ಬಂಟ್ವಾಳ: ರಾಜ್ಯ ಕಂಡ ಅತ್ಯಂತ ಭ್ರಷ್ಠ ಹಾಗೂ ಸಂವಿಧಾನ ವಿರೋಧಿ ಸರಕಾರ ಬೊಮ್ಮಾಯಿ ಸರಕಾರ. 40 ಪರ್ಸೆಂಟ್ ಸರಕಾರ ಎಂದು ಕುಖ್ಯಾತಿ ಪಡೆದಿದೆ. ಅಲ್ಪಸಂಖ್ಯಾತ ವಿರೋಧಿ ಧೋರಣೆಗಳಿಂದಲೇ ಕಾಲ ಕಳೆದ ಸರಕಾರ ಎಂದು ಜಾತ್ಯಾತೀತ ಜನತಾದಳದ ದ.ಕ. ಜಿಲ್ಲಾ ಅಲ್ಪಸಂಕ್ಯಾತ ಘಟಕದ ಅಧ್ಯಕ್ಷ ಹಾರೂನ್ ರಶೀದ್ ಹೇಳಿದರು.
ಅವರು ಜೆಡಿಎಸ್ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರು. ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀರಿಸಿದ ಬಳಿಕ ಅನೈತಿಕ ಪೊಲೀಸ್ಗಿರಿ ಪ್ರಕರಣ ಹೆಚ್ಚಾಗಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಕೋಮು ವೈಷಮ್ಯದ ಘಟನೆಗಳಲ್ಲೂ ತುಷ್ಟೀಕರಣ ನೀತಿ ಅನುಸರಿಸಿ ಬೊಮ್ಮಾಯಿ ಸರಕಾರ ಮೃತರಿಗೆ ಹಾಗೂ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದರು. ಆಝಾನ್, ಹಿಜಬ್, ಜಾತ್ರೆಯಲ್ಲಿ ವ್ಯಾಪಾರದಲ್ಲೂ ಕೋಮುವಾದ ಮೊದಲಾದ ಕ್ಷುಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೋಮು ಆಧಾರಿತ ರಾಜಕೀಯ ಮಾಡುತ್ತಿರುವುದು ಖಂಡನೀಯ, ಅಧಿಕಾರದಲ್ಲಿ ರಾಜಧರ್ಮ ಪಾಳಿಸಬೇಕಾದ ಬೊಮ್ಮಾಯಿ ಒಂದು ವರ್ಗವನ್ನು ಓಲೈಸಿ ಇನ್ನೊಂದು ವರ್ಗವನ್ನು ದ್ವೇಷಿಸುವ ಕಾರ್ಯ ಮಾಡುವುದು ಅಕ್ಷಮ್ಯ ಎಂದ ಅವರು ಈ ಬಾರಿಯ ಚುನಾವಣೆಯಲ್ಲಿ ಜನಪರವಾಗಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ಗೋಮ್ಸ್, ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕುಮಾರ್ ವೈ, ಪ್ರಮುಖರಾಧ ಮಹ್ಮಮದ್ ಶಫೀಕ್ ವೈ, ಜೀವನ್ ಪೌಲ್ ಡಿಕುನ್ಹ, ಸವಾಝ್ ಬಂಟ್ವಾಳ, ಇಬ್ರಾಹಿ ಗಡಿಯಾರ ಉಪಸ್ಥಿತರಿದ್ದರು.