
ಬಂಟ್ವಾಳ: ದ.ಕ.ಜಿಲ್ಲೆಯ ಪ್ರಸಿದ್ಧ ದೈವಸ್ಥಾನ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಂಪ್ರತಿಯಂತೆ ಪುದ್ದರ್ದ ಅಗೇಲು ಗುರುವಾರ ನಡೆಯಿತು.
ಪ್ರತೀ ವರ್ಷ ಕಾವೇರಿ ಸಂಕ್ರಮಣದಂದು ತಾಯಿಗೆ ಹೊಸ ಅಕ್ಕಿಯ ಅನ್ನ ಹಾಗೂ ಹಲವಾರು ಬಗೆಯ ತರಕಾರಿಯಿಂದ ತಯಾರಿಸಿದ ಪದಾರ್ಥದ ನೈವೇದ್ಯದೊಂದಿಗೆ ಅಗೇಲು ಸಮರ್ಪಿಸುವ ಪರಂಪರೆ ನಡೆದುಕೊಂಡು ಬರುತ್ತಿದ್ದು ಗುರುವಾರ 1242 ಅಗೇಲು ಸೇವೆ ಸಲ್ಲಿಕೆಯಾಗಿದೆ.



ಈ ಸಂದರ್ಭ ಪಣೋಲಿಬೈಲು ದೈವಸ್ಥಾನದ ಅರ್ಚಕರಾದ ವಾಸು ಮೂಲ್ಯ, ನಾರಾಯಣ ಮೂಲ್ಯ, ಮೋನಪ್ಪ ಮೂಲ್ಯ , ಕಾರ್ಯನಿರ್ವಾಹಣಾಧಿಕಾರಿ ದಿವಾಕರ ಮುಗುಳಿ ದೈವದ ಚಾಕರಿಯವರು, ಸಿಬ್ಬಂದಿಗಳು ಹಾಗೂ ಭಕ್ತವೃಂದ ಹಾಜರಿದ್ದರು.
