Author: admin
ಕಾಂಗ್ರೆಸ್ ಅವಧಿಯಲ್ಲಿ ಬಂಟ್ವಾಳದಲ್ಲಿ ಶಾಂತಿ ಕದಡಿದವರು ಬಿಜೆಪಿಗರು : ರಮಾನಾಥ ರೈ ಬಂಟ್ವಾಳ : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಂಟ್ವಾಳದಲ್ಲಿ ಶಾಂತಿ ಕದಡಿದವರು ಬಿಜೆಪಿಗರು. ಆದರೆ, ಈಗ ಬಂಟ್ವಾಳದಲ್ಲಿ ಶಾಂತಿಯಿದೆ, ಕಾಂಗ್ರೆಸ್ ಬಂದರೆ ಮತ್ತೆ ಶಾಂತಿ ಕದಡುತ್ತದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಶಾಂತಿ ಕದಡಿದವರು ಯಾರು ಎಂಬುದು ಜನತೆಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಬಂಟ್ವಾಳ ಕಸಬಾದ ನೇರಂಬೋಳ್, ಕೊಂಗ್ರಬೆಟ್ಟು, ಕೆಳಗಿನ ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಮಾತನಾಡಿದರು. Advertisement ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಪಡಿಸಿರುವುದು ನಿಮಗೆ ತಿಳಿದಿದೆ. ನಾನು ಅಭಿವೃದ್ಧಿ ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದೇನೆಯೇ ಹೊರತು, ದ್ವೇಷದ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಅವರು ತಿಳಿಸಿದರು.ಬಂಟ್ವಾಳದಲ್ಲಿ ಮಿನಿ ವಿಧಾನ ಸೌಧ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಅಂಬೇಡ್ಕರ್ ಭವನ, ನಿರೀಕ್ಷಣ ಮಂದಿರ, ಉದ್ಯಾನವನ ಮುಂತಾದ ಹಲವು ಅಭಿವೃದ್ಧಿ…
ಬಂಟ್ವಾಳ ಕ್ಷೇತ್ರದಲ್ಲಿ ಆಗಿರುವಂತಹ ಅಭಿವೃದ್ದಿ ಕಾರ್ಯ ಬಿಜೆಪಿ ಗೆಲುವಿಗೆ ಪೂರಕ: ಅಣ್ಣಾಮಲೈ ಬಂಟ್ವಾಳ: ಬಂಟ್ವಾಳ ಕ್ಷೇತ್ರದಲ್ಲಿ ಆಗಿರುವಂತಹ ಅಭಿವೃದ್ದಿ ಕಾರ್ಯ, ಕಾನೂನು ಸುವ್ಯವಸ್ಥೆ, ಬಂಟ್ವಾಳದ ಬಗೆಗಿನ ದೂರದೃಷ್ಟಿ ಯೋಜನೆಗಳು ಎಲ್ಲವೂ ಬಂಟ್ವಾಳದ ಗೆಲುವಿಗೆ ಪೂರಕವಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಆಗಿರುವಂತಹ ಅಭಿವೃದ್ದಿ ಕೆಲಸಗಳನ್ನು ಕಂಡು ಇಲ್ಲಿನ ಎಲ್ಲಾ ಜನರೂ ಬಿಜೆಪಿಯನ್ನು, ಬಿಜೆಪಿಯ ಶಾಸಕರನ್ನು ಒಪ್ಪಿಕೊಂಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು. Advertisement ಅವರು ಶನಿವಾರ ಬಿ.ಸಿ.ರೋಡಿನಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಡಬ್ಬಲ್ ಇಂಜಿನ್ ಸರಕಾರವಾಗಿ ಮುಂದುವರೆಯುತ್ತಿದ್ದರೆ ಕಾಂಗ್ರೆಸ್ ಪಕ್ಷ ರಿವರ್ಸ್ ಗೇರ್‌ನಲ್ಲಿ ಚಲಿಸುತ್ತಿದೆ. ಪ್ರಸ್ತುತ ಕರಾವಳಿಯಲ್ಲಿ ಪಿಎಫ್‌ಐ ಸಂಘಟನೆ ಅಸ್ಥಿತ್ವದಲ್ಲಿ ಇಲ್ಲ, ಪಿಎಫ್‌ಐಯ ಬಿ ಟೀಮ್ ಆಗಿ ಎಸ್‌ಡಿಪಿಐ ಇದ್ದು ಕಾಂಗ್ರೆಸ್ ಅವರೊಂದಿಗೆ ಆಂತರಿಕ ಹೊಂದಣಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ ಇದನ್ನು ಜನ ನೋಡುತ್ತಿದ್ದಾರೆ. ಕರಾವಳಿಯಲ್ಲಿ ಮತ್ತೆ ಭಯೋತ್ಪಾದನೆ ಹುಟ್ಟ ಬೇಕಾ, ಹಿಂದು ಯುವಕರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡ ಬೇಕಾ, ಜಿಲ್ಲೆಯಲ್ಲಿ…
ವೈಯಕ್ತಿಕ ಸಮಸ್ಯೆಗಳನ್ನು ಮರೆತು ಪಕ್ಷಕ್ಕಾಗಿ ಒಂದಾಗಿ: ರಾಜೇಶ್ ನಾಯ್ಕ್ ಬಂಟ್ವಾಳ: ವೈಯಕ್ತಿಕ ವಿಚಾರಗಳು ಏನಿದ್ದರೂ ಎಲ್ಲವನ್ನು ಬದಿಗಿಟ್ಟು, ಕಾರ್ಯಕರ್ತರು ಚುನಾವಣಾ ದಿನದವರೆಗೆ ನಿದ್ರಿಸದೆ ಕಾಲಿಗೆ ಚಕ್ರಕಟ್ಟಿದಂತೆ ನಿರಂತರವಾಗಿ ಮತದಾರರ ಬಳಿಗೆ ತೆರಳಿ ಪ್ರತಿ ಮನೆಯನ್ನು ಸಂಪರ್ಕ ಮಾಡಿ, ಬಂಟ್ವಾಳದಲ್ಲಿ ಗೆಲುವಿನ ವಿಜಯದ ಪತಾಕೆ ಹಾರಿಸಬೇಕು ಎಂದು ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ತಿಳಿಸಿದರು.ಅವರು ಪಂಜಿಕಲ್ಲು ಗ್ರಾಮದಲ್ಲಿ ಮತದಾರರ ಮನೆಬಾಗಿಲಿಗೆ ತೆರಳಿ ಮತಯಾಚನೆ ನಡೆಸಿ ಮಾತನಾಡಿದರು. ವೈಯಕ್ತಿಕ ಸಮಸ್ಯೆಗಳನ್ನು ಮರೆತು ಪಕ್ಷಕ್ಕಾಗಿ ಒಂದಾಗಿ: ರಾಜೇಶ್ ನಾಯ್ಕ್ ಕಾರ್ಯಕರ್ತರು ನಮ್ಮ ನಮ್ಮ ಬೂತ್ ನ್ನು ಗೆಲ್ಲಲು ಪ್ರಯತ್ನ ಮಾಡಿದಾಗ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಗೆದ್ದರೆ ಸಾಮಾನ್ಯ ಕಾರ್ಯಕರ್ತ ಗೆದ್ದಂತೆ, ಕಾರ್ಯಕರ್ತನ ಗೆಲುವಿಗಾಗಿ ಜೊತೆಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.ಕೇಂದ್ರ ಮತ್ತು ರಾಜ್ಯ ಸರಕಾರದ ಡಬ್ಬಲ್ ಇಂಜಿನ್ ಸರಕಾರದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ 2ಸಾವಿರಕ್ಕಿಂತಲೂ ಅಧಿಕ ಅನುದಾನಗಳ ಮೂಲಕ ಸರ್ವವ್ಯಾಪಿ ಸರ್ವಸ್ಪರ್ಷಿಯಾದ ಅಭಿವೃದ್ಧಿಗೆ ಕೊಡುಗೆ…
5000 ಕೋಟಿ ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಪಡಿಸಿದ ತೃಪ್ತಿಯಿದೆ : ರಮಾನಾಥ ರೈ ಬಂಟ್ವಾಳ : ನನ್ನ ಅಧಿಕಾರಾವಧಿಯಲ್ಲಿ 5000 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಪಡಿಸಿದ ತೃಪ್ತಿಯಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ರಾಯಿ ಗ್ರಾಮದ ಪಡ್ರಾಯಿ ಮತ್ತು ಅಣ್ಣಳಿಕೆಯಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಗಳಲ್ಲಿ ಮಾತನಾಡಿದರು.ಬಂಟ್ವಾಳದಲ್ಲಿ ಶಾಂತಿಯಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಶಾಂತಿ ಕದಡುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಶಾಂತಿ ಕದಡಿದ್ದು ಯಾರು ಎಂಬುದು ಜನತೆಗೆ ತಿಳಿದಿದೆ. ಕೆಲವು ಪ್ರಕರಣಗಳು ನಡೆದಿದ್ದರೆ ಅದರಲ್ಲಿ ಯಾವುದೇ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೆಸರಿಲ್ಲ. ಕಾಂಗ್ರೆಸ್ ವಿರುದ್ಧ ಅಪಪ್ರಚಾರಗಳನ್ನು ಮಾಡಿ ಕಳೆದ ಬಾರಿ ನನ್ನನ್ನು ಸೋಲಿಸಲಾಗಿದೆ ಎಂದು ಅವರು ತಿಳಿಸಿದರು. Advertisement ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ರೂಪಿಸಿರುವ ರಮಾನಾಥ ರೈ ಅವರಿಗೆ ಮತ್ತೊಂದು ಅವಕಾಶ ನೀಡುವಂತೆ ಇದೇ ವೇಳೆ ಮಾತನಾಡಿದ ಕೆಪಿಸಿಸಿ ಮುಖಂಡ…
ಬಂಟ್ವಾಳ ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ: ಪದ್ಮನಾಭ ಸಾಮಂತ್ ಆರೋಪ ಬಂಟ್ವಾಳ: ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೋಟ್ಯಾಂತರ ರೂಪಾಯಿಯ ಅವ್ಯವಹಾರ ನಡೆದಿದ್ದು ಈ ಬಗ್ಗೆ ದಾಖಲೆ ಸಹಿತ ಸಾಮಾಜಿಕ ಜಾಲಾತಾಣದಲ್ಲಿ ಪ್ರಚಾರ ಪಡಿಸಿದಾಗ ಅದನ್ನು ಸಹಿಸದ ಬಿಜೆಪಿಗರು ಹಾಗೂ ನಿಕಟಪೂರ್ವ ಶಾಸಕರು ಇದು ಸುಳ್ಳು ಸುದ್ದಿಯೆಂದು ಹಬ್ಬಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೇಸು ದಾಖಲಿಸುತ್ತಾರೆ ಎಂದು ಕಾಂಗ್ರೆಸ್ ಹಿಂದುಳಿದವರ್ಗಗಳ ಜಿಲ್ಲಾ ಉಪಾಧ್ಯಕ್ಷ, ಸಾಮಾಜಿಕ ಜಾಲಾತಾಣದ ಮುಖಂಡ ಪದ್ಮನಾಭ ಸಾಮಂತ್ ಆರೋಪಿಸಿದರು. Advertisement ಅವರು ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾರಂಬಡೆ ಬಳಿ ಕಾಡಬೆಟ್ಟು – ದರ್ಬಳಿಕೆ ರಸ್ತೆಯಲ್ಲಿ ಅವ್ಯವಹಾರ ನಡೆದಿದೆ, ಕಾರಂಬಡೆ ದೇವಸ್ಥಾನಕ್ಕೆ ಸಾರ್ವಜನಿಕ ಶೌಚಾಲಯ ನಿರ್ಮಿಸಿರುವುದಾಗಿ ಹೇಳಿದ್ದಾರೆ ಆದರೆ ಅಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲ, ಕಡೇಶಿವಾಲಯಯ ದೇವಸ್ಥಾನ ಬಳಿ ನದಿಗೆ ಸಣ್ಣ ಸಣ್ಣ ಕಲ್ಲು ತುಂಡುಗಳನ್ನು ಹಾಕಿ ತಡೆಗೋಡೆ ನಿರ್ಮಿಸಿ ಹಣ ಗುಳು ಮಾಡಲಾಗಿದೆ, ಅದು ಈಗಾಲೇ ಉದುರಿ ಬೀಳುತ್ತದೆ ಮುಂದೆ ಮಳೆಗಾಲದಲ್ಲಿ…
ಜನರು ಗೌರವದಿಂದ ಬದುಕಬೇಕಾದರೆ ಬಿಜೆಪಿ ಗೆಲ್ಲಬೇಕು- ರಾಜೇಶ್ ನಾಯ್ಕ್ ಬಂಟ್ವಾಳ: ಅಭಿವೃದ್ಧಿ ಎಂಬುದು ನಿಂತನೀರಲ್ಲ, ಹರಿಯುವ ನೀರು, ಅಭಿವೃದ್ಧಿ ಜೊತೆಗೆ ಸಂಸ್ಕೃತಿ ,ರಾಷ್ಟ್ರೀಯತೆಯನ್ನು ಉಳಿಸಿ, ಕ್ಷೇತ್ರದ ಪ್ರತಿಯೊಂದು ಮತದಾರರು , ಕಾರ್ಯಕರ್ತರು ಗೌರವದಿಂದ ಬದುಕಬೇಕಾದರೆ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು ಎಂದು ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.ಅವರು ಸರಪಾಡಿ ಗ್ರಾಮದ ಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ, ಪ್ರಮುಖ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. Advertisement ಕೃಷಿ ಮತ್ತು ಋಷಿ ಸಂಸ್ಕೃತಿ ಉಳಿಯಬೇಕಾಗಿದೆ.ನಯಪೈಸೆ ಖರ್ಚು ಇಲ್ಲದ ಗ್ಯಾರಂಟಿ ಕಾರ್ಡ್ ಉಪಯೋಗಕ್ಕೆ ಬಾರದ ಡಮ್ಮಿ ಕಾರ್ಡ್ ಇದಾಗಿದ್ದು, ಸುಳ್ಳು ಭರವಸೆ ಮೂಲಕ ಗೆಲ್ಲುವ ಯೋಚನೆಯಲ್ಲಿದೆ, ಬಂಟ್ವಾಳ ಕ್ಷೇತ್ರದ ಜನ ಬುದ್ಧಿವಂತರಾಗಿದ್ದು, ಕಾಂಗ್ರೆಸ್ ನ ಪೊಳ್ಳು ಭರವೆಸೆಗಳಿಗೆ ಮರುಳಾಗುವುದಿಲ್ಲ,ಕಾಂಗ್ರೆಸ್ ಗೆ ಅವಕಾಶ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕ್ಷೇತ್ರದ ಜನತೆ ನೀಡಿದ ಒಂದು ಮತದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ಕಾಶ್ಮೀರದಲ್ಲಿ ಆರ್ಟಿಕಲ್ಸ್ 370 ರದ್ದು ಮಾಡಲು ಸಾಧ್ಯವಾಯಿತು ಎಂಬುದನ್ನು…
ಬಂಟ್ವಾಳ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇದ್ದ ಸೌಹಾರ್ದತೆಯ ವಾತವರಣ ಮತ್ತೆ ರಾಜ್ಯದಲ್ಲಿ ಸೃಷ್ಟಿಯಾಗಲಿದೆ, ಯಾರೂ ಉತ್ತಮ ಆಡಳಿತ ನೀಡಿದ್ದಾರೆ, ಯಾರೂ ಪೊಳ್ಳು ಭರವಸೆಗಳನ್ನು ನೀಡಿ ಯಾಮಾರಿಸಿದ್ದಾರೆ ಎನ್ನುವ ತಿಳಿವಳಿಕೆ ಜನರಿಗೆ ಬಂದಿದೆ. ಆದ್ದರಿಂದ ಈ ಭಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂಶಯ ಇಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದರು. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಜನರನ್ನು ಭಾವನಾತ್ಮಕವಾಗಿ ಕುಕೃತ್ಯಕ್ಕೆ ಪ್ರೇರೆಪಿಸುವಂತಹ, ಜನರು ಸಾಮರಾಸ್ಯದಲ್ಲಿ ಬದುಕುವುದಕ್ಕೆ ತೊಡಕಾಗುವಂತಹ ಭಯದ ವಾತವರಣ ಇದೆ. ಭಾರತ ವಿಶ್ವಗುರು ಆಗಬೇಕಾದರೆ ದೇಶದಲ್ಲಿರುವ ಎಲ್ಲಾ ಜನರು ಸಹೋದರತ್ವದಲ್ಲಿ ಬದುಕುವುದು ಅಗತ್ಯ, ಆದರೆ ದೇಶದ ಪ್ರಸ್ತುತ ಪರಿಸ್ಥಿತಿ ತುಂಬಾ ವ್ಯತಿರಿಕ್ತವಾಗಿದೆ ಎಂದರು. Advertisement ಭ್ರಷ್ಟಾಚಾರ ರಹಿತ ಆಡಳಿತ ನೀಡಿ ಬಡವರಿಗಾಗಿ ಕಾಂಗ್ರೆಸ್ ಗ್ಯಾರಂಟಿ ಭರವಸೆ ನೀಡುತ್ತಿದೆ,ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶೇ.೯೫ ಭರವಸೆಗಳು ಈಡೇರಿದೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಪ್ರಥಮ ಕ್ಯಾಬಿನೆಟ್ ಮೀಟಿಂಗಲ್ಲಿಯೇ ಜನರಿಗೆ ನೀಡಿದ ಗ್ಯಾರಂಟಿಗಳಿಗೆ…
ಬಂಟ್ವಾಳ : ರಮಾನಾಥ ರೈಯವರ ದಕ್ಷ ನಾಯಕತ್ವ ಮೆಚ್ಚಿ ಕಾಂಗ್ರೆಸ್ ಸೇರ್ಪಡೆ ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈಯವರ ದಕ್ಷತೆಯ ನಾಯಕತ್ವವನ್ನು ಮೆಚ್ಚಿ ಸಮಾಜ ಸೇವಕರು, ಸಾಮಾಜಿಕ ಚಿಂತಕರುಗಳಾದ ಗುಬ್ಯಮೇಗಿನ ಗುತ್ತಿನ ಶ್ರೀಧರ ಕೆ. ಶೆಟ್ಟಿ ಮತ್ತು ಪಟ್ಲಗುತ್ತಿನ ದಾಮೋದರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಯಾದರು.ರಮಾನಾಥ ರೈ ಅವರ ಸಮ್ಮುಖದಲ್ಲಿ ಬಿ.ಸಿ.ರೋಡ್ ನಲ್ಲಿರುವ ಪಕ್ಷದ ಚುನಾವಣಾ ಕಚೇರಿಯಲ್ಲಿ ಶ್ರೀಧರ ಶೆಟ್ಟಿ ಮತ್ತು ದಾಮೋದರ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೊಂಡರು.ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಮಾನಾಥ ರೈಯವರನ್ನು ಮತ್ತೊಮ್ಮೆ ಗೆಲ್ಲಿಸಬೇಕು ಎಂಬ ಉದ್ದೇಶವಿದೆ. ಕ್ಷೇತ್ರದ ಜನತೆಯ ಮನವೊಲಿಸಿ ರೈಯವರ ವಿಜಯ ಪತಾಕೆ ಮತ್ತೊಮ್ಮೆ ಹಾರುವಂತೆ ಮಾಡಬೇಕು ಎಂದು ಶ್ರೀಧರ ಶೆಟ್ಟಿ ಹೇಳಿದರು. ರೈಗಳು ಅಧಿಕಾರದಲ್ಲಿದ್ದಾಗ ಸಾಕಷ್ಟು ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ಜನತೆ ಮತದಾನ ಮಾಡಬೇಕು. ಅವರಂತಹ ದೂರದೃಷ್ಟಿಯುಳ್ಳ ನಾಯಕರು ನಮಗೆ ನಾಯಕರಾದರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದು ದಾಮೋದರ…
ಸಿದ್ಧಕಟ್ಟೆಯಲ್ಲಿ ಬಿಜೆಪಿಯ ಬೃಹತ್ ರೋಡ್ ಶೋ ಬಂಟ್ವಾಳ: ಸಿದ್ದಕಟ್ಟೆ ಚಚ್೯ ಬಳಿಯಿಂದ ಪೇಟೆಯವರೆಗೆ ಬಂಟ್ವಾಳ ಬಿಜೆಪಿ ಅಭ್ಯರ್ಥಿ,ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಬುಧವಾರ ಸಂಜೆ ಬೃಹತ್ ರೋಡ್ ಶೋ ನಡೆಸಿ ಮತಯಾಚನೆಗೈದರು.ಸಹಸ್ರಾರು ಕಾರ್ಯಕರ್ತರೊಂದಿಗೆ ಸಿದ್ದಕಟ್ಟೆಯ ಹೆದ್ದಾರಿಯಲ್ಲಿನ ಪ್ರತಿ ಮಳಿಗೆಗಳು,ರಿಕ್ಷಾಚಾಲಕರು,ಸಾರ್ವಜನಿಕರನ್ನು ಭೇಟಿಯಾಗಿ ಮತಯಾಚಿಸಿದರು.ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ,ಪ್ರ.ಕಾರ್ಯಡೊಂಬಯ ಅರಳ,ರವೀಶ್ ಶೆಟ್ಟಿ,ಕೇರಳರಾಜ್ಯದ ಬಿಜೆಪಿ ಖಜಾಂಚಿ ಕೃಷ್ಣದಾಸ್,ಪಾಲಕ್ಕಾಡು ಬಿಜೆಪಿ ಜಿಲ್ಲಾಧ್ಯಕ್ಷ ಹರಿದಾಸ್,ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಪ್ರಭಾರಿ ರವಿಶಂಕರ್ ಮಿಜಾರ್,ಸಂಗಬೆಟ್ಟು ಗ್ರಾ.ಪಂ.ಅಧ್ಯಕ್ಷಸತೀಶ್ ಪೂಜಾರಿ ಅಳಕೆ, ಕುಕ್ಕಿಪಾಡಿಗ್ರಾ.ಪಂ.ಅಧ್ಯಕ್ಷೆ ಸುಜಾತಪಕ್ಷದ ಪ್ರಮುಖರಾದ ದೇವದಾಸ ಶೆಟ್ಟಿ, ಸುಲೋಚನಾ ಜಿ.ಕೆ.ಭಟ್,ಮಾಧವ ಮಾವೆ,ಪ್ರಭಾಕರ ಪ್ರಭು,ಪುರುಷೋತ್ತಮ ಶೆಟ್ಟಿ ವಾಮದಪದವು,ರಮಾನಾಥ ರಾಯಿ, ಉಮೇಶ್ ಗೌಡ,ರಂಜಿತ್ ಮೈರ,ರತ್ನಕುಮಾರ ಚೌಟ,ಹರೀಶ್ ಆಚಾರ್ಯ, ಮಂದಾರತಿ ಶೆಟ್ಟಿ,ಸಂದೇಶ್ ಶೆಟ್ಟಿ,ದೇವರಾಜ್ ಸಾಲಿಯಾನ್,ರಾಜೇಶ್ ಶೆಟ್ಟಿ,ಸುನೀಲ್ ಶೆಟ್ಟಿಗಾರ್,ಸುರೇಶ್ ಕುಲಾಲ್,ವಿಶ್ವನಾಥ ಶೆಟ್ಟಿಗಾರ್,ಮಾಧವ ಶೆಟ್ಟಿಗಾರ್,ಮೋನಪ್ಪ ದೇವಸ್ಯ,ಪುರುಷೋತ್ತಮ ಸಾಲಿಯಾನ್ ನರಿಕೊಂಬು,ಭೋಜ ಶೆಟ್ಟಿಗಾರ್, ಯಶೋಧರ ಕರ್ಬೆಟ್ಟು,ದೇವಪ್ಪ ಗೌಡ,ಅಮ್ಮು ಕೋಟ್ಯಾನ್,ಓಬಯ್ಯ ಗೌಡ,ತೇಜಸ್ ಪೂಜಾರಿ,ನವೀನ್ ಪೂಜಾರಿ,ಸುರೇಶ್ ಅಂಚನ್,ಶೇಖರ ಶೆಟ್ಟಿ ಬದ್ಯಾರ್,ರತ್ನಾಕರ ಮದಂಗೋಡಿ,ಲಿಂಗಪ್ಪ ಪೂಜಾರಿ,ಸಂಜೀವ ಶೆಟ್ಟಿಮದಂಗೋಡಿ,ರಶ್ಮಿತ್ ಶೆಟ್ಟಿ,ದಿನೇಶ್ ಸುವರ್ಣ ರಾಯಿ, ವೀರೇಂದ್ರ…
ಧರ್ಮಾಧಿಕಾರಿಗಳ ಆಶೀರ್ವಾದ ಪಡೆದ ರಾಜೇಶ್ ನಾಯ್ಕ್ ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಲಾಯಿಲದ ವೆಂಕಟರಮಣ ದೇವಸ್ಥಾನಕ್ಕೆ ಬಂಟ್ವಾಳ ಕ್ಷೇತ್ರ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಭೇಟಿ ನೀಡಿ ಕಾಶಿಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು , ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ಉದಯಕುಮಾರ್ ರಾವ್ ಮತ್ತಿತರರು ಉಪಸ್ಥಿತರಿದ್ದರು. Advertisement Advertisement








