ಬಂಟ್ವಾಳ : ಬಿ.ಸಿ.ರೋಡಿನ ಉದ್ಯಮಿ,ಜೋಡುಮಾರ್ಗ ನೇತ್ರಾವತಿ ಜೇಸಿ, ಬಂಟ್ವಾಳ ರೋಟರಿ ಟೌನ್ ಪೂರ್ವಾಧ್ಯಕ್ಷರೂ ಆಗಿದ್ದ ಉದ್ಯಮಿ ನಿರ್ಮಲ್ ಎಸೋಸಿಯೇಟ್ಸ್ ಮಾಲಕರಾದ ಉಮೇಶ್ ನಿರ್ಮಲ್ (53) ಅವರು ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ದಿಢೀರ್ ಹೃದಯಾಘಾತದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಅಸು ನೀಗಿರುವುದಾಗಿ ವೈದ್ಯರು ತಿಳಿಸಿದರು.
ಶಿಕ್ಷಣ ಸಂಪನ್ಮೂಲ ಕೇಂದ್ರ, ಜಿಲ್ಲಾ ಜುವಿನೈಲ್ ಜಸ್ಟೀಸ್ ಬೋರ್ಡ್ ಜೀವ ವಿಮಾ ನಿಗಮ ಕ್ಲಬ್ ಸದಸ್ಯ ಪರಿಸರಾಸಕ್ತರ ಒಕ್ಕೂಟ JCI, ರೋಟರಿ ಹಾಗೂ ವಿವಿದ ಸಮಾಜ ಮುಖಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರಾಗಿರುತ್ತಾರೆ.ಅವರು ಪತ್ನಿ ಸವಿತಾ ನಿರ್ಮಲ್, ಮಗ ಶಮಿತ್ ನಿರ್ಮಲ್ ಮಗಳು ತನ್ಮಯಿ ನಿರ್ಮಲ್ ಅವರನ್ನು ಅಗಲಿದ್ದಾರೆ..
Advertisement
Advertisement