Author: admin

ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ನೇತ್ರಾವತಿ ನದಿ ಕಿನಾರೆಯಲ್ಲಿ ಅನುಷ್ಠಾನಗೊಂಡಿರುವ ಏತನೀರಾವರಿ ಯೋಜನೆಯ ಮೂಲಕ ಪ್ರಸ್ತುತ ಸೀಮಿತ ಪ್ರದೇಶಕ್ಕೆ ಮಾತ್ರ ನೀರು ಪೂರೈಕೆಯಾಗುತ್ತಿದ್ದು ಇದನ್ನು ಸ್ಥಳೀಯ ಇನ್ನಷ್ಟು ಪ್ರದೇಶಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಹೈ ಸ್ಫೀಡ್ ಪಂಪ್ ಅಳವಡಿಕೆ ಹಾಗೂ ಹೊಸ ಪೈಪ್ ಲೈನ್ ಅಳವಡಿಸುವಂತೆ ಸಜೀಪಮುನ್ನೂರು ಏತನೀರಾವರಿ ಬಳಕೆದಾರರ ಸಂಘದ ವತಿಯಿಂದ‌ ಮಾಜಿ ಸಚಿವ ಬಿ. ರಮಾನಾಥ ರೈಯವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಮಡಿವಾಳಪಡ್ಪು ಕೂಸನಕಟ್ಟೆಯ ಪಂಪ್ ಹೌಸ್ ಬಳಿ ನಡೆದ ಸಜೀಪಮುನ್ನೂರು ಏತನೀರಾವರಿ ಬಳಕೆದಾರರ ಸಂಘದ ಸಭೆಯಲ್ಲಿ ಮಾಜಿ ಸಚಿವ ಬಿ. ರಮನಾಥ ರೈ ಪಾಲ್ಗೊಂಡಿದ್ದು ಸಂಘದ ಅಧ್ಯಕ್ಷ ಮಹೇಶ್ ನಾಯಕ್ ಸ್ವಾಗತಿಸಿ, ವಿಷಯ ಪ್ರಸ್ತಾಪಿಸಿದರು. ಸಂಘದ ಉಪಾಧ್ಯಕ್ಷ ಅಣ್ಣಪ್ಪಯ್ಯ ಪ್ರಸ್ತಾವಿಸಿ ತಮ್ಮ ಬೇಡಿಕೆಯ ಉದ್ದೇಶವನ್ನು ತಿಳಿಸಿದರು. ಈ ಸಂದರ್ಭ ಸ್ಥಳೀಯ ಕೃಷಿಕರ ಬೇಡಿಕೆಗೆ ಸ್ಪಂದಿಸಿದ ಬಿ. ರಮಾನಾಥ ರೈ ಸಣ್ಣನೀರಾವರಿ ಇಲಾಖೆಯ ಎಂಜಿನಿಯರ್ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿ ಈ ಬಗ್ಗೆ ಕ್ರಿಯಾ ಯೋಜನೆ…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 134ನೇ ರಕ್ತದಾನ ಶಿಬಿರ ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು. ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್. ಪ್ರಕಾಶ್ ಕಾರಂತ್ ಶಿಬಿರ ಉದ್ಘಾಟಿಸಿದರು. ಅವರು ಮಾತನಾಡಿ ಸೇವಾಂಜಲಿ ಸಂಸ್ಥೆ ಅವಶ್ಯಕತೆಗನುಗುಣವಾಗಿ ರಕ್ತದಾನ ಶಿಬಿರವನ್ನು ಸಂಘಟಿಸುತ್ತಿದ್ದು ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು. ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿದ್ದು ರಕ್ತಕ್ಕೆ ಪರ್ಯಯವಾದ ವ್ಯವಸ್ಥೆ ಬೇರೊಂದಿಲ್ಲ.‌ ಬೇರೆಯವರು ದಾನ ಮಾಡಿದರಷ್ಟೇ ಅಗತ್ಯವುಳ್ಳವರು ರಕ್ತ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಯರಾಂ ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸೇವಾಂಜಲಿ ಕೇವಲವೊಂದು ಸಂಸ್ಥೆಯಲ್ಲ, ಅದೊಂದು ಭರವಸೆ. ಕಲೆ, ಸಾಂಸ್ಕೃತಿಕ, ಆರೋಗ್ಯ, ಶಿಕ್ಷಣ, ರಕ್ತದಾನ ಮೊದಲಾದ ಕ್ಷೇತ್ರಗಳಲ್ಲಿ ಸೇವೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಯುವಕರನ್ನು…

Read More

ಬಂಟ್ವಾಳ: ಬಿ‌.ಸಿ.ರೋಡಿನಲ್ಲಿ ಕಚೇರಿ ಹಿಂದಿರುವ ಸೆಕ್ಯೂರ್ ಇನ್ಸೂರೆನ್ಸ್ ಕನ್ಸಲ್ಟೆನ್ಸಿ ಇದರ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸೇವಾಂಜಲಿ ಪ್ರತಿಷ್ಠಾನ ಹಾಗೂ ಜೆಸಿಐ ಬಂಟ್ವಾಳದ ಸಹಯೋಗದೊಂದಿಗೆ, ಕೆಎಂಸಿ ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ ಬಿ.ಸಿ.ರೋಡಿನ ಆರ್. ಡಿ. ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಮೊಡಂಕಾಪು ಇನ್ಫೆಂಟ್ ಜೀಸಸ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ಅತೀ ವಂದನೀಯ ಲಾನ್ಸಿ ಡಿಸೋಜಾ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭಾಕಾರ್ಯಕ್ರಮವನ್ನು ದೈಜಿವರ್ಲ್ಡ್ ನ ಸಂಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಿದರು. ಅವರು ಮಾತನಾಡಿ ಜೀವನದಲ್ಲಿ ಎಷ್ಟೇ ಹಣ ಗಳಿಸಿದರೂ ಇನ್ನೊಬ್ಬರ ಭಾವನೆ,‌ ಕಾಳಜಿಯನ್ನು ಅರ್ಥಮಾಡಿಕೊಳ್ಳದಿದ್ದರೆ ಆತನ ಬದುಕು ಸಾರ್ಥಕವಾಗುವುದಿಲ್ಲ. ಇನ್ನೊಬ್ಬರ ಮನಸ್ಸಿಗೆ ಖುಷಿ ನೀಡುವುದೂ ಕೂಡ ಒಂದು ರೀತಿಯ ಚ್ಯಾರಿಟಿ ಎಂದು ತಿಳಿಸಿದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಮಾಜದ ಋಣ ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಪ್ರಶಾಂತ್…

Read More

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ 133ನೇ ರಕ್ತದಾನ ಶಿಬಿರ ಜ.18ರಂದು ಭಾನುವಾರ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್. ಪ್ರಕಾಶ್ ಕಾರಂತ್ ಶಿಬಿರ ಉದ್ಘಾಟಿಸುವರು.‌ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜಯರಾಂ ತುಂಬೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಂಟ್ವಾಳ: ಒಳ್ಳೆಯ ಮನಸ್ಸುಗಳು ಜೊತೆಗೂಡಿದಾಗ ಸತ್ಕಾರ್ಯಗಳು ಸುಸೂತ್ರವಾಗಿ ನಡೆಯಲಿದೆ ಎಂದು ಒಡಿಯೂರು ಶ್ರೀ ಗುರುದೇವಾದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಸುಜೀರು ದತ್ತನಗರದ ಶ್ರೀ ವೀರಹನುಮಾನ್ ಮಂದಿರದ 24ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರ ಹೆಸರಿನಲ್ಲೂ ರಾಮನಿದ್ದಾನೆ ಎಂದ ಅವರು ಹನುಮನನ್ನು ಉಪಾಸನೆ ಮಾಡಿದಾಗ ನಾವು ಕ್ರಿಯಾಶೀಲರಾಗುತ್ತೇವೆ ಎಂದು ತಿಳಿಸಿದರು. ದತ್ತನಗರದ ಮಂದಿರ ನಿರ್ಮಾಣಗೊಂಡು ಅರ್ಧ ಮಂಡಲ ಪೂರ್ಣಗೊಂಡಿದೆ. ಮುಂದಿನ ಬೆಳ್ಳಿ ಹಬ್ಬದ ಸಂಭ್ರಮದ‌ ವೇಳೆಗೆ ಸಮಿತಿಯ ಬೇಡಿಕೆಯ ಸಭಾಭವನದ ನಿರ್ಮಾಣವಾಗಲಿದ್ದು ಎಲ್ಲರ ಸಹಕಾರ ಒದಗಿ ಬರಲಿದೆ ಎಂದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಾತನಾಡಿ ಧಾರ್ಮಿಕ ಪರಿತ್ತಿನಿಂದ ಸಿಗುವ ಅನುದಾನದಡಿ ಮಂದಿರದ ಅಭಿವೃದ್ದಿಗೆ 5 ಲಕ್ಷ ಮೀಸಲಿಡುವುದಾಗಿ ತಿಳಿಸಿದರು. ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಮಾತನಾಡಿದರು. ಉದ್ಯಮಿಗಳಾದ ಜಗದೀಶ್ ರೈ, ಎಂಜಿನಿಯರ್ ಅಕ್ಷಯ್ ಅರ್ಕುಳ, ಗೌರವಾಧ್ಯಕ್ಷ ಪ್ರಕಾಶ್ಚಂದ್ರ…

Read More

ಬಂಟ್ವಾಳ: ಚೆಸ್ ಮಾಸ್ಟರ್ ಮಂಗಳೂರು ಇದರ ಆಶ್ರಯದಲ್ಲಿ ರೋಟರಿ ಕ್ಲಬ್ಬಿ.ಸಿ.ರೋಡು ಸಿಟಿ, ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಇದರ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ರ್ಯಾಪಿಡ್ ಚೆಸ್ ಟೂರ್ನಮೆಂಟ್ ಜ.18ರಂದು ಭಾನುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.‌ ವಿವಿಧ ವಿಭಾಗದಲ್ಲಿ ಚೆಸ್ ಪಂದ್ಯಾಟ ನಡೆಯಲಿದ್ದು ಆಸಕ್ತ ಸ್ಪರ್ಧಾಳುಗಳು ಜ.16ರ ಒಳಗಾಗಿ ತಮ್ಮ‌ಹೆಸರು ನೋಂದಾತಯಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ ರಾಜ್ಯ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುರೇಶ್ ಸಾಲ್ಯಾನ್ ಅವರಿಗೆ ಅಭಿನಂದನಾ ಸಮಾರಂಭ ಜ.13 ರಂದು ಮಂಗಳವಾರ ಬೆಳಿಗ್ಗೆ 10.30ಕ್ಕೆ ಬಿ.ಸಿ.ರೋಡಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ. ಅಸೋಸಿಯೇಷನ್ ನ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯಾದೇಶ್ ತುಂಬೆ ಅಧ್ಯಕ್ಷತೆ ವಹಿಸುವರು, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಉದ್ಘಾಟಿಸುವರು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ದೀಪ ಪ್ರಜ್ವಲಿಸುವರು, ಮುಖ್ಯ ಅತಿಥಿಗಳಾಗಿ ತಹಶಿಲ್ದಾರ್ ಮಂಜುನಾಥ, ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ, ಕಾರ್ಮಿಕ ನಿರೀಕ್ಷಕಿ ಲವೀನಾ ಡಿಸೋಜಾ, ಕೆ ಎಸ್ ಟಿ ಎ ಸ್ಥಾಪಕಾಧ್ಯಕ್ಷ ಲಕ್ಷ್ಮಣ ಉಳ್ಳಾಲ, ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ವಚನ್ ಶೆಟ್ಟಿ, ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಸುಧೀರ್ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸುವವರು ಎಂದು ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.

Read More

ಬಂಟ್ವಾಳ: ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ನಿ ಬಿ.ಸಿ.ರೋಡ್ ವತಿಯಿಂದ ಸಹಕಾರಿಯ ಪಿಗ್ಮಿ ಗ್ರಾಹಕರಿಗೋಸ್ಕರ ಮಾಡಿದ ಯೋಜನೆಯಾದ ಉಚಿತವಾಗಿ ಚಿನ್ನ ಮತ್ತು ಬೆಳ್ಳಿಯ ನಾಣ್ಯವನ್ನು ಪಡೆಯುವ ಅವಕಾಶದಲ್ಲಿ ಪ್ರಥಮವಾಗಿ ಬೆಳ್ಳಿಯ ನಾಣ್ಯವನ್ನು ಬಿ.ಸಿ.ರೊಡ್ ನ ಹೋಟೆಲ್ ಉದ್ಯಮಿ ಗುರುದತ್ ಹೆಗಡೆ ಪಡೆದಿದ್ದು ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ವೆಂಕಟೇಶ್ ಭಟ್ ಬೆಳ್ಳಿಯ ನಾಣ್ಯವನ್ನು ಹಸ್ತಾಂತರಿಸಿದರು. ಈ ಸಂದರ್ಭ ಸಹಕಾರಿಯ ಪಿಗ್ಮಿ ಸಂಗ್ರಹಕರಾದ ರೇಖಾ ಪ್ರಭುರವರು ಇದ್ದರು.

Read More

ಬಂಟ್ವಾಳ: ಬಿಲ್ಲವ ಸೇವಾ ಸಮಿತಿ ಬೊಳ್ಳಾಯಿ ಇದರ ವತಿಯಿಂದ ಇತ್ತಿಚೆಗೆ ಬೊಳ್ಳಾಯಿ ಸಮೀಪ ಕಂಚಿಲ ಪರಿಸರದ ದೇವರಾಜ್ ಪೂಜಾರಿ ಅವರ ಪತ್ನಿ ಪುಷ್ಪ ಹಾಗೂ ದಿ.ಆನಂದ ಪೂಜಾರಿ ಅವರ ಪತ್ನಿ ರೇವತಿ ಎಂಬವರು ಅಗ್ನಿ ಅವಘಡದಿಂದ ತೀವ್ರವಾಗಿ ಗಾಯಗೊಂಡಿದ್ದು ಬಿಲ್ಲವ ಸೇವಾ ಸಮಿತಿ ಬೊಳ್ಳಾಯಿ ಇದರ ಅಧ್ಯಕ್ಷ ಪುರುಷೋತ್ತಮ ಪೂಜಾರಿ ಕೋಮಾಲಿ ಪಡೀಲ್ ಇವರ ನೇತೃತ್ವದಲ್ಲಿ ಸಾಂತ್ವನ ನಿಧಿಯ ಚೆಕ್ ನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಸುಭಾಷ್‌ ನಗರ ಬಿಲ್ಲವ ಸೇವಾ ಸಂಘ ಇದರ ಅಧ್ಯಕ್ಷ ಮೊಹನ್ ದಾಸ್ ಪೂಜಾರಿ ಬೊಳ್ಳಾಯಿ, ಬಂಟ್ವಾಳ ತಾಲೂಕು ಪಿಡಬ್ಲ್ಯಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್‌ ಪೂಜಾರಿ ಕುಚ್ಚಿಗುಡೆ ಸಮಿತಿಯು ಗೌರವ ಅಧ್ಯಕ್ಷ ಸುಂದರ ಪೂಜಾರಿ ವಿಟ್ಲಕೋಡಿ, ಮಾಜಿ ಅಧ್ಯಕ್ಷ ಪ್ರಶಾಂತ್ ಪೂಜಾರಿ ವಿಟ್ಲಕೋಡಿ, ಕಾರ್ಯದರ್ಶಿ ನಾಗೇಶ್ ಪೂಜಾರಿ ಉಪಾಧ್ಯಕ್ಷ ಮಹೇಶ್ ಪೂಜಾರಿ ಪ್ರಮುಖರಾದ ತಿಲಕರ ಪೂಜಾರಿ ಮಿತ್ತಮಜಲ್, ನಾರಾಯಣ ಪೂಜಾರಿ ಪಟ್ಟುಗುಡ್ಡೆ ಯೋಗೀಂದ್ರ ಪೂಜಾರಿ ಕೋಮಾಲಿ, ಅಂತಪ್ಪ ಪೂಜಾರಿ ಕೊಮಾಲಿ, ವಿನೋದ್ ಪೂಜಾರಿ ಕೋಮಾಲಿ…

Read More

ಬಂಟ್ವಾಳ: ಭಾರತ ಸರಕಾರದ ರೈಲ್ವೆ ಇಲಾಖೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೇರ ನೇಮಕಾತಿಯ ಮೂಲಕ ಮಂಡ್ಯ ವಿಭಾಗದ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪವನ್ ಕುಮಾರ್ ಬಿ. ಶುಕ್ರವಾರದಂದು ಅಧಿಕಾರ ಸ್ವೀಕರಿಸಿದರು ರೈಲ್ವೆ ಇಲಾಖೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ 2006 ರ ಏಪ್ರಿಲ್ ತಿಂಗಳಲ್ಲಿ ಮೈಸೂರು ರೈಲ್ವೆ ಸ್ಟೇಷನ್ ನಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಬಳಿಕ ಭಡ್ತಿಗೊಂಡು ರೈಲ್ವೆ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಗೋವಾ ರಾಜ್ಯದ ವಾಸ್ಕೋ ಮತ್ತು ಮಡಂಗಾವ್ ರೈಲ್ವೆ ಸ್ಟೇಷನ್ ನಲ್ಲಿ ಕಾರ್ಯನಿರ್ವಹಿಸಿದ ಇವರು ರೈಲ್ವೆ ಇಲಾಖೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರ ಸಹೋದರ ಪ್ರಣಾಮ್ ಕುಮಾರ್ ಗುಜರಾತ್ ರಾಜ್ಯದ ವಾಪಿ ಬ್ಯಾಂಕ್ ಆಫ್ ಬರೋಡ ಬ್ರಾಂಚ್ ನಲ್ಲಿ ಚೀಫ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಂಟ್ವಾಳ ತಾಲೂಕಿನ ಕೂರಿಯಾಳ ಜಗದೀಶ್ ಭಂಡಾರಿ ಹರೇಕಳ ಮೋಹಿನಿ ಜಗದೀಶ್ ಭಂಡಾರಿಯ ಪುತ್ರ. ಪತ್ನಿ ಅಕ್ಷತಾ ರಾಷ್ಟ್ರೀಯ ಮಟ್ಟದ ಕರಾಟೆ ಪಟು ತನಿಷ್ಕ ಮತ್ತು…

Read More