ಬಂಟ್ವಾಳ: ತಾಲೂಕಿನ ಕನ್ಯಾನ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಆತ್ಮಿಕಾ ಕುಟುಂಬಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿಯಿಂದ ಪುನರ್ ವಸತಿಗಾಗಿ ರೂ.2.50 ಲಕ್ಷ ನಗದು ಹಣವನ್ನು ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ಹಸ್ತಾಂತರ ಮಾಡಲಾಯಿತು.
ಕಳೆದ ಆರು ತಿಂಗಳ ಹಿಂದೆ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿನಿಯಾಗಿದ್ದ ಆತ್ಮಿಕಾ ಳ ಶವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡು ಬಂದರೂ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಭಜರಂಗದಳ ಕಾರ್ಯಕರ್ತರು ಪೋಲೀಸರಿಗೆ ದೂರು ನೀಡಿ ಪ್ರಕರಣ ದಾಖಲಾಗಿತ್ತು .
ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ನಿವಾಸಿ ಶಾಹುಲ್ ಹಮೀದ್ ಎಂಬಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದರು.
ಶಾಸಕರಿಗೆ ಅಭಿನಂದನೆ: ಮುರಳಿಕೃಷ್ಣ ಹಸಂತಡ್ಕ
ಅತ್ಮಿಕಾಳನ್ನು ಕಳಕೊಂಡ ಬಡ ಕುಟುಂಬಕ್ಕೆ ನೆರವಾಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕಾಳಜಿಗೆ ಭಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮದವ ಜೊತೆ ಮಾತನಾಡಿದ ಅವರು, ಮುಸ್ಲಿಂ ವ್ಯಕ್ತಿಯೋರ್ವನ ದುಷ್ಪ್ರೇರಣೆಯಿಂದ ಆತ್ಮಿಕಾಳ ಸಾವು ಸಂಭವಿಸಿತ್ತು. ಆರ್ಥಿಕ ವಾಗಿ ಹಿಂದುಳಿದ ದಲಿತ ಬಡಕುಟುಂಬಕ್ಕೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಂದೇ ಭರವಸೆ ನೀಡಿದ್ದರು.
ಮಾತಿನಂತೆ ಬಿಜೆಪಿ ಕ್ಷೇಮ ನಿಧಿಯಿಂದ ನೆರವು ನೀಡಿದ್ದಾರೆ. ಕೊಟ್ಟ ಮಾತನ್ಮು ಉಳಿಸಿಕೊಂಡ ಬಂಟ್ವಾಳ ಶಾಸಕರಿಗೆ ಹಾಗೂ ಬಿಜೆಪಿ ಮಂಡಲಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.