Author: admin
ಬಂಟ್ವಾಳ: ದೇವರ ಆಶೀರ್ವಾದ, ಮತದಾರರು, ಕಾರ್ಯಕರ್ತರು ನೀಡಿದ ಸಹಕಾರದಿಂದ ಬಂಟ್ವಾಳದಲ್ಲಿ ಅಭೂತಪೂರ್ವ ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.ಸರಪಾಡಿ ಶಕ್ತಿ ಕೇಂದ್ರದಲ್ಲಿ ನಡೆದ ಪ್ರಥಮ ಬಿಜೆಪಿ ಪ್ರಮುಖ ಕಾರ್ಯಕರ್ತರ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಮತದಾರರು ನೀಡಿದ ಪ್ರತಿಯೊಂದು ಮತಕ್ಕೆ ಯಾವುದೇ ಚ್ಯುತಿ ಬಾರದಂತೆ ಕಳೆದ ಐದು ಪೂರೈಸಿದ್ದೇನೆ. ಅಭಿವೃದ್ಧಿ ಜೊತೆಗೆ ಶಾಂತಿಯ ಬಂಟ್ವಾಳವಾಗಿ ಮಾಡಲು ಅವಕಾಶ ನೀಡಿದ ತಾಲೂಕಿನ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ ಅವರು ಮುಂದಿನ ಅವಧಿಯಲ್ಲಿ ಮತ್ತೆ ಶಾಂತಿಯ ಬಂಟ್ವಾಳವಾಗಿ ಉಳಿಯಲು ಬಿಜೆಪಿ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ಕಾರ್ಯಕರ್ತರು ಜತೆಯಾಗಿ ಕೆಲಸ ಮಾಡಿ ಎಂದುಕರೆ ನೀಡಿದರು. ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಿ ಮನೆಗೆ ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು. ಶಾಸಕ ರಾಜೇಶ್ ನಾಕ್ ಅವರ ವ್ಯಕ್ತಿತ್ವವನ್ನು ಹಾಗೂ ಮಾನವೀಯ ಗುಣಗಳ ಬಗ್ಗೆ ಮತದಾರರಿಗೆ ತಿಳಿಸುವ ಅಗತ್ಯವಿದೆ. ಗೊಂದಲದ ಗೂಡಾಗಿದ್ದ ಬಂಟ್ವಾಳವನ್ನು…
ಬಂಟ್ವಾಳ: ಜಿಲ್ಲೆಯ ಕಾರಣಿಕ ದೈವ ಕ್ಷೇತ್ರ ಸಜೀಪಮೂಡ ಗ್ರಾಮದ ಪಣೋಲಿಬೈಲುವಿನಲ್ಲಿ ಎ. 8ರಿಂದ ಎ. 17ರವರೆಗೆ ಅಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ. ಸಜೀಪಮಾಗಣೆಯ ಮಿತ್ತಮಜಲು ಕ್ಷೇತ್ರದ ವಾರ್ಷಿಕ ವಿಷು ಜಾತ್ರೆಯ ಪ್ರಯುಕ್ತ ಈ ದಿನದಲ್ಲಿ ಅಗೇಲು ಹಾಗೂ ಕೋಲ ಸೇವೆ ಇರುವುದಿಲ್ಲ, ಎ. 18ರಿಂದ ಸೇವೆಗಳು ಎಂದಿನಂತೆ ಮುಂದುವರೆಯುವುದು ಎಂದು ಪಣೋಲಿಬೈಲು ದೈವಸ್ಥಾನದ ಪ್ರಕಟಣೆ ತಿಳಿಸಿದೆ. —
ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕಗಳ ನೇತೃತ್ವದಲ್ಲಿ ಐಕ್ಯತಾ ಸಮಾವೇಶ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಭಾನುವಾರ ಏಪ್ರಿಲ್ 9ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.ಈ ವಿಷಯವನ್ನು ಪುರಸಭಾ ಸದಸ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಚಂಡ್ತಿಮಾರ್ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಕಾರ್ಯಕ್ರಮವನ್ನು ವಿಧಾನಪರಿಷತ್ತು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ವಹಿಸಲಿದ್ದಾರೆ ಎಂದರು.ಭವಿಷ್ಯತ್ತಿನ ಬಂಟ್ವಾಳಕ್ಕಾಗಿ ಈ ಸಮಾವೇಶವನ್ನು ಏರ್ಪಡಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪರಿಶಿಷ್ಟರ ಬದುಕಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಬಿಜೆಪಿ ಸರಕಾರದಿಂದ ಪರಿಶಿಷ್ಟ ಸಮುದಾಯದ ಜನಸಾಮಾನ್ಯರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದ್ದು, ಮೀಸಲಾತಿ ಎಂಬುದು ಪರಿಶಿಷ್ಟರ ಭಿಕ್ಷೆಯಲ್ಲ, ಅದು ಹಕ್ಕು ಎಂಬ ನೆಲೆಯಲ್ಲಿ ಈ ಸಮಾವೇಶ ಮಾಡುತ್ತಿದ್ದೇವೆ. ರಾಜ್ಯ ಸರಕಾರ ಜಾರಿಗೆ…
ಬಂಟ್ಚಾಳ: ತಾಲೂಕಿನಾದ್ಯಂತ ಮನೆಮಾತಾಗಿರುವ ಪ್ರತಿಷ್ಠಿತ ಭದ್ರ ಗ್ಯಾಸ್ ಏಜೆನ್ಸಿ ಸಂಸ್ಥೆಯ ವಿವಿಧ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಸಂಸ್ಥೆಯ ನೂತನ ಮಳಿಗೆಯೊಂದು ಬಂಟ್ಚಾಳದಲ್ಲಿ ಆರಂಭಗೊಳ್ಳಲಿದ್ದು ಉದ್ಯೋಗಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಸೇಲ್ಸ್ ಎಕ್ಸಿಕ್ಯುಟಿವ್ (ಪುರುಷರು)-5, ಸೇಲ್ಸ್ ಎಕ್ಸಿಕ್ಯುಟಿವ್ (ಮಹಿಳೆಯರು)-5, ಅಕೌಂಟೆಂಟ್-1, ತ್ರಿಚಕ್ರ ವಾಹನ ಚಾಲಕರು-2, ಹುದ್ದೆಗಳಿದ್ದು ಆಸಕ್ತರು ಭದ್ರ ಹೋಂ ಅಪ್ಲೈಯೆನ್ಸಸ್, ಅಗ್ನಿಶಾಮಕ ಠಾಣೆಯ ಮುಂಭಾಗ, ಬಸ್ತಿಪಡ್ಪು, ಬಂಟ್ವಾಳ ಇಲ್ಲಿಗೆ ಮುಖತಃ ಅರ್ಜಿ ಸಲ್ಲಿಸ ಬಹುದಾಗಿದೆ.ಎ.10 ಅರ್ಜಿ ಸಲ್ಲಿಸಲು ಕೊನೆಯ ದಿನ. ಸೇಲ್ಸ್ ಎಕ್ಸಿಕ್ಯುಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಸೂಪರ್ ಮಾರ್ಕೆಟ್ ಅಥವಾ ಮಾರ್ಕೆಟಿಂಗ್ ಕ್ಷೆತ್ರದಲ್ಲಿ ಅನುಭವ ಹೊಂದಿದವರಿಗೆ ಪ್ರಥಮ ಆದ್ಯತೆ, ಬಂಟ್ವಾಳ ತಾಲೂಕಿನ ಉದ್ಯೋಗಾಕ್ಷಿಗಳಿಗೆ ಮೊದಲ ಪ್ರಾಶಸ್ತ್ಯ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಬಂಟ್ವಾಳ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಇದರ ಆಶ್ರಯದಲ್ಲಿ ಯಕ್ಷಗಾನ ಬಯಲಾಟದ ಪ್ರಯುಕ್ತ ಪ್ರಥಮ ವರ್ಷದ ಶ್ರೀ ಕ್ಷೇತ್ರ ಕಟೀಲಿಗೆ ಅಮ್ಮನಡೆ ನಮ್ಮ ನಡೆ ಪಾದಾಯಾತ್ರೆಯು ನಡೆಯಲಿದೆ.ಎ.8ರಂದು ಶನಿವಾರ ಸಂಜೆ 5.30ಕ್ಕೆ ಪುಂಚೋಡಿ ನಾಗಬನದಿಂದ ಪಾದಯಾತ್ರೆ ಆರಂಭಗೊಳ್ಳಲಿದ್ದು ಮುಂದಿನ 5ವರ್ಷದವರೆಗ ಪ್ರತೀವರ್ಷ ಪಾದಯಾತ್ರೆ ನಡೆಯಲಿದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಸುದರ್ಶನ ಜೈನ್ ಪಂಜಿಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಬಂಟ್ವಾಳ: ವಿಧಾನ ಸಭಾ ಚುನಾವಣೆ 2023 ಕರ್ತವ್ಯಕ್ಕೆ ನಿಯೋಜಿಸಿರುವ 205-ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿ (ಪ್ರಿಸೆಡಂಗ್ ಆಫೀಸರ್) ಮತ್ತು ಸಹಾಯಕ ಮತಗಟ್ಟೆ ಅಧಿಕಾರಿ (ಅಸಿಸ್ಟೆಂಟ್ ಪ್ರಿಸೈಡಿಂಗ್ ಆಫೀಸರ್) ಗಳಿಗೆ ಎ.9 ರಂದು ಬಿ.ಮೂಡಾ ಗ್ರಾಮದ ಮೊಡಂಕಾಪು ಇನ್ಸೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ತರಬೇತಿಗೆ ಹಾಜರಾಗಲು ತಿಳಿಸಲಾಗಿತ್ತು. ಆದರೆ ಪದವಿ ಪೂರ್ವ ಪರೀಕ್ಷೆಯ ಮೌಲ್ಯಮಾಪನ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯುತ್ತಿರುವುದರಿಂದ ಹಲವಾರು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿಗೆ ಹಾಜರಾಗಲು ಅಸಾಧ್ಯವಾಗಿರುತ್ತದೆ ಎಂದು ತಿಳಿದುಬಂದಿರುವುದರಿಂದ ಈಗಾಗಲೇ ನಿಗದಿಪಡಿಸಲಾದ ತರಬೇತಿಯನ್ನು ಎ.16 ಭಾನುವಾರ ಬೆಳಗ್ಗೆ 9 ಗಂಟೆಗೆ ಮುಂದೂಡಲಾಗಿರುತ್ತದೆ. ತರಬೇತಿಗೆ ನಿಯೋಜನೆಗೊಂಡ ಎಲ್ಲರೂ ಈಗಾಗಲೇ ತಿಳಿಸಿರುವ ತರಬೇತಿ ಕೇಂದ್ರದಲ್ಲಿ ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕು ಎಂದು ಚುನಾವಣಾಧಿಕಾರಿ ಅಭಿದ್ ಗದ್ಯಾಲ್ ತಿಳಿಸಿದ್ದಾರೆ.
https://youtu.be/VHUrBbY80nY
ಬಂಟ್ವಾಳ: ಬ್ಯಾಂಕ್ ಆಫ್ ಬರೋಡ ಮುಲ್ಕಿ ಶಾಖೆಯ ಸೀನಿಯರ್ ಮ್ಯಾನೇಜರ್ ಪ್ರಣಾಮ್ ಕುಮಾರ್ ಚೀಪ್ ಮ್ಯಾನೇಜರ್ ಆಗಿ ಬಡ್ತಿಗೊಂಡಿದ್ದಾರೆ. ವಿಜಯ ಬ್ಯಾಂಕ್ ಸೋಮರ ಪೇಟೆ ಬ್ರಾಂಚ್ ನಲ್ಲಿ ಸಹಾಯಕ ಪ್ರಬಂಧಕ ಹುದ್ದೆಯಲ್ಲಿ ವೃತ್ತಿಜೀವನ ಆರಂಭಿಸಿದ ಬಳಿಕ ಮಡಿಕೇರಿ ಬ್ರಾಂಚ್ ಗೆ ವರ್ಗಾವಣೆಗೊಂಡು ಅಲ್ಲಿ ಕರ್ತವ್ಯ ನಿರ್ವಹಿಸಿ ಭಡ್ತಿ ಪಡೆದು ಬಂಟ್ವಾಳ ತಾಲೂಕಿನ ಸರಪಾಡಿ ವಿಜಯ ಬ್ಯಾಂಕಿನ ಬ್ರಾಂಚ್ ಮೆನೇಜರ್ ಆಗಿ ಅಧಿಕಾರ ಸ್ವೀಕರಿಸಿದರು. ಬಳಿಕ ಕಲ್ಲಡ್ಕ ವಿಜಯ ಬ್ಯಾಂಕಿನ ಮ್ಯಾನೇಜರ್ ಆಗಿ ವರ್ಗಾವಣೆಗೊಂಡರು ಅದೇ ಸಂದರ್ಭದಲ್ಲಿ ಕೇಂದ್ರ ಸರಕಾರದ ಆದೇಶದಂತೆ ವಿಜಯ ಬ್ಯಾಂಕ್ , ಬ್ಯಾಂಕ್ ಆಫ್ ಬರೋಡ ಜೊತೆ ಲೀನವಾಯಿತ್ತು ಇವರ ಕಾರ್ಯದಕ್ಷತೆಯನ್ನು ಪರಿಗಣಿಸಿದ ಬ್ಯಾಂಕ್ ಆಫ್ ಬರೋಡ ಸೀನಿಯರ್ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಿ ಕಲ್ಲಡ್ಕ ಬ್ಯಾಂಕಿನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕರ್ತವ್ಯದಲ್ಲಿ ಮುಂದುವರಿಯಲು ಆದೇಶಿಸಿತು. ಬಳಿಕ ಮಂಗಳೂರು ತಾಲೂಕಿನ ಮುಲ್ಕಿ ಬ್ಯಾಂಕ್ ಆಫ್ ಬರೋಡ ಶಾಖೆಗೆ ಸೀನಿಯರ್ ಮ್ಯಾನೇಜರ್ ಆಗಿ ವರ್ಗಾವಣೆಗೊಂಡರು ಪ್ರಣಾಮ್ ಕುಮಾರ್ ರವರ ಬ್ಯಾಂಕಿನ…
ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕಬಕ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕ ಇವರ ಸಂಯೋಜನೆಯಲ್ಲಿ ಹಾಗೂ ಮಿತ್ರಂಪಾಡಿ ಜಯರಾಮ್ ರೈ ಅವರ ಮಹಾಪೋಷಕತ್ವದಲ್ಲಿ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ನಡೆಯುವ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮದ ಐದನೇ ಸರಣಿ ಕಾರ್ಯಕ್ರಮವು ಕಬಕ ಗ್ರಾಮದ ಗೌಡ ಸಮುದಾಯಭವನ ಮುರದಲ್ಲಿ ನಡೆಯಿತು. ಸ್ಥಳೀಯ ಸಾಧಕರಿಗೆ ಸನ್ಮಾನ:ಸಾಧಕರ ಅಭಿನಂದನಾ ಕಾರ್ಯಕ್ರಮದಲ್ಲಿ ಶಾಸನ ಅಧ್ಯಯನಕಾರರಾದ ಶ್ರೀ ಉಮಾನಾಥ್ ಶೆಣೈ, ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು, ಸಂಗೀತ ಕಲಾವಿದರಾದ ಮಿಥುನ್ ರಾಜ್ ವಿದ್ಯಾಪುರ, ಡಾ.ಶ್ರೀಶಭಟ್ ಸ್ಥಾಪಕಾಧ್ಯಕ್ಷರು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ (ರಿ), ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಪ್ರೇಮಲತಾ ಎಂ,ಶ್ರೀಮತಿ ಸುಲೋಚನಾ ಕೆ ರವರನ್ನು ಸ್ಥಳೀಯ ಸಾಧಕರ ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಪುತ್ತೂರು ಉಮೇಶ್ ನಾಯಕ್ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ…
ಬಂಟ್ವಾಳ: ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಾಗಿ ಜೀವನ ಮೀಸಲಿಟ್ಟ ಯುವ ನಾಯಕ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಇವರಿಗೆ ಶುಲ್ಕ ರಹಿತ ಭದ್ರತಾ ಅಂಗರಕ್ಷಕ (ಗನ್ ಮೆನ್) ಸೌಲಭ್ಯ ಮತ್ತೆ ನೀಡಬೇಕು ಎಂದು ಬಂಟ್ವಾಳ ತಾಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಆಗ್ರಹಿಸಿದೆ.ಇಲ್ಲಿನ ಬಿ.ಸಿ.ರೋಡು ಆಡಳಿತ ಸೌಧದಲ್ಲಿ ಬಂಟ್ವಾಳ ತಾಲೂಕು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ನವೀನ್ ಕೋಟ್ಯಾನ್ ನೇತೃತ್ವದ ನಿಯೋಗ ಬುಧವಾರ ತೆರಳಿ ಉಪ ತಹಶೀಲ್ದಾರ್ ನರೇಂದ್ರನಾಥ್ ಇವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಕೆಲವೊಂದು ಮತೀಯ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಸತ್ಯಜಿತ್ ಸುರತ್ಕಲ್ ಇವರಿಗೆ ಕಳೆದ ೧೬ವರ್ಷಗಳಿಂದ ಸರ್ಕಾರ ಶುಲ್ಕ ರಹಿತ ಅಂಗರಕ್ಷಕ (ಗನ್ ಮೆನ್) ಸೌಲಭ್ಯ ನೀಡಿತ್ತು. ಇದೀಗ ಚುನಾವಣೆ ನೆಪದಲ್ಲಿ ಏಕಾಯೇಕಿ ಈ ಸೌಲಭ್ಯ ವಾಪಾಸು ಪಡೆದು ಶುಲ್ಕ ಪಾವತಿಸಲು ಸೂಚಿಸಿರುವುದು ಖಂಡನೀಯ. ಈ ಆದೇಶ ಕೂಡಲೇ ರದ್ದುಗೊಳಿಸಿ, ಶುಲ್ಕ…








