ಬಂಟ್ವಾಳ: ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲಕಾಡು ಕೆನರಾ ರೊಬೇಕೊ ಇವರ ವತಿಯಿಂದ ಆಯ್ದ ೩೦ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಿಸಲಾಯಿತು.. ಕೆನರಾ ರೊಬೆಕೊ ವಲಯ ಮುಖ್ಯಸ್ಥ ಮುರಳೀಧರ ಜಿ ಶೆಣೈ ಹಾಗೂ ಸೀನಿಯರ್ ಕಸ್ಟಮರ್ ಸರ್ವಿಸ್ ರಾಜೇಶ್ ಕೊಯಿಲ ಇವರು ಉಚಿತ ಸೈಕಲನ್ನು ವಿತರಣೆ ಮಾಡಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇನ್ನೂ ಹೆಚ್ಚು ಸೈಕಲನ್ನು ನೀಡುವುದಾಗಿ ಭರವಸೆ ನೀಡಿ, ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಶ್ರೀ ದುರ್ಗಾಚಾರಿಟೇಬಲ್ ಟ್ರಸ್ಟ್ ನ ಸೇವೆಯನ್ನು ಶ್ಲಾಘಿಸಿದರು. ಪ್ರೌಢ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ಪುರುಷೋತ್ತಮ ಅಂಚನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ರಮಾನಂದ, ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್ ಅಂಚನ್, ಟ್ರಸ್ಟ್ ಸದಸ್ಯರಾದ ರಾಮಚಂದ್ರ ಕರೆಂಕಿ, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಮೌರಿಸ್ ಡಿಸೋಜಾ ಉಪಸ್ಥಿತರಿದ್ದರು.
Advertisement