ಬಂಟ್ವಾಳ: ತಾಲೂಕಿನಾದ್ಯಂತ ಮನೆಮಾತಾಗಿರುವ ಭದ್ರ ಹೋಮ್ ಅಪ್ಲೈಯನ್ಸಸ್ ಪ್ರಸ್ತುತ ಪಡಿಸುವ ಭದ್ರಾ ಇನ್ ಆಂಡ್ ಔಟ್ ಸ್ಟೋರ್ನ ನೂತನ ಮಳಿಗೆ ಬಂಟ್ವಾಳದ ಬಸ್ತಪಡ್ಪುವಿನಲ್ಲಿ ಶುಭಾರಂಭಗೊಂಡಿತು. ಬಂಟ್ವಾಳದ ಜನತೆಗೆ ಮತ್ತೊಂದು ಸುಭದ್ರ ಭರವಸೆಯ ಆಯ್ಕೆ ಎನ್ನುವಂತೆ ಭಾರತ್ಪೆಟೋಲಿಯಂನ ಸಹಯೋಗದಲ್ಲಿ ಭದ್ರಾ ಇನ್ ಆಂಡ್ ಔಟ್ ಸ್ಟೋರ್ ಬಂಟ್ವಾಳದಲ್ಲಿ ಕಾರ್ಯರಂಭಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಔಟ್ಲೆಟ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ರೋಟರಿ ಕ್ಲಬ್ನ ಜಿಲ್ಲಾ ನಿಕಟಪೂರ್ವ ಗವರ್ನರ್ ಪ್ರಕಾಶ್ ಕಾರಂತ್ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಅವರು ಮಾತನಾಡಿ ಕಳೆದ ಮೂವತ್ತು ವರ್ಷಗಳಿಂದ ಭದ್ರ ಗ್ಯಾಸ್ ಏಜೆನ್ಸಿ ಸಂಸ್ಥೆಯ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಮಂಜುನಾಥ ಆಚಾರ್ಯ ವಿಶೇಷ ಮುತುವರ್ಜಿಯಿಂದ ಭಾರತ್ ಪೆಟ್ರೋಲಿಯಂ ಸಹಯೋಗದೊಂದಿಗೆ ಹೊಸ ಸೂಪರ್ ಮಾರ್ಕೆಟ್ ಆರಂಭಿಸಿರುವುದು ಅಭಿನಂದನೀಯ. ಅವರ ಎಲ್ಲಾ ಉದ್ಯಮಗಳು ಯಶಸ್ಸು ಕಂಡಿರುವಂತೆ ಈ ಹೊಸ ಉದ್ಯಮವೂ ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸಿದರು.
ಬಿ.ಸಿ.ರೋಡಿನ ಸೋಮಯಾಜಿ ಆಸ್ಪತ್ರೆಯ ಮುಖ್ಯಸ್ಥ ಡಾ. ರಮೇಶಾನಂದ ಸೋಮಯಾಜಿ ದೀಪ ಪ್ರಜ್ವಲಿಸಿದರು. ಅವರು ಮಾತನಾಡಿ ಮಂಜುನಾಥ ಆಚಾರ್ಯ ಅವರು ಯಾವುದೇ ಕೆಲಸ ಮಾಡಿದರೂ ಅದನ್ನು ಅತ್ಯಂತ ವಿಶಿಷ್ಠ ಹಾಗೂ ವಿಭಿನ್ನವಾಗಿ ಮಾಡುತ್ತಾರೆ. ನೂತನವಾಗಿ ಆರಂಭಿಸಿರುವ ಈ ಸಂಸ್ಥೆ ಯಶಸ್ವಿಯಾಗಲಿ ಎಂದು ಶುಭ ಕೋರಿದರು.
ಭಾರತ್ ಪೆಟ್ರೋಲಿಯಂನ ಟೆರಿಟರಿ ಮ್ಯಾನೇಜರ್ ಬಿವಾಶ್ ಮಾತನಾಡಿ ಭಾರತ್ ಪೆಟ್ರೋಲಿಯಂನ ಸಹಯೋಗದಲ್ಲಿ ಆರಂಭಗೊಂಡಿರುವ ದ.ಕ. ಜಿಲ್ಲೆಯ ಮೊದಲ ಮಳಿಗೆ ಇದಾಗಿದೆ. ಅತ್ಯಂತ ಗುಣಮಟ್ಟದ ವಸ್ತು, ದಿನಸಿ ತರಕಾರಿ ಸಹಿತ ಮನೆ ಬಳಕೆಯ ವಸ್ತುಗಳು ಇಲ್ಲಿ ಸಿಗಲಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಬಂಟ್ವಾಳದ ನಿಯೋಜಿತ ಅಧ್ಯಕ್ಷ ಪ್ರಕಾಶ್ ಬಾಳಿಗ, ಭದ್ರ ಗ್ಯಾಸ್ ಏಜೆನ್ಸಿಯ ಪ್ರವರ್ತಕಿ ಆಶಾಲತಾ ಬಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭದ್ರ ಹೋಂ ಅಪ್ಲೈಯನ್ಸಸ್ನ ಮೇಘಾ ಆಚಾರ್ಯ ಸ್ವಾಗತಿಸಿದರು, ಭದ್ರ ಸಂಸ್ಥೆಯ ಮಾಲಕ ಮಂಜುನಾಥ ಆಚಾರ್ಯ ವಂದಿಸಿದರು. ಪತ್ರಕರ್ತ ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ಭಾರತ್ ಪೆಟ್ರೋಲಿಯಂನ ಮಾರ್ಕೆಂಟಿಂಗ್ ಮುಖ್ಯಸ್ಥರಾದ ಮೋಹನ್ ಪ್ರಮುಖರಾದ ಪುಷ್ಪರಾಜ ಹೆಗ್ಡೆ, ನಾರಾಯಣ ಹೆಗ್ಡೆ, ಸದಾಶಿವ ಬಾಳಿಗ, ಬೇಬಿ ಕುಂದರ್, ಪ್ರಭಾಕರ ಪ್ರಭು ಮೊದಲಾದವರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.
ಮನೆ ಬಳಕೆಗೆ ಬೇಕಾದ ದಿನಸಿ ಸಾಮಾಗ್ರಿಗಳು, ಬಗೆ ಬಗೆಯ ತಂಪು ಪಾನೀಯಗಳು ಡ್ರೈಪ್ರೂಟ್ಸ್, ಐಸ್ಕ್ರೀಂ, ತಾಜಾ ತರಕಾರಿಗಳು ಕ್ಲೀನಿಂಗ್ ಉತ್ಪನ್ನಗಳು, ಸ್ಟೇಷನರಿ ಸಾಮಾಗ್ರಿಗಳು, ದೇಸಿ ಸಾವಯವ ಉತ್ಪನ್ನಗಳು ಭದ್ರಾ ಇನ್ & ಔಟ್ ಸ್ಟೋರಿನಲ್ಲಿ ಒಂದೇ ಸೂರಿನಡಿ ಗ್ರಾಹಕರಿಗೆ ಲಭ್ಯವಿದೆ. ಸಂಸ್ಥೆಯ ವತಿಯಿಂದ ಹೋಂ ಡೆಲಿವರಿ ವ್ಯವಸ್ಥೆಯೂ ಇದೆ.