Author: admin
ಮೇ.6ರಂದು ಬಿ.ಸಿ.ರೋಡಿನಲ್ಲಿ ಯೋಗಿ ಆದಿತ್ಯನಾಥ್ ಬೃಹತ್ ರೋಡ್ ಶೋ ಬಂಟ್ವಾಳ: ಇಲ್ಲಿನ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ, ಸ್ಟಾರ್ ಪ್ರಚಾರಕ್ ಆಗಿರುವ ಯೋಗಿ ಆದಿತ್ಯನಾಥ್ ಅವರು ಮೇ.6ರಂದು ಶನಿವಾರ ಬಿ.ಸಿ.ರೋಡಿಗೆ ಆಗಮಿಸಲಿದ್ದು ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದರು.ಅವರು ಗುರುವಾರ ಬಿಜೆಪಿ ಕಚೇರಿಯುಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಅಂದು ಸಂಜೆ 4ಗಂಟೆಗೆ ಯೋಗಿಜೀ ಆಗಮಿಸಲಿದ್ದು ಸಂಜೆ 6 ಗಂಟೆಯವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. Advertisement Paid advertisement ಕೈಕಂಬದ ಪೊಳಲಿ ದ್ವಾರದ ಬಳಿಯಿಂದ ಬಿ.ಸಿ.ರೋಡು ಬಸ್ಸು ನಿಲ್ದಾಣದವರೆಗೆ ಬೃಹತ್ ರೋಡ್ ಶೋ ಮೆರವಣಿಗೆ ನಡೆಯಲಿದ್ದು ಬಳಿಕ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ, ಒಂದು ಬೂತ್‌ಗಳಿಂದ ಕನಿಷ್ಠ 100 ಮಂದಿ ಕಾರ್ಯಕರ್ತರು ಭಾಗವಹಿಸುವ ಬಗ್ಗೆ ನಿರ್ಧರಿಸಲಾಗಿದ್ದು ಬಂಟ್ವಾಳ ಕ್ಷೇತ್ರದಿಂದ ಸುಮಾರು 30 ರಿಂದ 40…
ಬಜರಂಗದಳವನ್ನು ನಿಷೇಧಿಸುವವರನ್ನು ಸಮಾಜ ನಿಷೇಧಿಸುತ್ತದೆ: ಪ್ರಸಾದ್ ಕುಮಾರ್ ರೈ ಬಂಟ್ವಾಳ: ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸಲು ಹೊರಟಿರುವುದು ತೀವ್ರ ಖಂಡನೀಯ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದರು.ಅವರು ಗುರುವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಿಟಿಷರು ಹೇಗೆ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದರೋ ಅದೇ ರೀತಿ ಕಾಂಗ್ರೆಸ್ ಕೂಡ ಒಡೆದು ಆಳುವ ನೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಈ ದೇಶದ ಅಸ್ಮಿತೆಯಯಾಗಿರುವ ಹಿಂಧೂ ಧರ್ಮವನ್ನು ಜಾತ್ಯಾತೀತತೆ, ತುಷ್ಠೀಕರಣ ಹೆಸರಿನಲ್ಲಿ ಮೆಟ್ಟುವ ಪ್ರಯತ್ನ ಮಾಡಿದೆ. ಬಹುಸಂಖ್ಯಾತರಾಗಿರುವ ಹಿಂದೂಗಳು ತಮ್ಮ ಧರ್ಮದ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದೊಡ್ಡಿದೆ ಎಂದು ಆರೋಪಿಸಿದರು. Advertisement Advertisement Advertisement ಈ ದೇಶದ ಹಿಂದೂಗಳ ರಕ್ಷಣೆಗೋಸ್ಕರ ಹನುಮಂತನ ಹೆಸರಿನಲ್ಲಿ ಬಜರಂಗದಳ ಪ್ರಾರಂಭಗೊಂಡಿದೆ. ಹಿಂದೂ ಧರ್ಮದ ರಕ್ಷಣೆಗಾಗಿ ನಿರಂತರವಾದ ಹೋರಾಟವನ್ನು ಮಾಡಿಕೊಂಡು ಬಂದಿರುವ ಭಜರಂಗದಳವನ್ನು ಕಾಂಗ್ರೆಸ್ ನಿಷೇಧಿಸಲು ಹೊರಟಿದೆ. ಬಜರಂಗದಳವೆಂದರೆ ಗಲಾಟೆ…
ಬಂಟ್ವಾಳ : ವಾಮಮಾರ್ಗದಲ್ಲಿ ಗೆಲ್ಲುವ ಬಿಜೆಪಿ ತಂತ್ರಕ್ಕೆ ಈ ಬಾರಿ ಯಶಸ್ಸು ಸಿಗಲಾರದು ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಪುಂಜಾಲಕಟ್ಟೆ ಮತ್ತು ಪಿಲಾತಬೆಟ್ಟುವಿನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿಯದ್ದು ಸುಳ್ಳು ವದಂತಿಗಳ ಮೂಲಕ ಚುನಾವಣೆ ಗೆಲ್ಲುವ ತಂತ್ರ : ರಮಾನಾಥ ರೈ ಕಳೆದ ಐದು ವರ್ಷಗಳಲ್ಲಿ ಬಿಜೆಪಿಯ ಅಭಿವೃದ್ಧಿ ಶೂನ್ಯವಾಗಿದೆ. ಜನರ ಮುಂದೆ ಮಾತನಾಡುವುದಕ್ಕೆ ಅವರ ಬಳಿ ವಿಷಯಗಳಿಲ್ಲ. ಹೀಗಾಗಿ ಈ ಬಾರಿ ಕೂಡ ಅವರು ಸುಳ್ಳು, ವದಂತಿಗಳ ಮೂಲಕವೇ ಚುನಾವಣೆ ಗೆಲ್ಲುವ ತಂತ್ರ ಹೂಡಿದ್ದಾರೆ. ಆದರೆ, ಜನರು ಬಿಜೆಪಿಯ ಇಂತಹ ಕುತಂತ್ರಗಳನ್ನು ಮೆಟ್ಟಿನಿಂತು ಕಾಂಗ್ರೆಸ್ ಅನ್ನು ಭಾರೀ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ರೈ ಭರವಸೆ ವ್ಯಕ್ತಪಡಿಸಿದರು. Advertisement ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಗಳ ನೇತೃತ್ವ ನಾನು ವಹಿಸಿದ್ದೇನೆ. ಅನೇಕ ದೇವಸ್ಥಾನಗಳಿಗೆ ಧ್ವಜಸ್ಥಂಭ ನೀಡಿ ಸೇವೆ ಸಲ್ಲಿಸಿದ್ದೇನೆ. ಆದರೂ ನನ್ನ ವಿರುದ್ಧ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ…
ಜ್ಯೋತಿಗುಡ್ಡೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾರ್ಯಕರ್ತರು ತುಂಬೆ: ಬಿಜೆಪಿಯ ತತ್ವ ಸಿದ್ದಾಂತ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರದ ಸಾಧನೆಯನ್ನು ಮೆಚ್ಚಿ ತುಂಬೆ ಗ್ರಾಮದ ಜ್ಯೋತಿಗುಡ್ಡೆಯಲ್ಲಿ ಹಲವು ಮಂದಿ ಕಾಂಗ್ರೆಸ್ ಕಾರ್ಯಕರ್ತರು ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ಅವರ ನೇತೃತ್ವದಲ್ಲಿ ಬುಧವಾರ ರಾತ್ರಿ ಬಿಜೆಪಿ ಪಕ್ಷ ಸೇರಿದರು. ಬಿಜೆಪಿ ಮಂಗಳೂರು ಕ್ಷೇತ್ರದ ಅಭ್ಯರ್ಥಿ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪ್ರಮುಖರಾದ ಆರ್ ಎಸ್. ಜಯ ರಾಮಲ್ ಕಟ್ಟೆ, ರೂಪೇಶ್ ಜ್ಯೋತಿ ಗುಡ್ಡೆ, ಹರೀಶ್ ಜ್ಯೋತಿಗುಡ್ಡೆ, ಕೃಷ್ಣಪ್ಪ ಜ್ಯೋತಿ ಗುಡ್ಡೆ ಪ್ರಜ್ವಲ್, ಪ್ರತೀಕ್, ಕಿರಣ್ ಜ್ಯೋತಿಗುಡ್ಡೆ ಬಿಜೆಪಿ ಸೇರಿದರು.ಬಳಿಕ ಬಿಜೆಪಿ ಮಂಗಳೂರು ಮಂಡಲ ವಾರ್ಡ್ 87ರ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಅಭ್ಯರ್ಥಿಸತೀಶ್ ಕುಂಪಲ ಮಾತನಾಡಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿದೆ. Advertisement ಪ್ರಧಾನಿ…
ಬಂಟ್ವಾಳ ಬಿಜೆಪಿಯ ದ್ವೇಷ ರಾಜಕಾರಣದ ಪ್ರಯೋಗಶಾಲೆಯಾಗಿದೆ: ಮುನೀರ್ ಕಾಟಿಪಳ್ಳ ಬಂಟ್ವಾಳ: ಭ್ರಷ್ಟ, ಕೋಮುವಾದಿ ಬಿಜೆಪಿ ಆಡಳಿತದಲ್ಲಿ ಜನತೆ ತತ್ತರಿಸಿ ಹೋಗಿದ್ದಾರೆ. ಬೆಲೆಯೇರಿಕೆ, ಕಾರ್ಮಿಕ ವಿರೋಧಿ ನೀತಿಗಳಿಂದ ದುಡಿಯುವ ಜನರ ಬದುಕಿನ ಮೇಲೆ ಗಧಾ ಪ್ರಹಾರವಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ಕಾರ್ಮಿಕ ವರ್ಗದ ಆದ್ಯತೆ, ರೈತ, ಕಾರ್ಮಿಕರ ಚಳವಳಿಗಳ ಕೇಂದ್ರವಾಗಿದ್ದ ಬಂಟ್ವಾಳವನ್ನು ಬಿಜೆಪಿ ಇಂದು ದ್ವೇಷ ರಾಜಕಾರಣದ ಪ್ರಯೋಗ ಶಾಲೆಯಾಗಿ ಪರಿವರ್ತಿಸಿದೆ. ಬದುಕಿನ ಪ್ರಶ್ನೆಗಳನ್ನು ಕಡೆಗಣಿಸಿ, ಮತಾಂಧತೆಗೆ ಒತ್ತು ನೀಡುತ್ತಿರುವ ಬಿಜೆಪಿಯನ್ನು ಸೋಲಿಸಲು ಬಂಟ್ವಾಳದಲ್ಲಿ ಸಿಪಿಐಎಂ ಶ್ರಮಿಸಲಿದೆ ಎಂದು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ. Advertisement ಅವರು ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಂಟ್ವಾಳ ಸಹಿತ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಆಡಳಿತದ ಅಡಿಯಲ್ಲಿ ಎಲ್ಲಾ ರಂಗಗಳಲ್ಲಿಯೂ ಹಿನ್ನಡೆ ಅನುಭವಿಸಿದೆ. ಸಾರ್ವಜನಿಕ ಶಿಕ್ಷಣ, ಆರೋಗ್ಯ ಕ್ಷೇತ್ರವನ್ನು ಪೂರ್ತಿಯಾಗಿ ಕಡೆಗಣಿಸಿ ವ್ಯಾಪಾರೀಕರಣಕ್ಕೆ ಪೂರ್ಣ ಅವಕಾಶ ಒದಗಿಸಲಾಗಿದೆ. ಹೊಸದಾಗಿ ಯಾವುದೇ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯದಿರುವುದು, ಹೊಸ ತಾಲೂಕುಗಳಿಗೆ ಆಸ್ಪತ್ರೆಗಳನ್ನು…
ಕನ್ಯಾನ, ಕರೋಪಾಡಿ ಗ್ರಾಮದಲ್ಲಿ ರಾಜೇಶ್ ನಾಯ್ಕ್ ಮತಯಾಚನೆ ಬಂಟ್ವಾಳ: ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಕರೋಪಾಡಿ ಮತ್ತು ಕನ್ಯಾನ ಗ್ರಾಮದಲ್ಲಿ ಮತಯಾಚನೆ ನಡೆಸಿದರು.ಹಿಂದೂ ಧರ್ಮದ ರಕ್ಷಣೆಯ ಜವಬ್ದಾರಿ ಹೊಂದಿರುವ ಸಂಘಟನೆಯಲ್ಲಿ ಒಂದಾದ ಭಜರಂಗದಳದ ನಿಷೇಧ ಮಾಡಲು ಹೊರಟಿರುವ ಕಾಂಗ್ರೆಸ್ ನ ಮನಸ್ಥಿತಿಯನ್ನು ನಾವು ಆಲೋಚಿಬೇಕಾದ ಕಾಲಘಟ್ಟದಲ್ಲಿ ಇದ್ದೇವೆ ಎಂದು ತಿಳಿಸಿದರು.ನಿರಂತರವಾಗಿ ಹಿಂದೂ ಧರ್ಮದ ಮೇಲೆ ದಾಳಿ ಮಾಡುತ್ತಾ ಬಂದಿರುವ ಕಾಂಗ್ರೆಸ್ ನ ಅಸಲಿ ಬುದ್ದಿ ಬಹಿರಂಗಗೊಂಡಿದೆ. ಗೋಕಳ್ಳತನ , ಅತ್ಯಾಚಾರ, ಮತಾಂತರ, ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಬಂದಿರುವ ಕಾಂಗ್ರೆಸ್ ಗೆ ಈ ಬಾರಿ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.ಬಂಟ್ವಾಳದ ದ್ವೇಷದ ರಾಜಕಾರಣಕ್ಕೆ ಮತದಾರರು ಪಾಠ ಕಲಿಸಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. Advertisement ಸದಸ್ಯರಾದ ರಘನಾಥ ಶೆಟ್ಟಿ ಪಟ್ಲ, ರಘುರಾಮ ಶೆಟ್ಟಿ, ಧರ್ಣಮ್ಮ ,ಜೆ.ಪಿ.ಗೌಡ,ಮನೋಜ್ ಬನಾರಿ, ಪ್ರಮುಖರಾದ ಯೋಗೀಶ್ ಕುಳ,ಶಿವಪ್ರಸಾದ್ ಶೆಟ್ಟಿ , ವಿನೋದ್ ಶೆಟ್ಟಿ ,ಹರೀಶ್ ಬೇಡಗುಡ್ಡೆ,ಉದಯರಮಣ ಭಟ್,ಕುಮಾರ್…
ಬಡವರಿಗೆ ಅಚ್ಛೇ ದಿನ್ ಬಂದಿಲ್ಲ : ರಮಾನಾಥ ರೈ ಬಂಟ್ವಾಳ : ಅಂಬಾನಿ, ಅದಾನಿಯಂತಹ ಶ್ರೀಮಂತರಿಗೆ ಅಚ್ಛೇದಿನ್ ಬಂದಿದೆಯೇ ಹೊರತು, ಬಡವರಿಗೆ ಅಚ್ಛೇದಿನ್ ಬಂದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಕಕ್ಯಪದವಿನಲ್ಲಿ ನಡೆದ ಪ್ರಚಾರಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಗ್ಯಾರಂಟಿಗಳನ್ನು ಬಿಜೆಪಿಗರು ಲೇವಡಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ ಉಚಿತ ಅಕ್ಕಿ ಕೊಟ್ಟಾಗ ಇಂತಹುದೇ ಮಾತುಗಳನ್ನಾಡುತ್ತಿದ್ದರು. ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗ, ಈ ಅಕ್ಕಿಯಲ್ಲಿ ಕೇಂದ್ರದ ಪಾಲಿದೆ ಎನ್ನುತ್ತಿದ್ದರು ಎಂದು ರೈ ಸ್ಮರಿಸಿದರು.ಕಾಂಗ್ರೆಸ್ ಗ್ಯಾರಂಟಿಗಳು ಬೋಗಸ್ ಎಂದು ಬಿಜೆಪಿಯವರು ಅಪಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಈ ಹಿಂದೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ. ಬಡವರಿಗೆ ಏಳು ಕೆಜಿ ಅಕ್ಕಿ ಕೊಟ್ಟದ್ದು ಕಾಂಗ್ರೆಸ್. ರೈತರಿಗೆ ಉಚಿತ ವಿದ್ಯುತ್ ಅನ್ನು ಈಗಾಗಲೇ ನೀಡಲಾಗುತ್ತಿದೆ. Advertisement ಇವತ್ತು ರೈತರು ಉಚಿತವಾಗಿ ವಿದ್ಯುತ್ ಪಡೆದು ಹಲವು ಪಂಪ್ ಗಳನ್ನು ಅಳವಡಿಸಿ ತಮ್ಮ ತೋಟಗಳಿಗೆ ನೀರು ಹರಿಸುತ್ತಿದ್ದಾರೆ ಎಂದರೆ…
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭ ಬಂಟ್ವಾಳ: ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭವು ಆಸ್ಪತ್ರೆಯ ಆವರಣದಲ್ಲಿ ನೆರವೇರಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಿ?ಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಆರೋಗ್ಯ ಸೇವೆಯನ್ನು ಪ್ರಮುಖ ಉದ್ದೇಶವನ್ನಾಗಿಸಿ ಬೆಳೆದು ಬಂದಿರುವ ಫಾದರ್ ಮುಲ್ಲರ್ ವೈದ್ಯಕೀಯ ಸಂಸ್ಥೆಗಳು ನಗುಮೊಗದ ಸ್ವಾಗತದೊಂದಿಗೆ ರೋಗಿಗಳ ಆರೈಕೆಯನ್ನು ಮಾಡಿದ್ದು, ಇಲ್ಲಿನ ವೈದ್ಯರು, ಸಿಬಂದಿಯ ಸೇವೆ ದೇವರ ಪ್ರೀತಿಗೆ ಪಾತ್ರವಾಗಿದೆ. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ನೀಡುವುದಕ್ಕೆ ಆಡಳಿತ ಮಂಡಳಿ ಸೇರಿದಂತೆ ಎಲ್ಲರೂ ಕಠಿನ ಶ್ರಮ ಪಡುತ್ತಿದ್ದು, ನಿಮ್ಮ ಶ್ರಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ ಎಂದರು.ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಮಾತನಾಡಿ, ವಿಶೇ? ವಿನ್ಯಾಸದಿಂದ ಬಿಎ ಗ್ರೂಪ್‌ನವರು ರೂಪಿಸಿದ ಆಸ್ಪತ್ರೆಯನ್ನು ಫಾದರ್ ಮುಲ್ಲರ್ ಸಂಸ್ಥೆಯು ಮುನ್ನಡೆಸಿ ಪ್ರಸ್ತುತ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಗ್ರಾಮೀಣ ಭಾಗದ ಜನತೆಯ ಜತೆಗೆ ಸ್ಥಳೀಯ ಪಂಚಾಯತ್…
ದಿ. ಡೊಂಬಯ ಮೂಲ್ಯ ಸ್ಮರಣಾರ್ಥ ಆಶ್ರಮವಾಸಿಗಳಿಗೆ ನೆರವು, ನುಡಿನಮನ ಬಂಟ್ವಾಳ: ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ದಿ.ಡೊಂಬಯ್ಯ ಮೂಲ್ಯರ ಸ್ಮರಣಾರ್ಥ ಅವರ ಆತ್ಮ ಸದ್ಗತಿ ಗಾಗಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಒಕ್ಕೂಟ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ನುಡಿ ನಮನ ಮತ್ತು ಅನ್ನದಾನ ಕಾರ್ಯಕ್ರಮವು ವೇಣೂರು ಗುಂಡೂರಿನ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ನಡೆಯಿತು. Advertisement ಈ ಸಂದರ್ಭ ಸಂಘಟನೆಯ ಪ್ರಮುಖರಾದ ಸುಕುಮಾರ್ ಬಂಟ್ವಾಳ, ಶೇಷಪ್ಪ ಮೂಲ್ಯ, ವಿಠಲ ಪಲ್ಲಿಕಂಡ, ಕಿಶೋರ್ ಬಂಗೇರ, ಪುನೀತ್ ಕಾಮಾಜೆ, ಕಾರ್ತಿಕ್ ಮಯ್ಯರಬೈಲು, ಸಂತೋಷ್ ಭಂಡಾರಿಬೆಟ್ಟು, ಪ್ರದೀಪ್ ಪಲ್ಲಮಜಲು, ನಿಶಾಲ್ ಕುಲಾಲ್, ಸೌಮ್ಯ ಸುಕುಮಾರ್ , ಪದ್ಮನಾಭ ನಾವೂರ ಹಾಗೂ ತುಂಬೆ ಕುಲಾಲ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾದ ನೀಲಪ್ಪ ಸಾಲಿಯಾನ್, ದಿ.ಡೊಂಬಯ್ಯ ಮುಲ್ಯರ ಮನೆಯವರದ ಶಶಿಧರ್ ಸಾಲಿಯಾನ್, ಸುಜಿತ್ ಕುಮಾರ್, ಅಕ್ಷತಾ,ಮನ್ವಿತಾ, ರತನ್, ಉಪಸ್ಥಿತರಿದ್ದರು,ಸೇವಾಶ್ರಮ ದ ಹೊನ್ನಯ ಕಾಟಿಪಲ್ಲ ದಿವಂಗತರ ಆತ್ಮ ಸದ್ಗತಿಗಾಗಿ ಶ್ರೀ ಗುರುರಾಯರಲ್ಲಿ ಪ್ರಾರ್ಥಿಸಿದರು. ನಿತೀಶ್…
https://youtu.be/HQ7IFqkUTzw ಬಂಟ್ಬಾಳ: ಪಾರ್ಸೆಲ್ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೊಬ್ಬ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಕದ್ದು ಪರಾರಿಯಾದ ಘಟನೆ ಬಂಟ್ವಾಳದ ರಾಯರ ಚಾವಡಿ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಇಂದಿರಾ ಕರಿಮಣಿ ಸರ ಕಳೆದುಕೊಂಡವರು. Advertisement ಭಾನುವಾರ ಮಧ್ಯಾಹ್ನದ ವೇಳಗೆ ಮನೆ ಬಳಿಗೆ ಬಂದ ಕಳ್ಳ ಪಾರ್ಸೆಲ್ ನೀಡುವ ನೆಪದಲ್ಲಿ ಮಹಿಳೆಯ ಸಮೀಪಕ್ಕೆ ಬಂದು ಸುಮಾರು 4 ಪವನಿನ ಕರಿಮಣಿ ಸರ ಎಗರಿಸಿ ಸ್ಥಳದಿಂದ ಓಡಿ ಹೋಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳ ಸರ ಎಗರಿಸಿ ಓಡುವ ದೃಶ್ಯ ಎದುರಿನ ಮನೆಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. Advertisement








