Author: admin
ಬಂಟ್ವಾಳ: ಕ್ರೀಡೆಯಿಂದ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಡಲು ಸಾಧ್ಯವಿದೆ. ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ಇತರ ಸಂಘಟನೆಗಳ ಸಹಕಾರದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ತಾಲೂಕಿನ ಎಲ್ಲಾ ವೃತ್ತಿಪರ ಸಂಘಟನೆಗಳನ್ನು ಸಂಘಟಿಸುವ ಮೂಲಕ ಪರಸ್ಪರ ಪ್ರೀತಿ, ಬಾಂಧವ್ಯವನ್ನು ವೃದ್ಧಿಸಿದೆ ಎಂದು ಶಾಸಕ ರಾಜೇಶ್ ನಾಕ್ ಹೇಳಿದರು ಅವರು ಲಯನ್ಸ್ ಕ್ಲಬ್ ಬಂಟ್ವಾಳ ಇದರ ನೇತೃತ್ವದಲ್ಲಿ ರಾರಾಸಂ ಫೌಂಡೇಶನ್ ಬಂಟ್ವಾಳ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಇದರ ಸಹಯೋಗದೊಂದಿಗೆ ಭಾನುವಾರ ಬಂಟ್ವಾಳದ ಎಸ್‌ವಿಎಸ್ ಮೈದಾನದಲ್ಲಿ ನಡೆದ ರಿಪಬ್ಲಿಕ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿ ಮಾತನಾಡಿದರು.ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ. ಭಟ್ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಡಾ. ಬಿ. ವಸಂತ ಬಾಳಿಗಾ, ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಬೂಡ ಅಧ್ಯಕ್ಷ ಬೇಬಿ ಕುಂದರ್, ಲಯನ್ಸ್ ಪೂರ್ವ ರಾಜ್ಯಾಪಾಲ ಸಂಜಿತ್ ಶೆಟ್ಟಿ, ಬಂಟರ ಸಂಘದ…
ಬಂಟ್ವಾಳ: ಅಚಲ ಕಾಯಕ ನಿಷ್ಠರಾಗಿದ್ದ ಮಡಿವಾಳ ಮಾಚಿದೇವ ಅವರು ವಚನ ಸಾಹಿತ್ಯ ಮತ್ತು ಧರ್ಮದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ವಚನಗಳ ಸಂದೇಶದಂತೆ ಇಂದು ಮನಗಳಲ್ಲಿರುವ ಕೊಳೆಯನ್ನು ತೊಳೆಯುವ ಅನಿವಾರ್ಯತೆ ಇದೆ ಎಂದು ತಹಸೀಲ್ದಾರ್ ಡಿ. ಅರ್ಚನಾ ಭಟ್ ಹೇಳಿದರು. ಅವರು ಶನಿವಾರ ಬಿ.ಸಿ.ರೋಡಿನ ಆಡಳಿತ ಸೌಧದ ಸಭಾಂಗಣದಲ್ಲಿಬಂಟ್ವಾಳ ತಾಲೂಕು ಮಟ್ಟದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರನಾಥ ಮಿತ್ತೂರು, ತಾಲೂಕು ಕಛೇರಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಯವರು, ಗ್ರಾಮ ಸಹಾಯಕರು ಹಾಜರಿದ್ದರು. —
ಬಂಟ್ವಾಳ: ಮೆಲ್ಕಾರ್ ನ ತರಕಾರಿ ಅಂಗಡಿಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಬೆಳಕಿಗೆ ಬಂದಿದೆ. ಮಹಮ್ಮದ್ ಶರೀಫ್ ಎಂಬವರ ಮಾಲಕತ್ವದ ಚಂದ್ರಿಕಾ ತರಕಾರಿ ಅಂಗಡಿಯ ಬೀಗ ಮುರಿದು ಹಣಕ್ಕಾಗಿ ಜಾಲಾಡಿದ್ದಾರೆ. ಶರೀಫ್ ಅವರು ಸಾಮಾಜಿಕ ಸೇವಾ ಕರ್ತರಾಗಿದ್ದು ಸರಕಾರಿ ಶಾಲೆಯ ಅಭಿವೃದ್ದಿಗಾಗಿ ತನ್ನ ಅಂಗಡಿಯಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳರು ದೋಚಿದ್ದಾರೆ. ಕಾಣಿಕೆ ಡಬ್ಬಿ ತುಂಬಿದ್ದು ಅಂದಾಜು 5 ಸಾವಿರಕ್ಕಿಂತಲೂ ಅಧಿಕ ಮೊತ್ತದ ಹಣ ಅದರಲ್ಲಿತ್ತು ಎನ್ನಲಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ಮುಂದಿನ ಎ.4 ರಿಂದ ಎ.9ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು ಪೂರ್ವಭಾವಿಯಾಗಿ ಗುರುವಾರ ಸಂಜೆ ದೇವಸ್ಥಾನದ ಸಭಾಂಗಣದಲ್ಲಿ ಸೇವಾ ಸಮಿತಿ ಹಾಗೂ ಬ್ರಹ್ನಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ ನಡೆಯಿತು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ ಬಿ., ಪ್ರಮುಖರಾದ ಡಾ. ರಮೇಶಾದ ಸೋಮಯಾಜಿ, ಜಗನ್ನಾಥ ಚೌಟ, ವಕೀಲ ಅಶ್ವನಿ ಕುಮಾರ್ ರೈ, ಸಂಜೀವ ಪೂಜಾರಿ ಗುರುಕೃಪಾ, ಸತೀಶ್ ಭಂಡಾರಿ, ಐತಪ್ಪ ಪೂಜಾರಿ, ನಾರಾಯಣ ಹೆಗ್ದೆ , ಬಿ. ಮೋಹನ್, ಲೋಕನಾಥ ಶೆಟ್ಟಿ, ಗೋಪಾಲ ಸುವರ್ಣ, ಸದಾನಂದ ಶೆಟ್ಟಿ ರಂಗೋಲಿ, ಪುರುಷ ಸಾಲ್ಯಾನ್ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವದ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಬಂಟ್ವಾಳ: ನಾಗರಿಕ ಸಮಾಜದಲ್ಲಿ ಅನೇಕ ಮಂದಿ ವಿವಿಧ ರೀತಿಯ ಸಮಾಜ ಸೇವೆಗಳನ್ನು ಮಾಡುತ್ತಿರುತ್ತಾರೆ. ಕೆಲವರ ಸಮಾಜ ಸೇವೆಯನ್ನು ಸಮಾಜ ಗುರುತಿಸಿಕೊಂಡಿದ್ದರೆ, ಅನೇಕ ಮಂದಿಯ ಸಮಾಜ ಸೇವೆಗಳು ಎಲೆಮರೆಯ ಕಾಯಿಯಂತೆ ಬೆಳಕಿಗೆ ಬಾರದೆ ಉಳಿದುಬಿಡುತ್ತದೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಈ ಮುಸ್ಲಿಂ ದಂಪತಿ ಅಪೂರ್ವವಾದ ಹಾಗೂ ಮಾದರಿ ಸೇವಾ ಕಾರ್ಯಗಳನ್ನು ಮಾಡಿದರೂ ಎಲೆಮರೆಯ ಕಾಯಿಯಾಗಿ ಉಳಿದು ಬಿಟ್ಟಿದ್ದಾರೆ!ಕರ್ನಾಟಕ ಹಾಗೂ ಕೇರಳ ರಾಜ್ಯದ ಗಡಿಭಾಗದಲ್ಲಿದೆ ಮಾಣಿಲ ಎನ್ನುವ ಸಣ್ಣ ಗ್ರಾಮ. ಈಗಷ್ಟೇ ಅಭಿವೃದ್ದಿಯ ಹೆಜ್ಜೆಗಳನ್ನು ಕಾಣುತ್ತಿರುವ ಈ ಗ್ರಾಮದ ಕಾಮಜಲು ಎನ್ನುವ ಸಣ್ಣ ಊರಿನಲ್ಲಿರುವ ಪಿ. ಮಹಮ್ಮದ್ ಕುಂಞ ಹಾಗೂ ಕುಂಞಪಾತು ದಂಪತಿಗಳ ಸಾಧನೆ ಅಪೂರ್ವವಾದುದು. ಪತಿ ಮಹಮ್ಮದ್ ಕುಂಞ ಊರಿನ ಬಡ ಮಕ್ಕಳಿಗಾಗಿ ತನ್ನ ಅಂಗಡಿಯಲ್ಲೇ ಶಾಲೆ ತೆರೆದ ಅಕ್ಷರ ಸಂತನಾದರೆ, ಪತ್ನಿ ಈ ಊರಿಗೆ ಸರಕಾರಿ ಬಸ್ಸನ್ನು ತರಿಸಿದ ಸಾಹಸಿ. ಶಾಲೆ ತೆರೆದ ಅಕ್ಷರ ಸಂತ:ಮಹಮ್ಮದ್ ಕುಂಞ ಅವರ ತಂದೆಗೆ ೧೪ ಮಂದಿ ಮಕ್ಕಳು. ತಾನೇ ಹಿರಿಯವನಾದ ಕಾರಣ ಹೆಚ್ಚು…
ಬಂಟ್ವಾಳ:ಜೇಸಿ ಜೋಡುಮಾರ್ಗ ನೇತ್ರಾವತಿಯ ನೂತನ ತಂಡದ ಪದಗ್ರಹಣ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಿತು. ಈ ಸಂದರ್ಭಜೇಸಿ ವಲಯ 15ರ ಅಧ್ಯಕ್ಷ ಅಭಿಲಾಷ್ ಬಿ.ಎ. ಮಾತನಾಡಿ, ಜೇಸಿ ಆಂದೋಲನವು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದು, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಜೋಡುಮಾರ್ಗ ನೇತ್ರಾವತಿಗೆ ಯುವ ತಂಡ ದೊರಕಿದ್ದು, ಹಿರಿಯರ ಮಾರ್ಗದರ್ಶನದೊಂದಿಗೆ ಮುನ್ನಡೆಯಲಿರುವುದು ಸಂತೋಷದ ಸಂಗತಿ ಎಂದರು. ಮುಖ್ಯ ಅತಿಥಿಯಾಗಿ ಯೆನೆಪೊಯ ಮೆಡಿಕಲ್ ಕಾಲೇಜಿನ ಅನಾಟಮಿ ವಿಭಾಗದ ಉಪನ್ಯಾಸಕಿ ಪ್ರಿಯಾ ಮಿನೇಜಸ್ ಮಾತನಾಡಿ, ನಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸಲು ಇಂಥ ಸಂಸ್ಥೆಗಳು ಸಹಕಾರಿಯಾಗುತ್ತದೆ. ನಮ್ಮ ಬದುಕು ಪೆನ್ಸಿಲ್ ಇದ್ದಂತೆ. ಸ್ಪಷ್ಟವಾಗಿ ಬರೆಯಬೇಕೆಂದರೆ, ಅದು ಹೆಚ್ಚು ಚೂಪಾಗಬೇಕು, ಹಾಗೆಯೇ ನಮ್ಮ ಕುರಿತು ಇರುವ ಹೊಗಳಿಕೆ ಹಾಗೂ ಟೀಕೆ, ವಿಮರ್ಶೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು. ಗೌರವ ಅತಿಥಿಯಾಗಿ ಭಾಗವಹಿಸಿದ ಜೇಸಿ ವಲಯ 15ರ ರೀಜನ್ ಎ ಉಪಾಧ್ಯಕ್ಷೆ ಅಶ್ವಿನಿ ಐತಾಳ್ ಮಾತನಾಡಿ, ಜೋಡುಮಾರ್ಗ ಜೇಸಿಯ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು. ಇದೇ ವೇಳೆ ಕೊಯಿಲ…
ಬಂಟ್ವಾಳ: ಕಳೆದ 52 ವರ್ಷಗಳಿಂದ ನಿರಂತರವಾಗಿ ಸೇವಾ ಕಾರ್ಯಗಳನ್ನು ಸಂಘಟಿಸುತ್ತಿರುವ ಲಯನ್ಸ್ ಕ್ಲಬ್ ಬಂಟ್ವಾಳ ಇದರ ನೇತೃತ್ವದಲ್ಲಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಶೈಕ್ಷಣಿಕ ಪ್ರೋತ್ಸಾಹದ ಕಾರ್ಯಕ್ರಮಗಳನ್ನು ಕಳೆದ 15 ವರ್ಷಗಳಿಂದ ಸಂಘಟಿಸುತ್ತಿರುವ ರಾರಾಸಂ ಫೌಂಡೇಷನ್ ಬಂಟ್ವಾಳ ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ ವಿವಿಧ ವೃತ್ತಿಪರ ಸಂಘಟನೆ ಹಾಗೂ ಸಂಸ್ಥೆಗಳ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಟ ರಿಪಬ್ಲಿಕ್ ಟ್ರೋಫಿ 2025 ಫೆ.2 ಆದಿತ್ಯವಾರ ಬಂಟ್ವಾಳದ ಭಂಡಾರಿಬೆಟ್ಟುವಿನಲ್ಲಿರುವ ಎಸ್‌ವಿಎಸ್ ಮೈದಾನದಲ್ಲಿ ನಡೆಯಲಿದೆ.ಬೆಳಿಗ್ಗೆ 9 ಗಂಟೆಗೆ ಶಾಸಕ ರಾಜೇಶ್ ನಾಯ್ಕ್ ಪಂದ್ಯಾಟ ಉದ್ಘಾಟಿಸುವರು, ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಅರ್ಚನಾ ಡಿ. ಭಟ್, ಡಿವೈಎಸ್ಪಿ ವಿಜಯಪ್ರಸಾದ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಡಾ. ಬಿ. ವಸಂತ ಬಾಳಿಗಾ, ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಬೇಬಿ ಕುಂದರ್ ಮತ್ತಿತರ ಗಣ್ಯರು…
ಬಂಟ್ವಾಳ ತಾಲೂಕಿನಾದ್ಯಂತ ಮನೆ ಮಾತಾಗಿರುವ ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ಸ್ ಇದರ ಸಹ ಸಂಸ್ಥೆ ಆಲಿಯಾ ಐಸ್ ಕ್ರೀಂ ಪಾರ್ಲರ್ ಬಿ.ಸಿ.ರೋಡಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಶುಭಾರಂಭಗೊಂಡಿತು.ಸಯದ್ ಕೆ.ಪಿ.ಎಸ್. ಝೈನುಲ್ ಜಮುಲುಲ್ಲಿಲಿ ತಂಙಳ್ ಕಾಜೂರು ನೂತನ ಐಸ್ ಕ್ರೀಂ ಪಾರ್ಲರನ್ನು ಉದ್ಘಾಟಿಸಿ ದುವಾ ನೇರವೇರಿಸಿದರು.ಸಯ್ಯದ್ ಮಾಡ ತಂಙಳ್, ಇರ್ಷಾದ್ ದಾರಿಮಿ ಮಿತ್ತಬೈಲ್ , ಮಾಜಿ ಶಾಸಕ ಮೊಹಿದ್ದೀನ್ ಬಾವಾ, ಕೇರಳದ ಶಾಸಕ ಸಿಂಧು ಪಿ.ವಿ.ಅನ್ವರ್, ಶಿಗ್ಗಾವಿಯ ಮಾಜಿ ಸಂಸದ ಮಂಜುನಾಥ ಹೊನ್ನೂರು ಭೇಟಿ ನೀಡಿ ಶುಭ ಹಾರೈಸಿದರು.ಬಂಟ್ವಾಳದ ವಕೀಲ ಅಶ್ವನಿ ಕುಮಾರ್ ರೈ ಶುಭ ಹಾರೈಸಿ ಮಾತನಾಡಿ ಬಿ.ಸಿ.ರೋಡು ಭಾಗದಲ್ಲಿ ಆನಿಯ ದರ್ಬಾರ್ ಹೋಟೇಲ್ ಯಶಸ್ಬಿಯಾಗಿ ನಡೆಯುತ್ತಿದ್ದು ಹೊಸ ಉದ್ಯಮಕ್ಕೆ ಹಂಝ ಬಸ್ತಿಕೋಡಿಯವರು ಮುಂದಾಗಿದ್ದು ಅದು ಯಶಸ್ವಿಯಾಗಲಿ ಎಂದರು.ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮಾತನಾಡಿ ಆನಿಯ ದರ್ಬಾರ್ ಬಂಟ್ವಾಳ ತಾಲೂಕಿನಲ್ಲಿ ಯಶಸ್ವಿಯಾಗಿದ್ದು ಐಸ್ ಕ್ರೀಂ ಪಾರ್ಲರ್ ಕೂಡ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲಿ ಎಂದರು.…
ಬಂಟ್ವಾಳ : ಸರಕಾರಿ ಪದವಿಪೂರ್ವ ಕಾಲೇಜು ಬಿ.ಮೂಡ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಘಟಕ, ಇಕೋಕ್ಲಬ್ ಮತ್ತು ಬಂಟ್ವಾಳ ಲಯನ್ಸ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ವಿಶೇಷ ಸ್ವಚ್ಚತಾ ಕಾರ್ಯವನ್ನು ಬಿ.ಸಿ.ರೋಡ್ ಪರಿಸರದಲ್ಲಿ ನಡೆಸಲಾಯಿತು. ಬಿ.ಸಿ.ರೋಡ್ ಸರ್ಕಲ್ ಬಳಿಯಿಂದ ರೈಲು ನಿಲ್ದಾಣದವರೆಗಿನ ಹಳೆಯ ಹೆದ್ದಾರಿಯ ಉಭಯ ಬದಿಗಳಲ್ಲಿನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಯಿತು. ಸ್ವಚ್ಚತಾ ಕಾರ್ಯಕ್ಕೆ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಚಾಲನೆ ನೀಡಿ ಶಾಲಾಕಾಲೇಜುಗಳ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ನಡೆಸುವುದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮುತುವರ್ಜಿಯಿಂದ ಪ್ರತಿ ವರ್ಷ ಸುತ್ತಮುತ್ತಲ ಪರಿಸರ ಸ್ವಚ್ಚತೆಗೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಾಧಾಕೃಷ್ಣ ಅವರು ,ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲಿ ಅದೂ ಭಾನುವಾರದಂದು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಶ್ಲಾಘನೀಯ ಎಂದು…
ಬಂಟ್ವಾಳ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತಮ್ಮದೇ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸಿದಾಗ ದೇಶದ ಪ್ರಗತಿ ಸಾಧ್ಯವಾಗಲಿದೆ. ಮುಷ್ಯತ್ವದ ಮೂಲಕ ಕಾರ್ಯ ನಿರ್ವಹಿಸಿದಾಗ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿ ನಡೆದ 76ನೇ ಬಂಟ್ವಾಳ ತಾಲೂಕುಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಹಶೀಲ್ದಾರ್ ಅರ್ಚನ ಡಿ. ಭಟ್ ಗಣರಾಜ್ಯೋತ್ಸವ ಸಂದೇಶ ನೀಡಿ ಸಂವಿಧಾನದ ಪೂರ್ವಪೀಠಿಕೆಯಲ್ಲಿ ದೇಶದ ಆತ್ಮ ಅಡಗಿದೆ. ನಮ್ಮ ದೇಶದ ಸಂವಿಧಾನ ಸುಂದರವಾಗಿದೆ.ಇದರ ಆಳಕ್ಕೆ ಹೋದಂತೆ ಸಂವಿಧಾನದ ಮಹತ್ವ ಅರಿವಾಗುತ್ತದೆ. ಸಂವಿಧಾನ ದೇಶದ ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿದೆ ಎಂದರು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 7 ನೇ ತರಗತಿ ವಿದ್ಯಾರ್ಥಿ ನಿನಾದ್ ಕೈರಂಗಳ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸುಪೂಜಾರಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ…








