ಬಂಟ್ವಾಳ: ಕ್ಷೇತ್ರದ ಜನರಿಗೆ ಕುಡಿಯುವ ನೀರಿಗೆ ಹಾಗೂ ಕೃಷಿಗೆ ತೊಂದರೆಯಾಗಬಾರದು ಎಂಬ ದೂರದೃಷ್ಟಿಯಿಂದ ನೇತ್ರಾವತಿ ನದಿಗೆ ಚೆಕ್ ಡ್ಯಾಂ ಹಾಗೂ ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಸಣ್ಣ ಸಣ್ಣ ತೋಡುಗಳಿಗೆ ಚೆಕ್ ಡ್ಯಾಂ ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಅಮ್ಟೂರು ಶಕ್ತಿ ಕೇಂದ್ರದ ಕರಿಂಗಾಣ ರಾಜು ಪೂಜಾರಿ ಅವರ ಮನೆಯಲ್ಲಿ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜನರು ನೀಡಿದ ಪ್ರೀತಿಯೇ ನನಗೆ ಶಕ್ತಿಯಾಗಿದ್ದು, ನಿರಂತರವಾಗಿ ಕ್ಷೇತ್ರದಲ್ಲಿ ಓಡಾಟ ಮಾಡಲು ಸಾಧ್ಯವಾಗಿದೆ ಎಂದರು.
ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಎಸ್.ಸಿ.ಮೋರ್ಚಾದ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು, ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ,ಡೊಂಬಯ್ಯ ಅರಳ, ಅಮ್ಟೂರು ಗ್ರಾಮದ ಪ್ರಭಾರಿ ಗಣೇಶ್ ರೈ ಮಾಣಿ, ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ,ಉಪಾಧ್ಯಕ್ಷೆ ಲಕ್ಮೀ ಪ್ರಭು, ಕಾನೂನು ಪ್ರಕೋಷ್ಟದ ಸಂಚಾಲಕ ಶ್ರೀಧರ್ ಪುಲಿಂಚ, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಗ್ರಾ.ಪಂ.ಸದಸ್ಯರಾದ ಗೋಪಾಲಕೃಷ್ಣ ಪೂವಳ, ಜಯಂತ ಗೌಡ, ಪವಿತ್ರ, ಪ್ರೇಮ, ಸುಷ್ಮಾ, ಎಲಿಯಾಸ್ ಡಿ.ಸೋಜ,ಬೂತ್ ಅಧ್ಯಕ್ಷರುಗಳಾದ ವಿಠಲ ಪ್ರಭು,ಪ್ರಭಾಕರ ಶೆಟ್ಟಿ, ಶ್ರೀಧರ್ ಪೂಜಾರಿ ರಾಯಪ್ಪ ಕೋಡಿ, ಕ್ಷೇತ್ರದ ಕಾರ್ಯದರ್ಶಿ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು ಮತ್ತಿತರರು ಉಪಸ್ಥಿತರಿದ್ದರು.