ಬಂಟ್ವಾಳ : ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲೊರೆಟ್ಟೊ ಹಿಲ್ಸ್ ನ ಸಭಾಂಗಣದಲ್ಲಿ ನಡೆಯಿತು.
ಪದಗ್ರಹಣ ಅಧಿಕಾರಿ ಪೂರ್ವ ಜಿಲ್ಲಾ ಗವರ್ನರ್ ರಂಗನಾಥ ಭಟ್ ಮಾತನಾಡಿ, ಸಾಮಾಜಿಕ ಸೇವೆ ಮಾಡಲು ರೋಟರಿ ಕ್ಲಬ್ ಪೂರಕವಾಗಿದೆ. ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ ಅತ್ಯಂತ ಕಡಿಮೆ ಅವಽಯಲ್ಲಿ ದೊಡ್ಡ ಸಾಧನೆ ಮಾಡಿದೆ ಎಂದು ಹೇಳಿ ಪ್ರಶಂಸೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ನಿಕಟಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ, ರೋಟರಿ ಕ್ಲಬ್ ಲೊರಟ್ಟೊ ಹಿಲ್ಸ್ ವಿಶಿಷ್ಠವಾದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದು ಜಿಲ್ಲೆಯಲ್ಲಿ ಅಮೋಘ ಕ್ಲಬ್ ಆಗಿ ಮೂಡಿ ಬರಲಿದೆ ಎಂದರು.
ನಿರ್ಗಮನ ಅಧ್ಯಕ್ಷೆ ಶ್ರುತಿ ಮಾಡ್ತಾ ಅವರು ಮಾತನಾಡಿ, ತನ್ನ ಅವಽಯಲ್ಲಿ ಕ್ಲಬ್ ವಿಶೇಷ ಸೇವಾ ಚಟುವಟಿಕೆಯನ್ನು ಮಾಡಿದ ಹಿನ್ನೆಲೆಯಲ್ಲಿ ಪ್ಲಾಟಿನಂ ಪ್ಲಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ ಎಂದರು.
ನೂತನ ಅಧ್ಯಕ್ಷರಾಗಿ ಸಂಘಟಕ ರಾಮಚಂದ್ರ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಐವನ್ ಮಿನೇಜಸ್ ಮತ್ತಿತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಮಾತನಾಡಿ, ರೋಟರಿಯಲ್ಲಿ ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದು ಹೆಚ್ಚು. ಕ್ಲಬ್ ಕಳೆದ ಅವಧಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಮುಂದಿನ ಅವಧಿಯಲ್ಲೂ ಉತ್ತಮ ಸೇವಾ ಚಟುವಟಿಕೆಗಳನ್ನು ನಡೆಸಲಿದೆ ಎಂದರು.
ಈ ಸಂದರ್ಭದಲ್ಲಿ ನೂತನ ಸದಸ್ಯರನ್ನು ಕ್ಲಬ್ಗೆ ಬರಮಾಡಿಕೊಳ್ಳಲಾಯಿತು. ನಿರ್ಗಮನ ಅಧ್ಯಕ್ಷೆ ಶ್ರುತಿ ಮಾಡ್ತಾ ಮತ್ತು ಕಾರ್ಯದರ್ಶಿ ವಿಜಯ ಫೆರ್ನಾಂಡೀಸ್, ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಟೀನಾ ಡಿಕೊಸ್ತ ಅವರನ್ನು ಸಮ್ಮಾನಿಸಲಾಯಿತು. ವಿವಿಧ ಶಾಲೆಗಳಿಗೆ ಆರ್ಥಿಕ ಸಹಕಾರ ನೀಡಲಾಯಿತು, ಎಸ್ಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ಲಬ್ ಬುಲೆಟಿನ್ ರೋಟೋ ಹಿಲ್ಸ್ ಬಿಡುಗಡೆ ಮಾಡಲಾಯಿತು.
ಸಹಾಯಕ ಗವರ್ನರ್ ರಾಘವೆಂದ್ರ ಭಟ್, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಪ್ರಥಮ ಮಹಿಳೆ ಸುಮಿತ್ರಾ ಆರ್. ಶೆಟ್ಟಿಗಾರ್ ಉಪಸ್ಥಿತರಿದ್ದರು.
ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ವಿಜಯ್ ಫೆರ್ನಾಂಡೀಸ್ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಐವನ್ ಮಿನೇಜಸ್ ವಂದಿಸಿದರು. ಸದಸ್ಯರಾದ ನೆಲ್ಸನ್ ಮೋನಿಸ್, ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು