
ಬಂಟ್ವಾಳ: ಜೆಸಿಐ ಬಂಟ್ವಾಳ ಇದರ ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಸಭಾಭವನದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ನಿರ್ಗಮನ ಅಧ್ಯಕ್ಷ ಗಣೇಶ್ ಕುಲಾಲ್ ಮಾತನಾಡಿ 2025ನೇ ಸಾಲಿನಲ್ಲಿ ತನ್ಮಿಂದ ಸಾಧ್ಯವಾಗುಷ್ಟು ಕಾರ್ಯಗಳನ್ನು ಮಾಡಿದ್ದು ಆತ್ಮತೃಪ್ತಿ ಇದೆ ಎಂದರು.


ನೂತನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ನಿರ್ಗಮನ ಅಧ್ಯಕ್ಷ ಗಣೇಶ್ ಕುಲಾಲ್ ಅವರಿಂದ ಅಧಿಕಾರ ಸ್ವೀಕರಿಸಿದರು. ದೀಪ ಪ್ರಜ್ವಲಿಸುವ ಮೂಲಕ ಅತಿಥಿಗಳು ನೂತನ ತಂಡವನ್ನು ಉದ್ಘಾಟಿಸಿದರು.
2026ನೇ ಸಾಲಿನ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಆಶಯ ಭಾಷಣ ಮಾಡಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕನಸು ಇದ್ದು ಇದನ್ನು ನನಸು ಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ನೂತನ ಪದಾಧಿಕಾರಿಗಳಿಗೆ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಪ್ರತಿಜ್ಞಾವಿಧಿ ಭೋದಿಸಿದರು. ಕಾರ್ಯದರ್ಶಿಯಾಗಿ ಕಿರಣ್ ಬಂಟ್ವಾಳ, ಕೋಶಾಧಿಕಾರಿಯಾಗಿ ಶಿವರಾಮ ಮರ್ತಾಜೆ, ಲೇಡಿ ಜೇಸಿ ಸಂಯೋಜಕಿಯಾಗಿ ಅನುಷಾ ಕಿಶೋರ್ ಹಾಗೂ ಉಪಾದ್ಯಕ್ಷರು ಅಧಿಕಾರ ಸ್ವೀಕರಿಸಿದರು. 4 ಮಂದಿ ಹೊಸ ಸದಸ್ಯರು ಘಟಕಕ್ಕೆ ಸೇರ್ಪಡೆಯಾಗಿದ್ದು ವಲಯಾಧ್ಯಕ್ಷ ಸಂತೋಷ ಶೆಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಸಾಧನೆ ಮಾಡಬೇಕು. ಬರುವ ಅಡೆತಡೆಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು. ಬದುಕಿನಲ್ಲಿ ಬರುವ ಸೋಲು ಗೆಲುವುಗಳನ್ನು ಸಮಾನಾವಾಗಿ ಸ್ವೀಕರಿಸಿಕೊಂಡು , ಹೂದೋಟದಲ್ಲಿ ಅನೇಕ ಹೂಗಳಿದ್ದರೂ ಪರಿಮಳ ಬೀರುವ ಹೂವುಗಳು ನಾವಾಗಬೇಕು ಎಂದರು.
ಮುಖ್ಯ ಅತಿಥಿ ಜೆಸಿಐ ವಲಯ 15 ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಮುನ್ನಡೆದಾಗ ಯಶಸ್ವಿ ನಾಯಕನಾಗಿ ಹೊರ ಹೊಮ್ಮಲು ಸಾಧ್ಯವಿದೆ. ಸಮಾಜದ ಯುವಕ ಯುವತಿಯರಿಗೆ ವ್ಯಕ್ತಿತ್ವ ವಿಕಸನ ಮಾಡುವ ಕಾರ್ಯ ಜೆಸಿಐ ಬಂಟ್ವಾಳದಿಂದ ಆಗಲಿ ಎಂದರು. ಅತಿಥಿ ಕೊಡಂಗೆ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಗೀತಾ ಮಾತನಾಡಿ ನಮ್ಮ ಬದುಕಿಗೆ ಏಣಿಯಾಗುವವರನ್ನು ಯಾವತ್ತೂ ಮರೆಯಬಾರದು. ಸರಿಯಾದ ಹಾಗೂ ಉತ್ಸಹ ಪೂರಿತ ಕೆಲಸದಿಂದ ಲೋಕದಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದು ಇಲ್ಲ ಎಂದು ತಿಳಿಸಿದರು. ಪ್ರಾಂತ್ಯ ಡಿ ಫಲ್ಗುಣಿಯ ವಲಯ ಉಪಾಧ್ಯಕ್ಷ ಕಾಶೀನಾಥ್ ಗೋಗಟೆ ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರಾದ ಸದಾನಂದ ಬಂಗೇರ, ಸಂದೀಪ್ ಸಾಲ್ಯಾನ್, ನಿಕಟಪೂರ್ವಾಧ್ಯಕ್ಷೆ ರಶ್ಮಿ ಶೆಟ್ಟಿ ಅವರನ್ನು ಗೌರವಿಸಲಾಯಿತು. ನಿರ್ಗಮನ ಕೋಶಾಧಿಕಾರಿ ಜೀವಿತಾ ಯತೀಶ್, ಲೇಡಿ ಜೆಸಿ ಸಂಯೋಜಕಿ ಬಬಿತಾ, ವೇದಿಕೆಯಲಿದ್ದರು. ನೂತನ ಕಾರ್ಯದರ್ಶಿ ಕಿರಣ್ ಬಂಟ್ವಾಳ್ ವಂದಿಸಿದರು.
Advertisement







