Author: admin
ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘಕ್ಕೆ ಸಾಧನಾ ಪ್ರಶಸ್ತಿ Advertisement ಬಂಟ್ವಾಳ: 2022-23 ನೇ ಸಾಲಿನಲ್ಲಿ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭೋಜ ಮೂಲ್ಯ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. Advertisement Advertisement
ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ(ರಿ.) ಪೊಸಳ್ಳಿ ಬಂಟ್ವಾಳ ಇದರ ವತಿಯಿಂದ ಪ್ರತೀ ವರ್ಷದಂತೆ ನಡೆಯುವ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಬಂಟ್ವಾಳ ತಾಲೂಕಿನ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿಭಾಗಗಳಲ್ಲಿ 2023ರಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಭಾವಚಿತ್ರ, ಅಂಕ ಪಟ್ಟಿಯ ಪ್ರತಿ, ಕಲಿಕಾ ಪ್ರಮಾಣ ಪತ್ರ ಮತ್ತು ಆಧಾರ್ ಪ್ರತಿಯೊಂದಿಗೆ ಸಂಘ ಕಚೇರಿಗೆ ಅರ್ಜಿ ಸಲ್ಲಿಸುವುದು. ಹಾಗೆಯೇ 2023 ರಲ್ಲಿ 10ನೇ ತರಗತಿಯಲ್ಲಿ 85% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಕುಲಾಲ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿ ಆಧಾರ್ ಪ್ರತಿ ˌಕಲಿಕಾ ಪ್ರಮಾಣ ಪತ್ರ ಮತ್ತು ಭಾವಚಿತ್ರ ದೊಂದಿಗೆ ಸ್ವ-ವಿವರ ಅರ್ಜಿಯನ್ನು ಅಧ್ಶಕ್ಷರು, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ(ರಿ.), ಪೊಸಳ್ಳಿ, ಬಿ.ಸಿ. ರೋಡು ಬಂಟ್ವಾಳ ತಾಲೂಕು , ದ.ಕ. -574219 ಇಲ್ಲಿಗೆ ತಾ-05-09-2023 ರ ಒಳಗೆ ಕಳುಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. Advertisement Advertisement
Advertisement ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ, ಮಹಿಳಾ ಘಟಕ ಮತ್ತು ಸೇವಾದಳ ಇದರ ಆಶ್ರಯದಲ್ಲಿ 22 ನೇ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಆ.25 ರಂದು ಶುಕ್ರವಾರ ಸಂಜೆ 4 ಗಂಟೆಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. Advertisement Advertisement
ಬಂಟ್ವಾಳ: ತಾಲೂಕು ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ ಇದರ ಆಶ್ರಯದಲ್ಲಿ ಉಚಿತ ವೃತ್ತಿ ಮಾರ್ಗದರ್ಶನ, ಉದ್ಯೋಗ ನೋಂದಾಣಿ ಕಾರ್ಡ್ ಹಾಗೂ ಸಸಿಗಳ ವಿತರಣಾ ಸಮಾರಂಭ ಆ. 27ರಂದು ಭಾನುವಾರ ಬೆಳಿಗ್ಗೆ 9.30ಕ್ಕೆ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.ಕಾರ್ಯಕ್ರಮವನ್ನು ಬಂಟ್ವಾಳ ತಹಶೀಲ್ದಾರ್ ಎಸ್.ಬಿ ಕೂಡಲಗಿ ಉದ್ಘಾಟಿಸುವರು, ಬಂಟ್ವಾಳ ತಾಲೂಕು ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸತೀಶ್ ಅರಳ ಅಧ್ಯಕ್ಷತೆ ವಹಿಸುವರು. ಆ.27: ಬಂಟ್ವಾಳ ತಾಲೂಕು ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದಿಂದ ಉಚಿತ ವೃತ್ತಿ ಮಾರ್ಗದರ್ಶನ, ಉದ್ಯೋಗ ನೋಂದಾಣಿ ಕಾರ್ಡ್ ಹಾಗೂ ಸಸಿಗಳ ವಿತರಣಾ ಸಮಾರಂಭ Advertisement ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮನೀಶ್ ನಾಯಕ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವರು, ಜಿಲ್ಲಾ ಉದ್ಯೋಗಾಧಿಕಾರಿ ಎಚ್ಚರಪ್ಪ ಬಡಿಗೇರ ಉದ್ಯೋಗ ಕಾರ್ಡ್ ವಿತರಿಸುವರು, ಹಿರಿಯ ತೋಟಗಾರಿಕಾ ಸಹಾಯಕ…
ಆಟಿ ಆಚರಣೆ ಅಲ್ಲ, ಪ್ರಕೃತಿ ಸಹಜ ಬದುಕು-ಗೋಪಾಲ ಅಂಚನ್ ಬಂಟ್ವಾಳ: ಆಟಿ ಆಚರಣೆಯಲ್ಲ, ಅದು ಪ್ರಕೃತಿ ಸಹಜ ಬದುಕು. ಅಂದಿನ ಬಡತನದ ಬದುಕನ್ನು ಇಂದು ಕೆಲವೆಡೆ ಆಚರಣೆಯ ಹೆಸರಿನಲ್ಲಿ ವೈಭವೀಕರಿಸಲಾಗುತ್ತಿದೆ. ಅಂದಿನ ಆಟಿಯ ಬಡತನದ ಬದುಕಿನ ಹಿಂದಿರುವ ವಾಸ್ತವಾಂಶವನ್ನು ಇಂದಿನ ಜನಾಂಗಕ್ಕೆ ತಿಳಿಯಪಡಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಪ್ರಕೃತಿಯೆಡೆಗೆ ಮುಖ ಮಾಡಿ ಬದುಕಿದರೆ ಮಾತ್ರ ಮಾನವನ ಎಲ್ಲಾ ಸಮಸ್ಯೆಗಳಿಗೂ ಪ್ರಕೃತಿಯಲ್ಲೇ ಪರಿಹಾರ ಇದೆ ಎಂಬ ಸಂದೇಶವನ್ನು ಅಂದಿನ ಆಟಿಯ ಬದುಕು ನಮಗೆ ನೀಡುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಗೋಪಾಲ ಅಂಚನ್ ಹೇಳಿದ್ದಾರೆ. Advertisement ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆದ “ಆಟಿದ ನೆನಪು” ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. Advertisement ಅಂದಿನ ಆಟಿ ತಿಂಗಳಲ್ಲಿ ಪ್ರಕೃತಿ ಸಹಜವಾಗಿ ಕಾಡಿದ ಭಯ, ಹಸಿವು ಹಾಗೂ ರೋಗಗಳಿಗೆ ಮಾನವ ಪ್ರಕೃತಿಯಲ್ಲಿಯೇ ಕಂಡು ಹಿಡಿದ ಪರಿಹಾರಗಳೇ ಇಂದು ಆಚರಣೆಯ ಭಾಗಗಳಾಗಿ ರೂಪಾಂತರಗೊಂಡಿದೆ.…
ಬಂಟ್ವಾಳ: ಜಿಲ್ಲೆಯ ಕಾರಣಿಕದ ದೈವ ಕ್ಷೇತ್ರ ಸಜೀಪಮೂಡ ಗ್ರಾಮದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಆ.21 ಸೋಮವಾರ ದಂದು ನಾಗರಪಂಚಮಿಯ ನಿಮಿತ್ತ ಆ.20 ರಂದು ಭಾನುವಾರಅಗೇಲು ಸೇವೆ ಮತ್ತು ಕೋಲ ಸೇವೆ ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. Advertisement Advertisement Advertisement
Advertisement ಸ್ಥಾಪಕ ಅಧ್ಯಕ್ಷರಾಗಿ ಹೊಟೇಲ್ ರಂಗೋಲಿಯ ಮಾಲೀಕ ಚಂದ್ರಹಾಸ ಡಿ. ಶೆಟ್ಟಿ Advertisement ಬಂಟ್ವಾಳ: ನೂತನ ಬಂಟ್ವಾಳ ತಾಲೂಕು ಹೊಟೇಲ್ ಅಸೋಸಿಯೇಷನ್ (BTHA) ಅಸ್ತಿತ್ವಕ್ಕೆ ಬಂದಿದ್ದು ಇದರ ಸ್ಥಾಪಕ ಅಧ್ಯಕ್ಷರಾಗಿ ಹೊಟೇಲ್ ರಂಗೋಲಿಯ ಮಾಲೀಕ ಚಂದ್ರಹಾಸ ಡಿ. ಶೆಟ್ಟಿ ಆಯ್ಕೆಯಾಗಿದ್ದಾರೆ. Advertisement ಉಪಾಧ್ಯಕ್ಷರಾಗಿ ಮತ್ಯಸಾಗರ್ ಹೊಟೇಲ್ ನ ನಾರಾಯಣ್ ಸಿ. ಪೆರ್ನೆ ಕಾರ್ಯದರ್ಶಿಯಾಗಿ ಆನಿಯಾ ದರ್ಬಾರ್ ಹೊಟೇಲ್ ನ ಹಂಝ ಬಸ್ತಿಕೋಡಿ ಕೋಶಾಧಿಕಾರಿಯಾಗಿ ಚಂದ್ರ ವಿಲಾಸ ಹೊಟೇಲ್ ನ ಬಿ. ಧರ್ಮೇಂದ್ರ ಬಂಟ್ವಾಳ ಉಪಾಧ್ಯಕ್ಷರಾಗಿ ಮತ್ಯಸಾಗರ್ ಹೊಟೇಲ್ ನ ನಾರಾಯಣ್ ಸಿ. ಪೆರ್ನೆ, ಕಾರ್ಯದರ್ಶಿಯಾಗಿ ಆನಿಯಾ ದರ್ಬಾರ್ ಹೊಟೇಲ್ ನ ಹಂಝ ಬಸ್ತಿಕೋಡಿ, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ರೈಯವರು , ಕೋಶಾಧಿಕಾರಿಯಾಗಿ ಚಂದ್ರ ವಿಲಾಸ ಹೊಟೇಲ್ ನ ಬಿ. ಧರ್ಮೇಂದ್ರ ಬಂಟ್ವಾಳರವರು ಆಯ್ಕೆಯಾದರು. ವಲಯ ಸಂಚಾಲಕರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಒಟ್ಟು 27 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ರಚಿಸಲಾಯಿತು
ಮಂಚಿ – ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಬಂಟ್ವಾಳ: ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆಯಕ್ಷ ಧ್ರುವ – ಯಕ್ಷ ಶಿಕ್ಷಣ ಎನ್ನುವ ಯಕ್ಷಗಾನ ನಾಟ್ಯ ತರಬೇತಿ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು ಇಲ್ಲಿ ಸಂಯೋಜನೆ ಮಾಡಲಾಯಿತು. ಯಕ್ಷಗಾನ ನಾಟ್ಯ ತರಬೇತಿ ಶಿಕ್ಷಣದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಹಾಗೂ ಹಿರಿಯ ವಿದ್ಯಾರ್ಥಿಯಾಗಿರುವ ರೇಖಾ ಜೆ ಶೆಟ್ಟಿ ನೆರವೇರಿಸಿ ಪ್ರಸ್ತುತ ಕಾಲಘಟ್ಟದಲ್ಲಿ ಅವಕಾಶಗಳು ಹೆಚ್ಚು – ಹೆಚ್ಚು ಸೃಷ್ಟಿಯಾಗುತ್ತಾ ಇದೆ. ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯತ್ತ ಮುಖ ಮಾಡಿದ್ದು ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಆಸಕ್ತರಾಗಬೇಕು ಎಂದರು. Advertisement ಯಕ್ಷ ಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಸತೀಶ್ ಪಟ್ಲ ಮಾತನಾಡಿ, ಯಕ್ಷಗಾನ ಎನ್ನುವುದು ಒಬ್ಬ ವ್ಯಕ್ತಿಯಲ್ಲಿ ಸಂಸ್ಕಾರ ತುಂಬುವ ಕಲೆ. ಸರ್ವಧರ್ಮೀಯರು ಇಷ್ಟಪಡುವ ಯಕ್ಷಗಾನವು ಎಲ್ಲಾ ಜಾತಿಯ ಕಲಾವಿದರನ್ನು ಒಲಿಸಿಕೊಂಡಿದೆ. ವಿದೇಶಿಗರಿಗಿರುವ ಯಕ್ಷಗಾನದ ಮೇಲಿನ ಒಲವು ತನ್ನ ಮೇಲೆ ವಿಶೇಷವಾದ ಪ್ರಭಾವ ಬೀರಿದೆ.…
ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮ ಬಂಟ್ವಾಳ: ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮವನ್ನು ಮಂಗಳವಾರ ಕಿನ್ನಿಬೆಟ್ಟುವಿನಲ್ಲಿ ಆಚರಿಸಲಾಯಿತು. ಜೆಸಿಐ ವಲಯ 15ರ ವಲಯ ಕಾರ್ಯಕ್ರಮ ವಿಭಾಗದ ನಿರ್ದೆಶಕಿ ಅಕ್ಷತಾ ಗಿರೀಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೋಗ್ರೀನ್ ವಿಭಾಗದ ವಲಯಾಧಿಕಾರಿ ನವೀನ್ ಕೋಡ್ಲಕ್ಕೆ ಕಾರ್ಯಕ್ರಮ ಉದ್ಘಾಟಿಸಿದರು. Advertisement ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮ ಜೆಸಿಐ ಬಂಟ್ವಾಳದ ವತಿಯಿಂದ ಆಟಿಯಲ್ಲೊಂದು ಜೇಸಿ ದಿನ ಕಾರ್ಯಕ್ರಮ Advertisement ಕಾರ್ಯಕ್ರಮದಲ್ಲಿ ಹಿರಿಯ ಜೇನು ಕೃಷಿ ತರಬೇತುದಾರ ಲಕ್ಷಣ ಗೌಡ ಹಾಗೂ ಭೂ ಸೇನೆಯ ಯೋಧ ಸುಧಾಕರ ಶೆಟ್ಟಿ ಅವರನ್ನು ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಾವೂರು ಆಟಿ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಜೆಸಿಯ ಬಂಟ್ವಾಳದ ಅಧ್ಯಕ್ಷ ರಾಜೇಂದ್ರ ಕೆ. ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಘಟಕಾಧ್ಯಕ್ಷ ನಾಗೇಶ್ ಬಾಳೆಹಿತ್ಲು, ಕಾರ್ಯಕ್ರಮ ಸಂಯೋಜಕ…
ಬೆಂಗಳೂರಿನ ಕೆನರಾ ಅಸೋಸಿಯೇಷನ್ ಆಶ್ರಯದಲ್ಲಿ ಆಟಿಡೊಂಜಿ ಕೂಟ ಸಂಭ್ರಮ Advertisement ಬೆಂಗಳೂರು: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೆನರಾ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಇತ್ತೀಚೆಗೆ ಆಟಿಡೊಂಜಿ ಕೂಟವನ್ನು ಆಚರಿಸಲಾಯಿತು.ಹಿಂಗಾರ ಅರಳಿಸಿ, ದೀಪ ಬೆಳಗಿಸುವ ಮೂಲಕ ಸಂಘದ ಹಿರಿಯ ಸದಸ್ಯ ಆರ್. ಎಸ್. ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸತೀಶ್ ಸುವರ್ಣ ಆಟಿ ಅಮಾವಾಸ್ಯೆ ಹಾಗೂ ಆಟಿ ತಿಂಗಳಿನ ವಿಶೇಷತೆಯ ಬಗ್ಗೆ ಮಾತನಾಡಿ ಸಂಘದ ಮುಂದಿನ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಡಾ. ಸುಹಾಸ್ ಸಾಗರ್ ರವರು ವೈದ್ಯಕೀಯ ತುರ್ತು ಪರಿಸ್ಥಿತಿ ಯ ಬಗ್ಗೆ ವಿವರ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಯಂ.ವಿಜಯ್ ಕುಲಾಲ್ ಸ್ವಾಗತಿಸಿದರು. ಕೋಶಾಧಿಕಾರಿ ವಿಠ್ಠಲ್ ಗೊಲ್ಲ ಸಂಘದ 2022-23 ಸಾಲಿನ ಲೆಕ್ಕ ಪತ್ರ ಮಂಡನೆ ಮಾಡಿದರು. ಉಪಾಧ್ಯಕ್ಷ ನವೀನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ವಂದಿಸಿದರು. Advertisement ಮಕ್ಕಳಿಗೆ ಕೃಷ್ಣ,ರಾಧೆ ಛದ್ಮವೇಷ ಸ್ಪರ್ಧೆಏರ್ಪಡಿಸಲಾಗಿತ್ತು. ಪುಟ್ಟ ಮಕ್ಕಳು ಕೃಷ್ಣ ರಾಧೆ ವೇಷ ಧರಿಸಿ ಪ್ರೇಕ್ಷಕರ…








