ಬಂಟ್ವಾಳ: ದ.ಕ.ಜಿಲ್ಲಾ ಟೂರಿಸ್ಟ್ ಕಾರು ಚಾಲಕರ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರಾದ ಬಿ.ಎಂ.ಪ್ರಭಾಕರ ದೈವಗುಡ್ಡೆ ( 72) ಅವರು ಅಸೌಖ್ಯದಿಂದ ಬಂಟ್ವಾಳ ದೈವಗುಡ್ಡೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಶನಿವಾರ ಸಂಜೆ ನಿಧನರಾಗಿದ್ದಾರೆ. ವೃತ್ತಿಯಲ್ಲಿ ಟೂರಿಸ್ಟ್ ಕಾರು ಚಾಕರಾಗಿದ್ದ ಅವರು ಪತ್ನಿ,ಒರ್ವಪುತ್ರಿಯನ್ನು ಅಗಲಿದ್ದಾರೆ.ಬಂಟ್ವಾಳ ತಾಲೂಕು ಸಮಾನಮನಸ್ಕ ಸಮನ್ವಯ ಸಮಿತಿಯ ಮಾಜಿ ಅಧ್ಯಕ್ಷರು ಆಗಿದ್ದ ಅವರ ಕಾರ್ಮಿಕರ,ಚಾಲಕ ಸಮುದಾಯದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ಹುಟ್ಟು ಹೋರಾಟಗಾರರಾಗಿದ್ದ ಅವರು ಬ್ರಹ್ಮರಕೊಟ್ಲುಟೋಲ್ ಗೇಟ್ ವಿರುದ್ಧವು ಹೋರಾಟ ನಡೆಸಿದ್ದರು.ದ.ಕ.ಜಿಲ್ಲಾ ಟೂರಿಸ್ಟ್ ಕಾರು ಚಾಲಕರ ಮತ್ತು ಮಾಲಕರ ಸಂಘದ ಸಂಸ್ಥಾಪಕರಾಗಿ ಹಲವು ವರ್ಷಗಳ ಕಾಲ ಸಂಘವನ್ನು ಮುನ್ನಡೆಸಿದ್ದರು. ಬಿ.ಸಿ.ರೋಡು ಪರಿಸರದಲ್ಲಿ ದೈವಗುಡ್ಡೆಯೆಂದೆ ಚಿರಪರಿಚಿತರಾಗಿದ್ದರು.ವಿವಿಧ ಸಂಘಟನೆಯಲ್ಲಿಯು ಗುರುತಿಸಿದ್ದರು.
ಅವರನ್ನು ಇತ್ತೀಚೆಗಷ್ಠೆ ಚಾಲಕ ಸಮುದಾಯ ಹಾಗೂ ಸಮಾನ ಮನಸ್ಕ ಸಂಘಟನೆಯ ವತಿಯಿಂದ ಸಾರ್ವಜನಿಕವಾಗಿ ಸನ್ಮಾನಿಸಲಾಗಿತ್ತು.