Author: admin
ಸ್ಕೂಟರ್ ಗೆ ಬಸ್ಸು ಡಿಕ್ಕಿ, ಸವಾರ ಸಾವು ಬಂಟ್ವಾಳ : ಕೆ.ಎಸ್.ಆರ್.ಟಿ.ಸಿ.ಬಸ್ ಸ್ಕೂಟರ್ ಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.ಭಂಡಾರಿಬೆಟ್ಟು ನಿವಾಸಿ ಡೊಂಬಯ್ಯ ಮೂಲ್ಯ ಮೃತಪಟ್ಟ ವ್ಯಕ್ತಿ. ಡೊಂಬಯ್ಯ ಮೂಲ್ಯ ಮೃತಪಟ್ಟ ವ್ಯಕ್ತಿ. ಅವರು ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಜಕ್ರಿಬೆಟ್ಟು ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಧರ್ಮಸ್ಥಳ ಕಡೆಯಿಂದ ಬರುತ್ತಿದ್ದ ಸರಕಾರಿ ಬಸ್ ಹಿಂಬದಿಯಿಂದ ಸ್ಕೂಟರ್ ಗೆ ಡಿಕ್ಕಿಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.ಡೊಂಬಯ್ಯ ಅವರು ಅವರ ಸಂಬಂಧಿಕರ ಮನೆಯಲ್ಲಿ ಸಂಕ್ರಮಣದ ದಿನದಂದು ದೈವದ ಕೆಲಸಕ್ಕೆ ಹೂ ತರಲೆಂದು ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಡೊಂಬಯ್ಯ ಅವರು ಬಿ.ಸಿ.ರೋಡಿನಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ಅನೇಕ ವರ್ಷಗಳಿಂದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಾಲಕನ ಅಜಾಗಕರೂಕತೆಯ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಅಪಘಾತ ಸಂಭವಿಸಿದ ಕೂಡಲೇ ಬಸ್ ಚಾಲಕ ಬಸ್ ಪರಾರಿಯಾಗಿದ್ದಾನೆ ಎಂದು…
ಎ.16: ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 4 ರ ಪ್ರದರ್ಶನ ಬಂಟ್ವಾಳ: ಜಿಲ್ಲೆಯ ಪ್ರತಿಷ್ಠಿತ ಸುದ್ದಿವಾಹಿನಿ ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಸನ್ ಪ್ರೀಮಿಯಮ್ ರಿಫೈಂಡ್ ಸನ್ ಫ್ಲವರ್ ಆಯಿಲ್ ಪ್ರೆಸೆಂಟ್ಸ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ -4ರ ಎರಡನೇ ಸುತ್ತಿನ ಫರ್ಪಾಮೆನ್ಸ್ ಎ.16ರಂದು ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನದ ಬಳಿಯ ಸ್ಪರ್ಶಾ ಕಲಾ ಮಂದಿರರದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ ಜೈನ್ ಹೇಳಿದರು.ಸ್ಪರ್ಶಾ ಕಲಾಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿಆ ದಿನ ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿ.ಎನ್.ಆರ್ ಗೋಲ್ಡ್ ಬಂಟ್ವಾಳ ಇದರ ಮಾಲಕ, ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ, ಸಿದ್ಧಕಟ್ಟೆಯ ಅನಂತ ಪದ್ಮ ಹೆಲ್ತ್ ಸೆಂಟರ್‌ನ ಡಾ. ಸುದೀಪ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಅಖಿಲ ಭಾರತ ತುಳುಕೂಟದ ಬಂಟ್ವಾಳದ ಅಧ್ಯಕ್ಷ ಎ.ಸಿ. ಭಂಡಾರಿ, ರಾಜ್ಯ…
ಎ.15: ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ನಾಮಪತ್ ಬಂಟ್ವಾಳ: ಏಪ್ರಿಲ್ 15ರಂದು ಪೊಳಲಿಯಿಂದ ಪಾದಯಾತ್ರೆ ಮೂಲಕ ಬಂಟ್ವಾಳ ಚುನಾವಣಾ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ರಾಜೇಶ್ ನಾಯ್ಕ್ ಹೇಳಿದರು.ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪಕ್ಷ ನನ್ನನ್ನು ಮೂರನೇ ಬಾರಿ ಕಣಕ್ಕಿಳಿಸಿದ್ದು, 2013ರಲ್ಲಿ ಸೋತರೂ 2018ರಲ್ಲಿ ವಿಜಯಿಯಾಗಿದ್ದೇನೆ. ಇದೀಗ ಮತ್ತೆ ಚುನಾವಣೆಗೆ ಕಣಕ್ಕಿಳಿಸಿದ್ದು, ಕಾರ್ಯಕರ್ತರ ಆಶೀರ್ವಾದ ಮತ್ತು ಸಹಕಾರ ಇದಕ್ಕೆ ಕಾರಣ ಎಂದರು. Advertisement ಬಂಟ್ವಾಳ ಕ್ಷೇತ್ರದಲ್ಲಿ ಅಭೂತಪೂರ್ವ ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂದು ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ ಹೇಳಿದರು. ಬೆಳಗ್ಗೆ 8 ಗಂಟೆಗೆ ಅಭಿಮಾನಿಗಳು ಪೊಳಲಿಯಿಂದ 15 ರಂದು ಹೆಜ್ಜೆ ಹಾಕಲಿದ್ದು, ಮಧ್ಯಾಹ್ನ 12.15ರ ವೇಳೆ ನಾಮ ಪತ್ರ ಸಲ್ಲಿಸಲಿದ್ದಾರೆ. ಪಕ್ಷ ಕಾರ್ಯಕರ್ತರ ಸಭೆಗಳಲ್ಲಿ ಈಗಾಗಲೇ ಉತ್ತಮ ಬೆಂಬಲ ವ್ಯಕ್ತಗೊಂಡಿದೆ ಎಂದರು. ಕ್ಷೇತ್ರ ಪ್ರಭಾರಿ ರವಿಶಂಕರ ಮಿಜಾರ್, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರ.ಕಾರ್ಯದರ್ಶಿ ಡೊಂಬಯ ಅರಳ ಉಪಸ್ಥಿತರಿದ್ದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ ಬಂಟ್ವಾಳ : ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿ ಬಿಸಿರೋಡಿನ ಧನಲಕ್ಮೀ ಕಟ್ಟಡದಲ್ಲಿ ಬುಧವಾರ ಉದ್ಘಾಟನೆಗೊಂಡಿತು.ಈ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಕಳೆದ ಚುನಾವಣೆಯಲ್ಲಿ ಅಪಪ್ರಚಾರದಿಂದಾಗಿ ಸೋಲನ್ನು ಅನುಭವಿಸಿದ್ದೇನೆ. ಈ ಬಾರಿಯೂ ಅಪಪ್ರಚಾರ ಮುಂದುವರೆಸಲಾಗಿದೆ ಎಂದರು.ಬಂಟ್ವಾಳ ಕ್ಷೇತ್ರದಲ್ಲಿ ಮಾಡ ಬೇಕಾದ ಅಭಿವೃದ್ಧಿ ಕಾರ್ಯಗಳ, ಕನಸುಗಳು ಅನೇಕ ಇದ್ದು ಅದನ್ನು ಕಾರ್ಯರೂಪಕ್ಕೆ ತರಲು ಜನತೆ ನನಗೆ ಸಹಕಾರ ಮಾಡಬೇಕು ಎಂದರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಚುನಾವಣಾ ಕಚೇರಿ ಉದ್ಘಾಟನೆ ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ ಕೆಪಿಸಿಸಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಪದ್ಮಶೇಖರ್ ಜೈನ್, ಸುದರ್ಶನ ಜೈನ್, ಜಿನರಾಜ ಆರಿಗ, ಜಯಂತಿ ಪೂಜಾರಿ, ಮಲ್ಲಿಕಾ ಶೆಟ್ಟಿ, ಜನಾರ್ದನ ಶೆಟ್ಟಿ ಮೊಡಂಕಾಪು ಗುತ್ತು, ರಾಮಣ್ಣ ಪೂಜಾರಿ ,ಬಿಎಚ್ ಖಾದರ್,ವಲೇರಿಯನ್ ಡಿ.ಸೋಜ, ಬೇಬಿನಾಯ್ಕ್, ಬಾಳಪ್ಪ ಶೆಟ್ಟಿ ಮತ್ತಿತರರು…
ಏಕಾಂಗಿಯಾಗಿ ಬಾವಿ ತೋಡಿದ ಸೃಜನ್ ಗೆ ಜೆಸಿಐನಿಂದ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಪ್ರಶಸ್ತಿ ಪ್ರದಾನ ಬಂಟ್ವಾಳ: ಏಕಾಂಗಿಯಾಗಿ ಬಾವಿ ತೋಡಿ ಅಸಾಮಾನ್ಯ ಸಾಧನೆ ತೋರಿದ ಬಾಲಕ ನರಿಕೊಂಬು ಗ್ರಾಮದ ನಾಯಿಲ ಕಾಪಿಕಾಡುವಿನ ಸೃಜನ್ ಪೂಜಾರಿಗೆ ಜೆಸಿಐ ಬಂಟ್ವಾಳ ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ.ಬಾಲಕನ ಸಾಧನೆಯ ಬಗ್ಗೆ ಮಾಧ್ಯಮಗಳ ವರದಿಯನ್ನು ಆಧಾರಿಸಿ ಬುಧವಾರ ಅವರ ಮನೆಗೆ ತೆರಳಿದ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಹಾಗೂ ಸದಸ್ಯರು ಸೃಜನ್ ಸಾಧನೆಯನ್ನು ಶ್ಲಾಘಿಸಿ ಪ್ರಶಸ್ತಿ ನೀಡಿ ಗೌರವಿಸಿದರು. ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡುವ ಸಾಧಕರಿಗೆ ಜೆಸಿಐ ಸಂಸ್ಥೆ ಮೌನ ಸಾಧಕ ಪ್ರಶಸ್ತಿ ನೀಡಿ ಗೌರವಿಸಿಕೊಂಡು ಬಂದಿದೆ. ಇದೀಗ ಅರ್ಹವಾಗಿಯೇ ಸೃಜನ್ ಈ ಪ್ರಶಸ್ತಿಗೆ ಪಾತ್ರನಾಗಿದ್ದಾನೆ ಎಂದು ರಾಜೇಂದ್ರ ಅಭಿನಂದಿಸಿದರು. ಈ ಸಂದರ್ಭ ಜೆಸಿಐ ಬಂಟ್ವಾಳದ ನಿಕಟ ಪೂರ್ವಾಧ್ಯಕ್ಷ ರೋಷನ್ ರೈ, ಪೂರ್ವಾಧ್ಯಕ್ಷರಾದ ಲೋಕೇಶ್ ಸುವರ್ಣ, ಸದಾನಂದ ಬಂಗೇರ, ಸದಸ್ಯರಾದ ಉಮೇಶ್, ಮನೋಜ್ ಕನಪಾಡಿ, ಪ್ರಶಾಂತ್ ಕಲ್ಲಡ್ಕ ಹಾಗೂ…
ಏಕಾಂಗಿಯಾಗಿ ಬಾವಿ ತೋಡಿ ನೀರು ಪಡೆದ ಆಧುನಿಕ ಭಗೀರಥ! ಬಂಟ್ವಾಳ: ಪ್ರತೀ ವರ್ಷ ಬೇಸಿಗೆಯಲ್ಲಿ ಕಾಡುವ ನೀರಿನ ಬವಣೆಯಿಂದ ಮನೆಮಂದಿ ಪಡುವ ಸಂಕಷ್ಡವನ್ನು ತಾಳಲಾರದೆ ಬಾಲಕನೋರ್ವ ಏಕಾಂಕಿಯಾಗಿ ಬಾವಿ ತೋಡಿ ಅಚ್ಚರಿಸಿ ಮೂಡಿಸಿದ್ದಾನೆ. ಸುಮಾರು ೨೪ ಅಡಿ ಆಳದ ಬಾವಿಯನ್ನು ಯಾರ ಸಹಾಯವನ್ನು ಪಡೆಯದೇ ಹಾರೆ, ಪಿಕ್ಕಾಸಿನಿಂದ ತೋಡಿದ್ದು ಆತನ ಪ್ರಯತ್ನಕ್ಕೆ ಫಲವಾಗಿ ನೀರು ಸಿಕ್ಕಿದೆ!ಬಂಟ್ವಾಳ ತಾಲೂಕಿನ ನಾಯಿಲ ಕಾಪಿಕಾಡು ನಿವಾಸಿ ಲೋಕನಾಥ ಹಾಗೂ ಮೋಹಿನಿ ದಂಪತಿಯ ಪುತ್ರ ಸೃಜನ್ ಬಾವಿ ತೋಡಿ ಜೀವ ಜಲ ಪಡೆದ ಆಧುನಿಕ ಭಗೀರಥ!ಬಂಟ್ವಾಳ ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಓದುತ್ತಿರುವ ಸೃಜನ್ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಏಕಾಂಗಿಯಾಗಿ ಬಾವಿ ತೋಡಿ ನೀರು ಪಡೆದ ಆಧುನಿಕ ಭಗೀರಥ! ಸೃಜನ್ ಅವರ ಮನೆಗೆ ಪಂಚಾಯತಿಯ ನಳ್ಳಿ ನೀರು ಆಸರೆಯಾಗಿದೆ. ಬೇಸಿಯಲ್ಲಿ ನೀರು ಬಂದರೆ ಬಂತು, ಇಲ್ಲದಿದ್ದರೆ ಪಕ್ಕದ ಮನೆಯ ಬಾವಿಯನ್ನು ಅವಲಂಬಿಸಬೇಕು. ಇದು ಪ್ರತೀ ವರ್ಷದ ಸಮಸ್ಯೆ. ಇದರಿಂದ ಬೇಸತ್ತ ಸೃಜನ್…
ಕೊಳ್ನಾಡು ಶಕ್ತಿ ಕೇಂದ್ರದ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಭೆ ಬಂಟ್ವಾಳ: ಮುಂದಿನ ಅವಧಿಯಲ್ಲಿ ಬಿಜೆಪಿಯ ಶಾಸಕರೇ ಆಯ್ಕೆಯಾಗುವ ದೃಷ್ಟಿಯಿಂದ ಹಿರಿಯರ, ಮತದಾರರ,ಕಾರ್ಯಕರ್ತರ ಆಶೀರ್ವಾದ ಪಡೆಯಲು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ, ನೀವು ನನ್ನ ಜೊತೆಯಾಗಿ ನಿಂತು ಬೆಂಬಲ ನೀಡಿದರೆ ಅದುವೇ ದೊಡ್ಡ ಶಕ್ತಿ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಹೇಳಿದರು.ಕೊಳ್ನಾಡು ಶಕ್ತಿ ಕೇಂದ್ರದ ಮುಂಡಪ್ಪ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಜಧರ್ಮದ ರಾಜಕಾರಣದ ಮೂಲಕ ಕ್ಷೇತ್ರದಲ್ಲಿ ಸರ್ವರಿಗೂ ಸಮಾನವಾದ ರೀತಿಯ ಜನಪರವಾದ ಆಡಳಿತವನ್ನು ಮಾಡಿದ್ದೇನೆ, ನನ್ನ ಅಧಿಕಾರಕ್ಕೆ ಕ್ಷೇತ್ರದ ಜನತೆ ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು. Advertisement ವೇದಿಕೆಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಜಿ.ಪಂ.ನಿಕಟಪೂರ್ವ ಸದಸ್ಯ ರವೀಂದ್ರ ಕಂಬಳಿ,ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಮಾಧವ ಮಾವೆ, ಜಯರಾಮ ಕುಟ್ರಕಲ , ಪುಷ್ಪರಾಜ ಚೌಟ, ಪ್ರಕಾಶ್ ಅಂಚನ್,…
ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ 20 ನೇ ವರ್ಷಕ್ಕೆ ಪಾದಾರ್ಪಣೆ, ರೂ.92.60 ಲಕ್ಷ ನಿವ್ವಳ ಲಾಭ ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. 20 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ರೂ. 92.60 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದರು.ಸೋಮವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.2003 ನೇ ಆಗೋಸ್ತು ತಿಂಗಳಲ್ಲಿ ಬಂಟ್ವಾಳ ನಗರದ ಬೈಪಾಸ್ ಪ್ರದೇಶದ ಸುಮಾರು 20 ಜನ ಚಿಕ್ಕ ಪುಟ್ಟ ವ್ಯಾಪಾರ ವಹಿವಾಟು ಮಾಡುತ್ತಿದ್ದ, ಸಮಾನ ಮನಸ್ಕರಿಂದ ಪ್ರವರ್ತಿತವಾದ ಈ ಸಂಸ್ಥೆ 2003 ನೇ ಡಿಸೆಂಬರ್ 3 ರಂದು ಸುಮಾರು 460 ಜನ ಸದಸ್ಯರಿಂದ ರೂ. 4.02 ಲಕ್ಷ ಪಾಲು ಬಂಡವಾಳ, ಸುಮಾರು 2 ಲಕ್ಷ ಠೇವಣಿಯೊಂದಿಗೆ ಸಹಕಾರಿ ಕ್ಷೇತ್ರದಲ್ಲಿ ವಿವಿಧ ಉದ್ದೇಶಗಳನ್ನಿಟ್ಟುಕೊಂಡು, ಚಿಕ್ಕಮಟ್ಟದಲ್ಲಿ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೈಗೊಂಡಿರುವ…
ಅಮ್ಟೂರು ಶಕ್ತಿ ಕೇಂದ್ರದ ಪ್ರಮುಖ ಕಾರ್ಯಕರ್ತ ಸಭೆ ಬಂಟ್ವಾಳ: ಕ್ಷೇತ್ರದ ಜನರಿಗೆ ಕುಡಿಯುವ ನೀರಿಗೆ ಹಾಗೂ ಕೃಷಿಗೆ ತೊಂದರೆಯಾಗಬಾರದು ಎಂಬ ದೂರದೃಷ್ಟಿಯಿಂದ ನೇತ್ರಾವತಿ ನದಿಗೆ ಚೆಕ್ ಡ್ಯಾಂ ಹಾಗೂ ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಸಣ್ಣ ಸಣ್ಣ ತೋಡುಗಳಿಗೆ ಚೆಕ್ ಡ್ಯಾಂ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಅಮ್ಟೂರು ಶಕ್ತಿ ಕೇಂದ್ರದ ಪ್ರಮುಖ ಕಾರ್ಯಕರ್ತ ಸಭೆ ಅಮ್ಟೂರು ಶಕ್ತಿ ಕೇಂದ್ರದ ಕರಿಂಗಾಣ ರಾಜು ಪೂಜಾರಿ ಅವರ ಮನೆಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜನರು ನೀಡಿದ ಪ್ರೀತಿಯೇ ನನಗೆ ಶಕ್ತಿಯಾಗಿದ್ದು, ನಿರಂತರವಾಗಿ ಕ್ಷೇತ್ರದಲ್ಲಿ ಓಡಾಟ ಮಾಡಲು ಸಾಧ್ಯವಾಗಿದೆ ಎಂದರು.ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಎಸ್.ಸಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು, ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ,ಡೊಂಬಯ್ಯ ಅರಳ, ಅಮ್ಟೂರು ಗ್ರಾಮದ ಪ್ರಭಾರಿ ಗಣೇಶ್ ರೈ ಮಾಣಿ, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ…
ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ- ರಾಜೇಶ್ ನಾಯ್ಕ್ ಬಂಟ್ವಾಳ: ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿಯಾಗಿದ್ದು, ಅವರ ಆಶ್ರೀರ್ವಾದದ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.ಅವರು ದೇವಶ್ಯಪಡೂರು ಶಕ್ತಿ ಕೇಂದ್ರದ ವಿನಯ ಸಪಲ್ಯ ದೋಟ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ಕ್ಷೇತ್ರದ ಜನತೆಯ ಪ್ರತಿನಿಧಿಯಾಗಿ ಆಯ್ಕೆಮಾಡಿದ ಫಲವಾಗಿ ಶಾಂತಿಯ ಬಂಟ್ವಾಳವಾಗಿ ಸುಧಾರಣೆ ತರಲು ಸಾಧ್ಯವಾಯಿತು. ಬಂಟ್ವಾಳ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಎಲ್ಲರೂ ಜೊತೆಯಾಗಿ ಸಹಕಾರ ನೀಡಿದ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಕ್ಷೇತ್ರದಲ್ಲಿ ಮೂರು ಬಾರಿ ಪಾದಾಯಾತ್ರೆ ಮಾಡಿ ಜನರ ಬೇಡಿಕೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ಕಳೆದ ಹಲವಾರು ವರ್ಷಗಳಿಂದ ಮಾಡಲು ಸಾಧ್ಯವಾಗದ ಅನೇಕ ಅಭಿವೃದ್ಧಿ ಕಾರ್ಯಗಳ ಜೊತೆ ಅನೇಕ ಜನರ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ, ಇದರ ಜೊತೆಗೆ ಪಕ್ಷವನ್ನು ಸಂಘಟನಾತ್ಮಕ ವಾಗಿ ಬೆಳೆಸಲು ಅನೇಕ ಕಾರ್ಯಕ್ರಮಗಳನ್ನು ಮಾಡಿ ರಾಜ್ಯದಲ್ಲಿ ಗುರುತಿಸುವಂತೆ ಮಾಡಿದ್ದೇವೆ ಎಂದು ತಿಳಿಸಿದರು.…








