ಬಂಟ್ವಾಳ: ಮಾಣಿಲ ಶ್ರೀಧಾಮದ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿ ಹಬ್ಬ ಮಹೋತ್ಸವದ ಪ್ರಯುಕ್ತ ಬಂಟ್ವಾಳ ವಲಯದ ಪೂರ್ವಭಾವಿ ಸಭೆ ಭಾನುವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಲ್ಲಿ ನಡೆಯಿತು.
Advertisement
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನ ಮಾಡಿ ಕಾರ್ಯಕ್ರಮದ ಯಶಸ್ಸಿ ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ವಿಶ್ವ ಹಿಂದು ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಪ್ರಮುಖರಾದ ಜಗನ್ನಾಥಚಚೌಟ ಬದಿಗುಡ್ಡೆ, ಚಂದ್ರಹಾಸ ಶೆಟ್ಟಿ
ನಾರಾಯಣ ಸಿ. ಪೆರ್ನೆ, ತಾರಾನಾಥ ಕೊಟ್ಟಾರಿ, ಸುರೇಶ್ ಕುಲಾಲ್, ದೇವಪ್ಪ ಕುಲಾಲ್, ಮಚ್ಚೇಂದ್ರ ಸಾಲ್ಯಾನ್ ಮೊದಲಾದವರು ಭಾಗವಹಿಸಿದ್ದರು. ಬೆಳ್ಳಿ ಹಬ್ಬ ಸಂಭ್ರಮದ ಸಾಮೂಹಿಕ ವರಮಹಾಲಕ್ಷ್ಮಿ ವೃತಾಚರಣೆ ಜು.16 ರಿಂದ ಆರಂಭಗೊಂಡು ಆ. 25 ರವರೆಗೆ ಮಾಣಿಲ ಶ್ರೀಧಾಮದಲ್ಲಿ ನಡೆಯಲಿದೆ.
Advertisement