Author: admin

ಸಂಚಯಗಿರಿ: ನಾಗರಿಕ ಕ್ರಿಯಾ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ, ಬಟ್ಟೆ ಚೀಲ ಬಿಡುಗಡೆ ಕಾರ್ಯಕ್ರಮ ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿಯೇ ಅತ್ಯಂತ ಸ್ವಚ್ಛ ಬಡಾವಣೆ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಸಂಚಯಗಿರಿಯಲ್ಲಿ ನಾಗರಿಕ ಕ್ರಿಯಾ ಸಮಿತಿಯ ವತಿಯಿಂದ ೭೭ನೇ ಸ್ವಾತಂತ್ರ್ಯ ಸಂಭ್ರಮವನ್ನು ವಿಜ್ರಂಭಣೆಯಿಂದ ಆಚರಿಸಯಿತು. Advertisement Advertisement ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುರೇಶ್ ಬಂಗೇರ ಸಂಚಯಗಿರಿ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಪ್ರಾಂಶುಪಾಲ ಸಿ.ವಿ. ಶಂಕರ್ ಅವರು ಸ್ವಾತಂತ್ರ್ಯೋತ್ಸವದ ಬಗ್ಗೆ ಶುಭ ಸಂದೇಶ ನೀಡಿ ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತವನ್ನೇ ಹರಿಸಿದ್ದಾರೆ. ಅವರ ಬಲಿದಾನದ ಸಲುವಾಗಿ ಇಂದು ದೇಶ ಸ್ವತಂತ್ರ್ಯಗೊಂಡಿದೆ ಎಂದರು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಮೊದಲ್ಗೊಂಡು ೧೯೪೭ರವರೆಗೂ ನಿರಂತರ ಹೋರಾಟದ ಪರಿಣಾಮ ದೇಶ ಸ್ವತಂತ್ರ ಪಡೆಯಲು ಸಾಧ್ಯವಾಯಿತು. ಝಾನ್ಸಿರಾಣಿ ಲಕ್ಷ್ಮೀ ಬಾಯಿ, ತಾತ್ಯ ಟೋಪಿಯಂತಹ ಹೋರಾಟಗಾರರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲಾಯಿತು, ವೀರ ಸಾವರ್ಕರ್, ಭಗತ್‌ಸಿಂಗ್, ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಭೋಷ್‌ರಂತಹ ಅಪ್ಪಟ ವೀರಯೋಧರ ಹೋರಾಟ ಹಾಗೂ ದೂರದೃಷ್ಟಿಯ ಚಿಂತನೆಯ ಫಲ ಇಂದು…

Read More

ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ, ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನಿಂದ ಮಾದರಿ ಕಾರ್ಯಕ್ರಮ ಬಂಟ್ವಾಳ: ಬಿಲ್ಲವ ಸಮಾಜದಲ್ಲಿರುವ ದೀನರು, ದುರ್ಬಲರಿಗೆ ನೆರವಾಗಲು, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕಾರ ನೀಡಲು, ಆರ್ಥಿಕವಾಗಿ ದುರ್ಬಲರಾದ ಸ್ವಸಮಾಜದ ಬಂಧುಗಳಿಗೆ ಸಹಾಯಹಸ್ತ ಚಾಚಲು ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ಸಂಸ್ಥೆ ಕಳೆದ ಮೂರು ವರ್ಷಗಳಿಂದ ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ ಎನ್ನುವ ಮಾದರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಗದ್ದೆಯಲ್ಲಿ ಸೇರೋಣ-ವ್ಯವಸಾಯ ಮಾಡೋಣ, ಬಿರುವೆರ್ ಕಡೇಶಿವಾಲಯ ಸೇವಾ ಟ್ರಸ್ಟ್ ನಿಂದ ಮಾದರಿ ಕಾರ್ಯಕ್ರಮ Advertisement ಕಡೇಶಿವಾಲಯ ಗ್ರಾಮದ ನಡ್ಯೇಲು ಎಂಬಲ್ಲಿನ ಸುಮಾರು 2 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಬಿಲ್ಲವ ಸಮಾಜದ ಬಂಧುಗಳು ಸೇರಿಕೊಂಡು ಬತ್ತದ ಸಾಗುವಳಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಬೇಸಾಯದ ಮೂಲಕ ಬಂದ ಇಳುವರಿ ಹಾಗೂ ಬೈ ಹುಲನ್ನು ಮಾರಿ ಆ ಮೂಲಕ ಗಳಿಸಿದ ಆದಾಯವನ್ನು ಮತ್ತೆ ಸಮಾಜದ ಬಡ ಜನರಿಗೆ, ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದ್ದಾರೆ. ಯುವ…

Read More

ಜೈ ಶ್ರೀರಾಮ್ ತರುಣ ವೃಂದ ಹಾಗೂ ರಕ್ತೇಶ್ವರಿ ಕ್ರಿಕೆಟರ್ಸ್ ಅಧ್ಯಕ್ಷರಾಗಿ ಕಿರಣ್ ಕುಮಾರ್ ಆಯ್ಕೆ ಬಂಟ್ವಾಳ: ಜೈ ಶ್ರೀರಾಮ್ ತರುಣ ವೃಂದ ಹಾಗೂ ರಕ್ತೇಶ್ವರಿ ಕ್ರಿಕೆಟರ್ಸ್ ಬಿ.ಸಿ.ರೋಡ್ ಇದರ2023-24ನೇ ಸಾಲಿನ ನೂತನ ಪದಾಧಿಕಾರಿಗಳನು ಆಯ್ಕೆ ಮಾಡಲಾಯಿತು. Advertisement Advertisement ಗೌರವ ಅಧ್ಯಕ್ಷರಾಗಿ ಶರತ್ ನಾಯಕ್, ಅಧ್ಯಕ್ಷರಾಗಿ ಕಿರಣ್ ಕುಮಾರ್, ಉಪಾಧ್ಯಕ್ಷರಾಗಿ ನವೀನ್ ಕೈಕುಂಜೆ, ಸಚಿನ್, ರಂಜಿತ್ ಪೂಜಾರಿ, ಕಾರ್ಯದರ್ಶಿಯಾಗಿ ಶಿವಾನಂದ, ಕೋಶಾಧಿಕಾರಿ ತಿಲಕ್ ರಾಜ್, ಜತೆ ಕಾರ್ಯದರ್ಶಿಯಾಗಿ ಸಮರ್ಥ್, ಹಿಮಾಂಶು ಆಯ್ಕೆಯಾದರು. Advertisement

Read More

ಬಾವಿಗೆ ಹಾರಿ ಯುವಕ ಆತ್ಮಹತ್ಯೆ Advertisement ಬಂಟ್ವಾಳ: ಮನೆಮಂದಿಯ ಮುಂದೆಯೇ ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಜೀಪಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.ಇಲ್ಲಿನ ನಿವಾಸಿ ಜನಾರ್ದನ ಆಚಾರ್ಯ ಶಶಿಕಲಾ ಆಚಾರ್ಯ ದಂಪತಿ ಪುತ್ರ ಸಾಗರ್ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ಯುವಕ. Advertisement Advertisement ಕಳೆದ ಹಲವು ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸಾಗರ್ ಗೆ ಇತ್ತಿಚೆಗೆ ಆತನ ತಂದೆಯೇ ಒಂದು ಕಿಡ್ನಿಯನ್ನು ದಾನ ಮಾಡಿದ್ದು ಶಸ್ತ್ರ ಚಿಕಿತ್ಸೆಯ ಬಳಿಕ ಆರೋಗ್ಯವಾಗಿದ್ದ. ಸೋಮವಾರ ಬೆಳಿಗ್ಗೆ ಆತನ ಸಹೋದರ ಕೆಲಸಕ್ಕೆ ತೆರಳಿದ ಬಳಿಕ 8 ಗಂಟೆಯ ವೇಳೆಗೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ತಾಯಿಯ ಮನೆಯಲ್ಲಿರುವಾಗಲೇ ಘಟನೆ ನಡೆದಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿದೆ. ಸಾಗರ್ ಅತ್ಯುತ್ತಮ ಚಿತ್ರಕಲಾವಿದನಾಗಿ ಗುರುತಿಸಿಕೊಂಡಿದ್ದ.

Read More

ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳದ ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಕಾರ್ಯಕ್ರಮ Advertisement ಬಂಟ್ವಾಳ: ಧ್ವನಿ ಬೆಳಕು ಸಂಯೋಜಕರ ಒಕ್ಕೂಟ ಬಂಟ್ವಾಳ ಇದರ ವತಿಯಿಂದ ಧ್ವನಿ ಬೆಳಕು ಕುಟುಂಬ ಸಂಗಮ ಕಾರ್ಯಕ್ರಮ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಭಾನುವಾರ ನಡೆಯಿತು.ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಅವರು ಮಾತನಾಡಿ ಧ್ವನಿ ಮತ್ತು ಬೆಳಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿ ವೃತ್ತಿಯಾಗಿದೆ. ಇಂದು ಈ ಒಕ್ಕೂಟದಲ್ಲಿ ಇನ್ನೂರು ಮಂದಿ ಸದಸ್ಯರಿದ್ದು ಅವರ ಮೂಲಕ ಸುಮಾರು ೨ ಸಾವಿರ ಕುಟುಂಬಗಳಿಗೆ ಈ ವೃತ್ತಿ ವರದಾನವಾಗಿದೆ, ನಾವು ಎಷ್ಟು ಹಣ ಸಂಪಾದಿಸಿದ್ದೇವೆ ಎನ್ನುವದಕ್ಕಿಂತಲೂ ನಾವು ಎಷ್ಟು ಮಂದಿಗೆ ಕೆಲಸ ನೀಡುತ್ತೇವೆಯೋ ಆ ಮೂಲಕ ನಮ್ಮ ಬೆಲೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. ದ.ಕ. ವಿಶೇಷವಾದಂತಹ ಜಿಲ್ಲೆಯಾಗಿದೆ. ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಉತ್ಸವಗಳು, ನಿರಂತರವಾಗಿ ನಡೆಯುತ್ತಿರುತ್ತದೆ. ಇಂತಹ ಕಾರ್ಯಕ್ರಮಗಳಿಗೆ ಧ್ವನಿ ಮತ್ತು ಬೆಳಕು ಅತ್ಯಗತ್ಯ ಎಂದರು. ಹಿಂದಿನ ಕಾಲದಲ್ಲಿ ಆಟಿ ಎಂದರೆ ಕಷ್ಟದ ದಿನ,…

Read More

ಬಂಟ್ವಾಳ: ಬೆಂಗಳೂರಿನ ದೇವನಹಳ್ಳಿಯ ವಿಜಯಪುರದ ಅನ್ನಪೂರ್ಣ ಕನ್ವೇನ್ಶನ್ ಸಭಾಂಗಣದಲ್ಲಿ ಆ.12 ಮತ್ತು 13 ರಂದು ನಡೆಯುತ್ತಿರುವ ಪ್ರಥಮ ಮುಕ್ತ ರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‌ಶಿಪ್ ವಾರಿಯರ್‍ಸ್ ಕಪ್-2023 ಸ್ಪರ್ಧೆಯ ಕಟಾ ವಿಭಾಗದಲ್ಲಿ ದ.ಕ. ಜಿಲ್ಲೆಯ ಇಬ್ಬರು ಪ್ರತಿಭೆಗಳು ಚಿನ್ನದ ಪದಕ ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಮಂಗಳೂರಿನ ನಂದಾದೀಪಾ ಅಪಾರ್ಟ್‌ಮೆಂಟ್‌ನ ನಿವಾಸಿಗಳಾದ ನಕುಲ್ ತಿಲಕ್ ಹಾಗೂ ಸುರಶ್ರೀ ಅವರ ಪುತ್ರ, ಮಂಗಳೂರಿನ ಸಂತ ಅಲೋಷಿಯಸ್ ಗೋನ್ಞಾಗ ವಿದ್ಯಾಸಂಸ್ಥೆಯ ಯುಕೆಜಿ ವಿದ್ಯಾರ್ಥಿ ಶ್ರೀಹಾನ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಫೈಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾನೆ. ಈತ ನಂದಾದೀಪಾ ಅಪಾರ್ಟ್‌ಮೆಂಟ್‌ನಲ್ಲಿ ಮಾರ್ಷಲ್‌ಆರ್ಟ್ ತರಬೇತುದಾರರಾದ ರಾಜೇಶ್ ಬ್ರಹ್ಮರಕೂಟ್ಲು ಹಾಗೂ ವೆನ್ನಿಲ್ಲಾ ಮಣಿಕಂಠ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾನೆ. Advertisement Advertisement ನೆತ್ತರಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಹಂಸಿಕಾ ವೈಯಕ್ತಿಕ ವಿಭಾಗದ ಕಟಾದಲ್ಲಿ ಚಿನ್ನದ ಪದಕ ಹಾಗೂ ಫೈಟ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈಕೆ ರಾಜೇಶ್ ಹಾಗೂ ಶೋಭಾ ದಂಪತಿಯ ಪುತ್ರಿಯಾಗಿದ್ದು ಪೊಳಲಿ…

Read More

ಸಜೀಪಮೂಡ : ಮಾ.10 ರಿಂದ ಮಾ.30ರವರೆಗೆ ಉಚಿತ ಪೂಟ್ ಫಲ್ಸ್ ಥೆರಪಿ Advertisement ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಸುಭಾಷ್‌ನಗರ ಸಜೀಪಮೂಡ ಇದರ ಆಶ್ರಯದಲ್ಲಿ ಕಂಪಾನಿಯೋ ಮಂಗಳೂರು ಇವರ ಸಹಯೋಗದೊಂದಿಗೆ ಗುರು ಜಯಂತಿಯ ಪ್ರಯುಕ್ತ ಆ.10 ರಿಂದ ಆ.30ರವರೆಗೆ ನಡೆಯಲಿರುವ ಉಚಿತ ಪೂಟ್ ಫಲ್ಸ್ ಥೆರಪಿಗೆ ಸಜೀಪಮೂಡ ಶ್ರೀ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಚಾಲನೆ ನೀಡಲಾಯಿತು. Advertisement Advertisement ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ದೀಪ ಪ್ರಜ್ವಲಿಸಿದರು, ಸಜೀಪಮೂಡ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ ಉಪಾಧ್ಯಕ್ಷ ಮೋಹನದಾಸ್ ಪೂಜಾರಿ ಬೊಳ್ಳಾಯಿ ಲೆಕ್ಕ ಪರಿಶೋಧಕ ರಮೇಶ್ ಅನ್ನಪ್ಪಾಡಿ ಪ್ರಮುಖರಾದ ಶ್ರೀಧರ ಪೂಜಾರಿ, ಜಯಶಂಕರ್ ಕಾಂಸಲೆ ಶೈಲೇಶ್ ಪೂಜಾರಿ , ಲೋಕೇಶ್ ಪೂಜಾರಿ, ಅಶ್ವಿನ್ ಪೂಜಾರಿ ಕಾರಜೆ, ಸತೀಶ್ ಪೂಜಾರಿ ಸೌಜನ್ಯಾ ಹಾಗೂ ಸುನೀತ ಉಪಸ್ಥಿತರಿದ್ದರು.

Read More

ಸಂಘದ ವಿರುದ್ಧ ಅವಹೇಳನ ಮಾಡುತ್ತಿರುವ 5 ಮಂದಿ ನೌಕರರ ವಿರುದ್ಧ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ 5 ಮಂದಿ ನೌಕರರು ಸ್ವಾರ್ಥ ಸಾಧನೆಗಾಗಿ ಸಂಘದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿಕೊಂಡು ಸಂಘ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಲ್ಲದೆ, ಸಾಮಾಜಿಕ ಜಾಲಾತಾಣಗಳಲ್ಲಿ ಸಂಘದ ಬಗ್ಗೆ ಅವಹೇಳನ ಮಾಡುತ್ತಿದ್ದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಲು ಸುಳ್ಳು ದೂರು ನೀಡಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ವಿರುದ್ಧ ಅವಹೇಳನ ಮಾಡುತ್ತಿರುವ 5 ಮಂದಿ ನೌಕರರ ವಿರುದ್ಧ ಸರ್ಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ ಸಂಘದ ಬಂಟ್ವಾಳ ಶಾಖೆಯ ಅಧ್ಯಕ್ಷ ಉಮನಾಥ ರೈ ಮೇರಾವು ಮಾತನಾಡಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘ ದೇಶದಲ್ಲಿಯೇ ಮಾದರಿ…

Read More

ಸೌಜನ್ಯ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗಾಗಿ ಕಾರಿಂಜ ಕ್ಷೇತ್ರದಲ್ಲಿ ಸಾಮಾಹಿಕ ಪ್ರಾರ್ಥನೆ Advertisement ಬಂಟ್ವಾಳ: ಸೌಜನ್ಯಳನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆಗೈದ ನೈಜ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಬಂಟ್ವಾಳ ಪ್ರಖಂಡದ ವತಿಯಿಂದ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭ ಭಜರಂಗದಳದ ಜಿಲ್ಲಾ ಹಾಗೂ ಬಂಟ್ವಾಳ ಪ್ರಖಂಡದ ಪ್ರಮುಖರು ಹಾಜರಿದ್ದರು. Advertisement Advertisement

Read More

ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘದ ಕಂಬಳ ಬೆಟ್ಟು ಶಾಖೆಯ ಉದ್ಘಾಟನೆ ಆಮಂತ್ರಣ ಪತ್ರಿಕೆ ಬಿಡುಗಡೆ ಬಂಟ್ವಾಳ: ಸಜೀಪಮುನ್ನೂರು ಮೂರ್ತೇದಾರರ ಸೇವಾ ಸಹಕಾರಿ ಸಂಘ ಇದರ 12ನೇ ಕಂಬಳ ಬೆಟ್ಟು ಶಾಖೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕುಚ್ಚಿಗುಡ್ಡೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ ಬೀಡಿನ ಪಾಲು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಮತಾ ಜಿ, ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. Advertisement Advertisement ಕಂಬಳಬೆಟ್ಟು ಶಾಖೆ ಸೆ. 3ರಂದು ಭಾನುವಾರ ಕಂಬಳಬೆಟ್ಟುವಿನ ದರ್ಬಾರ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಕಲ್ಬುರ್ಗಿಯ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠಾಧಿಪತಿ ಶ್ರೀ ಡಾ. ಪ್ರಣವಾನಂದ ರಾಮ್ ಸ್ವಾಮೀಜಿ ಉದ್ಘಾಟಿಸುವರು. ಪುತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಸಚಿವ ಬಿ. ರಮನಾಥ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. Advertisement

Read More