ಬಂಟ್ಚಾಳ: ಅಧಿಕಾರ ಪಡೆಯುವುದೊಂದೆ ಬಿಜೆಪಿ ತಂತ್ರಗಾರಿಕೆ ಅಲ್ಲ. ಗುಲಾಮಗಿರಿಯಂತಹ ವಿಷ ಬೀಜ ತೆಗೆದು ದೇಶವನ್ನು ಸ್ವಾವಲಂಬಿ, ವಿಶ್ವಗುರು ಮಾಡುವ ಅಜೆಂಡ ಬಿಜೆಪಿಯಲ್ಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ಹೇಳಿದರು.
ಕ್ರಿಮಿನಲ್ ದಂದೆಯ ಅಜೆಂಡ ಬಿಜೆಪಿಯಲ್ಲಿಲ್ಲ ಎಂದ ಅವರು ರಾಜ್ಯದಲ್ಲಿ ಜನತೆ ಮೋದಿ ಅಮಿತ್ ಷಾ ಅವರ ಮಾತಿಗೆ ಬೆಲೆ ನೀಡುತ್ತಾರೆ, ಬಿಜೆಪಿ 120 ಸ್ಥಾನವನ್ನು ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ದೇಶ ವಿರೋಧಿ ಶಕ್ತಿಗಳು ಕಾಂಗ್ರೆಸ್ ಜೊತೆ ಕೆಲಸ ಮಾಡುತ್ತಿದೆ. ಪ್ರತ್ಯೇಕವಾದಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಉಚಿತ ಕೊಡುಗೆಗಳ ಘೊಷಣೆ ಮಾಡುವುದರಲ್ಲಿ ಮೊದಲು, ಕೊಡುವುದರಲ್ಲಿ ಕೊನೆ ಎಂದು ಛೇಡಿಇಸದರು.
ಕರ್ನಾಟಕ ದಲ್ಲಿ ಐದು ಕಾಂಗ್ರೆಸ್ ಕೋಟೆ ಇದೆ. ಸಿದ್ದರಾಮಯ್ಯ ಟಿಪ್ಪುವಿನ ಕಲ್ಲಿನಲ್ಲಿ ಡಿಕೆಶಿ ಭ್ರಷ್ಠಾಷಾರದ ಕಲ್ಲಿನಲ್ಲಿ, ಮಲ್ಲಿಕಾರ್ಜುನ ಕರ್ಗೆ ಪ್ರಧಾನಿಯನ್ನು ನಿಂದಿಸಿ ಕೋಟೆ ಕಟ್ಟಿದ್ದಾರೆ. ಮೋದಿ ಕರ್ನಾಟಕಕ್ಕೆ ಬಂದ ಬಳಿಕ ಈ ಎಲ್ಲಾ ಕೋಟೆಗಳು ಧರಶಾಹಿಯಾಗಿ ಕಾಂಗ್ರೆಸ್ ಹವಾ ಇಲ್ಲವಾಗಿದ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ದೇವಪ್ಪ ಪೂಜಾರಿ ಪ್ರಮುಖರಾದ ಡೊಂಬಯ ಅರಳ, ಪುರುಷೋತ್ತಮ ಶೆಟ್ಟಿ ವಾಮದಪದವು, ರಂಜಿತ್ ಮೈರಉಪಸ್ಥಿತರಿದ್ದರು.
—