ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ದಲ್ಲಿ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಲಹರಿ ಎಂ.ರಾಯಿ ಇವರು ಒಟ್ಟು 625ರಲ್ಲಿ 609 ಅಂಕ ಗಳಿಸುವ ಮೂಲಕ ಶೇ. 97.44% ಫಲಿತಾಂಶ ದಾಖಲಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಕೆ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ಶಿಕ್ಷಕಿ ರಮಾ ಮೋಹನ್ ಇವರ ಪುತ್ರಿ. ಗುಣಶ್ರೀ ವಿದ್ಯಾಲಯಕ್ಕೆ ಕೀರ್ತಿ ತಂದ ಇವರ ಸಾಧನೆಗೆ ಶಾಲಾ ಮುಖ್ಯಶಿಕ್ಷಕ ಗಿಲ್ಬರ್ಟ್ ಡಿಸೋಜ ಮತ್ತು ಆಡಳಿತ ಸಮಿತಿ ಅಧ್ಯಕ್ಷ , ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
Advertisement