ಬಂಟ್ವಾಳ: ಬಿ.ಸಿ.ರೋಡಿನಲ್ಲಿ ನಡೆದ ಮತದಾನದ ಜಾಗೃತಿ ಜಾಥವನ್ನು ಜನಸಾಮಾನ್ಯರ ಗಮನ ಸೆಳೆಯಲು ಯಕ್ಷಗಾನದ ವೇಷವನ್ನು ಶಿಷ್ಟಚಾರ ಬಿಟ್ಟು ಈ ರೀತಿ ಅಪಮಾನಿಸಿದ್ದು ಖಂಡನಾರ್ಹ ಎಂದು ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ದ.ಕ. ಜಿಲ್ಲಾ ಸಂಚಾಲಕ ಅಶೋಕ್ ಶೆಟ್ಟಿ ಸರಪಾಡಿ ಖಂಡಿಸಿದ್ದಾರೆ.
Advertisement
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಕಸ ಸಾಗಾಟದ ಗಾಡಿಯಲ್ಲಿ ರಾಜ ಗೌರವಾದರದ ಯಕ್ಷಗಾನ ವೇಷವನ್ನು ಕಸವೆಂದು ಅಧಿಕಾರಿಗಳು ಭಾವಿಸಿದಂತಿದೆ, ಕೂಡಲೇ ಆಯೋಜಕರು ಕಲಾ ವಲಯದ ಕ್ಷಮಾಯಾಚನೆ ಕೇಳಬೇಕು. ತಪ್ಪಿದರೆ ಇದರ ವಿರುದ್ಧ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿರುವ ಅವರು ಸಾವಿರಾರು ಮಂದಿ ಕಲಾವಿದರು ಚುನಾವಣಾ ಬಹಿಷ್ಕಾರಕ್ಕೆ ಕರೆ ಕೊಡುವುದಕ್ಕೆ ಮೊದಲು ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
Advertisement