ಬಂಟ್ವಾಳ: ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ದಿ.ಡೊಂಬಯ್ಯ ಮೂಲ್ಯರ ಸ್ಮರಣಾರ್ಥ ಅವರ ಆತ್ಮ ಸದ್ಗತಿ ಗಾಗಿ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಒಕ್ಕೂಟ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ನುಡಿ ನಮನ ಮತ್ತು ಅನ್ನದಾನ ಕಾರ್ಯಕ್ರಮವು ವೇಣೂರು ಗುಂಡೂರಿನ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ನಡೆಯಿತು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ಸುಕುಮಾರ್ ಬಂಟ್ವಾಳ, ಶೇಷಪ್ಪ ಮೂಲ್ಯ, ವಿಠಲ ಪಲ್ಲಿಕಂಡ, ಕಿಶೋರ್ ಬಂಗೇರ, ಪುನೀತ್ ಕಾಮಾಜೆ, ಕಾರ್ತಿಕ್ ಮಯ್ಯರಬೈಲು, ಸಂತೋಷ್ ಭಂಡಾರಿಬೆಟ್ಟು, ಪ್ರದೀಪ್ ಪಲ್ಲಮಜಲು, ನಿಶಾಲ್ ಕುಲಾಲ್, ಸೌಮ್ಯ ಸುಕುಮಾರ್ , ಪದ್ಮನಾಭ ನಾವೂರ ಹಾಗೂ ತುಂಬೆ ಕುಲಾಲ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾದ ನೀಲಪ್ಪ ಸಾಲಿಯಾನ್, ದಿ.ಡೊಂಬಯ್ಯ ಮುಲ್ಯರ ಮನೆಯವರದ ಶಶಿಧರ್ ಸಾಲಿಯಾನ್, ಸುಜಿತ್ ಕುಮಾರ್, ಅಕ್ಷತಾ,ಮನ್ವಿತಾ, ರತನ್, ಉಪಸ್ಥಿತರಿದ್ದರು,ಸೇವಾಶ್ರಮ ದ ಹೊನ್ನಯ ಕಾಟಿಪಲ್ಲ ದಿವಂಗತರ ಆತ್ಮ ಸದ್ಗತಿಗಾಗಿ ಶ್ರೀ ಗುರುರಾಯರಲ್ಲಿ ಪ್ರಾರ್ಥಿಸಿದರು. ನಿತೀಶ್ ಕುಲಾಲ್ ಪಲ್ಲಿಕಂಡ ಕಾರ್ಯಕ್ರಮ ನಿರ್ವಹಿಸಿದರು. ಯುವ ವೇದಿಕೆ ವತಿಯಿಂದ ಆಶ್ರಮವಾಸಿ ಗಳಿಗೆ ಅಕ್ಕಿ ಮತ್ತು ಶುಚಿತ್ವ ಸಾಮಗ್ರಿ ನೀಡಲಾಯಿತು. ದಿ. ಡೊಂಬಯ್ಯ ಮೂಲ್ಯರ ಮಕ್ಕಳಿಂದ ಆಶ್ರಮದ ಅಭಿವೃದ್ಧಿಗೆ 5 ಸಾವಿರ ರೂಪಾಯಿ ಯ ಸಹಾಯಧನ ಹಸ್ತಾಂತರಿಸಲಾಯಿತು.