Author: admin
ಬಂಟ್ವಾಳ: ರಾಮ ಎನ್ನುವ ಹೆಸರಿನಲ್ಲಿಯೇ ಪ್ರೇಮವಿದೆ. ರಾಮ ಎನ್ನುವುದು ಸುಲಲಿತವಾಗಿ ಬರುವ ನಾಮ. ನಮ್ಮ ಬದುಕಿನ ದಾರಿಗೆ ರಾಮಯಾಣವೇ ಬೆಳಕು. ಜೀವನವೆನ್ನುವ ನಾಟಕ ರಂಗಕ್ಕೆ ಶ್ರೀರಾಮ, ಶ್ರೀಕೃಷ್ಣರೇ ಸೂತ್ರದಾರರು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದ 54ನೇ ವಾರ್ಷಿಕ ಏಕಾಹ ಭಜನಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮಾನವೀಯ ಮೌಲ್ಯಗಳನ್ನು ಬಿತ್ತಿದಾಗ ಸುಂದರ ಸಮಾಜ ನಿರ್ಮಾಣವಾಗಲಿದೆ. ಭಾರತದ ಆಂತರ್ಯ ಆಧ್ಯಾತ್ಮಿಕತೆಯಿಂದ ಕೂಡಿದೆ ಎಂದು ತಿಳಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಭಜನೆಯ ಮೂಲಕ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಆ ಕಾರಣಕ್ಕಾಗಿ ಶ್ರೀರಾಮನ ಹೆಸರಿನ ಭಜನಾ ಮಂದಿರಗಳು ಅಲ್ಲಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಬಂಟ್ವಾಳ ಘಟಕ ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಅಧ್ಯಕ್ಷ ದಿವಾಕರ ಶೆಟ್ಟಿ ಪರಾರಿಗುತ್ತು ಮಾತನಾಡಿ ಮಂದಿರದ ಕೆಲಸಗಳಿಗೆ ಸಹಕಾರ…
ಬಂಟ್ವಾಳ: ಮನುಷ್ಯನ ಆರೋಗ್ಯಪೂರ್ಣ ಜೀವನಕ್ಕೆ ಸ್ವಚ್ಚ ಗಾಳಿ, ಶುದ್ಧ ನೀರು ಹಾಗೂ ಸಮತೋಲಿತ ಆಹಾರ ಅತ್ಯಂತ ಅವಶ್ಯಕ. ಕ್ಷಯ ಪ್ರಾಚೀನ ಕಾಯಿಲೆಯಾಗಿದ್ದು ರೋಗ ಸಂಪೂರ್ಣ ಗುಣಪಡಿಸಲು ನಿಯಮಿತ ಔಷಧಿಯ ಜೊತೆಗೆ ಸಮತೋಲಿತ ಆಹಾರ ಸೇವನೆಯೂ ಅತೀ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಡಾ. ಎಚ್. ಆರ್ ತಿಮ್ಮಯ್ಯ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ದವಸಧಾನ್ಯ , ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು. ಶ್ರೀಮಂತಿಕೆ ಇದ್ದರೆ ಸಾಲದು ಹೃದಯ ಶ್ರೀಮಂತಿಕೆಯೂ ಬೇಕು. ಅಂತಹ ಹೃದಯ ಶ್ರೀಮಂತಿಕೆ ಕೃಷ್ಣ ಕುಮಾರ್ ಪೂಂಜ ಅವರಲ್ಲಿದೆ. ಸೇವಾಂಜಲಿಯ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ, ಆರೋಗ್ಯ ಇಲಾಖೆಯಿಂದ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ನಿವೃತ್ತ ಅಬಕಾರಿ ಅಧಿಕಾರಿ ಎಂ.ಆರ್.ನಾಯರ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷ್ಣ ಕುಮಾರ್ ಪೂಂಜ ಅವರ ಸೇವಾಕಾರ್ಯಕ್ಕೆ ಮನಸೋತು ಅವರೊಂದಿಗೆ ನಾವೂ ಕೈಜೋಡಿಸಿದ್ದೇವೆ ಎಂದು ತಿಳಿಸಿದರು.…
ಬಂಟ್ವಾಳ: ಮಂಗಳೂರು, ಬಂಟ್ವಾಳ, ಉಳ್ಳಾಲ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿರುವ ಇಂದಿರಾ ದರ್ಶಿನಿ ಸಹಕಾರಿ ಸಂಘವು ಮಂಚಿ ಕುಕ್ಕಾಜೆಯ ಪತ್ತುಮುಡಿಯಲ್ಲಿರುವ ಅಲೀಮಾ ಪ್ಲಾಝಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಡಾ. ಯು.ಟಿ.ಖಾದರ್ ಫರೀದ್ ನೂತನ ಸಹಕಾರಿ ಸಂಘವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಸಹಕಾರಿ ಕ್ಷೇತ್ರ ದೇಶದ ಗ್ರಾಮೀಣ ಅಭಿವೃದ್ದಿಯ ಆತ್ಮವಿದ್ದಂತೆ. ಆರ್ಥಿಕ ಚಲನೆಯಿಲ್ಲದೆ ಯಾವುದೇ ಗ್ರಾಮ, ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಮಾಜದ ಹತ್ತು ಕೈಗಳು ಜೊತೆಗಿರುವುದರರಿಂದ ಕೋಅಪರೇಟಿವ್ ಸೊಸೈಟಿಗಳು ಇಂದು ಯಶಸ್ಸಿನತ್ತ ಸಾಗುತ್ತಿದೆ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ ಆಡಳಿತ ಕಚೇರಿ ಉದ್ಘಾಟಿಸಿದರು. ಅವರು ಮಾತನಾಡಿ ಇಂದಿರಾ ಗಾಂದಿ ಮೇಲ್ವರ್ಗದಲ್ಲಿ ಹುಟ್ಟಿದ್ದರೂ ದುರ್ಬಲ ವರ್ಗದ ಜನರ ಬಗ್ಗೆ ಚಿಂತನೆ ಮಾಡಿ ಯೋಜನೆ ರೂಪಿಸಿದವರು. ಗರೀಭೀ ಹಠಾವೋ ಯೋಜನೆಯ ಮೂಲಕ ಬಡತನ ನಿರ್ಮೂಲನಕ್ಕೆ ಪ್ರಯತ್ನಿಸಿದವರು. ಭೂ ಮಸೂದೆ ಯೋಜನೆಯ ಮೂಲಕ ಬಡವರಿಗೆ ಸ್ವಾಭಿಮಾನದ ಜೀವನ ನೀಡಿದವರು ಎಂದರು. ಗುರು ಬೆಳಂದಿಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಠೇವಣಿ ಪತ್ರ…
ಬಂಟ್ವಾಳ: ಜೆಸಿಐ ಬಂಟ್ವಾಳ ಇದರ ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ನಿರ್ಗಮನ ಅಧ್ಯಕ್ಷ ಗಣೇಶ್ ಕುಲಾಲ್ ಮಾತನಾಡಿ 2025ನೇ ಸಾಲಿನಲ್ಲಿ ತನ್ಮಿಂದ ಸಾಧ್ಯವಾಗುಷ್ಟು ಕಾರ್ಯಗಳನ್ನು ಮಾಡಿದ್ದು ಆತ್ಮತೃಪ್ತಿ ಇದೆ ಎಂದರು. ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ನಿರ್ಗಮನ ಅಧ್ಯಕ್ಷ ಗಣೇಶ್ ಕುಲಾಲ್ ಅವರಿಂದ ಅಧಿಕಾರ ಸ್ವೀಕರಿಸಿದರು. ದೀಪ ಪ್ರಜ್ವಲಿಸುವ ಮೂಲಕ ಅತಿಥಿಗಳು ನೂತನ ತಂಡವನ್ನು ಉದ್ಘಾಟಿಸಿದರು. 2026ನೇ ಸಾಲಿನ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಆಶಯ ಭಾಷಣ ಮಾಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನಸು ಇದ್ದು ಇದನ್ನು ನನಸು ಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ನೂತನ ಪದಾಧಿಕಾರಿಗಳಿಗೆ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಪ್ರತಿಜ್ಞಾವಿಧಿ ಭೋದಿಸಿದರು. ಕಾರ್ಯದರ್ಶಿಯಾಗಿ ಕಿರಣ್ ಬಂಟ್ವಾಳ, ಕೋಶಾಧಿಕಾರಿಯಾಗಿ ಶಿವರಾಮ ಮರ್ತಾಜೆ, ಲೇಡಿ ಜೇಸಿ ಸಂಯೋಜಕಿಯಾಗಿ ಅನುಷಾ ಕಿಶೋರ್ ಹಾಗೂ ಉಪಾದ್ಯಕ್ಷರು ಅಧಿಕಾರ ಸ್ವೀಕರಿಸಿದರು. 4 ಮಂದಿ ಹೊಸ ಸದಸ್ಯರು ಘಟಕಕ್ಕೆ ಸೇರ್ಪಡೆಯಾಗಿದ್ದು…
ಬಂಟ್ವಾಳ: “ಒಂಜಿ ಹೋಮ ಮೂಜಿ ನೇಮ” ಎನ್ನುವ ತುಳುನಾಡಿನ ನಂಬಿಕೆಯ ನುಡಿಗಟ್ಟು, ಕೇವಲ ಮಾತಲ್ಲ — ಅದು ಬದುಕಿನ ಅನುಭವ. ಆ ಅನುಭವದ ಜೀವಂತ ಪ್ರತಿರೂಪವೇ ಕುಪ್ಪೆಟ್ಟು ಪಂಜುರ್ಲಿ. ತುಳುನಾಡಿನಾದ್ಯಂತ ಸರ್ವವ್ಯಾಪಿಯಾಗಿ ಆರಾಧಿಸಲ್ಪಡುವ ಈ ದೈವ, ತನ್ನ ಕಾರ್ಣಿಕ ಮಹಿಮೆಯ ಮೂಲಕ ಭಕ್ತರ ಮನದೊಳಗೆ ಅಚಲ ನಂಬಿಕೆಯ ದೀಪ ಬೆಳಗಿಸುತ್ತಲೇ ಬಂದಿದೆ. ಜಗತ್ತಿನ ವಿವಿಧ ದಿಕ್ಕುಗಳಲ್ಲಿ ನೆಲೆಸಿರುವ ದೈವಾರಾಧಕರ ಹೃದಯಗಳನ್ನು ಒಂದೇ ತಂತುವಿನಲ್ಲಿ ಕಟ್ಟಿಹಾಕುವ ಶಕ್ತಿಯುಳ್ಳ ಕುಪ್ಪೆಟ್ಟು ಪಂಜುರ್ಲಿಯ ಮೂಲಸ್ಥಾನದಲ್ಲಿ, ಕಳೆದ ಬಾರಿ ನಡೆದ ಪ್ರತಿಷ್ಠಾ ಮಹೋತ್ಸವವು ಭಕ್ತಿಭಾವ, ಶಿಸ್ತು ಮತ್ತು ಸೇವೆಯ ಅಪೂರ್ವ ಸಂಗಮವಾಗಿ ಇತಿಹಾಸ ನಿರ್ಮಿಸಿತ್ತು. ನೂರಾರು ಸ್ವಯಂಸೇವಕರ ನಿಸ್ವಾರ್ಥ ಸೇವೆ, ಸಾವಿರಾರು ಭಕ್ತರ ಶ್ರದ್ಧಾಭರಿತ ಭಾಗವಹಿಸುವಿಕೆ, ಹಾಗೂ ದೂರದೂರಿನಿಂದ ಆಗಮಿಸಿದ ದೈವಾರಾಧಕರ ಸಮರ್ಪಣೆಯು ಆ ಮಹೋತ್ಸವವನ್ನು ಸ್ಮರಣೀಯವಾಗಿಸಿತ್ತು. ಅದೇ ಭಕ್ತಿ, ಅದೇ ಶ್ರದ್ಧೆ, ಅದೇ ಸಂಭ್ರಮವನ್ನು ಮತ್ತೊಮ್ಮೆ ಸಾಕ್ಷಾತ್ಕರಿಸಲು ಈ ಬಾರಿಯೂ ಕ್ಷೇತ್ರ ಸಾನಿಧ್ಯ ಸಂಪೂರ್ಣ ಸಜ್ಜಾಗಿದೆ ಎಂದು ಭುವನೇಶ್ ಪಚಿನಡ್ಕ ಹೇಳಿದರು. ಅವರು ಬಂಟ್ವಾಳ ತಾಲ್ಲೂಕಿನ…
ಬಂಟ್ವಾಳ: ಹೊಟೇಲ್ ಉದ್ಯಮದಲ್ಲಿ ತನ್ನದೇ ಆದ ಬ್ರಾಂಡ್ ಹೊಂದಿ ಗ್ರಾಹಕರ ಮನೆಮಾತಾಗಿರುವ ಹಂಝ ಬಸ್ತಿಕೋಡಿ ಮಾಲಕತ್ವದ ಆನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೇಲ್ ನ ಮಡಂತ್ಯಾರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಹೊಟೇಲ್ ಆನಿಯಾ ದರ್ಬಾರ್ ಹವಾನಿಯಂತ್ರಿತ ಮಲ್ಟಿ ಕ್ಯೂಸಿನ್ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಆಲಿಯಾ ಐಸ್ ಕ್ರೀಂ ಪಾರ್ಲರ್ ಗ್ರಾಹಕರ ಅನುಕೂಲಕ್ಕಾಗಿ ಪುನರ್ ನವೀಕರಣಗೊಂಡು ಶುಭಾರಂಭಗೊಂಡಿತು. ಕಾಜೂರು ತಂಗಲ್ ಅವರು ದುವಾ ನೆರವೇರಿಸಿ ನವೀಕೃತ ಹಾಗೂ ಹವಾನಿಯಂತ್ರಿತ ಹೋಟೇಲ್ ಆನಿಯಾ ದರ್ಬಾರ್ ಅನ್ನು ಉದ್ಘಾಟಿಸಿದರು. ಅವರು ಮಾತನಾಡಿ ಎಲ್ಲಾ ಧರ್ಮದ ಜನರೊಂದಿಗೆ ಸೌಹಾರ್ದತೆಯಿಂದ ಬೆರೆಯುವ ಗುಣ ಹಂಝ ಬಸ್ತಿಕೋಡಿಯವರಲ್ಲಿರುವುದು ಅಭಿನಂದನೀಯ. ಗ್ರಾಹಕರ ಪ್ರೀತಿಗೆ ಪಾತ್ರತಾಗಿರುವ ಹಂಝ ಅವರ ಹೊಟೇಲ್ ಉದ್ಯಮ ಯಶಸ್ಸಿನತ್ತ ಸಾಗಲಿ ಎಂದು ಶುಭಹಾರೈಸಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಆಲಿಯಾ ಐಸ್ ಕ್ರೀಂ ಪಾರ್ಲರ್ ಉದ್ಘಾಟಿಸಿದರು. ಅವರು ಮಾತನಾಡಿ ಎಲ್ಲಾ ಸಮುದಾಯದ ಜನರನ್ನು ಪ್ರೀತಿಸುವ ಗುಣ ಹಂಝ ಬಸ್ತಿಕೋಡಿಯವರಲ್ಲಿದೆ. ಎಲ್ಲಾ ಸಮುದಾಯದ ಅಶಕ್ತರಿಗೆ ಅವರು ತಮ್ಮಿಂದಾಗುವ…
ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣಮೂರ್ತಿ ನಾವೂರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ನಾವೂರು ಆಯ್ಕೆಯಾಗಿದ್ದಾರೆ. ಧರ್ಮದಾಯದತ್ತಿಗಳ ಅಧಿನಿಯಮದಂತೆ ನೂತನ ಸದಸ್ಯರನ್ನು ಆಯ್ಕೆಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್, ಡೊಂಬಯ ನಾಯ್ಕ, ಪುಷ್ಪಾವತಿ ತಾರನಾಥ ಕುಲಾಲ್, ವಿನುತ ಪುಷ್ಪರಾಜ್, ಎನ್. ವಾದಿರಾಜ ಆಚಾರ್ಯ, ರಾಜೇಶ್ ಗೌಡ, ವಿಜಯ ಕುಮಾರ್, ಬೇಬಿ ಸುವರ್ಣ ಹಾಗೂ ಉಮೆಶ್ ಕುಲಾಲ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿತ್ತು. ಇದೀಗ ಸದಸ್ಯರ ಸಭೆಯನ್ನು ನಡೆಸಿ ಸಮಿತಿಯ ಅಧ್ಯಕ್ಷರನ್ನಾಗಿ ಉಮೇಶ್ ಕುಲಾಲ್ ಅವರನ್ನು ಆಯ್ಕೆಗೊಳಿಸಲಾಗಿದೆ.
ಬಂಟ್ವಾಳ: ಜೆಸಿಐ ವಲಯ 15ರ ಪ್ರತಿಷ್ಠಿತ ಘಟಕ ಜೆಸಿಐ ಬಂಟ್ವಾಳದ 2026ನೇ ಸಾಲಿನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಆಚಾರ್ಯ ಆಯ್ಕೆಯಾಗಿದ್ದಾರೆ. ಘಟಕದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಬಂಟ್ವಾಳ, ಕೋಶಾಧಿಕಾರಿಯಾಗಿ ಶಿವರಾಮ ಮರ್ತಾಜೆ, ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಶ್ರೀನಿವಾಸ ಅರ್ಬಿಗುಡ್ಡೆ, ರವಿರಾಜ್, ಡಾ. ಅಶ್ವಿನಿ ಬಾಲಕೃಷ್ಣ, ರವೀಣ ಬಂಗೇರ, ವೆಂಕಟೇಶ್ ಕೃಷ್ಣಪುರ, ಲೇಡಿ ಜೇಸಿ ಸಂಯೋಜಕಿಯಾಗಿ ಅನುಷಾ ಕಿಶೋರ್ ಆಚಾರ್ಯ ಆಯ್ಕೆಯಾಗಿದ್ದಾರೆ. ಜ.3ರಂದು ಪ್ರದಗ್ರಹಣ: ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.3ರಂದು ಶನಿವಾರ ಬಿ.ಸಿ.ರೋಡಿನ ರೈಲು ನಿಲ್ದಾಣದ ಬಳಿ ಇರುವ ರೊ| ಬಿ.ಎ. ಸೋಮಯಾಜಿ ಮೆಮೋರಿಯಲ್ ರೋಟರಿ ಸಭಾಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲ್, ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಭಾಗವಹಿಸುವರು. ಅಭ್ಯಾಗತರಾಗಿ ಕೊಡಂಗೆ ಸರಕಾರಿ ಶಾಲೆಯ ಶಿಕ್ಷಕಿ…
ಬಂಟ್ವಾಳ: ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅದನ್ನು ಅರ್ಥ ಮಾಡಿಕೊಂಡು ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ದುಶ್ಚಟ, ದುರಭ್ಯಾಸಗಳಿಗೆ ದಾಸರಾಗದೆ ಸಮಾಜದ ಸ್ವಾಸ್ಥ್ಯವನ್ನು ಕಾಪಡಲು ಶ್ರಮಿಸಬೇಕು ಎಂದು ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಕಾರ್ಯಧ್ಯಕ್ಷ ಪುರುಷೋತ್ತಮ ಪೂಜಾರಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇದರ ಆಶ್ರಯದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಗ್ಗ ವಲಯ ಇದರ ಆಶ್ರಯದಲ್ಲಿ ಸರಪಾಡಿ ಸರಕಾರಿ ಪ್ರೌಡಶಾಲೆಯಲ್ಲಿ ಮಂಗಳವಾರ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆಸಿಐ ವಲಯ ತರಬೇತುದಾರ ಸಂದೀಪ್ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ವಾಸ್ಥ್ಯ ಸಂಕಲ್ಪದ ಮಾಹಿತಿ ನೀಡಿದರು. ಶಾಲೆಯ ಎಸ್‌ಡಿಎಂಸಿ ನಿಕಟ ಪೂರ್ವ ಕಾರ್ಯಧ್ಯಕ್ಷ ಗಿರಿಧರ್, ಸೇವಾನಿರತೆ ಮೋಹಿನಿ, ದೈಹಿಕ ಶಿಕ್ಷಕ ಅಖಿಲ್ ಶೆಟ್ಟಿ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳದ ಕೃಷಿ ಅಧಿಕಾರಿ ಭಾಸ್ಕರ್ ಪ್ರಾಸ್ತವಿಕವಾಗಿ…
ಬಂಟ್ವಾಳ: ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಸೇವಾಂಜಲಿ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮ ಭಾನುವಾರ ಸಂಜೆ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು. ಹಿರಿಯ ರಂಗಭೂಮಿ ಕಲಾವಿದೆ ಸರೋಜಿನಿ ಎಸ್. ಶೆಟ್ಟಿ ದೀಪ ಪ್ರಜ್ವಲಿಸಿದರು. ಭರತನಾಟ್ಯ ಹಾಗೂ ನಟುವಾಂಗ ಕಲಾವಿದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ನೃತ್ಯಗುರು ಮಂಜುಳಾ ಸುಬ್ರಹ್ಮಣ್ಯ ಉಪಸ್ಥಿರಿದ್ದರು. ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.








