
ಬಂಟ್ವಾಳ: ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಜಿಲ್ಲಾ ಸಮಿತಿ ಹಾಗೂ ಬಂಟ್ವಾಳ ತಾಲೂಕು ಸಮಿತಿಯ ರಚನೆಯ ಸಭೆ ಪಾಣೆಮಂಗಳೂರಿನ ಸಜೀಪ ವೆಂಕಪ್ಪ ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆಯಿತು. ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ರವೀಂದ್ರ ಆಚಾರ್ಯ ಕಾವಲುಕಟ್ಟೆ ಉಪಾಧ್ಯಕ್ಷರಾಗಿ ಯಶೋಧರ ಆಚಾರ್ಯ ಮಾಣಿ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಿತ್ ಆಚಾರ್ಯ ಬಂಟ್ವಾಳ ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಕಲ್ಲಡ್ಕ ಕೋಶಾಧಿಕಾರಿಯಾಗಿ ಜಯಕರ ಆಚಾರ್ಯ ಮಾಣಿ ಸಂಚಾಲಕರಾಗಿ ಹರೀಶ್ ಆಚಾರ್ಯ ಮಿತ್ತೂರು ನಿರ್ದೇಶಕರಾಗಿ ಶಿವ ಆಚಾರ್ಯ ಕಾವಲುಕಟ್ಟೆ, ಸಂತೋಷ ಆಚಾರ್ಯ ಪೆರ್ನೆ, ಸತೀಶ್ ಆಚಾರ್ಯ ಬಂಟ್ವಾಳ, ಶ್ರೀನಿವಾಸ ಆಚಾರ್ಯ ಮಿತ್ತಡ್ಕ, ಸಂತೋಷ ಆಚಾರ್ಯ ವೀರಕಂಬ ಆಯ್ಕೆಯಾದರು.


