ಬಂಟ್ವಾಳ: ಬಿಜೆಪಿ ಅಭ್ಯರ್ಥಿ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ಸಾಲೆತ್ತೂರು ವರೆಗೆ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.
ಚುನಾವಣೆಗೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಕಾರ್ಯಕರ್ತರು ಮೈಮರೆಯದೆ ಮನೆಮನೆ ಬೇಟಿ ಮಾಡಿ ಮತಯಾಚನೆ ನಡೆಸಿ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲು ರಾತ್ರಿ ಹಗಲು ನಿರಂತರವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದರು .
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಬರುವುದು ನೂರಕ್ಕೆ ನೂರು ಸತ್ಯ.ಆದರೆ ರಾಜ್ಯಕ್ಕೆ ಮತ್ತು ಕೇಂದ್ರಕ್ಕೆ ಶಕ್ತಿ ನೀಡಲು ಬಂಟ್ವಾಳ ದಲ್ಲಿ ಪ್ರತಿಯೊಬ್ಬರು ಬಿಜೆಪಿಗೆ ಮತ ನೀಡಿ ಎಂದು ತಿಳಿಸಿದರು.
ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ,ಮಾಧವ ಮಾವೆ, ಪುಷ್ಪರಾಜ್ ಚೌಟ, ಶಿವಪ್ರಸಾದ್ ಶೆಟ್ಟಿ, ಮೋಹನ್ ದಾಸ್ ಶೆಟ್ಟಿ, ಪುಷ್ಪಾಕಾಮತ್, ರಮೇಶ್ ರಾವ್ ಪತ್ತುಮುಡಿ, ಲೋಹಿತ್ ಅಗರಿ, ಬಾಲಕೃಷ್ಣ ಸೆರ್ಕಳ,ರಾಜೇಶ್ ಶೆಟ್ಟಿ ಮಂಚಿ, ಪ್ರಮೋದ್ ನೂಜಿಪ್ಪಾಡಿ, ರಾಜಾರಾಮ್ ಹೆಗ್ಡೆ, ಅಭಿಷೇಕ್ ರೈ, ಕೃಷ್ಣಪ್ರಸಾದ್ ಶೆಟ್ಟಿ, ಆನಂದ ಪೂಜಾರಿ, ವಿದ್ಯೇಶ್ ರೈ, ಶಂಕರ ಟೈಲರ್, ಹರೀಶ್ ಟೈಲರ್, ಪ್ರಶಾಂತ್ ಶೆಟ್ಟಿ ಅಗರಿ , ಕಿಶೋರ್ ದೇವಾಡಿಗ, ಅರವಿಂದ ರೈ, ನಾಗೇಶ್ ಶೆಟ್ಟಿ ದೇವಿದಾಸ್ ಶೆಟ್ಟಿ ಪಾಲ್ತಾಜೆ,ವಿಜಯ ಕಾಮತ್, ಸತೀಶ್ ನಾಯ್ಕ್,ಜಗದೀಶ್ ರೈ ಪೆರ್ಲದಬೈಲು
ಮತ್ತಿತರರು ಉಪಸ್ಥಿತರಿದ್ದರು.