
ಬಂಟ್ವಾಳ: ಮನುಷ್ಯನ ಆರೋಗ್ಯಪೂರ್ಣ ಜೀವನಕ್ಕೆ ಸ್ವಚ್ಚ ಗಾಳಿ, ಶುದ್ಧ ನೀರು ಹಾಗೂ ಸಮತೋಲಿತ ಆಹಾರ ಅತ್ಯಂತ ಅವಶ್ಯಕ. ಕ್ಷಯ ಪ್ರಾಚೀನ ಕಾಯಿಲೆಯಾಗಿದ್ದು ರೋಗ ಸಂಪೂರ್ಣ ಗುಣಪಡಿಸಲು ನಿಯಮಿತ ಔಷಧಿಯ ಜೊತೆಗೆ ಸಮತೋಲಿತ ಆಹಾರ ಸೇವನೆಯೂ ಅತೀ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.
ಡಾ. ಎಚ್. ಆರ್ ತಿಮ್ಮಯ್ಯ ಹೇಳಿದರು.


ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ದವಸಧಾನ್ಯ , ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು. ಶ್ರೀಮಂತಿಕೆ ಇದ್ದರೆ ಸಾಲದು ಹೃದಯ ಶ್ರೀಮಂತಿಕೆಯೂ ಬೇಕು. ಅಂತಹ ಹೃದಯ ಶ್ರೀಮಂತಿಕೆ ಕೃಷ್ಣ ಕುಮಾರ್ ಪೂಂಜ ಅವರಲ್ಲಿದೆ. ಸೇವಾಂಜಲಿಯ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ, ಆರೋಗ್ಯ ಇಲಾಖೆಯಿಂದ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸಿದರು.


ನಿವೃತ್ತ ಅಬಕಾರಿ ಅಧಿಕಾರಿ ಎಂ.ಆರ್.ನಾಯರ್ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕೃಷ್ಣ ಕುಮಾರ್ ಪೂಂಜ ಅವರ ಸೇವಾಕಾರ್ಯಕ್ಕೆ ಮನಸೋತು ಅವರೊಂದಿಗೆ ನಾವೂ ಕೈಜೋಡಿಸಿದ್ದೇವೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಡೇವಿಡ್ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿದರು. ಸೇವಾಂಜಲಿ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಸೇವಾಂಜಲಿಯಿಂದ ನೀಡುವ ಪೌಷ್ಟಿಕಾಹಾರವನ್ನು ರೋಗಿಗಳೇ ಸೇವಿಸಿ ಆರೋಗ್ಯವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಸೇವಾಂಜಲಿಯ ಟ್ರಸ್ಟಿ ಪ್ರಕಾಶ್ ಕಿದೆಬೆಟ್ಟು, ಆರೋಗ್ಯ ಇಲಾಖೆಯ ಕೃಷ್ಣಮೂರ್ತಿ, ಸೇವಾಂಜಲಿಯ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ರೀಮಾ ಉಪಸ್ಥಿತರಿದ್ದರು.
ಪ್ರಮುಖರಾದ ನಾರಾಯಣ ಬಡ್ಡೂರು, ಪದ್ಮನಾಭ ಶೆಟ್ಟಿ ಪುಂಚಮೆ, ಪದನಾಭ ಕಿದೆಬೆಟ್ಟು,, ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ, ಪ್ರಕಾಶ್ ಬಾಬು, ಮೋಹನ್ ಬೆಂಜನಪದವು, ಸಾರಮ್ಮ ಉಪಸ್ಥಿತರಿದ್ದರು. ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು.
Advertisement







