ಬಂಟ್ವಾಳ : ಎಂಭತ್ತು ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ಮನೆಯಲ್ಲೇ ಮತದಾನ ಮಾಡುವ ಚುನಾವಣಾ ಆಯೋಗದ ನಿರ್ದೇಶನದಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ೨೫ ಸೆಕ್ಟರ್ ವ್ಯಾಪ್ತಿಯಲ್ಲಿ ಅಂಚೆ ಮತದಾನ ತಂಡಗಳು ಸೋಮವಾರ ಬೆಳಿಗ್ಗೆ ಮತದಾರರ ಮನೆಗಳಿಗೆ ತೆರಳಿದವು.
ಓರ್ವ ಮೈಕ್ರೋ ವೀಕ್ಷಕರು, ಇಬ್ಬರು ಪೋಲಿಂಗ್ ಅಧಿಕಾರಿಗಳು, ಓರ್ವ ವೀಡಿಯೋ ಗ್ರಾಫರ್, ಹಾಗೂ ಪೊಲೀಸ್ ಸಿಬ್ಬಂದಿ ಸೇರಿದಂತೆ ಐದು ಮಂದಿ ಸಿಬ್ಬಂದಿಗಳ ತಂಡವು
ಪ್ರತಿ ಅರ್ಹ ಮತದಾದರರ ಮನೆಗೆ ತೆರಳಿ ಮನೆಯಿಂದಲೇ ಮತದಾನ ಮಾಡಿಸಲಾಯಿತು.
Advertisement
ಬಂಟ್ವಾಳ ವ್ಯಾಪ್ತಿಯಲ್ಲಿ ಚುನಾವಣಾ ತಂಡಗಳನ್ನು ಅಗತ್ಯ ನಿರ್ದೇಶನ ನೀಡಿ ಬೆಳಿಗ್ಗೆ ಮನೆಮನೆಗಳಿಗೆ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಆಬಿದ್ ಗದ್ಯಾಲ್, ಸಹಾಯಕ ಚುನಾವಣಾ ಅಧಿಕಾರಿ ಎಂ.ಬಿ.ಕೂಡಲಿಗಿ, ನೋಡಲ್ ಅಧಿಕಾರಿ ಸುನಿತಾ ಕುಮಾರಿ, ಮಾಸ್ಟರ್ ಟ್ರೈನರ್ ಅಬ್ದುಲ್ ರಝಾಕ್, ಉಪತಹಶೀಲ್ದಾರ್ಗಳಾದ ನವೀನ್ ಕುಮಾರ್, ರಾಜೇಶ್ ನಾಯ್ಕ್ , ನರೇಂದ್ರ ನಾಥ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
Advertisement