ಬೆಂಗಳೂರು: ಇಲ್ಲಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೆನರಾ ಅಸೋಸಿಯೇಷನ್ ಇದರ 13ನೇ ವಾರ್ಷಿಕೋತ್ಸವ ಅಮೃತಮಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕ ಮುಖ್ಯ ಅತಿಥಿ ತುಳು ಲಿಪಿ ತಜ್ಞ
ಸತೀಶ್ ಆಗ್ಪಲ ಮಾತನಾಡಿ ಕಾಲಕ್ರಮೇಣ ವಿನಾಶದ ಅಂಚಿಗೆ ಸರಿಯುತಿರುವ ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ತುಳುವರ ಜವಾಬ್ದಾರಿ ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿದರು. ತುಳು ಭಾಷೆ ಹಾಗೂ ತುಳುವರ ಸಂಘಟನೆಗಾಗಿ ಕೆನರಾ ಅಸೋಸಿಯೇಷನ್ ಕೊಡುಗೆಯನ್ನು ಅವರು ಶ್ಲಾಘಿಸಿದರು. ಈ ಸಂದರ್ಭ ಅಸೋಸಿಯೇಷನ್ ವತಿಯಿಂದ ಸತೀಶ್ ಆಗ್ಪಲರವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿನ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಉಪಾಧ್ಯಕ್ಷ ಶೀನಪ್ಪ ಗೌಡ ನೆರವೇರಿಸಿದರು.ಆಟಿಡೊಂಜಿ ಕೂಟ ಹಾಗೂ ವಾರ್ಷಿಕ ಕ್ರೀಡಾಕೂಟದಲ್ಲಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಸೋಸಿಯೇಷನಿನ ಸದಸ್ಯರು ಮತ್ತು ಮಕ್ಕಳು ನೀಡಿದ ವಿವಿಧ ರೀತಿಯ ಸಾಂಸ್ಟ್ರಿತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಮೆರಗು ನೀಡಿತು.
ಅಸೋಸಿಯೇಷನಿನ ಕಾರ್ಯದರ್ಶಿ ಎಂ.ವಿಜಯ್ ಕುಲಾಲ್ ಸ್ವಾಗತಿಸಿದರು. ಅಧ್ಯಕ್ಷ ಸತೀಶ್ ಸುವರ್ಣ ಸಂಘ ಪ್ರಸ್ತುತ ಸಾಲಿನಲ್ಲಿ ಕೈಕೊಂಡ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಹಾಗೂ ಮುಂದಿನ ಯೋಜನೆಗಳನ್ನು ಸಂಘದ ಸದಸ್ಯರಿಗೆ ವಿವರಿಸಿದರು. ಪ್ರಸ್ತುತ ವರ್ಷ ದಲ್ಲಿ ಕೆನರಾ ಅಸೋಸಿಯೇಷನ್ ಆಯೋಜಿಸಿದ ಸುಧನ್ವ ಮೋಕ್ಷ ಯಕ್ಷಗಾನದ ಅದ್ಬುತ ಯಶಸ್ವಿಗೆ ಸಹಕರಿಸಿದ ಎಲ್ಲ ದಾನಿಗಳಿಗೆ ಹಾಗೂ ಕಲಾಭಿಮಾನಿಗಳಿಗೆ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಸಚಿನ್ ರೈ ವಂದಿಸಿದರು. ಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ನವೀನ್ ಶೆಟ್ಟಿ, ಕೊಶಾಧಿಕಾರಿ ವಿಟ್ಟಲ್ ಗೊಲ್ಲ, ಸಂಘಟನಾ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ, ಜಂಟಿ ಕಾರ್ಯದರ್ಶಿ ಯೋಗೀಶ್ ದೇರಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ವಸಂತ ಪೂಜಾರಿ, ಶ ಲಿವಿಂಗ್ಸ್ಟನ್, ರೂಪ ಮಂಜುನಾಥ್, ಮಮತಾ ಲೋಕೇಶ್ ಉಪಸ್ಥಿತರಿದ್ದರು.