
ಬಂಟ್ವಾಳ: ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸೂಚನೆಯನ್ವಯ 59 ಗ್ರಾಮದ 249 ಬೂತುಗಳಲ್ಲಿ ಎಲ್ಲಾ ಮನೆ ಮನೆ ಸಂಪರ್ಕ ಮಾಡುವ ಮಹಾ ಸಂಪರ್ಕ ಅಭಿಯಾನ ವು ಅತ್ಯಂತ ಯಶಸ್ವಿ ಆಗಿದ್ದು ಇದಕ್ಕಾಗಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಮಹಾಸಂಪರ್ಕದ ದಿನ ಕಾರ್ಯಕರ್ತರು ಪ್ರತೀ ಮತಕಟ್ಟೆಗಳಲ್ಲಿ ಒಟ್ಟು ಸೇರಿ , ಸೂಕ್ತ ಯೋಜನೆಯೊಡನೆ ಮನೆ- ಮನೆ ಪ್ರಚಾರವನ್ನು ಹಮ್ಮಿಕೊಂಡಿದ್ದಾರೆ.


ಎರಡನೆಯ ಬಾರಿ ಮನೆ ಸಂಪರ್ಕಿಸುವ ಕಾರ್ಯದಲ್ಲಿ ಪಕ್ಷದ ಅಭ್ಯರ್ಥಿಯಾದ ರಾಜೇಶ್ ನಾಯ್ಕ್ ರವರು ಬಡಗಬೆಳ್ಳೂರು, ಪಾಣೆಮಂಗಳೂರು, ನರಿಕೊಂಬು ಗ್ರಾಮದ ಬೂತಿನಲ್ಲಿ ಮನೆ ಸಂಪರ್ಕ ಮಾಡಿದ್ದಾರೆ.ಮಾಜಿ ಶಾಸಕರಾದ ಎ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಮತ್ತು ಹರಿಕ್ರಷ್ಣ ಬಂಟ್ವಾಳ ಪಕ್ಷದ ಜವಾಬ್ದಾರಿ ಇರುವ ಎಲ್ಲಾ ಪ್ರಮುಖರು ತಮ್ಮ ತಮ್ಮ ಬೂತಿನಲ್ಲಿ ಮನೆ ಸಂಪರ್ಕದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು ,
ರಾಜ್ಯ , ಜಿಲ್ಲೆ , ಮಂಡಲ, ಶಕ್ತಿ ಕೇಂದ್ರ , ಮಹಾಶಕ್ತಿ ಕೇಂದ್ರ ಹಾಗೂ ಬೂತ್ ಸಮಿತಿಯ ಎಲ್ಲಾ ಪ್ರಮುಖರು ಒಂದು ಮತಕಟ್ಟೆಯಲ್ಲಿ ಮನೆ ಮತಯಾಚನೆ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.