ಬಂಟ್ವಾಳ: ಇಲ್ಲಿನ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ. ರಮಾನಾಥ ರೈಯವರ ಚುನಾವಣಾ ಪ್ರಚಾರದ ಭಾಗವಾಗಿ ಮೆಗಾ ರೋಡ್ ಶೋ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆಯಿತು.
ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿಯಿಂದ ಆರಂಭಗೊಂಡ ಮೆರವಣಿಗೆ ಬಿ.ಸಿ.ರೋಡಿನ ಮುಖ್ಯ ರಸ್ತೆಯಲ್ಲಿ ಸಾಗಿ ಕೈಕಂಬದ ಪೊಳಲಿ ದ್ವಾರದ ಬಳಿ ಸಮಾಪನ ಗೊಂಡಿತು. ಪಕ್ಷದ ಅಭ್ಯರ್ಥಿ ಬಿ. ರಮನಾಥ ರೈ ತೆರೆದ ವಾಹನದಲ್ಲಿ ಸಾಗಿ ಮತಯಾಚನೆ ಮಾಡಿದರು. ಸಾವಿರಾರು ಸಂಕ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ರಮನಾಥ ರೈ ಅಭಿಮಾನಿಗಳು ಹಾಗೂ ಹಿತೈಷಿಗಳು ರೋಡ್ಶೋನಲ್ಲಿ ಹೆಜ್ಜೆಹಾಕಿದರು.
ಬಳಿಕ ಕೈಕಂಬದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಿ. ರಮಾನಾಥ ರೈ ಮಾತನಾಡಿ
ಜನರು ನೀಡಿದ ಪ್ರೀತಿ ನನಗೆ ಶಕ್ತಿ. ಎಲ್ಲಾ ಜಾತಿ ಧರ್ಮವನ್ನು ಸಮಾನವಾಗಿ ನೋಡಿ ಕೊಂಡು ರಾಜಕೀಯ ಮಾಡಿದ ಹೆಮ್ಮೆ ನನಗಿದೆ ಎಂದರು. ಅನೇಕ ಅಭಿವೃದ್ಧಿ ಕೆಲಸಗಳು ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಆಗಿದೆ. ಎಷ್ಟೇ ಕೆಲಸ ಮಾಡಿದರೂ ಅಪಪ್ರಚಾರದ ಮೂಲಕ ಕಳೆದ ಬಾರಿ ಸೋಲಿಸಲಾಗಿದೆ. ಸೋಲಿಗೆ ಬೇಸರವಿಲ್ಲ, ಸೋಲಿಸಿದ ರೀತಿಗೆ ಬೇಸರವಿದೆ. ಈ ಚುನಾವಣೆಯಲ್ಲಿ ನೀವೆಕಲ್ಲರೂ ನನಗೆ ಸಹಕಾರ ನೀಡುತ್ತಿರಿ ಎನ್ನುವ ವಿಶ್ವಾಸ ಇದೆ. ಕ್ಷೇತ್ರದಲ್ಲಿ ಅಭಿವೃದ್ದಿಯಾಗದೇ ಬಾಕಿ ಉಳಿದಿರು ಕೆಲಸವನ್ನು ಪೂರ್ತಿಗಳೊಸುವ ಕನಸು ಇದೆ. ಮತ್ತೊಮ್ಮೆ ಅವಕಾಶ ನೀಡಿದ್ದಲ್ಲಿ ಬಾಕಿ ಉಳಿದಿರುವ ಕೆಲಸ ಮಾಡಲು ಶಕ್ತಿ ನೀಡಿದಂತಾಗುತ್ತದೆ. ಅದಕ್ಕಾಗಿ ನೀವೇಲ್ಲ ಕೈ ಜೋಡಿಸಬೇಕು. ಚುನಾವಣೆಗೆ ಕೆಲವು ಗಂಟೆ ಮಾತ್ರ ಬಾಕಿ ಇದೆ. ನೀವೆಲ್ಲ ನನ್ನ ಜೊತೆ ನಿಂತು ಯಶಸ್ಸಿನಲ್ಲಿ ಭಾಗಿಯಾಗುತ್ತಿರಿ ಎನ್ನುವ ನಂಬಿಕೆ ನನ್ನದು ಎಂದು ತಿಳಿಸಿದರು.
ಯಾವುದೇ ವ್ಯಾಪಾರದ ಅಭಿವೃದ್ದಿಗಾಗಿ ನನಗೆ ರಾಜಕೀಯ ಅಗತ್ಯವಿಲ್ಲ, ಜನಸೇವೆಗೆ ಮಾತ್ರ ನನಗೆ ರಾಜಕೀಯ ಅನಿವಾರ್ಯ. ನನಗೆ ಮತ್ತೊಮ್ಮೆ ಅವಕಾಶ ನೀಡಿದರೆ ಎರಡು ಪಟ್ಟು ಹೆಚ್ಚು ಕೆಲಸ ಮಾಡುವುದಾಗಿ ತಿಳಿಸಿದರು. ತನ್ನ ಮೇಲಿನ ನಿರಂತರ ಅಪಪ್ರಚಾರಕ್ಕೆ ಭಾವುಕರಾದ ರೈ ಇದು ತನ್ನ ಕೊನೆಯ ಚುನಾವಣೆ ಎನ್ನುತ್ತಾ ವೇದಿಕೆಯಿಂದಲೇ ಸಾಷ್ಟಾಂಗ ನಮಸ್ಕಾರ ಮಾಡಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಪದ್ಮಶೇಖರ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ.ಎಚ್. ಖಾದರ್, ಚರಿಷ್ಮಾ ರೈ, ಮಾಯಿಲಪ್ಪ ಸಾಲ್ಯಾನ್, ಲುಕ್ಮಾನ್, ಸದಾಶಿವ ಬಂಗೇರ, ಮಹಮ್ಮದ್ ಶರೀಫ್, ಚಿತ್ತರಂಜನ್ ಶೆಟ್ಟಿ, ಸಂಜೀವ ಪೂಜಾರಿ, ಸುರೇಶ್ ಜೋರಾ, ಇಬ್ರಾಹಿಂ ನವಾಝ್, ಜಯಂತಿ ವಿ. ಪೂಜಾರಿ, ಲವೀನ ವಿಲ್ಮಾ ಮೋರಸ್, ಜೋಸ್ಫಿನ್ ಡಿಸೋಜಾ, ಇಬ್ರಾಹಿಂ ಕೈಲಾರ್, ಸುದರ್ಶನ್ ಜೈನ್, ಅಬ್ಬಾಸ್ ಅಲಿ ಮೊದಲಾದವರು ಉಪಸ್ಥಿತರಿದ್ದರು.
ಬಾಲಕೃಷ್ಣ ಆಳ್ವ ಕೋಡಾಜೆ ಕಾರ್ಯಕ್ರಮ ನಿರೂಪಿಸಿದರು.