ಬಂಟ್ವಾಳ: ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಕರೋಪಾಡಿ ಮತ್ತು ಕನ್ಯಾನ ಗ್ರಾಮದಲ್ಲಿ ಮತಯಾಚನೆ ನಡೆಸಿದರು.
ಹಿಂದೂ ಧರ್ಮದ ರಕ್ಷಣೆಯ ಜವಬ್ದಾರಿ ಹೊಂದಿರುವ ಸಂಘಟನೆಯಲ್ಲಿ ಒಂದಾದ ಭಜರಂಗದಳದ ನಿಷೇಧ ಮಾಡಲು ಹೊರಟಿರುವ ಕಾಂಗ್ರೆಸ್ ನ ಮನಸ್ಥಿತಿಯನ್ನು ನಾವು ಆಲೋಚಿಬೇಕಾದ ಕಾಲಘಟ್ಟದಲ್ಲಿ ಇದ್ದೇವೆ ಎಂದು ತಿಳಿಸಿದರು.ನಿರಂತರವಾಗಿ ಹಿಂದೂ ಧರ್ಮದ ಮೇಲೆ ದಾಳಿ ಮಾಡುತ್ತಾ ಬಂದಿರುವ ಕಾಂಗ್ರೆಸ್ ನ ಅಸಲಿ ಬುದ್ದಿ ಬಹಿರಂಗಗೊಂಡಿದೆ. ಗೋಕಳ್ಳತನ , ಅತ್ಯಾಚಾರ, ಮತಾಂತರ, ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವ ಬಂದಿರುವ ಕಾಂಗ್ರೆಸ್ ಗೆ ಈ ಬಾರಿ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಬಂಟ್ವಾಳದ ದ್ವೇಷದ ರಾಜಕಾರಣಕ್ಕೆ ಮತದಾರರು ಪಾಠ ಕಲಿಸಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದಸ್ಯರಾದ ರಘನಾಥ ಶೆಟ್ಟಿ ಪಟ್ಲ, ರಘುರಾಮ ಶೆಟ್ಟಿ, ಧರ್ಣಮ್ಮ ,ಜೆ.ಪಿ.ಗೌಡ,ಮನೋಜ್ ಬನಾರಿ, ಪ್ರಮುಖರಾದ ಯೋಗೀಶ್ ಕುಳ,ಶಿವಪ್ರಸಾದ್ ಶೆಟ್ಟಿ , ವಿನೋದ್ ಶೆಟ್ಟಿ ,ಹರೀಶ್ ಬೇಡಗುಡ್ಡೆ,ಉದಯರಮಣ ಭಟ್,ಕುಮಾರ್ ಭಟ್, ರಮೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕನ್ಯಾನ ಭಾರತಿ ಸೇವಾಶ್ರಮ, ಶ್ರೀ ಕ್ಷೇತ್ರ ಕಣಿಯೂರು ಗೆ ಭೇಟಿ ನೀಡಿ ಶ್ರೀ ಮಹಾಬಲ ಸ್ವಾಮೀಜಿ ಯವರ ಆಶೀರ್ವಾದ ಪಡೆದರು.