Author: admin

ಪಂಪ್‌ಗೆ ವಿದ್ಯುತ್ ಸಂಪರ್ಕ ಕಡಿತ, ತಹಶೀಲ್ದಾರ್‌ಗೆ ರೈತರ ನಿಯೋಗದಿಂದ ಮನವಿ ಬಂಟ್ವಾಳ: ನದಿ ತೀರದಲ್ಲಿರುವ ರೈತರಿಗೆ ಪೂರ್ವ ಮಾಹಿತಿ ನೀಡದೆ ಪಂಪ್‌ಸೆಟ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ರೈತ ವಿರೋಧಿ ಆದೇಶವನ್ನು ಹಿಂಪಡೆಯುವಂತೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ರೈತರ ನಿಯೋಗ ಬಂಟ್ವಾಳ ತಹಶೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಿತು.ಮಂಗಳೂರಿನ ಜನರಿಗೆ ಕುಡಿಯುವ ನೀರಿನ ಕೊರತೆ ನೆಪದಲ್ಲಿ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಕಂಬದಿಂದಲೇ ಸಂಪರ್ಕ ಕಡಿತಗೊಳಿಸಿ ರೈತರನ್ನು ಸರ್ವನಾಶ ಮಾಡುವ ಆದೇಶವನ್ನು ಜಿಲ್ಲಾಡಳಿತ ನೀಡಿದೆ. ಜಿಲ್ಲಾಡಳಿತದ ಈ ಕಠೋರ ಕ್ರಮದಿಂದ ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದು ತಕ್ಷಣವೇ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅಥವಾ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಮರಳಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದರು. Advertisement ಈ ಸಂದರ್ಭ ಬಂಟ್ವಾಳ ತಾಲೂಕು ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್, ಪಾಣೆ ಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ…

Read More

ಕಳೆದ ಚುನಾವಣೆಯಲ್ಲಿ ನಾನು ಕೆಲಸ ಮಾಡದೆ ಸೋತಿಲ್ಲ, ಅಪಪ್ರಚಾರದಿಂದ ಸೋಲಿಸಿದ್ದಾರೆ- ಬಿ. ರಮಾನಾಥ ರೈ ಬಂಟ್ವಾಳ: ಎ.20 ರಂದು ಗುರುವಾರ ಮಧ್ಯಾಹ್ನ 12.35ಕ್ಕೆ ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.ಪಕ್ಷದ ಚುನಾವಣಾ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಬಂಟ್ವಾಳದ ಶ್ರೀ ವೆಂಕಟರಮಣ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಮೂಲಕ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. ಈ ಸಂದರ್ಭ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.ಕಳೆದ ಚುನಾವಣೆಯಲ್ಲಿ ನಾನು ಕೆಲಸ ಮಾಡದೆ ಸೋತಿಲ್ಲ, ವ್ಯಾಪಕ ಅಪಪ್ರಚಾರದಿಂದಾಗಿ ಸೋತಿದ್ದೇನೆ, ಸೋಲಿಗೆ ಬೇಸರವಿಲ್ಲ, ಸೋಲಿಸಿದ ರೀತಿಗೆ ಬೇಸರವಿದೆ ಎಂದ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಶಾಸಕ ಅವಧಿಯಲ್ಲಿ ಮಂಜೂರಾದ ಅನೇಕ ಅಭಿವೃದ್ದಿ ಕಾಮಗಾರಿಗಳು ಅರ್ಧದಲ್ಲೇ ಬಾಕಿ ಉಳಿದಿದ್ದು ಅವುಗಳನ್ನು ಪೂರ್ಣಗೊಳಿಸುವ ಕಾರ್ಯ ಆಗಬೇಕಿದೆ. ಜನರು ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಅವರು ಮನವಿ ಮಾಡಿದರು.…

Read More

https://youtu.be/B47LMB10Iis ಬಂಟ್ವಾಳ: ರೋಷನ್ ಬೊನಿಫಾಸ್ ಮಾರ್ಟಿಸ್ ಸಾರಥ್ಯದಲ್ಲಿ ವಾರಪತ್ರಿಕೆಯಾದ ‘’ಕರಾವಳಿ ಸುದ್ದಿ’’ಯ ಮೊದಲ ಸಂಚಿಕೆಯನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಏ.17ರಂದು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭ ಶುಭ ಹಾರೈಸಿದ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೌನೇಶ ವಿಶ್ವಕರ್ಮ, ಪತ್ರಿಕೆ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುವ ಮೂಲಕ ಕರಾವಳಿಯಾದ್ಯಂತ ತಲುಪಲಿ ಎಂದು ಶುಭ ಹಾರೈಸಿದರು.ಸಂಪಾದಕ ರೋಷನ್ ಬೊನಿಫಾಸ್ ಮಾರ್ಟಿಸ್ ಮಾತನಾಡಿ, ಸಾಮಾಜಿಕ ಜಾಲತಾಣದ ಈ ಕಾಲದಲ್ಲೂ ನಾವು ಮುದ್ರಣ ಮಾಧ್ಯಮವನ್ನು ಆರಂಭಿಸಿದ್ದು, ಸವಾಲಾಗಿದ್ದರೂ, ಸಮರ್ಥ ಲೇಖಕರಿಂದ ಬರೆಹಗಳು, ವರದಿಗಳ ಮೂಲಕ ಜನರಿಗೆ ಬೇಕಾದ ವಿಚಾರಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದರು. ಪತ್ರಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕಲಾವಿದ ಚೇತನ್ ರೈ ಮಾಣಿ ಮಾತನಾಡಿ, ಪತ್ರಿಕೆ ಬೆಳೆದುಬಂದ ಹಾದಿಯ ಕುರಿತು ವಿವರಿಸಿದರು. ಉಪಸಂಪಾದಕಿ ಅನಿತಾ ರೋಷನ್ ಮಾರ್ಟಿಸ್ ವಂದಿಸಿದರು. Advertisement

Read More

ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನ: ಬ್ರಹ್ಮಕಲಶೋತ್ಸವ ಆಮಂತ್ರಣಪತ್ರ ಬಿಡುಗಡೆ ಕಾರ್ಯಕ್ರಮ ಬಂಟ್ವಾಳ: ಕುಡಂಬೆಟ್ಟು ಗ್ರಾಮದ ಉರುಡಾಯಿ ಶ್ರೀ ಮುಖ್ಯಪ್ರಾಣ ದೇವಸ್ಥಾನ ಶಿಲಾಮಯವಾಗಿ ಪುನರ್ ನಿರ್ಮಾಣಗೊಂಡಿದ್ದು, ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ರವಿವಾರ ನಡೆಯಿತು.ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ ಪಚ್ಚಾಜೆಗುತ್ತು ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ,ದೇವಸ್ಥಾನದ ಪುಣ್ಯಕಾರ್ಯದಲ್ಲಿ ಊರವರೆಲ್ಲರೂ ಭಾಗಿಗಳಾಗಿ ಯಶಸ್ವಿಗೊಳಿಸಬೇಕು ಎಂದರು.ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ, ದೇವಸ್ಥಾನ ಪುನರ್‌ನಿರ್ಮಾಣ ಕಾರ್ಯ ನಮಗೊದಗಿದ ಯೋಗ ಭಾಗ್ಯ. ದೇವರಿಗೆ ಸಮರ್ಪಣೆ ಮಾಡಿದಾಗ ಮಾನವ ಜನ್ಮ ಸಾರ್ಥಕವಾಗುವುದು ಎಂದು ಹೇಳಿದರು. ಮೇ 20 ರಿಂದ ಮೇ 22 ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು. Advertisement ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ ವಾಮದಪದವು, ಕಾರ್ಯಾಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಕಾಡಬೆಟ್ಟು, ವೀರೇಂದ್ರ…

Read More

ಮತದಾನ ಕರ್ತವ್ಯ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ತರಬೇತಿ ಬಂಟ್ವಾಳ: ಮತದಾನದ ಕರ್ತವ್ಯ ನಿರ್ವಹಣೆ ಬಗ್ಗೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 187 ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು 304 ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳೂ ಸೇರಿದಂತೆ ಒಟ್ಟು 491 ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿಯು ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.22 ಜನ ಸೆಕ್ಟರ್ ಅಧಿಕಾರಿಗಳು ತರಬೇತಿ ನೀಡಿದರು. ಮಾಸ್ಟರ್ ಟ್ರೈನರ್ ಗಳಾದ ಅಬ್ದುಲ್ ರಝಾಕ್, ಉದಯ ಕುಮಾರ್ ಮತ್ತು ಸನತ್ ರಾಮ್ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಮಟ್ಟದ ತರಬೇತಿ ನೋಡಲ್ ಅಧಿಕಾರಿ, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ನಿರ್ದೇಶಕರಾದ ನಿರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚುನಾವಣಾಧಿಕಾರಿ ಅಬಿದ್ ಗದ್ಯಾಲ್, ಸಹಾಯಕ ಚುನಾವಣಾಧಿಕಾರಿ ಎಸ್.ಬಿ.ಕೂಡಲಗಿ, ಗ್ರೇಡ್ 2 ತಹಶೀಲ್ದಾರ್ ದಯಾನಂದ ಕೆ.ಎಸ್., ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಮಧು ಎಂ., ಚುನಾವಣಾ ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಉಪತಹಶೀಲ್ದಾರ್ ಗಳಾದ…

Read More

ಜೆಸಿಐ ಬಂಟ್ವಾಳದ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಣೆ ಬಂಟ್ವಾಳ: ಜೆಸಿಐ ಬಂಟ್ವಳದ ವತಿಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಟ್ವಾಳದಲ್ಲಿ ನಿಕ್ಷಯ ಮಿತ್ರ ಕಾರ್ಯಕ್ರಮದಡಿಯಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭ ಜೆಸಿಐ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ., ನಿಕಟಪೂರ್ವಾಧ್ಯಕ್ಷ ರೋಷನ್ ರೈ, ಪೂರ್ವಧ್ಯಕ್ಷ ಸಂತೋಷ ಜೈನ್, ಸದಸ್ಯರಾದ ಪ್ರಶಾಂತ್ ಕಲ್ಲಡ್ಕ, ಉಮೇಶ್ ಪೂಜಾರಿ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಶ್ವಿನಿ ಬಾಲಕೃಷ್ಣ ಉಪಸ್ಥಿತರಿದ್ದರು. Advertisement

Read More

ಬಿಜೆಪಿ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್.‌ಸಂತೋಷ್ ಭೇಟಿ ಬಂಟ್ವಾಳ: ಬಿಜೆಪಿ ಕಚೇರಿಗೆಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್.‌ಸಂತೋಷ್ ಅವರು ಭಾನುವಾರ ಭೇಟಿ ನೀಡಿದರು. ಕ್ಷೇತ್ರದಲ್ಲಿ ಪಕ್ಷದ ಕಾರ್ಯವೈಖರಿಯನ್ನು ಮೆಚ್ಚಿ ಬಂಟ್ವಾಳ ಶಾಸಕ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರಿಗೆ ಶುಭಹಾರೈಸಿದರು.ಅ ಬಳಿಕ ಸುಮಾರು ಅರ್ಧ ತಾಸುಗಳ ಕಾಲ ಚುನಾವಣಾ ತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.ಅದಕ್ಕೂ ಮುನ್ನ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ತಯಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.ಈ ಸಂದರ್ಭದಲ್ಲಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ ದಾಸ ಬಂಟ್ವಾಳ, ಜಿಲ್ಲಾ ಮಾಧ್ಯಮ ಸಂಚಾಲಕ ಸಂದೇಶ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಶ್ರೀಧರ್ ಶೆಟ್ಟಿ ಪುಳಿಂಚ, ಬಂಟ್ವಾಳ ಕ್ಷೇತ್ರ ಸಮಿತಿ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಪ್ರಕಾಶ್…

Read More

ಕಾಮಿಡಿ ಪ್ರೀಮಿಯರ್‌‌ ಲೀಗ್ ಸೀಸನ್ 4 ಪ್ರದರ್ಶನಕ್ಕೆ ಬಿ.ಸಿ.ರೋಡಿನಲ್ಲಿ ಚಾಲನೆ ಬಂಟ್ವಾಳ: ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ಕಾಮಿಡಿ ಪ್ರೀಮಿಯರ್‌ ಲೀಗ್ ಸೀಸನ್ 4 ಫರ್ ಫಾರ್ಮೆನ್ಸ್ ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.ಯಕ್ಷ ಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ ಕರಾವಳಿ ಭಾಗದಲ್ಲಿ ನಗುವಿಗೂ ಸ್ಟ್ಯಾಂಡರ್ಡ್ ಇದೆ. ಆದ್ದರಿಂದ ಹೊರ ಜಿಲ್ಲೆಯ ಹಾಸ್ಯ ಕಲಾವಿದರು ಕರಾವಳಿಯಲ್ಲಿ ಹಾಸ್ಯ ಪ್ರದರ್ಶನ ನೀಡಲು ಹಿಂದು ಮುಂದು ನೋಡುತ್ತಾರೆ ಎಂದರು. ಇಲ್ಲಿ ಯಕ್ಷಗಾನ, ನಾಟಕದ ಹಾಸ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ, ಕಲಾವಿದನಾಗಿ ಉದ್ಯಮಿಯಾಗಿ ತೊಡಗಿಸಿಕೊಂಡಿರುವ ಲಕ್ಷ್ಮಣ್ ಕುಂದರ್ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೆ ಕೊಡುಗೆ ನೀಡುತ್ತಿದ್ದಾರೆ, ನಮ್ಮ‌ ನಾಡಿನ ಸಂಸ್ಕೃತಿ, ಸಂಸ್ಕಾರ ಉಳಿಯ ಬೇಕಾದರೆ ಇಂತಹ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.ಸಿದ್ದಕಟ್ಟೆಯ ಅನಂತ ಪದ್ಮ ಹೆಲ್ತ್ ಸೆಂಟರ್ ನ ಡಾ. ಸುದೀಪ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಆರೋಗ್ಯವಾಗಿರಲು ನಗು ಮುಖ್ಯ. ಪ್ರಸ್ತುತ ಕಾಲ…

Read More

ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ನಾಮಪತ್ರ ಸಲ್ಲಿಕೆ, ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶನಿವಾರ ತಮ್ಮ ನಾಮಪತ್ರವವನ್ನು ಸಲ್ಲಿಸಿದರು. ಬಿ.ಸಿ.ರೋಡಿನ ತಾಲೂಕು ಆಡಳಿತ ಸೌಧದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾಧಿಕಾರಿ ಅಭಿದ್ ಗಡ್ಯಾಲ್ ಅವರಿಗೆ ತನ್ನ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಶೆಟ್ಟಿ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಲಾಯಿತು. ಪಾದಯಾತ್ರೆಯಲ್ಲಿ ಆಗಮಿಸಿದ ರಾಜೇಶ್ ನಾಯ್ಕ್:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಪಾದಯಾತ್ರೆಯ ಮೂಲಕ ಬಿ.ಸಿ.ರೋಡಿನತ್ತ ಹೆಜ್ಜೆ ಹಾಕಿದರು. ಈ ಸಂದರ್ಭ ಅಪಾರ ಸಂಖ್ಯೆಯ ಬೆಂಬಲಿಗರು ಜಯಘೋಷ ಹಾಕುತ್ತ ಅವರ ಜೊತೆ ಹೆಜ್ಜೆ ಹಾಕಿದರು. ಸಹಸ್ರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿ ತಮ್ಮ ಮೆಚ್ಚಿನ ನಾಯಕನಿಗೆ ಬೆಂಬಲ ವ್ಯಕ್ತಪಡಿಸಿದರು.ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್…

Read More

ಮೆಚ್ಚಿನ ನಾಯಕನಿಗಾಗಿ 35 ಕಿ.ಮಿ.‌ನಡೆದು ಬಂದ ದಂಪತಿ ಬಂಟ್ವಾಳ: ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ನಾಮ‌ಪತ್ರ ಸಲ್ಲಿಸಲು ಪೊಳಲಿ ಕ್ಷೇತ್ರದಿಂದ‌ ಪಾದಾಯಾತ್ರೆಯ ಮೂಲಕ ಆಗಮಿಸುವ ಸುದ್ದಿ ತಿಳಿದ ದಂಪತಿ ತಮ್ಮ ಮನೆಯಿಂದ ಸುಮಾರು 35 ಕಿ.ಮಿ.ದೂರದವರೆಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಪಕ್ಷದ ಅಭ್ಯರ್ಥಿಗೆ ಶುಭಾಶಯ ಕೋರಿದ ಘಟನೆ ಬಂಟ್ವಾಳದಲ್ಲಿ ನಡೆಯಿತು..ಬಡಗಕಜೆಕಾರು ಗ್ರಾ.ಪಂ.ಮಾಜಿ ಸದಸ್ಯ ಗಂಗಾಧರ ಪೂಜಾರಿ ತನ್ನ ಪತ್ನಿ ಚಂದ್ರಾವತಿ ಅವರ ಜೊತೆಗೂಡಿ ಕಜೆಕಾರಿನ ಮಹಾದೇಶ್ವರ‌ ದೇವಸ್ಥಾನದಿಂದ‌ ಪಾದಯಾತ್ರೆ ಆರಂಭಿಸಿದರು. ಪುಂಜಾಲಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರನ್ನು ಭೇಟಿಯಾದರು. ರಾಜೇಶ್ ನಾಯ್ಕ್ ಅವರು ಭ್ರಷ್ಟಾಚಾರ ರಹಿತ ಆಡಳಿತವನ್ನು ತನ್ನ ಶಾಸಕತ್ವದ ಸಮಯದಲ್ಲಿ ನೀಡಿದ್ದು, ಹಲವು ಬಾರಿ ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಅವರನ್ನು ಬೆಂಬಲಿಸುವ ಸಲುವಾಗಿ ಕಾಲ್ನಡಿಗೆಯ ಮೂಲಕ ಆಗಮಿಸಿದ್ದೇವೆ ಎಂದು ತಿಳಿಸಿದರು. ಮೆಚ್ಚಿನ ನಾಯಕನಿಗಾಗಿ 35 ಕಿ.ಮಿ.‌ನಡೆದು ಬಂದ ದಂಪತಿ Advertisement

Read More