
ಬಂಟ್ವಾಳ: ರಾಜ್ಯದಲ್ಲಿರುವ ದರಿದ್ರ ಸರಕಾರವನ್ನು ಮನೆಗೆ ಕಳುಹಿಸ ಬೇಕಾದರೆ ಜನರು ನೂರು ಶೇಕಡ ಮತದಾನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ಹೇಳಿದರು.
ಬಂಟ್ವಾಳ ಪ್ರಜಾಧ್ವನಿ ಯಾತ್ರೆಯ ಅಂಗವಾಗಿ ಸರಪಾಡಿ ಗ್ರಾಮದ ಮಾವಿನಕಟ್ಟೆಯಲ್ಲಿ ಮಂಗಳವಾರ ಸಂಜೆ ನಡೆದ 4 ನೇ ದಿನದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಸ್ವಾಮ್ಯದ ಎಲ್ಲ ಸಂಸ್ಥೆಗಳನ್ನು ಮಾರಿದ ಕೇಂದ್ರ ಸರಕಾರ ಈಗ ಎಲೈಸಿಗೂ ಕೈ ಹಾಕಿದೆ. ಸಣ್ಣ ಸಣ್ಣ ಪಕ್ಷಗಳನ್ನು ಖರೀದಿ ಮಾಡಿ, ಕಾಂಗ್ರೆಸ್ ಗೆ ಬರುವ ಮತವನ್ನು ಹೇಗೆ ತಮ್ಮ ಪಕ್ಷಕ್ಕೆ ಸೆಳೆಯಬಹುದು ಎನ್ನುವ ಹುನ್ನಾರದಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು. ಸುಳ್ಳು ಭರವಸೆ ನಮ್ಮಲ್ಲಿ ಇಲ್ಲ. ಹೇಳಿದ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಪ್ರತೀ ಪಂಚಾಯತಿಗೆ ತೆರಳಿ ಜನರನ್ನು, ಕಾರ್ಯಕರ್ತರನ್ನು ಭೇಟಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಹಂತ ಹಂತವಾಗಿ ಪಕ್ಷದ ಜವಾಬ್ದಾರಿ ಯನ್ನು ನಿಭಾಯಿಸಿಕೊಂಡು ಬಂದಿದ್ದೇನೆ. ಜನರ ಬೆಂಬಲದಿಂದ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು ಕ್ಷೇತ್ರದ ಜನ ತಲೆತಗ್ಗಿಸುವಂತಹ ಕಾರ್ಯ ಮಾಡಿಲ್ಲ ಎಂದರು. ಸೈದ್ದಾಂತಿಕ ವಾಗಿ ರಾಜಿ ಮಾಡಿಕೊಂಡಿಲ್ಲ. ಕಳೆದ ಬಾರಿ ಸೋತಿರುವುದಕ್ಕೆ ಬೇಸರವಿಲ್ಲ, ಅದರೆ ನನನ್ನು ಸೋಲಿಸಲು ಮಾಡಿದ ಅಪಪ್ರಚಾರ, ಕುತಂತ್ರದ ಬಗ್ಗೆ ಬೇಸರವಿದೆ. ಕೆಲಸ ಮಾಡಿ ಸೋತಿರುವುದಕ್ಕೆ ಬೇಸರವಿದೆ ಎಂದರು. ನಮ್ಮ ಸರಕಾರ ಅನುದಾನ ನೀಡಿದ ಸೌಹಾರ್ದ ಸೇತುವೆ, ಬೆಂಜನಪದವಿನ ಕ್ರೀಡಾಂಗಣ, ಅಂಬೇಡ್ಕರ್ ಭವನ, ಪಂಜೆ ಮಂಗೇಶ್ ರಾವ್ ಭವನ ಕಾರ್ಯ ಅರ್ಧಕ್ಕೆ ನಿಂತಿದೆ. ಅದನ್ನು ಪೂರ್ತಿಗೊಳಿಸುವ ಚಿಂತನೆ ಇದೆ,
ಬೆಂಜನಪದವಿನಲ್ಲಿ ನೂರು ಕೋಟಿಯ ಸುಸಜ್ಜಿತ ಕ್ರೀಡಾಂಗಣ ಮಾಡುವ ಕನಸು ಇದೆ ಎಂದ ಅವರು ವಿಧಾನ ಪರಿಷತ್ ಸದಸ್ಯನಾಗುವ ಅವಕಾಶ ಇದ್ದರೂ ಕೂಡ ಜನರ ಮೇಲಿನ ನಂಬಿಕೆ ವಿಶ್ವಾಸದಿಂದ ಅದನ್ನು ತಿರಸ್ಕರಿಸಿ ಕೊನೆಯ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಶಕ್ತಿ ನೀಡುವಂತೆ ವಿನಂತಿಸಿಕೊಂಡರು.

ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ಶಾಹುಲ್ ಹಮೀದ್ ಜಿ.ಪಂ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಲವೀನ ವಿಲ್ಮ ಮೋರಸ್, ಸದಾಶಿವ ಬಂಗೇರ, ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ಶಿವಪ್ಪ ಪೂಜಾರಿ ಹಟದಡ್ಕ, ಸಂಪತ್ ಕುಮಾರ್ ಶೆಟ್ಟಿ, ಸುಧಾಕರ ಶೆಣೈ ಖಂಡಿಘ, ಅಬ್ಬಾಸ್ ಅಲಿ, ಸಿದ್ದಿಕ್ ಗುಡ್ಡೆಯಂಗಡಿ, ಶಬೀರ್ ಸಿದ್ದಕಟ್ಟೆ, ಯೋಗೀಶ್ ಶೆಟ್ಟಿ ಆರುಮುಡಿ, ದಯಾನಂದ ಶೆಟ್ಟಿ ಅಮೈ, ರಝಾಕ್ ಕುಕ್ಕಾಜೆ, ಮನೋಹರ ನೇರಂಬೋಳು, ಸುರೇಶ್ ಕುಮಾರ್ ನಾವೂರು, ದಯಾನಂದ ಬೇರಂಬೋಳು, ಲೋಲಾಕ್ಷ ಶೆಟ್ಟಿ, ಉಪಸ್ಥಿತರಿದ್ದರು. ರಾಜೀವ ಶೆಟ್ಟಿ ಎಡ್ತೂರು ಪ್ರಾಸ್ತವಿಕವಾಗಿ ಮಾತನಾಡಿದರು.
ಆದಂ ಕುಂಞ ಸ್ವಾಗತಿಸಿದರು. ಬೇಬಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು.
