Author: admin

ಬಂಟ್ವಾಳ: ಇಲ್ಲಿನ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ ಪದ್ಮನಾಭ ಎಂಬವರ ಪುತ್ರ ದಿಗಂತ್ ನಾಪತ್ತೆಯಾಗಿ ದಿನ ಕಳೆದರೂ ಆತನ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಗದಿರುವ ಕಾರಣ ಸ್ಥಳೀಯ ಗ್ರಾಮಸ್ಥರು ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರ ಠಾಣೆಗೆ ಗುರುವಾರ ಬೆಳಿಗ್ಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ಸಂದರ್ಭ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದ ಪ್ರತಿಭಟನಕಾರರು ಮುಂದಿನ‌ 24 ಗಂಟೆಯ ಒಳಗಾಗಿ ಬಾಲಕನನ್ನು ಪತ್ತೆ ಮಾಡಬೇಕು ತಪ್ಪಿದ್ದಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಎಡಿಷನಲ್ ಎಸ್ಪಿ ರಾಜೇಂದ್ರ ಅವರ ಜೊತೆ ಪ್ರತಿಭಟನಕಾರರು ಮಾತುಕತೆ ನಡೆಸಿದರು.ಬಳಿಕ ಫರಂಗಿಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿ ಮಾ.1 ರಂದು ಶನಿವಾರ ಬೆಳಗ್ಗಿನಿಂದ ಫರಂಗಿಪೇಟೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಗೊಳಿಸಿ ಪ್ರತಿಭಟನೆ ಮಾಡಲು ತೀರ್ಮಾನಿಸಲಾಯಿತು. ಈ ಪ್ರತಿಭಟನೆ ಯಶಸ್ವಿಯಾಗಲು ಎಲ್ಲಾ ಸಂಘ ಸಂಸ್ಥೆಗಳು, ಸ್ಥಳೀಯ ಆರು ಗ್ರಾಮಗಳ ಗ್ರಾಮಸ್ಥರು, ವ್ಯಾಪಾರಿಗಳು, ಸಹಕಾರ ನೀಡುವಂತೆ ಕೋರಲಾಯಿತು. ಈ ಸಂದರ್ಭ ಪ್ರಮುಖರಾದ ಭರತ್ ಕುಮ್ಡೇಲು, ಉಮೇಶ್ ಶೆಟ್ಟಿ ಬರ್ಕೆ,…

Read More

ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಲಯನ್ಸ್ ಜಿಲ್ಲೆಯ ಪ್ರಾಂತ್ಯ 3ರ ಪ್ರಾಂತ್ಯಾಧ್ಯಕ್ಷ ಲಯನ್ ಯೂಜಿನ್ ಲೋಬೋ ರವರ ಅಧಿಕೃತ ಭೇಟಿ ಕಾರ್ಯಕ್ರಮವು ಮಂಗಳವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಲಯನ್ಸ್ ಜಿಲ್ಲಾ ಸಂಯೋಜಕ, ತರಬೇತುದಾರ ಲಯನ್ ವಿಜಯ ವಿಷ್ಣು ಮಯ್ಯ ಕ್ಲಬ್ ಓರಿಯೆಂಟೇಷನ್ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಾಂತ್ಯದ ಬೇರೆ ಬೇರೆ ಕ್ಲಬ್ ಗಳ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೇವಾ ಕಾರ್ಯಕ್ರಮವಾಗಿ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಯಿತು. ಪ್ರಾಂತ್ಯಾಧ್ಯಕ್ಷ ಯೂಜಿನ್ ಲೋಬೋ ಮಾತನಾಡಿ ಸೇವೆಯ ಮೂಲಕ ಸಂತೃಪ್ತಿಯನ್ನು ಕಾಣಬಹುದು. ದುಡಿಮೆಯಲ್ಲಿ ಸ್ವಲ್ಪ ಹಣವನ್ನು ಕಷ್ಟದಲ್ಲಿರುವವರಿಗೆ ನೀಡಿದಾಗ ವ್ಯಕ್ತಿತ್ವಕ್ಕೂ ಶೋಭೆ, ಸಂಸ್ಥೆಗೂ ಘನತೆ ಎಂದು ತಿಳಿಸಿದರು.ಕ್ಲಬ್ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಪ್ರಾಂತ್ಯಾಧ್ಯಕ್ಷ ಯೂಜಿನ್ ಲೋಬೋ ಹಾಗೂ ಪತ್ರಕರ್ತ ಸಂದೀಪ್ ಸಾಲ್ಯಾನ್ ಅವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಆತಿಥ್ಯ ನೀಡಿದ ಲಯನ್ ಕೃಷ್ಣಶ್ಯಾಮ್, ಸತ್ಯನಾರಾಯಣ ರಾವ್, ದುರ್ಗಾಪರಮೇಶ್ವರ ಭಟ್ ರವರಿಗೆ ಗೌರವಿಸಲಾಯಿತು.ಪ್ರಾಂತ್ಯದ ರಾಯಭಾರಿ…

Read More

ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಬೆಂಗಳೂರು. ಇದರ ಬಂಟ್ವಾಳ ತಾಲೂಕು ಘಟಕದ ಪುನರ್ ರಚನಾ ಸಭೆ ಶನಿವಾರ ಬಿ.ಸಿ.ರೋಡಿನ ರಾಜ್ಯ ಸರಕಾರಿ ನೌಕರರ ಸಭಾ ಭವನದಲ್ಲಿ ಜರುಗಿತು. ಹಾಲಿ ಅಧ್ಯಕ್ಷೆ ಪ್ರೇಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ. ಕ. ಜಿಲ್ಲಾಧ್ಯಕ್ಷ ನಿಂಗರಾಜು ಕೆ.ಪಿ. ಭಾಗವಹಿಸಿ ನೂತನ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ತಾಲೂಕು ಘಟಕದ ನೂತನ ಗೌರವಾಧ್ಯಕ್ಷರಾಗಿ ಪ್ರೇಮ ಕೆ., ಅಧ್ಯಕ್ಷರಾಗಿ ಶಂಕರ್.ಪಿ, ಉಪಾಧ್ಯಕ್ಷರಾಗಿ ಚಂದ್ರಾವತಿ ಮತ್ತು ಉಮ್ಮರಗಿ ಶರಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ ಏರ್ಯ, ಸಹಕಾರ್ಯದರ್ಶಿಯಾಗಿ ನವೀನ ಕುಮಾರಿ ಮತ್ತು ವಿಶ್ವನಾಥ ಗೌಡ. ಬಿ ಖಜಾಂಜಿಯಾಗಿ ಪುಟ್ಟರಂಗನಾಥ.ಟಿ ಸಂಘಟಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ಮತ್ತು ರವಿಕುಮಾ‌ರ್, ನಿರ್ದೇಶಕರಾಗಿ ರೋಹಿಣಿ ಮತ್ತು ಭವಾನಿ ಆಯ್ಕೆಗೊಂಡರು. ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷ ನಾರಾಯಣ ಪೂಜಾರಿ, ನಿವೃತ್ತ ಶಿಕ್ಷಕ ಆನಂದ ಎಂ. ಮತ್ತು ಕಲ್ಲಡ್ಕ ಮಾದರಿ ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್…

Read More

ಬಂಟ್ವಾಳ: ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಹಾಗೂ ಲಯನ್ಸ್ ಕ್ಲಬ್ ಅಮ್ಟೂರು ಇಲ್ಲಿಗೆ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ. ಇವರ ಅಧಿಕೃತ ಭೇಟಿ ಕಾರ್ಯಕ್ರಮ ಮಂಚಿಯಲ್ಲಿರುವ ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರುವಿನ ಸಭಾಂಗಣದಲ್ಲಿ ನಡೆಯಿತು.ಕ್ಲಬ್ ಸದಸ್ಯ, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿವರು ಕೊಡುಗೆಯಾಗಿ ನೀಡಿದ ಶೋಕೇಸ್‌ನ್ನು ಗವರ್ನರ್ ಉದ್ಘಾಟಿಸಿದರು.ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸುಮನ ಕ್ರಾಸ್ತ, ಮಹಮ್ಮದ್ ಶರೀಫ್, ಸಲೋಮಿ, ರಿಷಲ್, ರಿನೀಶ್ ಅವರನ್ನು ಸನ್ಮಾನಿಸಲಾಯಿತು. ಸೇವಾ ಕಾರ್ಯಕ್ರಮದ ಅಂಗವಾಗಿ ಅರ್ಹರಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಡಾ. ಗೋಪಾಲಾಚಾರ್ ಅವರು ನೀಡಿದ ಗಿಡಗಳು ಹಾಗೂ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಕೊಳ್ನಾಡು ಸಾಲೆತ್ತೂರಿನ ನೂತನ ಲಿಯೋ ಕ್ಲಬ್ ಉದ್ಘಾಟಿಸಲಾಯಿತು. ಸದಸ್ಯರನ್ನು ಘಟಕಕ್ಕೆ ಸೇರಿಸಿಕೊಳ್ಳಲಾಯಿತು.ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಲಯನ್ ವಸಂತ ಕುಮಾರ್ ಶೆಟ್ಟಿಯವರು ನೂತನವಾಗಿ ಅಸ್ಥಿತ್ವಕ್ಕೆ ಬಂದ ಲಿಯೋ ಕ್ಲಬ್ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರಮಾಣ ವಚನ ಭೋದಿಸಿದರು. ಅವರು ಮಾತನಾಡಿ ಎರಡು ಕ್ಲಬ್‌ಗಳು ಗ್ರಾಮೀಣ…

Read More

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಇದರ ನೂತನ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಪುನರಾಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ ಜನಾರ್ದನ ಬೊಂಡಾಲ ಆಯ್ಕೆಗೊಂಡರು.ಬಂಟ್ವಾಳದ ಬೈಪಾಸ್ ಜಂಕ್ಷನ್ ನಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಸಮಾಜ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ಡಾ. ಅಮ್ಮೆಂಬಳ ಬಾಳಪ್ಪ ಅವರ ಕನಸು ನನಸಾಗಿದೆ. ಅಧ್ಯಕ್ಷ ಸುರೇಶ್ ಕುಲಾಲ್ ಮತ್ತವರ ತಂಡದ ಪ್ರಾಮಾಣಿಕ ಕೆಲಸದಿಂದಾಗಿ ಇಂದು ಸಂಘ ಜಿಲ್ಲಾ ಮಟ್ಟದಲ್ಲಿ ಎದ್ದು ಕಾಣುತ್ತಿದೆ ಎಂದರು.ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬರ ಬೈಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಪಪ್ರಚಾರ ವನ್ನು ಮೆಟ್ಟಿ ನಿಂತು ಚುನಾವಣೆಯಲ್ಲಿ ಎಲ್ಲಾ ಸ್ಥಾನವನ್ನು ಗೆಲ್ಲುವ ಮೂಲಕ ಸುರೇಶ್ ಕುಲಾಲ್ ಅವರ ತಂಡ ಉತ್ತಮ ಕಾರ್ಯ ಮಾಡಿದೆ ಎಂದರು.ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಶಂಭೂರು…

Read More

ಬಂಟ್ವಾಳ: ಸರ್ವಜ್ಞನ ತ್ರಿಪದಿಗಳು ಶಾಲೆ ಪರೀಕ್ಷೆಗಷ್ಟೇ ಅಲ್ಲ, ಜೀವನ ಪರೀಕ್ಷೆಗೂ ಸಹಕಾರಿ ಎಂದು ಪತ್ರಕರ್ತ ಸಂದೀಪ್ ಸಾಲ್ಯಾನ್ ಹೇಳಿದರು.ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕವಿ ಸರ್ವಜ್ಞ ಜಯಂತಿ ಆಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.ಹದಿನಾರನೇ ಶತಮಾನದಲ್ಲಿ ಸರ್ವಜ್ಞ ಬರೆದ ತ್ರಿಪದಿಗಳು ಇಂದಿಗೂ ಪ್ರಸ್ತುತವಾಗಿದ್ದು, ಅದು ಸಾರ್ವಕಾಲಿಕವಾಗಿದೆ. ಇದನ್ನು ಅಳವಡಿಸಿದವರ ಬದುಕು ಉತ್ಕೃಷ್ಟವಾಗುತ್ತದೆ ಎಂದು ಅವರು ಹೇಳಿ, ಸರ್ವಜ್ಞ ಮಹಾನ್ ಸಂತನಾದ ಬಗೆ ವಿವರಿಸಿದರು. ಸರ್ವಜ್ಞ ಜಯಂತಿ ಆಚರಣೆಯನ್ನು ಸರ್ವಜ್ಞ ಜಯಂತಿ ಆಚರಣಾ ಸಪ್ತಾಹದ ಮೂಲಕ ಶಾಲೆಗಳಲ್ಲಿ ಮಾಡಿದರೆ ಹೆಚ್ಚು ಅರ್ಥಪೂರ್ಣ ಆಗುತ್ತದೆ ಎಂದವರು ಸಲಹೆ ನೀಡಿದರು. ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕಾರ್ಯಧ್ಯಕ್ಷ ನಾರಾಯಣ ಸಿ.ಪೆರ್ನೆ ವಹಿಸಿ ಶುಭ ಹಾರೈಸಿದರು. ರಾಜ್ಯ ಕುಲಾಲ ಕುಂಬಾರರ ಮಹಿಳಾ ಸಂಘ ಬಂಟ್ವಾಳದ ಅಧ್ಯಕ್ಷೆ ನಳಿನಿ ಮಹಾಬಲ, ಯುವ ವೇದಿಕೆ ತಾಲೂಕು ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ, ವಿಜಯ…

Read More

ಬಂಟ್ವಾಳ: ಇಲ್ಲಿನ ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ಅಭಿವೃದ್ದಿಗಾಗಿ ಶತಚಂಡಿಕ ಯಾಗ ಸೇವಾ ರೂಪದಲ್ಲಿ ದೊಡ್ಡ ರಂಗಪೂಜೆ ಉತ್ಸವ ಮಾ. 1 ಶನಿವಾರದಿಂದ ಮೊದಲ್ಗೊಂಡು ಮಾ.7ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಪೊಳಲಿಯ ಸರ್ವಮಂಗಳ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿ ಮಾ.1 ಶನಿವಾರ ಬೆಳಿಗ್ಗೆ ಗಂಟೆ 8ರಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಸಪ್ತಸತಿ ಪಾರಾಯಣ ಆರಂಭ, ನವಾಕ್ಷರೀ ಜಪ. ಮಾ.2 ಆದಿತ್ಯವಾರ ಬೆಳಿಗ್ಗೆ ಗಂಟೆ 7.30 ರಿಂದ ಪಾರಾಯಣ, ನವಾಕ್ಷರೀ ಜಪ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಹೋಮ ಸಾಯಂಕಾಲ ಗಂಟೆ 3.30 ರಿಂದ ಶ್ರೀಚಕ್ರ ಪೂಜೆ, ಮಾ.3 ಸೋಮವಾರ ಬೆಳಿಗ್ಗೆ ಗಂಟೆ 7.30 ರಿಂದ ಪಾರಾಯಣ, ನವಾಕ್ಷರೀ ಜಪ, ನವಗ್ರಹ ಹೋಮ, ಮಾ.4 ಮಂಗಳವಾರ ಬೆಳಿಗ್ಗೆ ಗಂಟೆ 7.30 ರಿಂದ,…

Read More

ಬಂಟ್ವಾಳ: ಶ್ರೀ ಕುಪ್ಪೆಟ್ಟು ಪಂಜುರ್ಲಿಯ ಮೂಲಸ್ಥಾನ ಕುಪ್ಪೆಟ್ಟು ಬರ್ಕೆಯಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಫೆ. 18ರಿಂದ ಫೆ.22 ಶನಿವಾರದವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ತಿಳಿಸಿದರು. ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಶ್ರೀ ಕೊಡಮಣಿತ್ತಾಯ, ಲೆಕ್ಕೆಸಿರಿ, ಮೈಸಂದಾಯ, ಹಿರಿಯಜ್ಜ, ಕುಪ್ಪೆಟ್ಟು ಕಲ್ಲುಟಿ ಪಂಜುರ್ಲಿ, ಮಂತ್ರ ಜಾವದೆ, ಬಂಟ ಪಂಜುರ್ಲಿ ಮತ್ತು ಗಡುಪಾಡಿ ಜಾಗದ ಕಲ್ಲುರ್ಟಿ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ ನಡೆಯಲಿದೆ ಎಂದು ತಿಳಿಸಿದರು. ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ದಿನೇಶ್ ಸುವರ್ಣ ರಾಯಿ ಮಾಹಿತಿ ನೀಡಿ ನೀಡಿ ಫೆ. ೧6ರಂದು ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆಗೆ ಶ್ರೀ ಕ್ಷೇತ್ರ ಪೂಂಜದ ಕೃಷ್ಣಪ್ರಸಾದ್ ಆಸ್ರಣ್ಣ ಚಾಲನೆ ನೀಡಲಿದ್ದಾರೆ, ಫೆ. 18ರಂದು ಬೆಳಗ್ಗೆ ಸಾನಿಧ್ಯದಲ್ಲಿ ಆಶ್ಲೇಷಾ ಪೂಜೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಫೆ.19 ಮತ್ತು ಫೆ. 20ರಂದು ಧಾರ್ಮಿಕ ಕಾರ್ಯಕ್ರಮಗಳು ಇರಲಿದ್ದು, ಫೆ.21ರಂದು ಸಂಜೆ ಶ್ರೀ…

Read More

ಬಂಟ್ವಾಳ: ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ವೇಣೂರು ಶಾಖೆಯಲ್ಲಿ ಈ ಸ್ಟಾಂಪಿಂಗ್ ವ್ಯವಸ್ಥೆಯ ಉದ್ಘಾಟನಾ ಸಮಾರಂಭ ಬುಧವಾರ ನಡೆಯಿತು.ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಈ ಸ್ಟಾಂಪಿಂಗ್ ವ್ಯವಸ್ಥೆ ಉದ್ಘಾಟಿಸಿ ಶುಭ ಹಾರೈಸಿದರು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವೇಣೂರು ಇದರ ಪ್ರಬಂಧಕ ರಂಜಿತ್ ದೀಪ ಬೆಳಗಿಸಿದರು. ವೇಣೂರು ಜುಮ್ಮಾ ಮಸೀದಿ ಅಧ್ಯಕ್ಷ ಜಕ್ರೀಯ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮಾತನಾಡಿ ಇದರ ಸೇವೆಯನ್ನು ಎಲ್ಲ ಗ್ರಾಹಕರು ಪಡೆದುಕೊಂಡು ನಮ್ಮ ಸಂಘದಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸಿ ಸಂಘದ ಶ್ರೇಯೋಭಿವೃದ್ಧಿಗಾಗಿ ಸಹಕರಿಸಬೇಕಾಗಿ ವಿನಂತಿಸಿದರು. ವೇಣೂರು ಮೂರ್ತೇದರರ ಸಂಘದ ಅಧ್ಯಕ್ಷ ರಮೇಶ್ ಪೂಜಾರಿ, ವೆಂಕಟರಮಣ ಕೋ- ಆಪರೇಟಿವ್ ವೇಣೂರು ಶಾಖಾ ವ್ಯವಸ್ಥಾಪಕ ಗಾಯನ್ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಸುಂದರ ಪೂಜಾರಿ, ರಮೇಶ್ ಅನ್ನಪ್ಪಾಡಿ, ಜಯಶಂಕರ ಕಾನ್ಸ್‌ಲೆ, ಆಶಿಶ್ ಪೂಜಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಮತಾ ಜಿ, ಎಜಿಎಂ ಶಿಲ್ಪಾ ಉಪಸ್ಥಿತರಿದ್ದರು. ನಿರ್ದೇಶಕ ಅರುಣ್ ಕುಮಾರ್ ಸ್ವಾಗತಿಸಿದರು,…

Read More

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.ಉಳಿದಂತೆ ಸಮಿತಿ ಸದಸ್ಯರಾಗಿ ಪ್ರಧಾನ ಅರ್ಚಕರಾದ ವೇ.ಮೂ.ಮಹೇಶ್ ಭಟ್, ದೇವಿಪ್ರಸಾದ್ ಪೂಂಜಾ ಬರಂಗರೆ,ಸುಧೀರ್ ಕುಮಾರ್, ಕೆ.ಕಾನ್ಸಲೆ, ಕೆ.ಮೋಹನದಾಸ್ ಪೂಜಾರಿ, ನವೀನ್ ಕುಮಾರ್ ಪಣೋಲಿಬೈಲ್, ಅಣ್ಣುನಾಯ್ಕ್ ನಗ್ರಿ, ಸುಜಾತಗಣೇಶ್ ಶೆಟ್ಟಿ, ಬೇಬಿ ಯೋಗೀಶ್ ಪೂಜಾರಿ ಅವರು ನೇಮಕಗೊಂಡಿದ್ದಾರೆ.ನೂತನ ವ್ಯವಸ್ಥಾಪನಾ ಸಮಿತಿ ಸೋಮವಾರ ದೇವಳದಲ್ಲಿ ಅಧಿಕಾರ ಸ್ವೀಕರಿಸಿದೆ. ಈ ಸಂದರ್ಭ ದೇವಳದ ಆಡಳಿತಾಧಿಕಾರಿಯಾಗಿದ್ದ ತಾರನಾಥ ಸಾಲಿಯಾನ್ ಪಿ., ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸಜೀಪಮುನ್ನೂರು ಮೂರ್ತೆದಾರರ ಸೇ.ಸ.ಸಂಘದ ಅಧ್ಯಕ್ಷ ಸಂಜೀವಪೂಜಾರಿ ಬೊಳ್ಳಾಯಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Read More