
ಬಂಟ್ವಾಳ: ಹೊಟೇಲ್ ಉದ್ಯಮದಲ್ಲಿ ತನ್ನದೇ ಆದ ಬ್ರಾಂಡ್ ಹೊಂದಿ ಗ್ರಾಹಕರ ಮನೆಮಾತಾಗಿರುವ ಹಂಝ ಬಸ್ತಿಕೋಡಿ ಮಾಲಕತ್ವದ ಆನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೇಲ್ ನ ಮಡಂತ್ಯಾರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿರುವ ಹೊಟೇಲ್ ಆನಿಯಾ ದರ್ಬಾರ್ ಹವಾನಿಯಂತ್ರಿತ ಮಲ್ಟಿ ಕ್ಯೂಸಿನ್ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಆಲಿಯಾ ಐಸ್ ಕ್ರೀಂ ಪಾರ್ಲರ್ ಗ್ರಾಹಕರ ಅನುಕೂಲಕ್ಕಾಗಿ ಪುನರ್ ನವೀಕರಣಗೊಂಡು ಶುಭಾರಂಭಗೊಂಡಿತು.
ಕಾಜೂರು ತಂಗಲ್ ಅವರು ದುವಾ ನೆರವೇರಿಸಿ ನವೀಕೃತ ಹಾಗೂ ಹವಾನಿಯಂತ್ರಿತ ಹೋಟೇಲ್ ಆನಿಯಾ ದರ್ಬಾರ್ ಅನ್ನು ಉದ್ಘಾಟಿಸಿದರು. ಅವರು ಮಾತನಾಡಿ ಎಲ್ಲಾ ಧರ್ಮದ ಜನರೊಂದಿಗೆ ಸೌಹಾರ್ದತೆಯಿಂದ ಬೆರೆಯುವ ಗುಣ ಹಂಝ ಬಸ್ತಿಕೋಡಿಯವರಲ್ಲಿರುವುದು ಅಭಿನಂದನೀಯ. ಗ್ರಾಹಕರ ಪ್ರೀತಿಗೆ ಪಾತ್ರತಾಗಿರುವ ಹಂಝ ಅವರ ಹೊಟೇಲ್ ಉದ್ಯಮ ಯಶಸ್ಸಿನತ್ತ ಸಾಗಲಿ ಎಂದು ಶುಭಹಾರೈಸಿದರು.



ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಆಲಿಯಾ ಐಸ್ ಕ್ರೀಂ ಪಾರ್ಲರ್ ಉದ್ಘಾಟಿಸಿದರು. ಅವರು ಮಾತನಾಡಿ ಎಲ್ಲಾ ಸಮುದಾಯದ ಜನರನ್ನು ಪ್ರೀತಿಸುವ ಗುಣ ಹಂಝ ಬಸ್ತಿಕೋಡಿಯವರಲ್ಲಿದೆ. ಎಲ್ಲಾ ಸಮುದಾಯದ ಅಶಕ್ತರಿಗೆ ಅವರು ತಮ್ಮಿಂದಾಗುವ ಸಹಾಯವನ್ಮು ಮಾಡುವುದು ಅವರ ಶ್ರೇಷ್ಢ ಗುಣ ಎಂದರು.
ಜಿ.ಪಂ. ಮಾಜಿ ಸದಸ್ಯ ಶಾಹುಲ್ ಹಮೀದ್ ಮಾತನಾಡಿ ಸದಾ ನಗುಮೊದಿಂದ ಕೂಡಿರುವ ಹಂಝ ಬಸ್ತಿಕೋಡಿಯವರ ಹೊಟೇಲ್ ಉದ್ಯಮ ಎಲ್ಲಾ ಕಡೆಗೂ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ಬಿರ್ವ ಸೆಂಟರ್ ಮಾಲಕ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಮಾತನಾಡಿ ಉತ್ತಮಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ನೀಡುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಆನಿಯಾ ದರ್ಬಾರ್ ನ ಗ್ರಾಹಕರಿರುವುದನ್ನು ಕಂಡಿದ್ದೇನೆ ಎಂದರು. ಪ್ರಮುಖರಾದ ಹನೀಫ್ ಹಾಜಿ ಗೋಳ್ತಮಜಲು, ರಶೀದ್ ವಿಟ್ಲ, ಗ್ರಾ.ಪಂ. ಅಧ್ಯಕ್ಷ ಪುನೀತ್ ಕುಮಾರ್, ಜಮೀಯತ್ತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ಅಬ್ಬಾಸ್ ಅಲಿ, ಇರಾ ಗ್ರಾ.ಪಂ. ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಮೊದಲಾದವರು ಶುಭ ಹಾರೈಸಿದರು.

ಇರ್ಷಾದ್ ದಾರಿಮಿ ಮಿತಬೈಲ್, ಬಂಟ್ವಾಳ್ ಟೌನ್ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಅನಂತ ಪದ್ಬನಾಭ, ವಕೀಲ ಅಶ್ವಿನಿ ಕುಮಾರ್ ರೈ , ಪುಂಜಾಲಕಟ್ಟೆ ಎಸೈ ರಾಜೇಶ್
ಎಂ. ಹೆಚ್. ಇಕ್ಬಾಲ್, ಅಬೂಬಕ್ಕರ್ ಪುತ್ತು, ಆರೀಫ್ ಪಡುಬಿದ್ರೆ, ಆಶಿಕ್ ಕುಕ್ಕಾಜೆ, ಯು ಕೆ ಮಹಮ್ಮದ್ ಹನೀಫ್ ಉಜಿರೆ, ಸುಜಹಾ ಮಹಮ್ಮದ್, ಜುಬೈರ್ , ಇಕ್ಬಾಲ್ ಪವರ್
ರಹೀಮ್ ಮಲ್ಲೂರು, ಮೋನಿಸ್ ಅಲಿ ಬಂಟ್ವಾಳ್, ಕಿಶೋರ್ ಶೆಟ್ಟಿ, ಹನೀಫ್ ಪುಂಜಾಲಕಟ್ಟೆ, ವಿಶ್ವನಾಥ್ ಶೆಟ್ಟಿ
ನಿಸಾರ್ ಕುದ್ರಡ್ಕ, ವಚನ್ ಶೆಟ್ಟಿ, ನಾಗೇಶ್ ಎಂ.,
ಅಬ್ದುಲ್ ರಹಿಮಾನ್ ಬಸ್ತಿಕೋಡಿ , ಡಾ.ಮುಸ್ತಫಾ ಬಸ್ತಿಕೋಡಿ, ಮೊಹಮ್ಮದ್ ಅಫ್ಸಾಲಿ ಬಸ್ತಿಕೋಡಿ
ಹಸೈನಾರ್ ಬಸ್ತಿಕೊಡಿ, ಯು ಕೆ ಶುಕೂರು ಉಜಿರೆ, ಹುಸೈನ್ ಬಿ.ಸಿ.ರೋಡು, ಮಹಮ್ಮದ್ ಸಾಗರ್, ರಜಾಕ್ ಸಾಗರ್
ಡಿ ಕೆ ಇಬ್ರಾಹಿಂ, ಅಬೂಬಕ್ಜರ್, ಕಾರ್ತಿಕ್, ಮುಸ್ತಾಫ ವಗ್ಗ
ಅನ್ವರ್ ಹುಸೈನ್ , ಪ್ರಕಾಶ್ ಆಳ್ವ , ರಮೇಶ್ ಶೆಟ್ಟಿ ಬಜೆ
ಚಂದ್ರ ಶೇಖರ್ ಶೆಟ್ಟಿ, ಸಹನಾ , ನವೀನ್ ಶೆಟ್ಟಿ ಅಜ್ಜಿಬೆಟ್ಟು
ಉದಯ ಕುಮಾರ್ ಕುಂಡೋಳಿ , ರಿಚರ್ಡ್ ಡಿ ಸೋಜ
ಮಂಜುನಾಥ್ ಬಾಳಿಗ, ಶ್ರೀಶ ಐತಾಳ್, ಕಿಶೋರ್ ಕುಮಾರ್
ನಾರಾಯಣ ಪೆರ್ನೆ , ಇಬ್ರಾಹಿಂ ಉಮೈ ಮತ್ತಿತರರು ಭಾಗವಹಿಸಿ ಶುಭ ಕೋರಿದರು.
ಆನಿಯಾ ದರ್ಬಾರ್ ಗ್ರೂಪ್ ಆಫ್ ಹೋಟೇಲ್ ಮಾಲಕ ಹಂಝ ಬಸ್ತಿಕೋಡಿ ಸ್ವಾಗತಿಸಿದರು.
Advertisement







