Author: admin
ಬಂಟ್ವಾಳ: ಗ್ರಾಮ ಪಂಚಾಯತ್ ನಲ್ಲಿರುವ ಮಳೆಮಾಪನ ಕೇಂದ್ರಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲು ಸಿದ್ದಕಟ್ಟೆ ಪಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ. ಅಧ್ಯಕ್ಷ ಪ್ರಭಾಕರ ಪ್ರಭು ತೋಟಗಾರಿಕಾ ಸಚಿವರಿಗೆ ಮನವಿ ಮಾಡಿದ್ದಾರೆ 2024-25 ನೇ ಸಾಲಿಗೆ ಸಂಬಂಧಿಸಿದಂತೆ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಪ್ರೀಮಿಯಂ ಪಾವತಿಸಿದ ರೈತರಿಗೆ ಬಿಡುಗಡೆಯಾದ ಪರಿಹಾರದಲ್ಲಿ ತುಂಬಾ ಗೊಂದಲಗಳು ಆಗಿರುತ್ತವೆ . ಈ ಬಗ್ಗೆ ತೋಟಾಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಟೆಂಡರ್ ವಹಿಸಿದ ಎಜೆನ್ಸಿಗಳಲ್ಲಿ ವಿಚಾರಿಸಿದಾಗ ಮಳೆ ಮಾಪನ ಕೇಂದ್ರಗಳಲ್ಲಿ ಬಿದ್ದಿರುವ ಮಳೆಯ ಪ್ರಮಾಣದಲ್ಲಿ ಪರಿಹಾರ ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿರುತ್ತಾರೆ . ಆದರೆ ಹೆಚ್ಚಿನ ಗ್ರಾಮ ಪಂಚಾಯತ್ ಗಳಲ್ಲಿರುವ ಮಳೆ ಮಾಪನ ಕೇಂದ್ರಗಳು ಚಲಾವಣೆ ಇಲ್ಲದೇ ದುಸ್ಥಿತಿಯಲ್ಲಿ ಇರುವುದಾಗಿ ತಿಳಿದು ಬಂದಿದೆ . ಇದರಿಂದಾಗಿ ಕರಾವಳಿಯ ಕೆಲವೊಂದು ತಾಲೂಕುಗಳಲ್ಲಿ ರೈತರು ಪಾವತಿಸಿದ ಪ್ರೀಮಿಯಂಗಿಂತಲೂ ಕಡಿಮೆ ಪರಿಹಾರ ದೊರೆತ್ತಿದೆ . ಇದರಿಂದ ಸಾವಿರಾರು ರೈತರಿಗೆ ಸಮರ್ಪಕ ಪರಿಹಾರ ದೊರಕದೇ ರೈತರು ಸರಕಾರದ ಅಸಮರ್ಪಕ ಧೋರಣೆಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಹಾಗೂ…
ಬಂಟ್ವಾಳ ಫೆ.28 ರ ಶನಿವಾರ ಬಿ.ಸಿ.ರೋಡಿನ ಅಲೆತ್ತೂರಿನಲ್ಲಿ ಮಂಗಳ ಫ್ರೆಂಡ್ಸ್ ಸರ್ಕಲ್ (ರಿ) ಇದರ 27 ನೇ ವರ್ಷದ ಸಾರ್ವಜನಿಕ ಶನೈಶ್ಚರ ಪೂಜೆ ಹಾಗೂ 44 ನೇ ವರ್ಷದ ವಾರ್ಷಿಕೋತ್ಸವ ನಡೆಯಲಿರುವುದು. ಸಂಜೆ ಗಂಟೆ 5.30ರಿಂದ ಶನಿಪೂಜೆ ಪ್ರಾರಂಭ ರಾತ್ರಿ ಗಂಟೆ 7.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ರಾತ್ರಿ ಗಂಟೆ 8.00 ಕ್ಕೆ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 8.30 ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಹಾಗೂ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 10.00 ರಿಂದ ಅಮ್ಮ ಕಲಾವಿದರು ಕುಡ್ಲ ಇವರಿಂದ ತುಳು ಹಾಸ್ಯಮಯ ನಾಟಕ ಆನ್ ಮಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಟ್ರಾಫಿಕ್ ವಾರ್ಡನ್ ಆಗಿ ಚಿರಪರಿಚಿತರಾಗಿದ್ದ ಡ್ರೈವಿಂಗ್ ತರಬೇತುದಾರ ಅಬ್ದುಲ್ ರಹಿಮಾನ್ ಪಟೇಲ್ (65) ಅಸೌಖ್ಯದಿಂದ ಬುಧವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೆಲವು ವರ್ಷಗಳ ಕಾಲ ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದ ಇವರು ಊರಿಗೆ ಮರಳಿದ ಬಳಿಕ ಬಿ.ಸಿ.ರೋಡಿನ ಡ್ರೈವಿಂಗ್ ಸಂಸ್ಥೆಯಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ಬಿಡುವಿನ ವೇಳೆಯಲ್ಲಿ ಬಿ.ಸಿ.ರೋಡು, ಕೈಕಂಬ ಪರಿಸರದಲ್ಲಿ ಟ್ರಾಫಿಕ್ ವಾರ್ಡನ್ ಸೇವೆ ನೀಡುತ್ತಿದ್ದರು. ಇವರ ಈ ಸೇವಾಕಾರ್ಯ ಸಾರ್ವಜನಿಕ ಕ್ಷೇತ್ರದಲ್ಲಿ ಮೆಚ್ಚುಗೆಗೆ ಪಾತ್ರವಾಗುವುದರ ಜೊತೆಗೆ ಆ ಸಮಯದಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದ ಟ್ರಾಫಿಕ್ ಪೊಲೀಸರಿಗೆ ವರದಾನವಾಗಿತ್ತು. ಬಳಿಕ ಅನಾರೋಗ್ಯಕ್ಕೆ ತುತ್ತಾದ ಅವರು ಪರ್ಲಿಯಾ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅಬ್ದುಲ್ ರಹಿಮಾನ್ ಪಟೇಲ್ ಅವರ ಸೇವಾ ಕಾರ್ಯಕ್ಕೆ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದ್ದವು.
ಬಂಟ್ವಾಳ: ಮೂರ್ತೆದಾರರ ಸೇವಾ ಸಹಕಾರ ಸಂಘ ನಿ. ಶಂಭೂರು ಇದರ 2026-2031ನೇ ಸಾಲಿಗೆ ಅಧ್ಯಕ್ಷರಾಗಿ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಹಾಗೂ ಉಪಾಧ್ಯಕ್ಷರಾಗಿ ಮಾಧವ ಪೂಜಾರಿ ಕರ್ಬೆಟ್ಟು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ ಈ ಆಯ್ಕೆ ಪ್ರಕಿಯೆ ನಡೆದಿದ್ದು ನಿರ್ದೇಶಕರಾಗಿ ಮೋನಪ್ಪ ಪೂಜಾರಿ ಬೊಂಡಾಲ, ಗೋಪಾಲ ಸುವರ್ಣ ಬಿ.ಸಿ.ರೋಡು, ಕೃಷ್ಣಪ್ಪ ಪೂಜಾರಿ ಬಾಳ್ತಿಲ, ಶ್ರೀಶ ಆರ್. ರಾಯಸ ನರಿಕೊಂಬು, ಅಶೋಕ್ ಆರ್. ಶಂಭೂರು, ರಾಜೇಶ್ ಶೇಡಿಗುರಿ, ನಾರಾಯಣ ಪೂಜಾರಿ ಕೇದಿಗೆ, ಸುಮತಿ ಮೋನಪ್ಪ ಪೂಜಾರಿ, ವೇದಾವತಿ ಸುರೇಶ್ ಪೂಜಾರಿ ಅವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.
ಬಂಟ್ವಾಳ: ಇಲ್ಲಿನ ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ ಮಾರ್ಚ್ 7ರಂದು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲು ಗ್ರಾಮದಲ್ಲಿ ಬಂಟ್ವಾಳ ಕಂಬಳ ನಡೆಯಲಿದ್ದು, ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮಿಸಲಿದ್ದಾರೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಗುರುವಾರ ಕಂಬಳದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು ಈ ಬಾರಿ ಕಂಬಳದಲ್ಲಿ ಆಹಾರ ಮೇಳ ವಿಶೇಷತೆಗಳಲ್ಲಿ ಒಂದಾಗಿದ್ದು, ಪಾರ್ಕಿಂಗ್ ಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ರಸ್ತೆಯನ್ನು ಸಮೀಪ ನಿರ್ಮಿಸಲಾಗಿದ್ದು, ವಾಹನಗಳ ಓಡಾಟಕ್ಕೆ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಹಲವು ವರ್ಷಗಳಿಂದ ಈ ಕಂಬಳ ತನ್ನ ವಿಶೇಷತೆಗಳಿಂದ ಪ್ರಸಿದ್ಧಿ ಪಡೆದಿದ್ದು, ಚಿತ್ರತಾರೆಯರ ಸಹಿತ ಗಣ್ಯರು ವೀಕ್ಷಿಸಿದ್ದಾರೆ ಎಂದರು. ಬೆಳಗ್ಗೆ 8.45ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಸೋಲೂರು ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಡಾ. ಸಂತೋಷ್ ಗುರೂಜಿ, ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ, ಅಲ್ಲಿಪಾದೆ ಚರ್ಚ್ ಧರ್ಮಗುರು…
ಬಂಟ್ವಾಳ: ಒಗ್ಗಟ್ಟು ನಮ್ಮೆಲ್ಲರ ಶಕ್ತಿ. ಸಾಮರಸ್ಯದ ಮೂಲಕ ಜೀವನ ಹಾಗೂ ಸಮಾಜವನ್ನು ಮುನ್ನಡೆಸುವ ಜವಬ್ದಾರಿ ನಮ್ಮೆಲ್ಲರದ್ದಾಗಬೇಕು. ಭಿನ್ನಾಭಿಪ್ರಾಯವನ್ನು ಸಕರಾತ್ಮಕವಾಗಿ ಸ್ವೀಕರಿಸಿಕೊಂಡು ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಭವಿಷ್ಯದ ಸಮಾಜಕ್ಕೆ ಪ್ರತಿಯೊಬ್ಬರು ಕಟಿ ಬದ್ಧರಾಗಬೇಕು ಎಂದು ರಾಜ್ಯ ವಿಧಾನಸಭಾದ್ಯಕ್ಷ ಡಾ. ಯು.ಟಿ.ಖಾದರ್ ಹೇಳಿದರು. ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಇದರ ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಸಜೀಪಮೂಡ ಗ್ರಾಮದ ಸುಭಾಷ್ ನಗರದಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು. ಕುಲ ಕಸುಬುದಾರರಿಗೆ ಸ್ವಾಭಿಮಾನ ನೀಡಬೇಕೆನ್ನುವ ಉದ್ದೇಶ ಈ ಸಹಕಾರಿ ಸಂಘದ ಮೂಲಕ ಈಡೇರಿದೆ. ಪ್ರಸ್ತುತ ಸರ್ವರಿಗೂ ಸೇವೆ ನೀಡುವ ಸಹಕಾರಿ ಸಂಘವಾಗಿ ಪರಿವರ್ತನೆಯಾಗಿದೆ ಎಂದು ತಿಳಿಸಿದರು. ಸಹಕಾರಿ ಕ್ಷೇತ್ರ ದೊಡ್ಡ ಮಟ್ಟದ ಕೊಡುಗೆಯನ್ನು ದೇಶಕ್ಕೆ ನೀಡುತ್ತಿದೆ. ಸಹಕಾರ ಸಂಘಗಳು ಜನರ ವಿಶ್ವಸಾದೊಂದಿಗೆ ವ್ಯವಹಾರ ಮಾಡುತ್ತಿದೆ. ಇಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ ನಿಯಮಕ್ಕೆ ಅನುಗುಣವಾಗಿ ಅನುದಾನವನ್ನು ಸರಕಾರದಿಂದ ಒದಗಿಸಿಕೊಡುವುದಾಗಿ ಅವರು ಭರವಸೆ ನೀಡಿದರು. ಮಾಜಿ ಸಚಿವ ಬಿ. ರಮಾನಾಥ ರೈ ಕೇಂದ್ರ…
ಬಂಟ್ವಾಳ: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಾ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರಾದ ಸಮಾಜ ಸೇವಾ ರತ್ನ ಡಾ| ಅಮ್ಮೆಂಬಳ ಬಾಳಪ್ಪರವರ ಜನ್ಮದಿನದ ಪ್ರಯುಕ್ತ ಭಾನುವಾರ ಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಸಮಾಜ ಸೇವಾ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಮಾಜ ಸಹಕಾರಿ ಭವನದ ಡಾ। ಬಾಳಪ್ಪ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು. ಸ್ಥಾಪಕರ ದಿನಾಚರಣೆಯ ಪ್ರಯುಕ್ತ ಉನ್ನತ ಶಿಕ್ಷಣ ಪಡೆಯುತ್ತಿರುವ ಸಂಘದ 204 ಸದಸ್ಯರ ಮಕ್ಕಳಿಗೆ ಸಂಘದ ವಿದ್ಯಾನಿಧಿಯಿಂದ ಒಟ್ಟು ರೂ.8,80,000 ವಿದ್ಯಾರ್ಥಿವೇತನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ಸಂಘದ ಐ.ಎಫ್.ಎಸ್.ಸಿ ಕೋಡ್ ಮತ್ತು ಸಂಘದ ಸದಸ್ಯರ ಖಾತೆಗೆ ಯುಪಿಐ, ಐಎಂಪಿ ಮತ್ತು ನೆಫ್ಟ್ ಮೂಲಕ ನೇರವಾಗಿ ಜಮೆ ಮಾಡುವ ಇ-ಕಲೆಕ್ಷನ್ ಸೌಲಭ್ಯವನ್ನು ಬಿಡುಗಡೆ ಮಾಡಲಾಯಿತು. ಈ ಮೂಲಕ ಬಂಟ್ವಾಳ ತಾಲೂಕಿನಲ್ಲಿ ಐ.ಎಫ್.ಎಸ್.ಸಿ ಕೋಡ್ ಹೊಂದಿರುವ ಮೊದಲ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐ.ಸಿ.ಐ.ಸಿ.ಐ. ಬ್ಯಾಂಕ್ ರೀಜನಲ್ ಹೆಡ್…
ಬಂಟ್ವಾಳ: ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿಯಿಂದ ಪೊಸಳ್ಳಿ, ದೈಪಲ, ಕಾಮಾಜೆ, ಕುಲಾಲರ ಮಠ ಸಂಪರ್ಕ ರಸ್ತೆಗೆ ಸ್ವಾತಂತ್ರ್ಯ ಯೋಧ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ ನಾಮಕರಣ ಕಾರ್ಯಕ್ರಮ ಅವರ 104 ನೇ ಜನ್ಮದಿನದ ಅಂಗವಾಗಿ ಸೋಮವಾರ ನಡೆದಿದ್ದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನಾಮಫಲಕ ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು ರಸ್ತೆಗೆ ಬಾಳಪ್ಪರ ಹೆಸರು ಇಟ್ಟ ತಕ್ಷಣ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಬದಲಾಗಿ ರಸ್ತೆಯನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಿ ಸುಂದರೀಕರಣಗೊಳಿಸಿದಾಗ ಮಾತ್ರ ನಾಮಕರಣ ಮಾಡಿರುವುದು ಅರ್ಥಪೂರ್ಣವಾಗುತ್ತದೆ. ತನ್ನ ಶಾಸಕರ ನಿಧಿಯಿಂದ ರಸ್ತೆ ಅಭಿವೃದ್ದಿಗೆ ಅನುದಾನ ಒದಗಿಸುವುದಾಗಿ ತಿಳಿಸಿದ ರಾಜೇಶ್ ನಾಯ್ಕ್ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುಂದರಗೊಳಿಸುವಂತೆ ತಿಳಿಸಿದರು. ಬಿಎಸ್ ಎಫ್ ನಿವೃತ್ತ ಕಮಾಂಡರ್ ಚಂದಪ್ಪ ಮೂಲ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಅಮ್ಮೆಂಬಳ ಬಾಳಪ್ಪ ಅವರ ಹೆಸರು ಚಿರಸ್ಥಾಯಗೊಳಿಸುವ ನಿಟ್ಟಿನಲ್ಲಿ ಶಾಶ್ವತವಾದ ಕೆಲಸ ಆಗಬೇಕಿದ್ದು ಪ್ರಸ್ತುತ ದಿನಗಳಲ್ಲಿ ಹಂತಹಂತವಾಗಿ ನಡೆಯುತ್ತಿದೆ.…
ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯತಿ ಮಟ್ಟದ ಅರುಂಧತಿ ಸಂಜೀವಿನಿ ಒಕ್ಕೂಟ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಆಶ್ರಯದಲ್ಲಿ ಒಕ್ಕೂಟದ ೨೫ ಸದಸ್ಯರಿಗೆ ನೀಡಲಾದ ತರಬೇತಿಯ ಸಮಾರೋಪ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷೆ ವಿದ್ಯಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನರಿಕೊಂಬು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣನಾಯ್ಕ್, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿರಾಜ್, ಸಂಪನ್ಮೂಲ ವ್ಯಕ್ತಿ ಅಂಜನಾ ಪ್ರಭಾಕರ್, ಸಂಜೀವಿನಿ ಅಭಿಯಾನ ಘಟಕದ ವಲಯ ಮೇಲ್ವಿಚಾರಕಿ ಕುಸುಮ ಹಾಗೂ ಕಸೂತಿ ತರಬೇತಿ ಪಡೆದ 25 ಮಂದಿ ಸದಸ್ಯರು ಉಪಸ್ಥಿತರಿದ್ದರು. ಅಶ್ವಿನಿ ಸ್ವಾಗತಿಸಿದರು. ತನುಜಾ ವಂದಿಸಿದರು. ಅನಿತಾ ನಿರೂಪಿಸಿದರು ತರಬೇತಿ ಪಡೆದ ಸದಸ್ಯರು ತಾವು ಸಿದ್ದಪಡಿಸಿದ ಉಡುಪುಗಳ ಪ್ರದರ್ಶನವನ್ನು ಏರ್ಪಡಿಸಿದರು.
ಬಂಟ್ವಾಳ: ದ.ಕ. ಜಿಲ್ಲಾ ಕೆಂದ್ರ ಸಹಕಾರಿ ಬ್ಯಾಂಕ್ ನಿ., ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಳ ಬಿ.ಸಿ.ರೋಡು, ಸಹಕಾರ ಇಲಾಖೆ ದ.ಕ. ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲೆಯ ಪತ್ತಿನ, ಮೂರ್ತೆದಾರರ ಮತ್ತು ಇತರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಬಿ.ಸಿ.ರೋಡಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಯಿತು. ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಳ ನಿ. ದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಕಾನೂನುಗಳು ಬದಲಾಗುತ್ತಿದ್ದಂಯೇ ಸಹಕಾರಿ ಕ್ಷೇತ್ರದಲ್ಲಿ ಅನೇಕ ಸವಾಲುಗಳು ಸಿಬ್ಬಂದಿಗಳಿಗೆ ಎದುರಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾನೂನು ಅರಿವು ಮೂಡಿಸುವುದರ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ವ್ಯವಹಾರ ಮಾಡಲು ಇಂತಹ ತರಬೇತಿ ಸಹಕಾರಿಯಾಗಲಿದೆ. ಸಹಕಾರಿ ಯೂನಿಯನ್ ನಿರ್ದೇಶಕನಾದ ಬಳಿಕ ಸಹಕಾರಿ ಸಂಘದ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಹಮ್ಮಿಕೊಳ್ಳಬೇಕೆಂಬ ಬೇಡಿಕೆಗೆ ಸಹಕಾರಿ ಯೂನಿಯನ್…








