Author: admin
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾoಬಾ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಮತ್ತು ಕೋಲ ಸೇವೆ ಇರುವುದಿಲ್ಲ. ಫೆ.18ರಿಂದ ಎಂದಿನಂತೆ ಅಗೇಲು ಸೇವೆ ನಡೆಯುತ್ತದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ok ದುರ್ಗಾಂಬ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ವೇದಮೂರ್ತಿ ನಿಲೇಶ್ವರ ಕೆ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಫೆ. 12ರಿಂದ ಆರಂಭಗೊಂಡು ಫೆ.17ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಫೆ.12ರಂದು ಧ್ವಜಾರೋಹಣ, ರಾತ್ರಿ 7ಕ್ಕೆ ಸಜೀಪನಡುಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಭಂಡಾರ ಹೊರಟು, ರಾತ್ರಿ 8.30ಕ್ಕೆ ಕ್ಷೇತ್ರ ತಲುಪಲಿದೆ. ರಾತ್ರಿ 10 ರಿಂದ ದೇವರ ಬಲಿ, ಉತ್ಸವ ನಡೆಯಲಿದೆ. ಫೆ. 13ರಂದು ಬಯನ ಬಲಿ ಉತ್ಸವ. ಫೆ. 14ರಂದು ನಡು ಬಲಿ ಮತ್ತು ಪಾಲಕಿ ಉತ್ಸವ, ಫೆ. 15ರಂದು ಲಲಿತಾ ಸಹಸ್ರನಾಮ ಯಾಗ, ಮಹಾರಥೋತ್ಸವ, ಫೆ.16ರಂದು ಧ್ವಜಾವರೋಹಣ, ಶ್ರೀ ನಾಲ್ಕೈತ್ತಾಯ ದೈವದ ನೇಮ, ಫೆ. 17ರಂದು ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆ ನಡೆಯಲಿದೆ.
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನ ಕೇಂದ್ರ ಭಾಗದಲ್ಲಿರುವ ಶ್ರೀ ಚಂಡಿಕಾ ಪರಮೆಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಫೆ.12 ರಿಂದ ಫೆ.14ರವೆರೆಗೆ ನಡೆಯಲಿದೆ.ಫೆ.12ರಂದು ಬೆಳಿಗ್ಗೆ 7ಕ್ಕೆ ಪ್ರಾರ್ಥನೆ ಬಳಿಕ ಪುಣ್ಯಾಹ ವಾಚನ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ, ಮಹಾಪೂಜೆ ನಡೆಯಲಿದೆ. ಸಂಜೆ 4.30ರಿಂದ ಮೋಕ್ಷ ಸಂಗ್ರಾಮ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.ಫೆ.13ರಂದು ಬೆಳಿಗ್ಗೆ 8.30ಕ್ಕೆ ಗಣಹೋಮ, 9ರಿಂದ 12ರವರೆಗೆ ಬಿಂಬ ಕಲಶ ಪೂಜೆ, ಬಿಂಬ ಕಲಶಾಭಿಷೇಕ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ದೀಪಾಲಂಕರ ಪೂಜೆ, ವಾದ್ಯ ಸೇವೆ, ರಾತ್ರಿ 8ಕ್ಕೆ ಮಹಾಪೂಜೆ ನಡೆಯಲಿದೆ. 8.30ಕ್ಕೆ ಬಲಿ ಹೊರಟು, 10ಕ್ಕೆ ವಸಂತಕಟ್ಟೆ ಪೂಜೆ ನಡೆಯಲಿದೆ. 10.30ಕ್ಕೆ ವಿಶೇಷ ನರ್ತನ ಬಲಿ ನಡೆಯಲಿದೆ.ಫೆ.14ರಂದು ಬೆಳಿಗ್ಗೆ ಗಣಹೋಮ. 8ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆಯಲಿದೆ. 11ಕ್ಕೆ ನವಕ ಕಲಶಾಭಿಷೇಕ, 12.30ಕ್ಕೆ ಮಹಾಪೂಜೆ, 1ಕ್ಕೆ ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಹರಕೆ ಬಂದ ಸೀರೆಗಳ ಏಲಂ…
ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಜಂಕ್ಷನ್ ನ ಬಳಿ 3-4 ಕಟ್ಟಡಗಳಿಗೆ ನಿನ್ನೆ ರಾತ್ರಿ ಅಗ್ನಿ ಆಕಸ್ಮಿಕದಿಂದ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರು, ರಾತ್ರಿ 1.00 ಗಂಟೆಗೆ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಕಾರ್ಯಾಚರಣೆ ವೀಕ್ಷಣೆ ಮಾಡಿ, ಮನೆಮಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ ಉಳಿಪ್ಪಾಡಿ ಸಾಂತ್ವನ ಹೇಳಿದರು. ಕಂದಾಯ ನಿರೀಕ್ಷಕ ವಿಜಯ್ ಆರ್ ಸಹಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ನೇತ್ರಾವತಿ ವಲಯ ಬಂಟ್ವಾಳ ತಾಲೂಕು ಇವರ ವತಿಯಿಂದ ಮಹತೋಭಾರ ಶ್ರೀಕಾರಿಂಜೇಶ್ವರ ದೇಗುಲದಲ್ಲಿ ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ನಡೆಯಿತು. ಮಹತೋಭಾರ ಶ್ರೀ ಕಾರಿಂಜೇಶ್ವರ ದೇಗುಲದ ಅರ್ಚಕ ಮಿಥುನ್ ಭಟ್ ನಾವಡ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ವಿಸ್ತರಣಾ ಪ್ರಮುಖ್ ಈಶ್ವರ್, ತಾಲೂಕು ಸಂಚಾಲಕ ನಾರಾಯಣ, ಶಾಖಾ ಸಂಚಾಲಕ ಹೇಮಂತ್ ಹಾಗೂ ತಾಲೂಕು ಪ್ರಮುಖರು ಹಾಗೂ ಬಂಟ್ವಾಳ ತಾಲೂಕಿನ ಎಲ್ಲಾ ಯೋಗ ಬಂಧುಗಳು ಭಾಗವಹಿಸಿದ್ದರು.ಪ್ರಕಾಶ್ ರವರು ರಥಸಪ್ತಮಿಯ ವಿಶೇಷದ ಬಗ್ಗೆ ಬೌದ್ಧಿಕ್ ನೀಡಿದರು.ನಯನ ನಿರೂಪಿಸಿ, ಸುಗುಣ ವಂದಿಸಿದರು.
ಬಂಟ್ವಾಳ : ಬಿ.ಮೂಡ ಗ್ರಾಮದ ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿ ಇದರ 2025- 26ನೇ ಸಾಲಿನ ಮಹಾಸಭೆಯು ಸಂಚಯ ಗಿರಿಯ ನರಸಿಂಹ ಹೊಳ್ಳ ಕಲಾ ವೇದಿಕೆಯಲ್ಲಿ ಮಂಗಳವಾರ ನಡೆಯಿತು. ಅಧ್ಯಕ್ಷರಾಗಿ ಸುರೇಶ್ ಬಂಗೇರವರು ಸತತ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಕಾರ್ಯದರ್ಶಿಯಾಗಿ ಹರೀಶ ಶೆಣೈ, ಕೋಶಾಧಿಕಾರಿಯಾಗಿ ಎ.ದಾಮೋದರ್, ಗೌರವಾಧ್ಯಕ್ಷರಾಗಿ ನರಸಿಂಹರಾಜ ಹೊಳ್ಳ ,ಕ್ರೀಡಾ ಕಾರ್ಯದರ್ಶಿಯಾಗಿ ಧನಂಜಯ ಬಾಳಿಗ, ಉಪಾಧ್ಯಕ್ಷರಾಗಿ ತಾಯಮ್ಮ,ಸಮಿತಿ ಸದಸ್ಯರುಗಳಾಗಿ ಸಂಕಪ್ಪ ಶೆಟ್ಟಿ, ಪಾಂಡುರಂಗ ನಾಯಕ್ , ಸುಧಾಕರ್ ಸಾಲಿಯಾನ್, ಪುರಂದರ ಶೆಟ್ಟಿ ,ಪ್ರಭಾಕರ ಪ್ರಭು, ದಾಮೋದರ ಗೌಡ ,ರಾಘವೇಂದ್ರ ಬನ್ನಿಂತಾಯ, ಸತೀಶ್ ಬಂಗೇರ ,ಶೇಖರ್ ಕುಲಾಲ್, ಪ್ರದೀಪ್ ,ಪವಿತ್ರ ಕುಮಾರ್ ,ಪ್ರಿಯಾಲತ, ಭವತಾರಿಣಿ, ರೀಟಾ ಆಯ್ಕೆಯಾದರು
ಬಂಟ್ವಾಳ: ಕ್ಷಯರೋಗ ಗುಣವಾಗುವ ಕಾಯಿಲೆ, ಸರಿಯಾದ ಪೌಷ್ಠಿಕ ಆಹಾರ ಸೇವನೆ ಹಾಗೂ ಚಿಕಿತ್ಸಾ ಪದ್ದತಿಯಿಂದ ಅನೇಕ ಮಂದಿ ರೋಗಮುಕ್ತರಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. ಕೇಂದ್ರ ಸರಕಾರದ ಈ ಯೋಜನೆಯನ್ನು ಸೇವಾಂಜಲಿ ಸಂಸ್ಥೆ ಕ್ಷಯ ರೋಗಿಗಳಿಗೆ ಒದಗಿಸುವ ಮೂಲಕ ಅವರ ಬಾಳಿಗೆ ಆಶಾಕಿರಣವಾಗಿದೆ ಎಂದು ವಳಚ್ಚಿಲ್‌ನ ಶ್ರೀನಿವಾಸ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಶ್ರೀನಿವಾಸ್ ಮಯ್ಯ ಡಿ. ಹೇಳಿದರು.ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಕ್ಷಯ ರೋಗಿಗಳಿಗೆ ದವಸಧಾನ್ಯದ ಕಿಟ್ ವಿತರಿಸಿ ಅವರು ಮಾತನಾಡಿದರು.ಉದ್ಯಮಿ ತೇವು ತಾರಾನಾಥ ಕೊಟ್ಟಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷ್ಣ ಕುಮಾರ್ ಪೂಂಜ ಅವರು ಸ್ವಂತಕ್ಕಿಂತ ಸಮಾಜಕ್ಕೆ ಹೆಚ್ಚು ಸಮಯವನ್ನು ಮೀಸಲಿಟ್ಟು ಸೇವಾಕಾರ್ಯಗಳನ್ನು ಮಾಡಿದವರು. ಪ್ರಧಾನ ಮಂತ್ರಿಯವರ ಕರೆಯ ಮೇರೆಗೆ ಪ್ರತೀ ತಿಂಗಳು ಕ್ಷಯ ರೋಗಿಗಳಿಗೆ ಆಹಾರದ ಕಿಟ್ ನೀಡಿ ಸ್ವಸ್ಥ ಸಮಾಜ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ ಎಂದರು.ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ…
ಬಂಟ್ವಾಳ: ಜೆಸಿಐ ಜೋಡುಮಾರ್ಗ ನೇತ್ರಾವತಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಜಂಟಿ ಆಶ್ರಯದಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಮಂಗಳವಾರ ಬಿ.ಸಿ.ರೋಡಿನ ಪ್ರೀತಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.ಜೆಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷೆ ತೃಪ್ತಿ ಪಿ., ಅಧ್ಯಕ್ಷತೆ ವಹಿಸಿ ಕ್ಯಾನ್ಸರ್ ಬೆಗೆಗಿನ ಆರೋಗ್ಯ ಮಾಹಿತಿ ನೀಡಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಕಿಶೋರ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಜೆಸಿಐ ಕಾರ್ಯದರ್ಶಿ ಪ್ರಗತಿ ಕೆ. ವಂದಿಸಿದರು, ಕಾರ್ಯಕ್ರಮ ಸಂಯೋಜಕ ಹರಿಶ್ಚಂದ್ರ ಆಳ್ವ , ರೋಟರಿಯ ನಿಕಟಪೂರ್ವಾಧ್ಯಕ್ಷ ಸುರೇಶ್ ಸಾಲ್ಯಾನ್, ಜೊತೆ ಕಾರ್ಯದರ್ಶಿ ನಾಗೇಶ್ ಕುಲಾಲ್ ಉಪಸ್ಥಿತರಿದ್ದರು.
ಬಂಟ್ವಾಳ: ಜಿಲ್ಲಾ ಕಾಂಗ್ರೆಸ್ ಮುಖಂಡ ಬೊಂಡಾಲ ಚಿತ್ತರಂಜನ್ ಶೆಟ್ಟಿಯವರ ಪಿಸ್ತೂಲಿನಿಂದ ಮಿಸ್ ಫೈರಿಂಗ್ ಆಗಿ ಅವರ ಕಾಲಿಗೆ ಗಾಯವಾದ ಘಟನೆ ಮಂಗಳವಾರ ಸಂಜೆ ಅನಂತಾಡಿಯಲ್ಲಿ ನಡೆದಿದೆ. ಅತಕ್ಷಣ ಅವರೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿಯಲ್ಲಿ ಕ್ಲಲಿನ ಕೋರೆಯ ಇನ್‌ಚಾರ್ಜ್ ಚಿತ್ತರಂಜನ್ ಶೆಟ್ಟಿಯವರಿಗಿದ್ದು ಅಲ್ಲಿಗೆ ತೆರಳಿದ್ದ ವೇಳೆ ತನ್ನ ಲೈಸನ್ಸೆಡ್ ಪಿಸ್ತೂಲನ್ನು ಹೊರತೆಗೆಯುವ ವೇಳೆ ಆಕಸ್ಮಿಕವಾಗಿ ಮಿಸ್‌ಫೈಯರಿಂಗ್ ಆಗಿ ಕಾಲಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದರೆ. ಪಿಸ್ತೂಲ್ ಲಾಕ್ ಆಗದೆ ಈ ಅವಘಡ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಸುದ್ದಿ ತಿಳಿದ ನಂದಾವರದ ಪವರ್ ಇಕ್ಬಾಲ್ ಅವರು ಸ್ಥಳಕ್ಕೆ ತೆರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ: ಜೆಸಿಐ ಬಂಟ್ವಾಳ, ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ವಲಯ ಇದರ ಸಹಯೋಗದಲ್ಲಿ ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ ಇದರ ಸಹಕಾರದೊಂದಿಗೆ ವಿಶ್ವ ಕಾನ್ಸರ್ ದಿನದ ಅಂಗವಾಗಿ ಆರೋಗ್ಯ ಮಾಹಿತಿ ಮತ್ತು ಆರೋಗ್ಯ ಉಚಿತ ತಪಾಸಣಾ ಶಿಬಿರ ಮಂಗಳವಾರ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆಯಿತು. ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಶಿಬಿರ ಉದ್ಘಾಟಿಸಿ ಮಾತನಾಡಿ ಸರಿಯಾದ ಆಹಾರ ಕ್ರಮ, ಶಿಸ್ತುಬದ್ಧ ಜೀವನ ಹಾಗೂ ದೃಢ ಮನಸ್ಸಿನಿಂದ ಕ್ಯಾನ್ಸರ್ ರೋಗದಿಂದ ಗುಣಮುಖರಾಗಲು ಸಾಧ್ಯವಿದೆ ಎಂದರು.ಜೆಸಿಐ ಬಂಟ್ವಾಳದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ಬಾಲಕೃಷ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶ್ರುತಿ, ಎ.ಜೆ. ಆಸ್ಪತ್ರೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಾಮನ ನಾಯಕ್,…








