
ಬಂಟ್ವಾಳ: ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ಸ್ ನ ನೂತನ ಕಚೇರಿ ಬಿ.ಸಿ.ರೋಡಿನ ಜಿ.ಕೆ. ಸ್ಮಾರ್ಟ್ ಸಿಟಿಯ ಮೊದಲ ಮಹಡಿಯಲ್ಲಿ ಶುಭಾರಂಭಗೊಂಡಿತು.

ಮಿತ್ತಬೈಲು ಮಸೀದಿಯ ಖತೀಬರಾದ ಇರ್ಶಾದ್ ದಾರಿಮಿ ದುವಾ ನೆರವೇರಿಸಿದರು.ಹಿದಾಯ ಫೌಂಡೇಷನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ ಆನಿಯ ಹೊಟೇಲ್ ನ ಮಾಲಕ ಹಂಝ ಬಸ್ತಿಕೋಡಿಯವರು ಎಲ್ಲಾ ಧರ್ಮದ ಜನರೊಂದಿಗೆ ಉತ್ತಮವಾದ ಒಡನಾಟ ಹೊಂದಿ ಮಾದರಿ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅವರ ಉದ್ಯಮ ಕ್ಷೇತ್ರ ಇನ್ನಷ್ಟು ವಿಸ್ತರಿಸಲಿ ಎಂದು ಶುಭ ಹಾರೈಸಿದರು.


ಬಂಟ್ಚಾಳ ಪುರಸಭೆಯ ಉಪಾಧ್ಯಕ್ಷ ಮೂನೀಶ್ ಅಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಎಲ್ಲಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಹಾಗೂ ಸಮುದಾಯಕ್ಕೆ ತನ್ನ ಕೊಡುಗೆಗಳನ್ನು ನೀಡುತ್ತಿರುವ ಹಂಝ ಅವರು ಎಲ್ಲಾ ಜಾತಿ, ಧರ್ಮದವರನ್ನು ಪ್ರೀತಿಸುವ ಅಜಾತಶತ್ರು ಎಂದು ತಿಳಿಸಿದರು.

ಮುಂಬೈ ಬಿಲ್ಲವ ಅಸೋಸಿಯೇಷನ್ ನ ಕಾರ್ಯಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು ಮಾತನಾಡಿ ಮುಂಬೈಯಲ್ಲೇ ಉತ್ತಮ ಗೆಳೆಯರಾಗಿದ್ದ ಹಂಝರವರು ಎಲ್ಲ ಸಮುದಾಯದ ಜನರನ್ನು ಜೊತೆಯಲ್ಲಿ ಸೇರಿಸಿಕೊಂಡು ಸಮಾಜ ಸೇವೆ ಮಾಡುತ್ತಿರುವುದು ಅಭಿನಂದನೀಯ ಎಂದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ ಹಂಝ ಬಸ್ತಿಕೋಡಿಯವರು ವಿಶೇಷ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ವ್ಯವಹಾರದ ಜೊತೆಗೆ ಮಾನವೀಯ ಸೇವೆಯನ್ನು ಮಾಡುತ್ತಿರುವುದು ಅಭಿನಂದನೀಯ ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಎಚ್. ಅಬ್ದುಲ್ ರಹಿಮಾನ್ ಬಸ್ತಿಕೋಡಿ , ಟ್ರಾಫಿಕ್ ಎಸೈ ಸುತೇಶ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಕಾರ್ಯದರ್ಶಿ ನಾರಾಯಣ ಸಿ.ಪೆರ್ನೆ, ಪೂರ್ವಾಧ್ಯಕ್ಷ ಸುರೇಶ್ ಸಾಲ್ಯಾನ್, ಮುಂಬೈ ಉದ್ಯಮಿಗಳಾದ ಅನ್ನು ಶೆಟ್ಟಿ, ಕಿರಣ್ ಶೆಟ್ಟಿ, ಗುಡ್ ವೇ ಫೌಂಡೇಶನ್ ನ ಉಪಾಧ್ಯಕ್ಷ ರಹೀಂ ಮಲ್ಲೂರು, ಉದ್ಯಮಿಗಳಾದ ಅಬ್ದುಲ್ ರಝಾಕ್, ಮೊಹಮ್ಮದ್ ಸಾಗರ್, ಆರ್ ಎಂಬಿ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಮುಸ್ತಫಾ ಬಸ್ತಿಕೋಡಿ
ಅಫ್ಸಲ್ ಬಸ್ತಿಕೋಡಿ, ಹಸೈನಾರ್ ರಹ್ಮಾನ್ ಬಸ್ತಿಕೋಡಿ
ಹುಸೈನ್ ಬಿ.ಸಿ.ರೋಡ್, ಮಸೂದ್ ಉಜಿರೆ
ಕಾರ್ತಿಕ್ ಪೂಜಾರಿ ಚೇಳೂರು ವಿಲ್ಟನ್ ಪಚ್ಚಿನಡ್ಕ
ಪೊಲೀಸ್ ಕರೀಂ, ವಕೀಲ ಕಬೀರ್ , ಉದ್ಯಮಿ ದುರ್ಗಾದಾಸ್ ಶೆಟ್ಟಿ , ಚಿತ್ತರಂಜನ್ ಶೆಟ್ಟಿ
ಮಂಜುನಾಥ್ ಬಾಳಿಗ ಸೇರಿದಂತೆ ಹಂಝ ಬಸ್ತಿಕೋಡಿಯವರ ಕುಟುಂಬಸ್ಥರು, ಮಿತ್ರರು ಮತ್ತು ಆನಿಯಾ ದರ್ಬಾರ್ ಗ್ರೂಫ್ ಆಫ್ ಹೋಟೆಲ್ಸ್ ನ ಸಿಬ್ಬಂದಿಗಳು ಭಾಗವಹಿಸಿದ್ದರು.
ಆನಿಯಾ ದರ್ಬಾರ್ ಗ್ರೂಫ್ ಆಫ್ ಹೋಟೆಲ್ಸ್ ನ ಮಾಲಕ ಹಂಝ ಬಸ್ತಿಕೋಡಿ ಸ್ವಾಗತಿಸಿ, ಹಿದಾಯ ಫೌಂಡೇಶನ್ ನ ಯೂತ್ ವಿಂಗ್ ಅಧ್ಯಕ್ಷ ಆಶಿಕ್ ಕುಕ್ಕಾಜೆ ವಂದಿಸಿದರು.
