
ಬಂಟ್ವಾಳ: ಮಂಗಳೂರು, ಬಂಟ್ವಾಳ, ಉಳ್ಳಾಲ ತಾಲೂಕು ವ್ಯಾಪ್ತಿಯನ್ನು ಒಳಗೊಂಡಿರುವ ಇಂದಿರಾ ದರ್ಶಿನಿ ಸಹಕಾರಿ ಸಂಘವು ಮಂಚಿ ಕುಕ್ಕಾಜೆಯ ಪತ್ತುಮುಡಿಯಲ್ಲಿರುವ ಅಲೀಮಾ ಪ್ಲಾಝಾ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು.
ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಡಾ. ಯು.ಟಿ.ಖಾದರ್ ಫರೀದ್ ನೂತನ ಸಹಕಾರಿ ಸಂಘವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಸಹಕಾರಿ ಕ್ಷೇತ್ರ ದೇಶದ ಗ್ರಾಮೀಣ ಅಭಿವೃದ್ದಿಯ ಆತ್ಮವಿದ್ದಂತೆ. ಆರ್ಥಿಕ ಚಲನೆಯಿಲ್ಲದೆ ಯಾವುದೇ ಗ್ರಾಮ, ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಮಾಜದ ಹತ್ತು ಕೈಗಳು ಜೊತೆಗಿರುವುದರರಿಂದ ಕೋಅಪರೇಟಿವ್ ಸೊಸೈಟಿಗಳು ಇಂದು ಯಶಸ್ಸಿನತ್ತ ಸಾಗುತ್ತಿದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಆಡಳಿತ ಕಚೇರಿ ಉದ್ಘಾಟಿಸಿದರು. ಅವರು ಮಾತನಾಡಿ ಇಂದಿರಾ ಗಾಂದಿ ಮೇಲ್ವರ್ಗದಲ್ಲಿ ಹುಟ್ಟಿದ್ದರೂ ದುರ್ಬಲ ವರ್ಗದ ಜನರ ಬಗ್ಗೆ ಚಿಂತನೆ ಮಾಡಿ ಯೋಜನೆ ರೂಪಿಸಿದವರು. ಗರೀಭೀ ಹಠಾವೋ ಯೋಜನೆಯ ಮೂಲಕ ಬಡತನ ನಿರ್ಮೂಲನಕ್ಕೆ ಪ್ರಯತ್ನಿಸಿದವರು. ಭೂ ಮಸೂದೆ ಯೋಜನೆಯ ಮೂಲಕ ಬಡವರಿಗೆ ಸ್ವಾಭಿಮಾನದ ಜೀವನ ನೀಡಿದವರು ಎಂದರು.
ಗುರು ಬೆಳಂದಿಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಅವರು ಮಾತನಾಡಿ ಇಂದು ಸಹಕಾರಿ ರಂಗ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಸಮಾಜದ ಕಟ್ಟ ಕಡೆಯ ಜನರಿಗೆ ಆರ್ಥಿಕ ಶಕ್ತಿ ತುಂಬುವ ಕಾರ್ಯವನ್ನು ಮಾಡುತ್ತಿದೆ ಎಂದರು.
ಕ್ಯಾಂಪ್ಕೋ ಅಧ್ಯಕ್ಚ ಎಸ್. ಆರ್.ಸತೀಶ್ಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಧಾನಪರಿಷತ್ತಿನಲ್ಲಿ ಸಹಕಾರಿ ಕ್ಷೇತ್ರಕ್ಕೆ 4 ಸ್ಥಾನಗಳನ್ನು ಮೀಸಲಿಡಬೇಕು ಎಂದು ವಿನಂತಿ ಮಾಡಿದರು.
ಇಂದಿರಾದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ಉಮ್ಮರ್ ಮಂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು, ಉಪಾಧ್ಯಕ್ಷ ಚಂದ್ರಹಾಸ ಕರ್ಕೆರಾ ಪ್ರಾಸ್ತವಿಕ ಮಾತುಗಳನ್ನಾಡಿದರು.

ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ,ಜಿ.ಪಂ. ಮಾಜಿ ಸದಸ್ಯ ಎಂ.ಎಸ್. ಮಹಮ್ಮದ್ , ತಾ.ಪಂ. ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಬಂಟ್ವಾಳ ಕೃಷಿಕ ಸಮಾಜದ ಅಧ್ಯಕ್ಷ
ಪದ್ಮರಾಜ ಬಳ್ಳಾಲ್, ವಕೀಲ ಅಶ್ವನಿ ಕುಮಾರ್ ರೈ, ಪ್ರಮುಖರಾದ ಎಂ. ಎಸ್. ಗೋವಿಂದ ಭಟ್ , ದಸ್ತವೇಜು ಬರಹಗಾರ ಗಣೇಶ್ ರಾವ್
ಮಂಚಿ ಪಂಚಾಯತಿ ಅಧ್ಯಕ್ಷ ಜಿ.ಎಂ. ಇಬ್ರಾಹಿಂ ಪ್ರಮುಖರಾದ ಅಶ್ರಫ್ ನಾಡಾಜೆ , ಹರೀಶ್ ಐತಾಳ್ , ಶ್ರೀಧರ ಕೋಟ್ಯಾನ್, ಮನೋಹರ ಶೆಟ್ಟಿ ನಡಿಕಂಬಳ ಗುತ್ತು
ನಿಶ್ಚಲ್ ಜೈನ್, ಮುತ್ತಯ್ಯ ಮರಾಠೆ, ಹಾಜಿ ಮೊಯ್ದೀನಬ್ಬ
ಮೋಹನದಾಸ್ ಶೆಟ್ಟಿ ಪುದ್ದೊಟ್ಟು, ಅಬೂಬಕ್ಕರ್ ಅಮ್ಮುಂಜೆ
ಗಣೇಶ್ ಐತಾಳ್ ಚೌಕದಪಾಲು, ವಿಠಲ ಪ್ರಭು ಪತ್ತುಮುಡಿ
ಸೂರ್ಯಕಿರಣ್ ಆಚಾರ್, ಜಗದೀಶ್ ನಾಯ್ಕ್ ಸುಳ್ಯ,
ಜಬ್ಬಾರ್, ಮಹಮ್ಮದ್ ನಝೀರ್, ವಿಠಲ ರೈ ಬಾಲಜಿಬೈಲು
ಶಿವಶಂಕರ್ ರಾವ್, ಸುಬ್ರಹ್ಮಣ್ಯ ಕಾಡಬೆಟ್ಟು, ರಾಮಕಿಶೋರ್ ಕಜೆ, ದೇವಕಿ ಎಚ್. , ಗಣೇಶ್ ಕಾರಾಂತ್
ಯೋಗೀಶ್ ಎಚ್. , ರಮಾನಾಥ ವಿಟ್ಲ
ಚಾರ್ಲಿ ಡಿಸೋಜ ರವಿ ಪೂಜಾರಿ
ಆಲ್ವರ್ಟ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.
ನಿರ್ದೇಶಕ ದಿವಾಕರ ನಾಯಕ ಕುಂಟೂರು ವಂದಿಸಿದರು.. ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯನಿರ್ವಾಹಣಾಧಿಕಾರಿ ಮಮತಾ ಎನ್. ಹಾಗೂ ನಿರ್ದೇಶಕರು ಸಹಕರಿಸಿದರು.

Advertisement







