ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಬಂಟ್ವಾಳ ಇದರ ವತಿಯಿಂದ ಗುರುಪೂರ್ಣಿಮೆಯ ಪ್ರಯುಕ್ತ ಗುರುಪೂಜೆ ಸೋಮವಾರ ಮೊಗರ್ನಾಡುವಿನಲ್ಲಿರುವ ಟ್ರಸ್ಟ್ನ ಕಚೇರಿಯಲ್ಲಿ ನಡೆಯಿತು.
ಕೇಶವ ಶಾಂತಿ ಅವರ ಪೌರೋಹಿತ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಗುರುಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ಇದೇ ಸಂದರ್ಭ ಬಿರುವೆರ್ ಸೇವಾ ಟ್ರಸ್ಟ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವೂ ನಡೆಯಿತು.
ಗೌರವಾಧ್ಯಕ್ಷರಾಗಿ ದಿನೇಶ್ ಭಾಗೀರಥಿಕೊಡಿ, ಶ್ರೀಧರ ಮೇಸ್ತ್ರಿ ಸಜನ್ಕಪಲ್ಕೆ, ಕೃಷ್ಣಪ್ಪ ಪೂಜಾರಿ ನಾಟಿ, ಗೌರವ ಸಲಹೆಗಾರರಾಗಿ ಜಗನ್ನಾಥ ಬಂಗೇರ ನಿರ್ಮಾಲ್, ಪುರುಷೋತ್ತಮ ಸಾಲ್ಯಾನ್ ದಿಂಡಿಕೆರೆ, ಮಾಧವ ಕರ್ಬೆಟ್ಟು, ಅಧ್ಯಕ್ಷರಾಗಿ ಸೀತಾರಾಮ್ ಪೂಜಾರಿ ಬೋಳಂತೂರು, ಉಪಾಧ್ಯಕ್ಷರಾಗಿ ಹರೀಶ್ ಮರ್ದೋಳಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಪೂಜಾರಿ ನಿರ್ಮಾಲ್, ಜೊತೆ ಕಾರ್ಯದರ್ಶಿಯಾಗಿ ಮೋಹಲತಾ ಮರ್ದೋಳಿ, ಕೋಶಾಧಿಕಾರಿಯಾಗಿ ಉಮೇಶ್ ನೆಲ್ಲಿಗುಡ್ಡೆ, ಟ್ರಸ್ಟಿಗಳಾಗಿ ನಾರಾಯಣ ಪೂಜಾರಿ ದರ್ಕಸ್, ಪುಷ್ಪಾವತಿ ದೇಜಪ್ಪ ದರ್ಕಸ್, ವೀಣಾ ಸಂಜೀವ ಎನ್, ಹರೀಶ್ ಕೆದ್ದೇಲು, ಭಾರತಿ ನಾಯಿಲ, ಮಮತಾ ಸುಧೀರ್ ಮರ್ದೋಳಿ, ದಿವಾಕರ ಏಲಬೆ, ನಳಿನಾಕ್ಷಿ ಕರ್ಬೇಟ್ಟು ಪದಗ್ರಹಣ ಸ್ವೀಕರಿಸಿದರು.
ನಿಕಟ ಪೂರ್ವ ಅಧ್ಯಕ್ಷ ದಿನೇಶ್ ಭಾಗಿರಥೀಕೋಡಿ ನೂತನ ಅಧ್ಯಕ್ಷ ಸೀತರಾಮ ಪೂಜಾರಿ ಬೋಳಂತೂರು ಅವರಿಗೆ ಪುಸ್ತಕ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಸೇವಾ ಟ್ಸಸ್ಟ್ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
—