Author: admin
ಬಂಟ್ವಾಳ: ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ನಾಗರಿಕ ಕ್ರಿಯಾಸಮಿತಿಯ ಆಶ್ರಯದಲ್ಲಿ ೩೦ನೇ ಸಹಮಿಲನ ಕಾರ್ಯಕ್ರಮ ಭಾನುವಾರ ಸಂಚಯಗಿರಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಾಗರಿಕ ಕ್ರಿಯಾ ಸಮಿತಿಯ ಮಾಜಿ ಅಧ್ಯಕ್ಷ ನಾರಾಯಣ ನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಚಯಗಿರಿ ಸ್ವಚ್ಚತೆಗೆ ಹೆಸರುವಾಸಿಯಾಗಿದೆ. ಇಂದು ಮಕ್ಕಳು ಕೂಡ ಸ್ವಚ್ಚತೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಭಿನಮದನೀಯ. ಮುಂದಿನ ಪೀಳಿಗೆಗೆ ಈ ಜವಬ್ದಾರಿ ಯನ್ನು ತಿಳಿಸಿಕೊಡುವ ಕಾರ್ಯವನ್ನು ನಾಗರಿಕ ಕ್ರಿಯಾಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಮಾಡುತ್ತಿದ್ದಾರೆ ಎಂದು ತಿಳಿಸಿದರು. ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ನಾಗರಿಕ ಕ್ರಿಯಾ ಸಮಿತಿ ೩೦ ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪುಟ್ಟ ಪ್ರತಿಭೆ ಎನ್ನುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಅದರ ಜೊತೆಗೆ ಹಿರಿಯ ನಾಗರಿಗೆ ಗೌರವ, ಸಾಧಕರಿಗೆ ಸನ್ಮಾನ , ಬಡಮಕ್ಕಳಿಗೆ ಪುಸ್ತಕ ವಿತರಣೆ, ಕಲಾವೇದಿಕೆ ನಿರ್ಮಾಣದಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದ ಅವರು ಸಂಚಯಗಿರಿ ಮನೆಯವರ…
ಬಂಟ್ವಾಳ :ರಾಷ್ಟ್ರೀಯ ಚಿಂತನೆಯೊಂದಿಗೆ ಸಂಘಟನೆಯ ಮೂಲಕ ಸಮಾಜಮುಖಿ ಸೇವೆಯನ್ನು ಮಾಡುತ್ತಿರುವ ಆಶೀರ್ವಾದ ಸೇವಾ ಸಂಘ ನಿರಂತರ 38 ವರುಷಗಳಿಂದ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ, ಇದೀಗ ಕ್ರಿಕೆಟ್ ಮೂಲಕ ಸಂಘಟನನೆಯು ಇನ್ನಷ್ಟು ಗಟ್ಟಿಯಾಗಿ ಸಾಮರಸ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿ, ಕ್ರೀಡೆಯು ಇವರ ಸಮಾಜಮುಖಿ ಕೆಲಸಗಳಿಗೆ ಇನ್ನಷ್ಟು ಪ್ರೇರಣೆಯಾಗಲಿ ಎಂದು ಪತ್ರಕರ್ತ ಸಂತೋಷ್ ನೆತ್ತರಕೆರೆ ಹೇಳಿದರು. ಅವರು ಆಶೀರ್ವಾದ್ ಸೇವಾ ಸಂಘ ಬೊಳ್ಳಾರಿ ಇದರ ಅಶ್ರಯದಲ್ಲಿ ನಡೆದ ಆಶೀರ್ವಾದ್ ಪ್ರೀಮಿಯರ್ ಲೀಗ್ ಸೀಸನ್ -3 ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ತಾ ಪಂ ಮಾಜಿ ಸದಸ್ಯ ಗಣೇಶ್ ಸುವರ್ಣ ತುಂಬೆ, ಶ್ರೀ ಶಾರದಾ ಪೂಜಾ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಘವ ಬಂಗೇರ ಪೆರ್ಲಬೈಲು,ಸಾಮಾಜಿಕ ಕಾರ್ಯಕರ್ತ ಜಗದೀಶ ಪೂಜಾರಿ ಕುಮ್ಡೇಲ್, ಪ್ರಮುಖರಾದ ದಿವಾಕರ ಪೆರ್ಲಬೈಲು,ನಾರಾಯಣ್ ಕಿರೋಡಿಯನ್,ಸುಧಾಕರ ಕೊಟ್ಟಿಂಜ,ಗೋಪಾಲ್ ಬೊಳ್ಳಾರಿ, ಪ್ರದೀಪ್ ಕುಮಾರ್ ಮೂದಲ್ಮೆ, ಅಶೋಕ್ ಕೊಂಡಣ, ಪ್ರಿಯಾ ಸತೀಶ್,ಜಾಲಜಾಕ್ಷಿ ಕೋಟ್ಯಾನ್, ದೀಪಕ್ ಬೊಳ್ಳಾರಿ,ದಯಾನಂದ…
ಬಂಟ್ವಾಳ: ಭಾರತವನ್ನು ಬೆಳಗಿಸುವ ಅಪೂರ್ವವಾದ ಗೀತೆ ವಂದೆ ಮಾತರಂ. ಇತಿಹಾಸದ ಹಿನ್ನಲೆಯಲ್ಲಿ ನಾವು ರಾಷ್ಟಕಟ್ಟಬೇಕು. ರಾಷ್ಟ್ರಕಟ್ಟಲು ನಾವು ಯಾಕೆ ಸೋತೆವೆಂದರೆ ನಾವು ಇತಿಹಾಸವನ್ನು ಮರೆತಿದ್ದೇವೆ. ಇತಿಹಾಸ ಬರೆಯುವುದಕ್ಕಿಂತ ಇತಿಹಾಸ ನಿರ್ಮಿಸಬೇಕು. ಬಂಕಿಮಚಂದ್ರರು ಅದ್ಭುತವಾದ ಗೀತೆ ಬರೆದು ಇತಿಹಾಸ ಸೃಷ್ಟಿಸಿದರು ಎಂದು ಮುಕ್ಕ ಶ್ರೀನಿವಾಸ ಯುನಿವರ್ಸಿಟಿಯ ಸಂಸ್ಕೃತ ವಿಭಾಗದ ಸಂಶೋಧನಾ ಮಾರ್ಗದರ್ಶಕ ಡಾ. ಸೋಂದಾ ಭಾಸ್ಕರ ಭಟ್ ಹೇಳಿದರು. ಬಿ. ಸಿ.ರೋಡಿನ ಶಮ್ಯಾಪ್ರಾಸದಲ್ಲಿ ನಡೆದ ಸರಿದಂತರ ಗೌರವ ಪುರಸ್ಕಾರ ಸಮಾರಂಭದಲ್ಲಿ ಭಾರತದ ಆತ್ಮಶಕ್ತಿ ವಂದೇ ಮಾತರಂ ಎನ್ನುವ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಬಿ.ಸಿ.ರೋಡಿನ ವೈದ್ಯ ಡಾ. ಸತ್ಯಶಂಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜ ಸೇವೆ ಮಾಡುವರಿಗೆ ಕುಹಕದ ಮಾತುಗಳು ಸಾಮಾನ್ಯ ಅವುಗಳನ್ನು ಎದುರಿಕೊಂಡು ಮುನ್ನಡೆಯುವುದೇ ನಿಜವಾದ ಸಾಧನೆ ಎಂದರು. ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಎಸ್. ಈಶ್ವರ ಭಟ್ ಅವರಿಗೆ ಸರಿದಂತರ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು. ಸರಿದಂತರ ಪ್ರಕಾಶನದ ಸಂಚಾಲಕ ಪ್ರೊ.ರಾಜಮಣಿ ರಾಮಕುಂಜ ಸ್ವಾಗತಿಸಿ, ಪ್ರಸ್ತಾವಿಕ…
ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ ಡಿ.26ರಂದು ಶುಕ್ರವಾರ ನಡೆಯಿತು. ಅಂದು ಬೆಳಿಗ್ಗೆ 5ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆದು ಗಣಹೋಮ, ಬಳಿಕ ಸೂರ್ಯೋದಯದಿಂದ ಸೂರ್ಯೋಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಬೆಳಿಗ್ಗೆ 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11ರಿಂದ ನಾಗದೇವರಿಗೆ ನಾಗತಂಬಿಲ, ಆಶೇಷಬಲಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಶ್ರೀ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಜೆ 6.30ಕ್ಕೆ ಭಜನಾ ಸಂಕೀರ್ತನೆಯ ಭಜನಾ ಮಂಗಳ, 7.30ರಿಂದ 8.30ರವರೆಗೆ ಭಜನೆ ರಾತ್ರಿ 8.30ಕ್ಕೆ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಾತ್ರಿ 9.30ಕ್ಕೆ ಭಗವತಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಸೋಣ ಸಂಕ್ರಾಂತಿ ಎಂಬ ಬಯಲಾಟ ನಡೆಯಿತು ಈ ಸಂದರ್ಭದಲ್ಲಿ ಪ್ರಸಂಗ ಕರ್ತ ವಸಂತ ಬಂಟ್ವಾಳ ಹಾಗೂ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ಮಹಾದಾನಿ…
ಬಂಟ್ವಾಳ: ಮೈಸೂರು ವಿಭಾಗ ಮಟ್ಟದ ಜೂಡೋ ಸ್ಪರ್ಧೆ-2025ರಲ್ಲಿ ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ನೆತ್ತರೆಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ 13 ಮಂದಿ ವಿದ್ಯಾರ್ಥಿಗಳು ಬಹುಮಾನ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಆರುಷಿ (-36), _ಗೀತೇಶ್ (-50), ಹಂಸಿಕಾ(-40) ಯಶ್ವಿನಿ (-44), ಭೂಮಿಕಾ(-28), ನಿಧಿನ್(-25), ವೇದಾಂತ್ (-30) ಯಕ್ಷಿತ್ (-30) ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡರೆ, ದೆನಿಕಾ -20), ಅನುಶ್ರೀ (-44), ಆರೋಧ್ಯ (-36), ಶೈಲೇಶ್ (-35), ದ್ವೀತಿಯ ಸ್ಥಾನದೊಂದಿಗೆ ಬೆಳ್ಳಿಯ ಪದಕ, ಭುವಿಶ್ (-25) ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದಕೊಂಡಿದ್ದಾರೆ. ಡಾ.ಎ.ಸಿ.ಮುನಿವೆಂಕಟೇಶ ಗೌಡ ಚಾರಿಟೇಬಲ್ ಟ್ರಸ್ಟ್ ಹಾಸನ, ಆಶ್ರಯ ಸೆಂಟರ್ ಫಾರ್ ಟ್ರಾನ್ಸ್ ಫರ್ಮೇಶನ್ ಬೆಂಗಳೂರು ಮತ್ತು ಹಾಸನ ಜಿಲ್ಲಾ ಅಮೆಚೂರು ಜೂಡೋ ಸಂಸ್ಥೆ, ಹಾಸನ ಜಿಲ್ಲಾ ಅಮೆಚೂರು ಬಾಡಿಬಿಲ್ಡರ್ ಸಂಸ್ಥೆ, ಹಾಸನ ಜಿಲ್ಲಾ ಕ್ರೀಡಾ ಪರಿಷತ್ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಎ.ಸಿ.ಎಂ.ಅವರ ಜನ್ಮದಿನದ ಪ್ರಯುಕ್ತ ಜೂಡೋ ಸ್ಫರ್ಧೆ…
ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ ವತಿಯಿಂದ 15ನೇ ವರ್ಷದ ಸಾಂಸ್ಕೃತಿಕ ಕಲರವ “ರಾರಾಸಂಭ್ರಮ-25” ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗುರುವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಲೋಕಾಯುಕ್ತ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಬೆಳಿಗ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು, ಯುವವಾಹಿನಿ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ, ಜೆಸಿಐ ಮಡಂತ್ಯಾರಿನ ಅಧ್ಯಕ್ಷೆ ಸಾಯಿಸುಮ ನಾವಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾಜಿ ಸಚಿವರಾದ ಬಿ. ರಮಾನಾಥ ರೈ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭಹಾರೈಸಿದರು. ಬಳಿಕ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ನೂರಾರು ಸ್ಪರ್ಧಾಳುಗಳು ಉತ್ಸುಕತೆಯಿಂದ ಭಾಗವಹಿಸಿದ್ದರಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಬಂತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಂ.ತಾ. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಆರ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಪುರಂದರ ಎ., ಲಯನ್ಸ್ ಪೂರ್ವಾಧ್ಯಕ್ಷ ಜಯಂತ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ. ರೋಹಿತಾಶ್ವ, ಸುಧೀರ್…
ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಾರ್ನಬೈಲು ಜಂಕ್ಷನ್ ನಲ್ಲಿರುವ ಸಿರಿಮುಡಿ ಕಾಂಪ್ಕೆಕ್ಸ್ ನಲ್ಲಿ ಜಯಶಂಕರ್ ಕಾನ್ಸಲೆ ಹಾಗೂ ಝಾಕೀರ್ ನಂದಾವರ ಮಾಲಕತ್ವದ ಜಝ್ ಕಾರ್ಸ್ ಎನ್ನುವ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮತ್ತು ಲ್ಯಾಂಡ್ ಲಿಂಕ್ಸ್ ಸಂಸ್ಥೆ ಶುಭಾರಂಭಗೊಂಡಿತು. ಕಿಸ್ ಮಸ್ ಶುಭದಿನದಂದು ಸರ್ವಧರ್ಮಗಳ ಗ್ರಂಥಗಳಾದ ಭಗವದ್ಗೀತೆ, ಕುರಾನ್, ಬೈಬಲ್ ಗಳನ್ನು ಇಟ್ಟು ಎಳೆಯ ಮಕ್ಕಳು ಬಲೂನನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿಠಲ ಬೆಳ್ಚಾಡ ಮತ್ತಿತರರು ರಿಬ್ಬನ್ ಕತ್ತರಿಸಿ, ಬಳಿಕ ದೀಪ ಪ್ರಜ್ವಲಿಸಿ ನೂತನ ಸಂಸ್ಥೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಸಂಸ್ಥೆಯ ಆಡಳಿತ ಪಾಲುದಾರರಾದ ಜಯಶಂಕರ್ ಕಾನ್ಸಲೆ ಹಾಗೂ ಝಾಕೀರ್ ನಂದಾವರ ಮಾತನಾಡಿ ಸರ್ವಧರ್ಮದ ಗ್ರಾಹಕರ ಅನುಕೂಲಕ್ಕಾಗಿ ಮಾರ್ನಬೈಲಿನಲ್ಲಿ ಜಝ್ ಕಾರ್ಸ್ ಸಂಸ್ಥೆಯನ್ನು ಆರಂಭಿಸಿದ್ದೇವೆ. ಇಲ್ಲಿ ಗ್ರಾಹಕರಿಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ, ಲ್ಯಾಂಡ್ ಲಿಂಕ್ಸ್, ವಾಹನ ಇನ್ಶುರೆನ್ಸ್, ಕಾರು ಲೋನ್ ವ್ಯವಸ್ಥೆ, ಡ್ರೈವಿಂಗ್ ಲೈಸೆನ್ಸ್,…
ಬಂಟ್ವಾಳ: ಸಜೀಪಮೂಡ ಗ್ರಾಮದ ಸುಭಾಷ್ ನಗರ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿ ಇದರ 2025/26-2027ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಪೂಜಾರಿ ಬೊಳ್ಳಾಯಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಮಿತಿಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಗೌರವಧ್ಯಕ್ಷರಾಗಿ ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಉಪಾಧ್ಯಕ್ಷರಾಗಿ ದಾಮೋದರ್ ಪೂಜಾರಿ ಮಾರ್ನಬೈಲ್, ಕಾರ್ಯದರ್ಶಿಯಾಗಿ ಜಗದೀಶ್ ಪೂಜಾರಿ ಕಾರಾಜೆ, ಜತೆ ಕಾರ್ಯದರ್ಶಿಯಾಗಿ ವಿಜಯ್ ಗುರುಮಂದಿರ, ಕೋಶಾಧಿಕಾರಿಯಾಗಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಮೋದ್ ಅಂಚನ್ ಸಾನದಮನೆ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ಪೂಜಾರಿ ಪಂಬೈಲ್ ಮತ್ತು ನವೀನ್ ಕಾರಾಜೆ. ಲೆಕ್ಕ ಪರಿಶೋಧಕರಾಗಿ ರಾಮಕೃಷ್ಣ ಮಿತ್ತಮಜಲು, ಸಾಂಸ್ಕೃತಿಕ ನಿರ್ದೇಶಕರಾಗಿ ಲೋಕೇಶ್ ಪೂಜಾರಿ ಸುಭಾಷ್ ನಗರ, ಆರೋಗ್ಯ ನಿರ್ದೇಶಕರಾಗಿ ಮಹೇಶ್ ಪೂಜಾರಿ ಬೊಳ್ಳಾಯಿ, ಭಜನಾ ಅಧ್ಯಕ್ಷರಾಗಿ ಪ್ರವೀಣ್ ಮುತ್ತುಕೃಷ್ಣ, ಭಜನಾ ಉಪಾಧ್ಯಕ್ಷರಾಗಿ ಸಂತೋಷ್ ಕೋಟ್ಯಾನ್ ದಾಸರಗುಡ್ಡೆ, ಭಜನಾ ಕಾರ್ಯದರ್ಶಿಯಾಗಿ ರಾಕೇಶ್ ಗುರುಮಂದಿರ, ಭಜನಾ ಜತೆ ಕಾರ್ಯದರ್ಶಿ ಲಕ್ಷ್ಮೀಶ ಅಗರಿ ಆಯ್ಕೆಯಾದರು.
ಬಂಟ್ವಾಳ: ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ಜರುಗಿದ 21ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ 14 ವರ್ಷದ ಬಾಲಕಿಯರ ವಿಭಾಗದ ಆಲ್ ಇಂಡಿಯಾ ಓಪನ್ ವಿಭಾಗದ ಕರಾಟೆಯ ಕಟಾ ವಿಭಾಗದಲ್ಲಿ ಪೂರ್ವಿ ಜೆ, ಬಂಗೇರ ದಾಸಕೋಡಿ ಪ್ರಥಮ ಸ್ಥಾನ, ಹಾಗೂ ಕುಮಿತೆ ಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಬೊಂಡಾಲ ಶ್ರೀ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಜಯ ಗಣೇಶ್ ಬಂಗೇರ ದಾಸಕೋಡಿ ಮತ್ತು ಜಯಶ್ರೀ ಜೆ ಬಂಗೇರ ಇವರ ಪುತ್ರಿ. ಸಮೀಕ್ಷಾ ಇವರಲ್ಲಿ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ. — —
ಬಂಟ್ವಾಳ: ಕುರಿಯಾಳ ಗ್ರಾಮದ ದುರ್ಗಾನಗರ ಶ್ರೀ ಓಂಕಾರೇಶ್ವರೀ ದೇವಿ ಭಜನಾ ಮಂದಿರದ ವಾರ್ಷಿಕೋತ್ಸವ ಡಿ.26ರಂದು ಶುಕ್ರವಾರ ನಡೆಯಲಿದೆ. ಅಂದು ಬೆಳಿಗ್ಗೆ 5ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆದು ಗಣಹೋಮ, ಬಳಿಕ ಸೂರ್ಯೋದಯದಿಂದ ಸೂರ್ಯೋಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬೆಳಿಗ್ಗೆ 10 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 11ರಿಂದ ನಾಗದೇವರಿಗೆ ನಾಗತಂಬಿಲ, ಆಶೇಷಬಲಿ, ಮಹಾಪೂಜೆ, ಮಧ್ಯಾಹ್ನ 12.30ಕ್ಕೆ ಶ್ರೀ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ಕ್ಕೆ ಭಜನಾ ಸಂಕೀರ್ತನೆಯ ಭಜನಾ ಮಂಗಳ, 7.30ರಿಂದ 8.30ರವರೆಗೆ ಭಜನೆ ನಡೆದು ರಾತ್ರಿ 8.30ಕ್ಕೆ ಓಂಕಾರೇಶ್ವರಿ ದೇವಿಗೆ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9.30ಕ್ಕೆ ಭಗವತಿ ಪ್ರಸಾದಿತ ದಶಾವತರ ಯಕ್ಷಗಾನ ಮಂಡಳಿ ಸಸಿಹಿತ್ಲು ಇವರಿಂದ ಸೋಣ ಸಂಕ್ರಾಂತಿ ಎಂಬ ಪ್ರಸಂಗ ಬಯಲಾಟ ನಡೆಯಲಿದೆ.








