇ ರಕ್ತದಾನ ಶಿಬಿರ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.ಮಂಗಳೂರಿನ‌ ಜೆಪ್ಪುವಿನ ಶ್ರೀ ಅಂಬಾಮಹೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ಎ. ಶಿಬಿರ ಉದ್ಘಾಟಿಸಿ ಮಾತನಾಡಿ ಸೇವಾಂಜಲಿ‌ ಪ್ರತಿಷ್ಠಾನದ ಕೃಷ್ಣಕುಮಾರ್ ಪೂಂಜ ಅವರ‌ ಸೇವಾ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಿದೆ. ಮಕ್ಕಳಿಗೆ ಸಂಗೀತ, ನೃತ್ಯ.‌ಭಜನೆಯಂತಹ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ಜನರ ಪ್ರಾಣ ಉಳಿಸುವಂತಹ ರಕ್ತದಾನ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕಶಿವಕುಮಾರ್ ಬಿ. ಮಾತನಾಡಿ ಕಳೆದ 45 ವರ್ಷಗಳಿಂದ‌ ಕೃಷ್ಣಕುಮಾರ್ ಪೂಂಜ ಅವರು ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿದ್ದಾರೆ. ಸಮಾಜದಲ್ಲಿ ಅನೇಕ ಮಂದಿ ಶ್ರೀಮಂತರು ಇದ್ದರೂ ಕೂಡ ಎಲ್ಲರಿಗೂ ಸೇವಾಗುಣ ಇರುವುದಿಲ್ಲ ಆದರೆ ಕೃಷ್ಣಕುಮಾರ್ ಪೂಂಜ ನಿರಂತರವಾಗಿ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ನಿವೃತ್ತ ಅಧಿಕಾರಿ ಎಂ.ಆರ್. ನಾಯರ್ ಶುಭ ಹಾರೈಸಿದರು. ಕೆಎಂಸಿ ಆಸ್ಪತ್ರೆಯ ವೈದ್ಯ ಸ್ಟೀಫನ್, ಶಿವರಾಜ್ ಸುಜೀರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.…

Read More

ಬಂಟ್ವಾಳ: ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ್ ಮಹಿಳಾ ಸಂಘ ಇದರ ಆಶ್ರಯದಲ್ಲಿ ಅಂಚೆ ಇಲಾಖೆಯ ಅಪಘಾತ ವಿಮೆ, ಆಯುಷ್ಮಾನ್ ಕಾರ್ಡ್, ಸೀನಿಯರಗ ಸಿಟಿಜನ್ ಕಾರ್ಡ್ ನೋಂದಾಣಿ ಶಿಬಿರ‌ ತುಂಬೆ ಬೊಳ್ಳಾರಿಯ ಸಂಘದ ಕಚೇರಿಯಲ್ಲಿ ಭಾನುವಾರ ನಡೆಯಿತು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಶಿಬಿರ ಉದ್ಘಾಟಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ ಜನರ ಉಪಯೋಗಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಮಾಹಿತಿಯ ಕೊರತೆಯಿಂದ‌ ಅನೇಕ ಯೋಜನೆಗಳು ಅರ್ಹರಿಗೆ ತಲುಪುತ್ತಿಲ್ಲ. ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಸರಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಿದೆ ಎಂದು ತಿಳಿಸಿದರು. ವೇದಿಕೆಕೆಯಲ್ಲಿ ಸಂಘದ ಗೌರವಾಧ್ಯಕ್ಷ, ತಾ.ಪಂ. ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ತುಂಬೆ ಗ್ರಾಮ ಪಂಚಾಯತಿ ಸದಸ್ಯ ಕಿಶೋರ್, ಮಹಿಳಾ ಸಂಘದ ಅಧ್ಯಕ್ಷೆ ಜಲಜಾಕ್ಷಿ, ಗೌರವಾಧ್ಯಕ್ಷೆ ಪಾರ್ವತಿ ಐತಪ್ಪ ಕುಲಾಲ್, ಅಧ್ಯಕ್ಷ‌ವಚೆನ್ನಕೇಶವ, ಗ್ರಾಮ 1 ವ್ಯವಸ್ಥಾಪಕ ರಂಜಿತ್, ಪಂಚಾಯತಿನ ಮಾಜಿ ಅಧ್ಯಕ್ಷೆ ಹೇಮಲತಾ ಜಿ ಪೂಜಾರಿ,…

Read More

ಬಂಟ್ವಾಳ: ದ.ಕ.ಜಿಲ್ಲಾ ಟೂರಿಸ್ಟ್ ಕಾರು ಚಾಲಕರ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರಾದ ಬಿ.ಎಂ.ಪ್ರಭಾಕರ ದೈವಗುಡ್ಡೆ ( 72) ಅವರು ಅಸೌಖ್ಯದಿಂದ ಬಂಟ್ವಾಳ ದೈವಗುಡ್ಡೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಟೂರಿಸ್ಟ್ ಕಾರು ಚಾಕರಾಗಿದ್ದ ಅವರು ಪತ್ನಿ,ಒರ್ವಪುತ್ರಿಯನ್ನು‌ ಅಗಲಿದ್ದಾರೆ.ಬಂಟ್ವಾಳ ತಾಲೂಕು ಸಮಾನಮನಸ್ಕ ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷರು ಆಗಿದ್ದ ಅವರ ಕಾರ್ಮಿಕರ,ಚಾಲಕ ಸಮುದಾಯದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.ಹುಟ್ಟು ಹೋರಾಟಗಾರರಾಗಿದ್ದ ಅವರು ಬ್ರಹ್ಮರಕೊಟ್ಲುಟೋಲ್ ಗೇಟ್ ವಿರುದ್ಧವು ಹೋರಾಟ ನಡೆಸಿದ್ದರು.ದ.ಕ.ಜಿಲ್ಲಾ ಟೂರಿಸ್ಟ್ ಕಾರು ಚಾಲಕರ ಮತ್ತು ಮಾಲಕರ ಸಂಘದ ಸಂಸ್ಥಾಪಕರಾಗಿ ಹಲವು ವರ್ಷಗಳ ಕಾಲ ಸಂಘವನ್ನು ಮುನ್ನಡೆಸಿದ್ದರು. ಬಿ.ಸಿ.ರೋಡು ಪರಿಸರದಲ್ಲಿ ದೈವಗುಡ್ಡೆಯೆಂದೆ ಚಿರಪರಿಚಿತರಾಗಿದ್ದರು.ವಿವಿಧ ಸಂಘಟನೆಯಲ್ಲಿಯು ಗುರುತಿಸಿದ್ದರು.ಅವರನ್ನು ಇತ್ತೀಚೆಗಷ್ಠೆ ಚಾಲಕ ಸಮುದಾಯ ಹಾಗೂ ಸಮಾನ ಮನಸ್ಕ ಸಂಘಟನೆಯ ವತಿಯಿಂದ ಸಾರ್ವಜನಿಕವಾಗಿ ಸನ್ಮಾನಿಸಲಾಗಿತ್ತು.

Read More

ಬಂಟ್ವಾಳ:‌ ಗ್ರಾಮೀಣ ಕೃಷಿಕರು ಮನೋರಂಜನೆ ಗಾಗಿ ಆರಂಭಿಸಿದ ಕಂಬಳ ಕ್ರೀಡೆ ಪ್ರಸಕ್ತ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ ಎಂದು ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಹೇಳಿದರು.ಇಲ್ಲಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ಎಂಬಲ್ಲಿ ಶನಿವಾರ ಆರಂಭಗೊಂಡ2 ನೇ ವರ್ಷದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ ಉದ್ಘಾಟಿಸಿ ಅವರು ಮಾತನಾಡಿದರು. ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಆಶೀರ್ವಚನ ನೀಡಿದರು. ಕುಡುಂಬೂರುಗುತ್ತು ಕ್ಷೇತ್ರದ ಆಡಳಿತ ಮೊಕ್ತೇಸರ ಗುತ್ತಿನಾರ್ ಜಯರಾಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಶಿವಮೊಗ್ಗ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಎಲಿಯಾಸ್ ಸ್ಯಾಂಕ್ಟಿಸ್, ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ಧಕಟ್ಟೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ಸಿದ್ದಕಟ್ಟೆ ಹಿರಿಯ ವೈದ್ಯ ಡಾ. ಪ್ರಭಾಚಂದ್ರ ಜೈನ್,ವೈದ್ಯ ಡಾ.ಸುದೀಪ್ ಕುಮಾರ್ ಜೈನ್ , ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಸಂಗಬೆಟ್ಟು ಗ್ರಾಮ ಪಂಚಾಯತಿ ಮಾಜಿ…

Read More

ಬಂಟ್ವಾಳ: ಬಂಟ್ಚಾಳ ತಾಲೂಕಿನ ಲೊರೆಟ್ಟೊ ಪದವಿನಲ್ಲಿರುವ ಲೊರೆಟ್ಟೊ ಆಂಗ್ಲಮಾಧ್ಯಮ‌ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ‌ ಶಿಕ್ಷಣವನ್ನು ನೀಡುವ ಉದ್ದೇಶದಿಂದ 2010ರಲ್ಲಿ ಆರಂಭಗೊಂಡ ಲೊರೆಟ್ಟೊ ಆಂಗ್ಲಮಾಧ್ಯಮ‌ ಶಾಲೆಯಲ್ಲಿ ಎಲ್ ಕೆ.ಜಿ ಯಿಂದ ಹತ್ತನೆ ತರಗತಿಯವರೆಗೆ ಸುಮಾರು 457 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಈ ಶಾಲೆಗೆ ಕೇಂದ್ರಿಯ ಶಿಕ್ಷಣ ಮಂಡಳಿಯ ಮಾನ್ಯತೆಯೂ ಲಭಿಸಿದ್ದು‌ 2024- 25 ನೇ ಸಾಲಿನಿಂದ‌ ಇಲ್ಲಿ ಸಿಬಿಎಸ್ ಸಿ (CBSC) ತರಗತಿಗಳು ಆರಂಭಗೊಂಡಿರುವುದು ಶಾಲೆಯ ಕೀರ್ತಿಯ ಮುಕುಟಕ್ಕಿಟ್ಟ ಗರಿಯಾಗಿದೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಸುಸಜ್ಜಿತವಾದ ತರಗತಿ ಕೋಣೆಗಳು, 7 ಡಿಜಿಟಲ್‌ ತರಗತಿಗಳು, ವ್ಯವಸ್ಥಿತವಾದ ಕಂಪ್ಯೂಟರ್ ಲ್ಯಾಬ್, 4 ಸಾವಿರಕ್ಕಿಂತಲೂ ಅಧಿಕ ಪುಸ್ತಕಗಳಿರುವ ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಲಿಫ್ಟ್ ವ್ಯವಸ್ಥೆ, ಪ್ಲೇ ಸ್ಕೂಲ್, ಸ್ಲೂಲ್ ಬಸ್ಸ್, ವಿಶಾಲವಾದ ಆಟದ ಮೈದಾನ ಈ ಶಾಲೆಯ ವಿಶೇಷತೆಯಾಗಿದೆ. ಪರಿಣಿತ ಶಿಕ್ಷಕರ ತಂಡವಿದೆ. ಕಚೇರಿ ಕೆಲಸಗಳಲ್ಲಿ…

Read More

ಬಂಟ್ವಾಳ: ತೋಟಗಾರಿಕಾ ಇಲಾಖೆ ಬಂಟ್ವಾಳ‌ ಹಾಗೂ ದ.ಕ. ಜಿಲ್ಲಾ ದಲಿತ ನಾಗರಿಕ ಹಿರಕ್ಷಕ ಯುವ ವೇದಿಕೆ ಬಂಟ್ವಾಳ ಇದರ ಆಶ್ರಯದಲ್ಲಿ ಉಚಿತ ಜೇನು ತರಬೇತಿ ಕಾರ್ಯಕ್ರಮದ ಅಂಗವಾಗಿ ಗುರುವಾರ ಪ್ರಾಯೋಗಿಕ ತರಬೇತಿ ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟುವಿನಲ್ಲಿ ನಡೆಯಿತು. ಜೇನು ತರಬೇತುದಾರ ಲಕ್ಷ್ಮಣ ಗೌಡ ತಮ್ಮ ಮನೆಯ ಆವರಣದಲ್ಲಿ ಶಿಬಿರಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದರು.‌ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.ಈ ಸಂದರ್ಭ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜಾ,ದ.ಕ. ಜಿಲ್ಲಾ ದಲಿತ ನಾಗರಿಕ ಹಿರಕ್ಷಕ ಯುವ ವೇದಿಕೆಯ ಸ್ಥಾಪಾಕಾಧ್ಯಕ್ಷ ಹೊನ್ನಪ್ಪ ಕುಂದರ್, ಗೌರವಾಧ್ಯಕ್ಷ ಪಿ. ಕೇಶವ ನಾಯ್ಕ, ಅಧ್ಯಕ್ಷ ಕೆ.ಸತೀಶ್ ಅರಳ, ಉಪಾಧ್ಯಕ್ಷ ರಾಘವೇಂದ್ರ ಸುರುಳಿಮೂಲೆ, ಡಿ. ಗಂಗಾಧರ ನಾಯ್ಕ, ಪ್ರಧಾನ ಕಾರ್ಯದರ್ಶಿ ಸೀತರಾಮ ನಾಯ್ಕ, ಪದಾಧಿಕಾರಿಗಳಾದ ಸಂಜೀವ ಜಿ.‌, ಲಕ್ಷ್ಮಣ್ ಚೆಂಡ್ತಿಮಾರ್, ಕೃಷ್ಣಪ್ಪ ಪುದೊಟ್ಟು, ಧನಂಜಯ ನಾಯ್ಕ, ರಾಮದಾಸ ಮೇರಮಜಲು, ತೋಟರಿಗಾರಿಕ ಇಲಾಖೆಯ ಹರೀಶ್ ಉಪಸ್ಥಿತರಿದ್ದರು. ಬುಧವಾರ ಬಿ.ಸಿ.ರೋಡಿನ ಅಂಬೇಡ್ಕರ್ ಸಮುದಾಯಭವನದಲ್ಲಿ‌ ರಾಧಕೃಷ್ಣ ಬೆಟ್ಟಂಪಾಡಿ ತರಬೇತಿ ನೀಡಿದರು

Read More

ಬಂಟ್ವಾಳ: ೪೦೦ ಕೆವಿ ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದ ಬಂಟ್ವಾಳ ಕಸ್ಬಾ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಿಕೆ ಎಂಬಲ್ಲಿಗೆ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ಪುಣಚ ಅವರ ನೇತೃತ್ವದಲ್ಲಿ ರೈತ ಸಂಘದ ಸದಸ್ಯರು, ಸಂತ್ರಸ್ತ ರೈತರು ಹಾಗೂ ಗ್ರಾಮಸ್ಥರು ಮುತ್ತಿಗೆ ಹಾಕಿ ಕಾಮಗಾರಿಗೆ ನಡೆಸದಂತೆ ತಡೆಯೊಡಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆಗೆ ಕಾಮಗಾರಿ ನಡೆಯುತ್ತಿದ್ದ ದರ್ಬಳಿಕೆಗೆ ಬಂದ ರೈತ ಸಂಘದ ಮುಖಂಡರು ಎರಡು ಜೆಸಿಬಿಗಳ ಮೂಲಕ ಮಣ್ಣು ತೋಡುವ ಕೆಲಸವನ್ನು ನಿಲ್ಲಿಸಿ ಕಾಮಗಾರಿ ನಡೆಸದಂತೆ ಗುತ್ತಿಗೆ ಕಂಪೆನಿಯ ಕಾರ್ಮಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಒಂದು ವ್ಯಾನ್ ಪೊಲೀಸರನ್ನು ನಿಯೋಜಿಸಿ ಕಾಮಗಾರಿ ನಡೆಯುತ್ತಿದ್ದರೂ ಕ್ಯಾರೇ ಎನ್ನದ ರೈತ ಸಂಘದ ಮುಖಂಡರು ಕಾಮಗಾರಿ ನಿಲ್ಲಿಸಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ., ಹಾಗೂ ಎಸೈ ರಾಮಕೃಷ್ಣ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವಂತೆ ರೈತ…

Read More

ಬಂಟ್ವಾಳ: 400 ಕೆ.ವಿ. ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಗುತ್ತಿಗೆ ಕಂಪೆನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆಯೇ ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂತ್ರಸ್ತ ರೈತರು ಕಾಮಗಾರಿ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಬಂಟ್ವಾಳ ಕಸ್ಬ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಿಕೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದ್ದು ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್ ಘಟನಾ ಸ್ಥಳಕ್ಕೆ ದೌಡಾಯಿಸಿ ಸಂತ್ರಸ್ತ ರೈತರನ್ನು ಮನವೊಲಿಸಿ ಕಾಮಗಾರಿ ಮುಂದುವರೆಯಲು ಅವಕಾಶ ಮಾಡಿಕೊಟ್ಟರು.ದರ್ಬಳಿಕೆಯ ಖಾಸಗಿ ಜಮೀನಿನಲ್ಲಿ ೪೦೦ ಕೆ.ವಿ. ವಿದ್ಯತ್ ಪ್ರಸರಣ ತಂತಿಯನ್ನು ಅಳವಡಿಸಲು ಗುತ್ತಿಗೆ ಸಂಸ್ಥೆಯಾಗಿರುವ ಸ್ಟೆರ್‌ಲೈಟ್ ಪವರ್ ಕಂಪೆನಿ ಪೊಲೀಸ್ ಭದ್ರತೆಯೊಂದಿಗೆ ಜೆಸಿಬಿ ಮೂಲಕ ಮರಗಳನ್ನು ಉರುಳಿಸಿ ನೆಲಸಮತಟ್ಟು ಮಾಡುವ ಕೆಲವನ್ನು ಆರಂಭಿಸಿತ್ತು. ಈ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ರೈತ ಸಂಘ ಹಾಗೂ ೪೦೦ ಕೆ.ವಿ. ಸಂತ್ರಸ್ತ ರೈತರ ಹೋರಾಟ ಸಮಿತಿಯ ಪ್ರಮುಖರು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳು, ಜನಪ್ರತಿನಿಧಿಗಳು,…

Read More