
ಬಂಟ್ವಾಳ: ಸಮೃದ್ಧಿ ಚಾರಿ ಟೇಬಲ್ ಟ್ರಸ್ಟ್ ಜೋಡು ಮಾರ್ಗ, ಬಂಟ್ವಾಳ ಆಶ್ರಯದಲ್ಲಿ ಮೂಡೂರು ಫ್ರೆಂಡ್ಸ್ ಕಾವಳಕಟ್ಟೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾವಳಮೂಡೂರು ಹಾಗೂ ಯೆನಪೊಯ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದೊಂದಿಗೆ ಕಾವಳಕಟ್ಟೆ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು.

ಜಿಲ್ಲಾ ಪಂಚಾಯತ್ ಸದಸ್ಯ ಬಿ. ಪದ್ಮಶೇಖರ್ ಜೈನ್, ಕಿಸಾನ್ ಘಟಕದ ಅಧ್ಯಕ್ಷ ಸದಾನಂದ ಶೆಟ್ಟಿ, ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ರಮೇಶ ನಾಯಕ್ ರಾಯಿ, ಟ್ರಸ್ಟಿನ ಸದಸ್ಯರಾದ ಇಬ್ರಾಹಿಂ ನವಾಜ್, ಬಿ.ಆರ್. ಅಂಚನ್, ಪ್ರಮುಖರಾದ ಪ್ರಮೋದ್ ಕುಮಾರ್, ವಸಂತ ಶೆಟ್ಟಿ, ಸತೀಶ್ ಪೂಜಾರಿ ಪಡಂತರ ಬೆಟ್ಟು, ದೂಮಪ್ಪ ಪರವ ಮೊದಲಾದವರಿದ್ದರು.
ಅರ್ಹ ಫಲಾನುಭವಿಗಳಿಗೆ ಉಚಿತ ಔಷಧಿ ಮತ್ತು ಕನ್ನಡಕ ವಿತರಿಸಲಾಯಿತು.

