ಬಂಟ್ವಾಳ: ಇಲ್ಲಿನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ರಮನಾಥ ರೈ ಅವರನ್ನು ಗೆಲ್ಲಿಸುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ಘಟಕದ ಮಾಜಿ ಸಂಚಾಲಕ ಹೊನ್ನಪ್ಪ ಕುಂದರ್ ಆಗ್ರಹಿಸಿದರು.
ಅವರು ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಮಾನಾಥ ರೈ ಅವರು ತನ್ನ ಅಧಿಕಾರವಧಿಯಲ್ಲಿ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ೩ ಕೋಟಿಗೂ ಮಿಕ್ಕಿದ ಅಂಬೇಡ್ಕರ್ ಭವನವನ್ನು ನಿರ್ಮಿಸಿರುವುದು ಅವರಿಗೆ ದುರ್ಬಲ ವರ್ಗದ ಜನರ ಮೇಲಿರುವ ಅಪಾರ ಪ್ರೀತಿಗೆ ಸಾಕ್ಷಿಯಾಗಿದೆ. ಪ.ಜಾ. ಮತ್ತು ಮಂಗಡಕ್ಕೆ ಡಿಸಿ ಮನ್ನಾ ಜಮೀನು ಹಂಚಬೇಕೆಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒತ್ತಾಯ ಮಾಡಲಾಗಿದೆ. ಸತ್ಯ ಸಾರಮಾನಿ ಮೂಲ ಕ್ಷೇತ್ರದ ಬಗ್ಗೆಯೂ ರೈಯವರು ಮುಂಚೂಣಿ ನಾಯಕತ್ವ ವಹಿಸಿ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖವಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬಂಟ್ವಾಳದ ನಿಕಟಪೂರ್ವ ಶಾಸಕರು ತನ್ನ ೫ ವರ್ಷದ ಆಡಳಿತದಲ್ಲಿ ೩ ತಿಂಗಳಿಗೊಮ್ಮೆ ನಡೆಯುವ ಎಸ್ಸಿ ಎಸ್ ಟಿಯವರ ಅಭಿವೃದ್ದಿ ಸಭೆಗೆ ಒಂದು ಸಲವೂ ಭಾಗವಹಿಸಿಲ್ಲ. ಬಿ.ಸಿ.ರೋಡು ಹಾಗೂ ಕಕ್ಯಪದವಿನ ಅಂಬೇಡ್ಕರ್ ಭವನವನ್ನು ಉದ್ಘಾಟಿಸದೇ ಇರುವುದುನ್ನು ನಾಗರಿಕರು ಪ್ರಶ್ನಿಸುವಂತಾಗಿದೆ ಎಂದು ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಬಂಟ್ವಾಳ ತಾಲೂಕು ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ, ಗೌರವಾಧ್ಯಕ್ಷ ಜನಾರ್ದನ ಬೋಳಂತೂರು, ಅಭಿಲಾಷ್ ಕೃಷ್ಣಾಪುರ ಉಪಸ್ಥಿತರಿದ್ದರು.
—