ಬಂಟ್ವಾಳ : ನನ್ನ ಅಧಿಕಾರಾವಧಿಯಲ್ಲಿ 5000 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿ ಪಡಿಸಿದ ತೃಪ್ತಿಯಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ಅವರು ರಾಯಿ ಗ್ರಾಮದ ಪಡ್ರಾಯಿ ಮತ್ತು ಅಣ್ಣಳಿಕೆಯಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಗಳಲ್ಲಿ ಮಾತನಾಡಿದರು.
ಬಂಟ್ವಾಳದಲ್ಲಿ ಶಾಂತಿಯಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಶಾಂತಿ ಕದಡುತ್ತದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಶಾಂತಿ ಕದಡಿದ್ದು ಯಾರು ಎಂಬುದು ಜನತೆಗೆ ತಿಳಿದಿದೆ. ಕೆಲವು ಪ್ರಕರಣಗಳು ನಡೆದಿದ್ದರೆ ಅದರಲ್ಲಿ ಯಾವುದೇ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹೆಸರಿಲ್ಲ. ಕಾಂಗ್ರೆಸ್ ವಿರುದ್ಧ ಅಪಪ್ರಚಾರಗಳನ್ನು ಮಾಡಿ ಕಳೆದ ಬಾರಿ ನನ್ನನ್ನು ಸೋಲಿಸಲಾಗಿದೆ ಎಂದು ಅವರು ತಿಳಿಸಿದರು.
ಇಡೀ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ರೂಪಿಸಿರುವ ರಮಾನಾಥ ರೈ ಅವರಿಗೆ ಮತ್ತೊಂದು ಅವಕಾಶ ನೀಡುವಂತೆ ಇದೇ ವೇಳೆ ಮಾತನಾಡಿದ ಕೆಪಿಸಿಸಿ ಮುಖಂಡ ಅಶ್ವನಿ ಕುಮಾರ್ ರೈ ವಿನಂತಿಸಿದರು.
ರಮಾನಾಥ ರೈ ಅವರ ಸೇವಾ ಕಾರ್ಯ ಇವತ್ತು ಬಂಟ್ವಾಳಕ್ಕೆ ಅಗತ್ಯವಿದೆ. ಅವರು ಶಾಸಕರು ಅಲ್ಲದಿದ್ದರೂ ಜನಸೇವೆ ಮಾಡಿದ್ದಾರೆ. ಈ ಹೊತ್ತಲ್ಲಿ ಇಂತಹ ನಾಯಕರನ್ನು ಮರೆತರೆ ಮುಂದೆ ಜನತೆ ಪಶ್ಚತ್ತಾಪಪಡುವಂತಾಗುತ್ತದೆ ಎಂದು ಈ ವೇಳೆ ಮಾತನಾಡಿದ ಪ್ರತಿಭಾ ಕುಳಾಯಿ ಎಚ್ಚರಿಸಿದರು.
ಕೆಪಿಸಿಸಿ ಮುಖಂಡರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಪಿಯೂಸ್ ಎಲ್. ರೊಡ್ರಿಗಸ್,
ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ಪ್ರಮುಖರುಗಳಾದ ಸುದರ್ಶನ್ ಜೈನ್, ಜಗದೀಶ್ ಕೊಯಿಲ, ರಾಮಸುಂದರ ಗೌಡ, ಮಂಜುಳಾ ಸದಾನಂದ, ರಮೇಶ್ ನಾಯಕ್, ನಾರಾಯಣ ಗೌಡ, ಜಯಲಕ್ಷ್ಮಿ, ಸತೀಶ್ ಕಾರಂಬಡೆ, ಸದಾನಂದ ಶೆಟ್ಟಿ, ಸುಧೀರ್ ಶೆಟ್ಟಿ, ಮೋಹನ್ ಶೆಟ್ಟಿ, ಚಂದ್ರಶೇಖರ್ ಆಚಾರ್, ದೇವಪ್ಪ ಕರ್ಕೇರ, ರಾಮಚಂದ್ರ ಶೆಟ್ಟಿಗಾರ್, ರಮೇಶ್ ನಾಯ್ಕ, ಸತೀಶ್ ಕೊಯಿಲ, ರುಕ್ಕಯ್ಯ ಬಂಗೇರ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.