Author: admin
ಬಂಟ್ವಾಳ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಸಮಿಯ ನೂತನ ಅಧ್ಯಕ್ಷರಾಗಿ ಚುನಾಯಿತರಾದ ಎನ್. ಪ್ರಕಾಶ್ ಕಾರಂತ್ ನರಿಕೊಂಬು ಇವರಿಂದ ಕೂಟಬಂಧು ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಹಿರಿಯರಾದ ವೇದಮೂರ್ತಿ ವೆಂಕಪ್ಪಯ್ಯ ಭಟ್ ಕರ್ಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಾಣೆಮಂಗಳೂರು ಶ್ರೀ ಭಯಂಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಘುನಾಥ ಸೋಮಯಾಜಿ ಭಾಗವಹಿಸಿ ಮಾತನಾಡಿ ಸಾಲಿಗ್ರಾಮ ದೇವಸ್ಥಾನ ಹಾಗೂ ತನಗೂ ಇದ್ದ ಭಕ್ತಿ ಸಂಬಂಧದ ಬಗ್ಗೆ ವಿಚಾರಗಳನ್ನು ತೆರೆದಿಟ್ಟರು. ಶ್ರೀ ಗುರುನರಸಿಂಹ ದೇವರ ಅನುಗ್ರಹದಿಂದ ತಾನು ಈ ಹಂತಕ್ಕೆ ಬೆಳೆದಿರುವುದಾಗಿ ತಿಳಿಸಿದ ಅವರು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಕಾಶ್ ಕಾರಂತ್ ಅವರಿಗೆ ಶುಭ ಹಾರೈಸಿದರು. ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಈ ಸ್ಥಾನಕ್ಕೆ ಪ್ರಕಾಶ್ ಕಾರಂತ್ ಅರ್ಹ ವ್ಯಕ್ತಿ. ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಆ ಕಾರಣಕ್ಕಾಗಿ ಅವರು ಗೆದ್ದಿದ್ದಾರೆ.…
ಬಂಟ್ವಾಳ: ಸಜೀಪಮೂಡ ಗ್ರಾಮದ ಕಾಂತಾಡಿ ಗುತ್ತು ದಿ.ಐತಪ್ಪ ರೈ ಮತ್ತು ಬಾವಂತ ಕೋಡಿ ದಿ. ದೈಯಕ್ಕೂ ರೈ ಅವರ ಮೂರನೇ ಸುಪುತ್ರಿ, ಮಂಗಜೆ ದಿ.ರಘುನಾಥ ಶೆಟ್ಟಿಯವರ ಧರ್ಮಪತ್ನಿ ಶತಾಯುಷಿ ಬಾವಂತಕೋಡಿ ಲಕ್ಷ್ಮೀ ಆರ್. ಶೆಟ್ಟಿಯವರ ಜನ್ಮಶತಮಾನೋತ್ಸವವನ್ನು ಸಜೀಪಮೂಡ ಗ್ರಾಮದ ಕೊಯಮಜಲು ಮನೆಯಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು. ನೂರು ವರ್ಷವನ್ನು ಪೂರೈಹಿಸಿದ ಹಿನ್ನಲೆಯಲ್ಲಿ ಲಕ್ಷ್ಮಿ ಆರ್.ಶೆಟ್ಟಿಯವರ ಮಕ್ಕಳು, ಮರಿಮಕ್ಕಳು, ಅಳಿಯ, ಸೊಸೆಯಂದಿರು ಹಾಗೂ ಬಂಧು ಮಿತ್ರರು ಹುಟ್ಟು ಹಬ್ಬದ ಆಚರಣೆಯನ್ನು ಸಂಭ್ರಮಿಸಿದರು. ನೂರನೇ ಹುಟ್ಟುಹಬ್ಬ ಕಾರ್ಯಕ್ರಮದ ಅಂಗವಾಗಿ ಹಿಂದೂ ಸಂಸ್ಕೃತಿ ಮಂದಿರ ರಾಮ ಧಾಮ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಸುಭಾಷ್ ನಗರ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಮೃತ್ಯಂಜಯ ಶಾಂತಿ ಹೋಮ, ಪವಮಾನ ಹೋಮ ನಡೆಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ನೂರನೇ ಜನ್ಮ ದಿನವನ್ನು ಆಚರಿಸುತ್ತಿರುವ ಲಕ್ಷ್ಮೀ ಆರ್.ಶೆಟ್ಟಿಯವರನ್ನು ಶಾಲು, ಹಾರ ತೊಡಿಸಿ, ಫಲಪುಷ್ಪ ನೀಡಿ ಗೌರವಿಸಿದರು. ಈ ಸಂದರ್ಭ ಗಣ್ಯರಾದ ಕಾಂತಾಡಿ ಗುತ್ತು ಗಡಿ…
ಬಂಟ್ವಾಳ: ನಾವು ತಿನ್ನುವ ಆಹಾರವೇ ನಮ್ಮ ದೇಹಕ್ಕೆ ಔಷಧಿಕಾಗಿ ಪರಿವರ್ತನೆಯಾದರೆ ಪ್ರತ್ಯೇಕ ಔಷಧಿಯ ಅಗತ್ಯವಿಲ್ಲ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಪೌಷ್ಠಿಕ ಆಹಾರ ಸೇವನೆ ಅಗತ್ಯ. ಆ ಮೂಲಕ ಸ್ವಾಸ್ಥ್ಯ ವ್ಯಕ್ತಿಯಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್.ಭೂಮರಡ್ಡಿ ಹೇಳಿದರು. ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆದ ಕ್ಷಯ ರೋಗಿಗಳಿಗೆ ಆಹಾರ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕ್ಷಯ ರೋಗಿಗಳು ಪೌಷ್ಠಿಕ ಆಹಾರವನ್ನು ಹೆಚ್ಚು ಸೇವಿಸಿದಾಗ ಅವರು ರೋಗ ಮುಕ್ತರಾಗಿ ಉತ್ತಮ ಜೀವನ ನಡೆಸಲು ಸಾಧ್ಯವಿದೆ ಎಂದರು. ಪುದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಾ. ಸ್ಮೃತಿ ಯು., ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರಧಾನ ಮಂತ್ರಿಯವರ ಆಶಯದಂತೆ ನಿಕ್ಷಯ್ ಮಿತ್ರ ಯೋಜನೆಯಡಿ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರವನ್ನು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸೇವಾಂಜಲಿ ಸಂಸ್ಥೆ ನೀಡುತ್ತಿರುವುದು ಅಭಿನಂದನೀಯ. ಸ್ವಾರ್ಥ ರಹಿತ ಮನೋಭಾವದ…
ಬಂಟ್ವಾಳ: ಸಜೀಪ ಮುನ್ನೂರು ಗ್ರಾಮ.ಪಂ. ನಲ್ಲಿ ಶೂನ್ಯ ಕಸ ನಿರ್ವಹಣೆ ಸ್ವಚ್ಚ ಮನೆ ಸ್ವಯಂ ಘೋಷಣೆ ಮೂಲಕ ಕಸ ಮುಕ್ತ ಗ್ರಾಮ ನಿರ್ಮಾಣಕ್ಕೆ ಗ್ರಾಮ.ಪಂ. ಅಧಿಕಾರಿಗಳು ಹಾಗೂ ಝೇಂಕಾರ ಸಂಜೀವಿನಿ ಒಕ್ಕೂಟ ಸಂಕಲ್ಪ ಮಾಡಿದೆ. ಗ್ರಾ.ಪಂ. ಎನ್ ಆರ್ ಎಲ್ ಎಮ್ ತರಬೇತಿ ಕೇಂದ್ರ ದಲ್ಲಿ ಜನ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆದ ಶೂನ್ಯ ಕಸ ನಿರ್ವಹಣೆ ಮತ್ತು ಸ್ವಚ್ಚತೆಯ ವಿಶೇಷ, ಮಾಹಿತಿ ಮತ್ತು ಪ್ರೇರಣಾ ಕಾರ್ಯಕ್ರಮ ದಲ್ಲಿ ಭಾಗವಹಿದ್ದ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಪ್ಲಾಸ್ಟಿಕ್ ಮತ್ತು ಸ್ಯಾನಿಟರಿ ಪ್ಯಾಡ್ ತ್ಯಾಜ್ಯಗಳಿಂದ ಸೃಷ್ಟಿ ಯಾಗಿರವ ಬಯಲು ಕಸಾಲಯ , ಪ್ಲಾಸ್ಟಿಕ್ ಬೆಂಕಿ, ಪ್ಲಾಸ್ಟಿಕ್ ಮಾಲಿನ್ಯ ತಡೆದು ಸುಸ್ಥಿರ ಸ್ವಚ್ಛತೆ ಸಾಧಿಸಲು ಶೂನ್ಯ ಕಸ ನಿರ್ವಹಣೆ ಸ್ವಚ್ಛ ಮನೆ ಸ್ವಯಂ ಘೋಷಣೆ ಸುಸ್ಥಿರ ಪರಿಹಾರೋಪಾಯ ಆಗಿದೆ ಎಂದರು. ಹಸಿ ಕಸಗಳಿಂದ ಬಯೋ ಗ್ಯಾಸ್ ಅಳವಡಿಸಿ ಕೊಳ್ಳುವ ಕುಟುಂಬಗಳಿಗೆ ಪಂಚಾಯತಿ ವತಿಯಿಂದ ಸರ್ವ ಸಹಕಾರ ನೀಡುವುದಾಗಿ ಪಿಡಿಒ ಗೋಕುಲ್ ದಾಸ್ ಭಕ್ತ ತಿಳಿಸಿದರು.…
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಹೇಮಾವತಿ ವಿ. ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯ ತಾಲೂಕಿನ ಅಶಕ್ತರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ತಾಲೂಕಿನಲ್ಲಿ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿರುವ ಯೋಜನೆಯಿಂದ ಮಾಶಾಸನ ಪಡೆಯುವ 89 ಮಂದಿಗೆ ಹಣ್ಣು ಹಂಪಲು ವಿತರಿಸಲಾಯಿತು. ತಾಲೂಕಿನಲ್ಲಿ ಒಟ್ಟು 89 ಮಂದಿ ಅಶಕ್ತರನ್ನು ಗುರುತಿಸಿ ಪ್ರತಿ ತಿಂಗಳು ತಲಾ 1000 ದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಾಶಾಸನ ಒದಗಿಸಲಾಗುತ್ತಿದೆ. ಪೌಷ್ಟಿಕಾಂಶದ ಕೊರತೆ ಎದುರಿಸುತ್ತಿರುವ 4 ಮಂದಿಗೆ ವಾತ್ಸಲ್ಯ ಮಿಕ್ಸ್ ಪೌಷ್ಟಿಕಾಂಶ ಆಹಾರಗಳನ್ನು, 11 ಮಂದಿ ನಿರ್ಗತಿಕರಿಗೆ ದಿನ ನಿತ್ಯದ ಗೃಹ ಉಪಯೋಗಿ ಪರಿಕರಗಳ ಕಿಟ್ ನೀಡಲಾಗುತಿದೆ. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಜಯಾನಂದ ಪಿ, ತಾಲೂಕಿನ ಎಲ್ಲಾ ವಲಯ ಮೇಲ್ವಿಚಾರಕರು, ಕೃಷಿ ಅಧಿಕಾರಿ, ಸೇವಾ ಪ್ರತಿನಿಧಿಗಳು, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಒಕ್ಕೂಟಗಳ ಪದಾಧಿಕಾರಿಗಳು,…
ಬಂಟ್ವಾಳ: ದುರ್ಗೆ ನಮ್ಮೊಳಗಿನ ದುಃಖವನ್ನು ದೂರ ಮಾಡುವ ಶಕ್ತಿ. ಅಂತಹ ಜಗದಾಂಬಿಕೆಯ ಭವ್ಯವಾದ ಮಂದಿರ ಇಲ್ಲಿ ರೂಪುಗೊಂಡಿದೆ ಎಂದು ಬ್ರಹ್ಮಶ್ರೀ ಆನಂದ ಸಿದ್ದೀಪೀಠ ಮತ್ತು ಶ್ರೀ ಲಕ್ಷ್ಮೀ ಭೂವರಾಹ ಸ್ವಾಮೀ ಸಾಲಿಗ್ರಾಮ ಕ್ಷೇತ್ರದ ಸಂಸ್ಥಾಪಕ ಡಾ. ಮಹರ್ಷಿ ಆನಂದ ಗುರೂಜಿ ಹೇಳಿದರು. ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು-ದೇವಿನಗರಶ್ರೀ ಜಗದಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದ ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗುರುವಾರ ನಡೆದ ಸುಧರ್ಮ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಜನರ ಪ್ರೀತಿ ಸಿಗುತ್ತಿರುವುದು ನನ್ನ ಜೀವನದ ಪುಣ್ಯ. ಆ ಕಾರಣಕ್ಕಾಗಿ ಇನ್ನಷ್ಟು ಧರ್ಮಕಾರ್ಯಗಳನ್ನು ಮಾಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತಿರುತ್ತೇನೆ. ಪರಶುರಾಮ ಸೃಷ್ಟಿಯ ಕರಾವಳಿಯಲ್ಲಿ ನಿತ್ಯ ಧರ್ಮ ಕಾರ್ಯಗಳು ನಡೆಯುತ್ತಿರುವುದು ಅಭಿನಂದನೀಯ ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಅವರು ಮಾತನಾಡಿ, ಹಿಂದೂ ಸಮಾಜದ ಮೇಲೆ ಆಕ್ರಮಣಗಳಾದಾಗ ಅಗೋಚರವಾದ ದೈವೀ ಶಕ್ತಿ…
ಬಂಟ್ವಾಳ: ಬಿ.ಸಿ.ರೋಡ್‌ನ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಕಿಂಡರ್ಗಾರ್ಟನ್ ಪದವಿ ಪ್ರದಾನ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಶಾರದಾ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ನಾರಾಯಣ ಮೊಡಂಕಾಪು ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ತೇಜಸ್ವಿನಿ ಪೂಜಾರಿ, ಉಪಾಧ್ಯಕ್ಷರಾದ ಸುಂದರ್, ಕೋಶಾಧ್ಯಕ್ಷೆ ಜಯಶ್ರೀ, ಆಡಳಿತ ಮಂಡಳಿ ಸದಸ್ಯೆ ಆರತಿ ಅಮೀನ್ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಸಂಸ್ಥೆಗೆ ಸಹಕರಿಸಿದ ಪೋಷಕರು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿಗಳಿಂದ ಸಂಸ್ಥೆಗೆ ಸ್ಮಾರ್ಟ್ ಟಿವಿ ಕಾಣಿಕೆಯಾಗಿ ನೀಡಲಾಯಿತು. ಬಳಿಕ ರಕ್ಷಕ ಶಿಕ್ಷಕ ಸಂಘದ ವತಿಯಿಂದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿ, ಶಿಕ್ಷಕಿ ಚೈತ್ರ ಧನ್ಯವಾದ ಸಲ್ಲಿಸಿದರು.…
ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮಣಿ ಹಳ್ಳ ಇದರ ಹಿರಿಯ ಕಾರ್ಯಕರ್ತ ಸದಾನಂದ ಕುಲಾಲ್ ಅವರ ಮನೆಗೆ ಏಕಲವ್ಯ ಶಾಖೆಯ ನೇತೃತ್ವದಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿ ಧನ ಸಹಾಯವನ್ನು ನೀಡಲಾಯಿತು. ಈ ಸಂದರ್ಭ ಕೇಂದ್ರೀಯ ಮಂಡಳಿ ಗೌರವಾಧ್ಯಕ್ಷ ಭಾಸ್ಕರ ಚಂದ್ರ ಶೆಟ್ಟಿ, ಅಧ್ಯಕ್ಷ ಯಶೋಧರ ಚೌಟ, ಉದ್ಯಮಿ ರವಿಚಂದ್ರ ಬಂಟ್ವಾಳ, ಬಂಟ್ವಾಳ ತಾಲೂಕು ಅಧ್ಯಕ್ಷ ವಸಂತ್ ಕುಮಾರ್ ಮಣಿಹಳ್ಳ, ಏಕಲವ್ಯ ಶಾಖೆ ಅಧ್ಯಕ್ಷ ತಾರಾನಾಥ ಗೌಡ, ಕಾರ್ಯದರ್ಶಿ, ಮಾಜಿ ಅಧ್ಯಕ್ಷ ನವೀನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಲೋಕನಾಥ್, ರಿಕ್ಷಾ ಚಾಲಕರಾದ ರವಿಕುಮಾರ್ ಶ್ರೀನಿವಾಸ್, ಗಣೇಶ ಇದ್ದರು. ಈ ಸಂದರ್ಭದಲ್ಲಿ ಕೇಬಲ್ ಮಾಸಿಕ ಕಂತನ್ನು ಉಚಿತವಾಗಿ ನೀಡುವ ಭರವಸೆಯನ್ನು ರವಿಚಂದ್ರ ಬಂಟ್ವಾಳ ನೀಡಿದರು. Advertisement
ಬಂಟ್ಚಾಳ : ಇಲ್ಲಿನ ನಂದನಹಿತ್ಲು ಶ್ರೀ ವೈದ್ಯನಾಥ,ಅರಸು, ಜುಮಾದಿ ಬಂಟ ದೈವಸ್ಥಾನಕ್ಕೆ ಸಂಚರಿಸುವ ಮುಖ್ಯರಸ್ತೆ ಟೂರಿಸ್ಟ್ ಕಾರು ಪಾರ್ಕಿಂಗ್ ಬಳಿ ಹಿಂದೂ ಯುವ ಸೇನೆ ಬಂಟ್ವಾಳ ತಾಲೂಕು ಘಟಕ ಹಾಗೂ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ಮಹಾದ್ವಾರದ ಲೋಕಾರ್ಪಣೆಯು ಮಂಗಳವಾರ ನೆರವೇರಿಸಲಾಯಿತು. ದೈವಸ್ಥಾನದ ತಂತ್ರಿಗಳಾದ ಪೊಳಲಿ ಗಿರಿಪ್ರಕಾಶ್ ತಂತ್ರಿ ಮಹಾದ್ವಾರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಹಾದ್ವಾರಕ್ಕೆ ವಿಶೇಷ ಮಹತ್ವ ಇದೆ. ಧರ್ಮ ದೈವಗಳ ಕ್ಷೇತ್ರಕ್ಕೆ ಬರುವಾಗ ಅಧರ್ಮವನ್ನು ಮೆಟ್ಟಿ ಧರ್ಮದ್ವಾರದ ಮೂಲಕ ಬರಬೇಕು, ಸತ್ ಚಿಂತನೆಯಿಂದ ಹಿಂದೂ ಯುವ ಸೇನೆ ಇಲ್ಲಿ ದ್ವಾರ ನಿರ್ಮಿಸಿದೆ.ಇಲ್ಲಿಗೆ ಬರುವ ಭಕ್ತರ ಕಷ್ಟಗಳು ದೂರವಾಗಿ ಸುಖ ಸಂತೋಷ ಮೆರೆಯಲಿ ಎಂದು ಆಶಿಸಿದರು. ಹಿಂದೂ ಯುವ ಸೇನೆಯ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷ ಭಾಸ್ಕರಚಂದ್ರ ಶೆಟ್ಟಿ ಮಾತನಾಡಿ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಇಂತಹ ಅನೇಕ ಕೊಡುಗೆಗಳನ್ನು ಹಿಂದೂ ಯುವ ಸೇನೆ ನೀಡುತ್ತಾ ಬಂದಿದೆ.ಹಿಂದೂಗಳು ಸಂಘಟಿತರಾಗಬೇಕೆನ್ನುವುದೇ ಯುವ ಸೇನೆಯ ಆಶಯ ಎಂದರು. ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ…
ಬಂಟ್ವಾಳ: ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ವಿದ್ಯಾರ್ಥಿನಿ ವೀಕ್ಷಾ ವಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ತಿಪಟೂರಿನ ಕಲ್ಪತರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 21 ಕಿಮೀ ಹಾಫ್ ಮ್ಯಾರಥಾನ್‌ನಲ್ಲಿ ಬೆಳ್ಳಿ ಪದಕ ಮತ್ತು 10 ಕಿ.ಮೀ ಓಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ವೀಕ್ಷಾ ಅವರು ಮಂಜುಳಾ ಮತ್ತು ಬಂಟ್ವಾಳ ನಗರ ಠಾಣೆಯ ಎಎಸೈ ವಿಜಯಗೌಡ ಅವರ ಪುತ್ರಿ. .








